KGF Babu: ನಾನು ಯಾರಿಗೂ ಹೆದರಲ್ಲ; 5 ಸಾವಿರ ರೂ ಚೆಕ್ ವಿತರಣೆ ಆರಂಭಿಸಿದ ಕೆಜಿಎಫ್ ಬಾಬು

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆಜಿಎಫ್ ಬಾಬು, ನಾನು ಯಾರಿಗೂ ಹೆದರೋದಿಲ್ಲ. ಕಾರ್ಯಕ್ರಮ ನಿಲ್ಲಿಸಿ ಅಂತ ಸಾಕಷ್ಟು ಒತ್ತಡ ಹಾಕ್ತಿದ್ದಾರೆ. ತೊಂದರೆ ಕೊಡ್ತಿದ್ದಾರೆ. ಯಾರು ಹೇಳಿದ್ರೂ‌ ಈ ಚೆಕ್ ವಿತರಣೆ ಕಾರ್ಯಕ್ರಮ ನಿಲ್ಲಿಸಲ್ಲ ಎಂದು ಹೇಳಿದರು.

ಕೆಜಿಎಫ್ ಬಾಬು

ಕೆಜಿಎಫ್ ಬಾಬು

  • Share this:
ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು (Congress Leader KGF Babu) ಇಂದು ಟೌನ್ ಹಾಲ್​ನಲ್ಲಿ (Townhall) ಚಿಕ್ಕಪೇಟೆಯ (Chickpet) ಜನತೆಗೆ ಚೆಕ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೆಜಿಎಫ್ ಬಾಬು ಅವರು ನೀಡುತ್ತಿರುವ 5 ಸಾವಿರ ರೂಪಾಯಿ ಚೆಕ್ ಪಡೆಯಲು ಟೌನ್ ಹಾಲ್​ನಲ್ಲಿ ಚಿಕ್ಕಪೇಟೆಯ ಜನ ಸೇರಿದ್ದರು. ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಿಂದ ಟೌನ್ ಹಾಲ್ ತುಂಬಿ ತುಳುಕುತ್ತಿತ್ತು. ಕಾಂಗ್ರೆಸ್​ನಲ್ಲಿ ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದರೂ ಕೆಜಿಎಫ್ ಬಾಬು ಚೆಕ್ ವಿತರಣೆ (Cheque Distribution) ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ (Assembly Election 2023) ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ವಿರೋಧದ ನಡುವೆಯೇ ಚೆಕ್ ವಿತರಿಸುತ್ತಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆಜಿಎಫ್ ಬಾಬು, ನಾನು ಯಾರಿಗೂ ಹೆದರೋದಿಲ್ಲ. ಕಾರ್ಯಕ್ರಮ ನಿಲ್ಲಿಸಿ ಅಂತ ಸಾಕಷ್ಟು ಒತ್ತಡ ಹಾಕ್ತಿದ್ದಾರೆ. ತೊಂದರೆ ಕೊಡ್ತಿದ್ದಾರೆ. ಯಾರು ಹೇಳಿದ್ರೂ‌ ಈ ಚೆಕ್ ವಿತರಣೆ ಕಾರ್ಯಕ್ರಮ ನಿಲ್ಲಿಸಲ್ಲ ಎಂದು ಹೇಳಿದರು.

ಇದು ನನ್ನ ಸ್ವಂತ ಹಣ

ಪಾರ್ಟಿ ಬ್ಯಾನರ್ ಅಡಿಯಲ್ಲಿ ನಾನು ಮಾಡ್ತಿಲ್ಲ. ಉಮ್ರಾ ಡೆವಲಪರ್ ಚಾರಿಟೇಬಲ್ ಟ್ರಸ್ಟ್ ಹೆಸರಲ್ಲಿ ಕಾರ್ಯಕ್ರಮ ಮಾಡ್ತಿದ್ದೇನೆ. ನಾನು ನನ್ನ ಸ್ವಂತ ದುಡ್ಡು ಕೊಡ್ತಿದ್ದೇನೆ. ನಾನು ಬೆಳೆದ ಕ್ಷೇತ್ರ ಇದು, ನನ್ನ ಜನರಿಗೆ ನಾನು ಸಹಾಯ ಮಾಡ್ತಿದ್ದೇನೆ. ಇದರಲ್ಲಿ ಎಲ್ಲ ಪಕ್ಷದ ಜನರಿದ್ದಾರೆ. ಅವರಿಗೆ ಸಹಾಯ ಮಾಡ್ತಿದ್ದೇನೆ ಎಂದರು.

