ಬೆಂಗಳೂರಿನಲ್ಲಿ ಖಲಿಸ್ತಾನದ ಪ್ರತ್ಯೇಕತಾವಾದಿಯ ಬಂಧನ; ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ

ಸಿಖ್ ಧರ್ಮದ ವಿರುದ್ದ ಕೆಲಸ ಮಾಡುವವರ ವಿರುದ್ಧ ಜರ್ನಲ್​ ಸಿಂಗ್​​ ಸಮರ ಸಾರಿದ್ದ.  ಈತನ ವಿರುದ್ದ ಪಂಜಾಬ್​​​ನ ಮೊಹಾಲಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್​​ಡಿ (ಆಂತರಿಕ ಭದ್ರತಾ ವಿಭಾಗ) ಪ್ರಕರಣ ದಾಖಲಿಸಿತ್ತು. ಮೊಹಾಲಿ ಸ್ಟೇಟ್​ ಸ್ಪೆಷಲ್​ ಆಪರೇಷನ್​ ಸೆಲ್​​ ಪೊಲೀಸರು ಸಿಂಗ್​ಗಾಗಿ ಹುಡಕಾಟ ನಡೆಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪಂಜಾಬ್​ನಿಂದ ಬೆಂಗಳೂರಿಗೆ ಬಂದಿದ್ದ.

news18-kannada
Updated:January 12, 2020, 10:45 AM IST
ಬೆಂಗಳೂರಿನಲ್ಲಿ ಖಲಿಸ್ತಾನದ ಪ್ರತ್ಯೇಕತಾವಾದಿಯ ಬಂಧನ; ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ
ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್​ ಸಿಂಗ್​ ಸಿದ್ದು
  • Share this:
ಬೆಂಗಳೂರು(ಜ.12): ಇತ್ತೀಚೆಗೆ ಸಿಲಿಕಾನ್​ ಸಿಟಿ ಬೆಂಗಳೂರು ಶಂಕಿತ ಉಗ್ರರು ಮತ್ತು ಪ್ರತ್ಯೇಕತಾವಾದಿಗಳ ನೆಲೆಯಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಇಂದು ಉದ್ಯಾನ ನಗರಿಯಲ್ಲಿ ಮತ್ತೊಬ್ಬ ಪ್ರತ್ಯೇಕತಾವಾದಿ ಸೆರೆ ಸಿಕ್ಕಿದ್ದಾನೆ. 

ಬಂಧಿತ ಆರೋಪಿಯನ್ನು ಉತ್ತರ ಭಾರತ ಮೂಲದ ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್​ ಸಿಂಗ್​ ಸಿದ್ದು ಎಂದು ಗುರುತಿಸಲಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರು ಸಂಪಿಗೆಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.  ಸಿದ್ದು ಕಳೆದ 6 ತಿಂಗಳಿಂದ ಬೆಂಗಳೂರಿನ ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಮೂಲತಃ ತೆಲಂಗಾಣದ ಹೈದರಾಬಾದ್​ ನಿವಾಸಿ. ಈತ ಎಂಜಿನಿಯರ್ ಮಾಡಿಕೊಂಡು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ.  ಜೊತೆಗೆ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ. ಸಿಖ್ ಧರ್ಮದವರಿಗಾಗಿಯೇ ಪ್ರತ್ಯೇಕ ದೇಶ ಬೇಕು ಎಂದು ಹೋರಾಟ ಮಾಡುತ್ತಿದ್ದ. ಪಂಜಾಬ್​​​ನ್ನು ಪ್ರತ್ಯೇಕ‌ ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಕನಕಪುರ ಚಲೋ ಮತೀಯ ಶಕ್ತಿಗಳ ಹುನ್ನಾರ; ಪ್ರಚೋದನೆಗೆ ಒಳಗಾಗದಂತೆ ಕ್ಷೇತ್ರದ ಜನರಲ್ಲಿ ಡಿಕೆಶಿ ಮನವಿ

ಸಿಖ್ ಧರ್ಮದ ವಿರುದ್ದ ಕೆಲಸ ಮಾಡುವವರ ವಿರುದ್ಧ ಜರ್ನಲ್​ ಸಿಂಗ್​​ ಸಮರ ಸಾರಿದ್ದ.  ಈತನ ವಿರುದ್ದ ಪಂಜಾಬ್​​​ನ ಮೊಹಾಲಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್​​ಡಿ (ಆಂತರಿಕ ಭದ್ರತಾ ವಿಭಾಗ) ಪ್ರಕರಣ ದಾಖಲಿಸಿತ್ತು. ಮೊಹಾಲಿ ಸ್ಟೇಟ್​ ಸ್ಪೆಷಲ್​ ಆಪರೇಷನ್​ ಸೆಲ್​​ ಪೊಲೀಸರು ಸಿಂಗ್​ಗಾಗಿ ಹುಡಕಾಟ ನಡೆಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪಂಜಾಬ್​ನಿಂದ ಬೆಂಗಳೂರಿಗೆ ಬಂದಿದ್ದ.

ಪಂಜಾಬ್​ ಪೊಲೀಸರು ಆರೋಪಿಗಾಗಿ ನಿರಂತರ ಹುಡುಕಾಟ ನಡೆಸುತ್ತಲೇ ಇದ್ದರು. ಬಳಿಕ ಆತ ಬೆಂಗಳೂರಿಗೆ ಪರಾರಿಯಾಗಿರುವ ಸುಳಿವು ಪಡೆದ ಪಂಜಾಬ್​​ ಪೊಲೀಸರು, ಆರೋಪಿ ಪತ್ತೆ ಮಾಡುವಂತೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಮನವಿ ಮಾಡಿದ್ದರು. ಆರೋಪಿಗಾಗಿ ಬಲೆ ಬೀಸಿದ್ದ ಬೆಂಗಳೂರು ಸಿಸಿಬಿ ಪೊಲೀಸರಿಗೆ ಇಂದು ಜರ್ನಲ್​ ಸಿಂಗ್​ ಸಿಕ್ಕಿಬಿದ್ದಿದ್ಧಾನೆ. ಸಿಸಿಬಿಯ ಒಸಿಡಬ್ಲೂ ವಿಂಗ್​​​ನಿಂದ ಜರ್ನಲ್ ಸಿಂಗ್​ನನ್ನು ಅರೆಸ್ಟ್ ಮಾಡಲಾಗಿದೆ.

ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಪೊಲೀಸರು ಹುಡಕಾಟ ನಡೆಸಿದ್ದರು. ಸಿಸಿಬಿಯ ಇನ್ಸ್ ಪೆಕ್ಟರ್ ಕೇಶವ್ ಮೂರ್ತಿ ಆರೋಪಿಯನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.ಮಹಾರಾಷ್ಟ್ರದ ಪಲ್ಗಾರ್​ನಲ್ಲಿ ಕಾರ್ಖಾನೆ ಸ್ಪೋಟ; ಎಂಟು ಸಾವು, ಹಲವು ಮಂದಿಗೆ ಗಾಯ

Published by: Latha CG
First published: January 12, 2020, 10:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading