ಕೋಲಾರ: ಜಿಲ್ಲೆಯ ಕೆಜಿಎಫ್ (KGF) ತಾಲೂಕು ಸಾರಿಗೆ ಇಲಾಖೆ ಅಧಿಕಾರಿಗಳು (RTO Officers) ಮಾಲೂರು (Maluru) ತಾಲೂಕಿನಲ್ಲಿ ತಡರಾತ್ರಿ (Late Night) ವಾಹನಗಳ ಸುಲಿಗೆ ಮಾಡುತ್ತಿದ್ದಾರೆ. ಮಾಲೂರು ಹಾಗೂ ತಮಿಳುನಾಡು (Tamil Nadu) ಮಧ್ಯೆ ಸಂಚರಿಸುವ ಲಾರಿಗಳು (Lorry), ಕ್ಯಾಂಟರ್‍ಗಳನ್ನ ಕಗ್ಗತ್ತಲಲ್ಲಿ ರಾತ್ರಿ ಹೊತ್ತು (Nihjt Time) ಅಡ್ಡಗಟ್ಟಿ, ತಪಾಸಣೆ ಮಾಡುವ ಸೋಗಿನಲ್ಲಿ, ಸಾವಿರಾರು ರೂಪಾಯಿ ಹಪ್ತಾ (Bribe) ವಸೂಲಿ ಮಾಡ್ತಿದ್ದಾರೆ. ಮಾಲೂರು ತಾಲೂಕಿನ ಸೊಣ್ಣೂರು ಸಿದ್ದನಹಳ್ಳಿ ಕ್ರಾಸ್ ಬಳಿ ಟೀ ಮಳಿಗೆ (Tea Shop) ಎದುರು, ಸಾರಿಗೆ ಇಲಾಖೆಯ ಕೆ.ಎ 01 ಜಿ.ಎ 3399 ಸಂಖ್ಯೆಯ ಜೀಪ್ ನಿಲ್ಲಿಸಿ, ರಾತ್ರಿ 9 ರಿಂದ ತಡರಾತ್ರಿ 3 ಗಂಟೆ ವರೆಗೂ ನಿಲ್ಲುವ ಆರ್,ಟಿ,ಒ ಅಧಿಕಾರಿಗಳು, ಪ್ರತೀ ವಾಹನಗಳಿಗೆ ಹೋಮ್ ಗಾಡ್ರ್ಸ್ (Home Guards) ಮೂಲಕ ಟಾರ್ಚ್ ಹಾಕಿ ನಿಲ್ಲಿಸಿ, ಬಳಿಕ ದಾಖಲೆ (Documents) ತಪಾಸಣೆ ಮಾಡುವ ಸೋಗಿನಲ್ಲಿ, ಪ್ರತಿ ವಾಹನದ ಬಳಿ 500 ರಿಂದ 1 ಸಾವಿರ ರೂಪಾಯವರೆಗೂ ಹಣ ವಸೂಲಿ ಮಾಡುತ್ತಿರುವುದು ತಿಳಿದುಬಂದಿದೆ.
ಖಾಯಂ ಬ್ರೇಕ್ ಇನ್ಸ್ ಪೆಕ್ಟರ್ ಕೊರತೆ, ಪ್ರತಿ ವಾರವೂ ಒಬ್ಬೊಬ್ಬ ಅಧಿಕಾರಿ ನೇಮಕ
ಕೆಜಿಎಫ್‌ನ ಆರ್.ಟಿ.ಒ ಇಲಾಖೆಯಲ್ಲಿ ಬ್ರೇಕ್ ಇನ್ಸ್ ಪೆಕ್ಟರ್ ಅಧಿಕಾರಿಗಳ ಕೊರತೆ ಇದ್ದು, ಪ್ರತಿ ವಾರವೂ ಒಬ್ಬರಂತೆ, ಬೆಂಗಳೂರಿನ ಕೆ,ಆರ್ ಪುರಂ ಆರ್.ಟಿ.ಒ ನಿಂದ ಕೆಜಿಎಫ್ ಹಾಗು ಮಾಲೂರಿನಲ್ಲಿ ಕೆಲಸ ಮಾಡಲೂ ನೇಮಕ ಆಗುತ್ತಿದ್ದಾರೆ, ನ್ಯೂಸ್ 18 ಕನ್ನಡ ರಹಸ್ಯ ಕಾರ್ಯಾಚರಣೆಯಲ್ಲಿ ಆರ್.ಟಿ.ಒ ಅಧಿಕಾರಿಗಳು ಜೀಪ್ ನಲ್ಲಿದ್ದ ವೇಳೆ, ಜೀಪ್ ಡ್ರೈವರ್ ರಾಜಾರೋಷವಾಗಿ ಜೀಪ್ ನ ಹಿಂಭಾಗವೇ ಹಣ ವಸೂಲಿ ಮಾಡ್ತಿರೊದು ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಿಗೆ ಬಂದಿದೆ.