KGF Babu start five thousand rupees cheque distribution programme mrq
ಕೆಜಿಎಫ್ ಬಾಬು


ಇದನ್ನೂ ಓದಿ:  KGF Babu: ಚಿಕ್ಕಪೇಟೆ ಕ್ಷೇತ್ರದ ಜನತೆಗೆ ಬಂಪರ್; ಪ್ರತಿ ಕುಟುಂಬಕ್ಕೆ 5 ಸಾವಿರ; 350 ಕೋಟಿಯ ಕೆಜಿಎಫ್ ಬಾಬು ಲೆಕ್ಕಾಚಾರ ಏನು?

ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ

50 ಸಾವಿರ ಮನೆಗಳಿಗೆ ಚೆಕ್ ಕೊಟ್ಟೆ ಕೊಡುತ್ತೇನೆ. ಹೈಕಮಾಂಡ್ ತ‌ನಕ ನನಗೆ ದೂರು ಕೊಟ್ಟಿದ್ದಾರೆ. ಇಂದು ಇಲ್ಲಿ 5 ಸಾವಿರ ಜನರು ಸೇರಬೇಕಿತ್ತು. ಎಷ್ಟೇ ಒತ್ತಡ ಬಂದರೂ ಕಾರ್ಯಕ್ರಮ ನಿಲ್ಸೋದಿಲ್ಲ. ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶೋಕಾಸ್ ನೀಡಿದ್ದ ಕೆಪಿಸಿಸಿ

ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ (350 Crore) ರೂಪಿಸುವ ಕರೆ ನೀಡಿದ್ದರು. ಇದರಿಂದ ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ ರಹಮಾನ್ ಖಾನ್ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದ್ದರು ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ (Congress Party) ಟಿಕೆಟ್‌ ನೀಡಲಿ, ಬಿಡಲಿ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿರುತ್ತೀರಿ.

ಇದು ಪಕ್ಷಕ್ಕೆ ಸವಾಲು ಹಾಕಿರುವಂತಿದೆ. ನಿಮ್ಮ ಈ ಬೇಜವಾಬ್ದಾರಿ ನಡವಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಈ ಬಗ್ಗೆ ತಮ್ಮ ವಿವರಣೆಯನ್ನು ಪತ್ರ ತಲುಪಿದ 7 ದಿನಗಳೊಳಗಾಗಿ ನೀಡಬೇಕು ಅಂತ ಕೆಪಿಸಿಸಿ ಶಿಸ್ತು ‌ಸಮಿತಿಯಿಂದ ಕೆಜಿಎಫ್ ಬಾಬು ಅವರಿಗೆ ಸೂಚಿಸಿತ್ತು. ಈ ನೋಟಿಸ್​ಗೆ ಉತ್ತರಿಸಿದ್ದ ಕೆಜಿಎಫ್ ಬಾಬು ಕ್ಷೆಮೆ ಕೇಳಿದ್ದರು ಎನ್ನಲಾಗಿದೆ.

KGF Babu start five thousand rupees cheque distribution programme mrq
ಕೆಜಿಎಫ್ ಬಾಬು


ಇದು ಚುನಾವಣೆಗಾಗಿ ಅಲ್ಲ

ನಾನು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಣವನ್ನು ವಿತರಣೆ ಮಾಡುತ್ತಿಲ್ಲ. ನಾನು ಬೆಳೆದು ಬಂದ ಸಮಾಜಕ್ಕೆ ಮರಳಿ ಕೊಡಲು ಬಯಸುತ್ತಿದ್ದೇನೆ. ಜನರಿಗೆ ಸಹಾಯ ಮಾಡೋದು ನನ್ನ ಉದ್ದೇಶವಾಗಿದೆ. ನಾನು ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿ ನನ್ನ ಸಮಾಜದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಕೆಜಿಎಫ್ ಬಾಬು ನ್ಯೂಸ್  18ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ:  KGF Babu: 350 ಕೋಟಿ ಹಂಚಲು ಮುಂದಾಗಿದ್ದ KGF ಬಾಬುಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್!

1,743 ಕೋಟಿ ರೂ ಆಸ್ತಿ ಘೋಷಿಸಿಕೊಂಡಿರುವ ಕೆಜಿಎಫ್ ಬಾಬು

2021ರ ಎಂಎಲ್​ಸಿ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಿಂದ ಕೆಜಿಎಫ್ ಬಾಬು ಸ್ಪರ್ಧಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ 1,743 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಈ ಹಿಂದೆ ಸಚಿವ ಎಂಟಿಬಿ ನಾಗರಾಜ್ ಅವರು 1,200 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಆದ್ರೆ ಎಂಎಲ್​ಸಿ ಚುನಾವಣೆಯಲ್ಲಿ 397 ಮತಗಳ ಅಂತರದಿಂದ ಕೆಜಿಎಫ್ ಬಾಬು ಸೋಲು ಅನುಭವಿಸಿದ್ದರು.
Published by:Mahmadrafik K
First published: