ವಿದ್ಯಾರ್ಥಿಗಳನ್ನು ಹತ್ತಿಸದ ಬಸ್​ ಚಾಲಕ, ನಿರ್ವಾಹಕನಿಗೆ ಆವಾಜ್​ ಹಾಕಿದ ಶಾಸಕಿ ನಿಂಬಾಳ್ಕರ್!

news18
Updated:September 27, 2018, 2:07 PM IST
ವಿದ್ಯಾರ್ಥಿಗಳನ್ನು ಹತ್ತಿಸದ ಬಸ್​ ಚಾಲಕ, ನಿರ್ವಾಹಕನಿಗೆ ಆವಾಜ್​ ಹಾಕಿದ ಶಾಸಕಿ ನಿಂಬಾಳ್ಕರ್!
  • Advertorial
  • Last Updated: September 27, 2018, 2:07 PM IST
  • Share this:
ಚಂದ್ರಕಾಂತ್ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ(ಸೆ.27): ಸರ್ಕಾರಿ ಬಸ್​ ಪಾಸ್​ ಮಾಡಿಸಿದ ವಿದ್ಯಾರ್ಥಿಗಳಿಗೆ ಬಸ್​ ಸಮಸ್ಯೆ ಇಂದು ನಿನ್ನೆದೆಯದಲ್ಲ. ಕೆಲವು ಬಾರಿ ಬಸ್​ ತಡವಾಗಿ ಬಂದರೆ ಇನ್ನು ಕೆಲವು ಬಾರಿ ಚಾಲಕರೇ ಅಸಡ್ಡೆ ತೋರಿ ಬಸ್​ ನಿಲ್ಲಿಸದೆ ತೆರಳುತ್ತಾರೆ. ಆದರೀಗ ಬೆಳಗಾವಿಯ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್​ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಸರ್ಕಾರಿ ಬಸ್​ ಚಾಲಕ ಹಾಗೂ ನಿರ್ವಾಹಕನನ್ನು ತರಾಟೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಶಾಲಾ ಕಾಲೇಜುಗಳಿಗೆ ಹೋಗುವ ಬಹುತೇಕ ವಿದ್ಯಾರ್ಥಿಗಳು ಬಸ್​ಗಳಲ್ಲೇ ಪ್ರಯಾಣಿಸುತ್ತಾರೆ. ಬಸ್​ ಪಾಸ್​ ಸೌಲಭ್ಯ ಉಪಯೋಗಿಸುವ ವಿದ್ಯಾರ್ಥಿಗಳಿಗೆ ಕೆಲವು ಬಾರಿ ಬಸ್​ ತಡವಾದರೆ ಮತ್ತೆ ಕೆಲವು ಬಾರಿ  ಇದೇ ರೀತಿ ಚಾಲಕ ಹಾಗೂ ನಿರ್ವಾಹಕರು ಬಸ್​ ನಿಲ್ಲಿಸದಿರುವುದರಿಂದ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುವುದಿಲ್ಲ. ಆದರೀಗ ಬೆಳಗಾವಿಯ ಖಾನಾಪುರದಲ್ಲಿ ಇದೇ ರೀತಿ ವಿದ್ಯಾರ್ಥಿಗಳನ್ನು ಬಸ್​ಗೆ ಹತ್ತಿಸಿಕೊಳ್ಳದ ಡ್ರೈವರ್ ಹಾಗೂ ನಿರ್ವಾಹಕನಿಗೆ ಶಾಸಕಿಯೇ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿ ಆವಾಜ್​ ಹಾಕಿದ್ದಾರೆ. ಖಾನಾಪುರದಿಂದ ಬೆಳಗಾವಿಗೆ ಹೋಗುವ ಬಸ್​ಗೆ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿಯೂ ಬಸ್​ ಚಾಲಕ ಮುಂದೆ ಹೋಗಿದ್ದಾನೆ.


ಚಾಲಕ ಹಾಗೂ ನಿರ್ವಾಹಕನ ಈ ಅಸಡ್ಡೆ ಗಮನಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್​ ಆ ಊಡಲೇ ಬಸ್​ ನಿಲ್ಲಿಸಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಘಟನೆ ಮುಂದೆಂದೂ ಮರುಕಳಿಸದಿರುವಂತೆ ಎಚ್ಚರಿಕೆಯನ್ನೂ ನೀಡಿದ್ದೃಆಎ.

ಒಟ್ಟಾರೆಯಾಗಿ ಹೇಳಬೇಕೆಂದರೆ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಯನ್ನು ಅರಿತು ಅವರ ಪರವಾಗಿ ಧ್ವನಿ ಎತ್ತಿದ ಈ ಶಾಸಕಿಯ ನಡೆಯನ್ನು ಮೆಚ್ಚಲೇಬೇಕು.
First published:September 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...