500 ರೂಪಾಯಿಂದ 1 ಸಾವಿರ ರೂಪಾಯಿ ವಸೂಲಿ
ಲಾರಿ, ಕ್ಯಾಂಟರ್ ಪ್ರತಿ ವಾಹನಕ್ಕು 500 ರಿಂದ 1 ಸಾವಿರ ರೂಪಾಯಿ ಹಣ ಫಿಕ್ಸ್ ಮಾಡಿದ್ದು, ಪ್ರತಿ ರಾತ್ರಿ ನೂರಾರು ವಾಹನಗಳ ತಪಾಸಣೆ ನಡೆಸಿ, ಭರ್ಜರಿಯಾಗಿ ಹಣ ವಸೂಲಿ ಮಾಡ್ತಿದ್ದಾರೆಂದು ಲಾರಿ ಚಾಲಕರು ಆರೋಪಿಸಿದ್ದಾರೆ. ಈ ಬಗ್ಗೆ ತಮಿಳುನಾಡಿನ ಲಾರಿ ಚಾಲಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳು ಕೇಳಿದಂತೆ ಹಣ ಕೊಡಲೇ ಬೇಕು, ಇಲ್ಲವಾದರೆ ಪರ್ಮಿಟ್, ವೇಯ್ಟೇಜ್ ವಿಚಾರವಾಗಿ ರಾದ್ದಾಂತ ಮಾಡಿ ಕೇಸ್ ಹಾಕ್ತಾರೆಂದು ಬೇಸರ ಹೊರಹಾಕಿದರು.
ಮಾಲೂರು ಶಾಸಕರ ಆರೋಪ
ಈ ಬಗ್ಗೆ ಮಾತನಾಡಿರುವ ಮಾಲೂರು ಶಾಸಕ ನಂಜೇಗೌಡ, ಅಧಿಕಾರಿಗಳ ವಸೂಲಿಗೆ ಜಿಲ್ಲೆಯ ಬಿಜೆಪಿ ಮುಖಂಡರೇ ಕಾರಣ, ಅದರಲ್ಲಿ ಅವರದ್ದು ಪಾಲಿದೆ ಎಂದು ಆರೋಪಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಸ್ಥಳೀಯ ಹೋರಾಟಗಾರರ ಆಗ್ರಹ
ಈ ಕುರಿತು ಮಾತನಾಡಿರುವ ಸ್ಥಳೀಯ ಹೋರಾಟಗಾರರು, ಆರ್.ಟಿ.ಒ ಅಧಿಕಾರಿಗಳ ಕಗ್ಗತ್ತಲ ವಸೂಲಿ ದಂಧೆಗೆ ಬ್ರೇಕ್ ಹಾಕುವಂತೆ ಸರ್ಕಾರವನ್ನ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka Politics: ಸಿಎಂ ಕುರ್ಚಿಗೆ ಡಿಕೆಶಿ-ಹೆಚ್ಡಿಕೆ ಫೈಟ್, ರಾಮನಗರದಲ್ಲೇ ಸವಾಲಿಗೆ ಸವಾಲ್
ಈ ಬಗ್ಗೆ ಮಾಹಿತಿಯೇ ಇಲ್ಲ ಎಂದ ಆರ್‌ಟಿಒ ಅಧಿಕಾರಿ
ಈ ಕುರಿತಪ್ರತಿಕ್ರಿಯೆ ನೀಡಿದ ಕೆಜಿಎಫ್ ಆರ್.ಟಿ.ಒ ಅಧಿಕಾರಿ ನಯಾಜ್ ಪಾಷಾ, ರಾತ್ರಿ ಹೊತ್ತಿನಲ್ಲಿ ಅಧಿಕಾರಿಗಳು ಕೆಲಸ ಮಾಡುವ ಮಾಹಿತಿಯೇ ಇಲ್ಲ ಎಂದಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸೊದಾಗಿ ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