• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chickpet: ಜೀವಿತಾವಧಿವರೆಗೆ ಉಚಿತ ಗ್ಯಾಸ್ ಸಿಲಿಂಡರ್, ಮನೆ ನಿರ್ಮಾಣ; ಪ್ರಣಾಳಿಕೆ ಬಿಡುಗಡೆಗೊಳಿಸಿದ ಕೆಜಿಎಫ್ ಬಾಬು

Chickpet: ಜೀವಿತಾವಧಿವರೆಗೆ ಉಚಿತ ಗ್ಯಾಸ್ ಸಿಲಿಂಡರ್, ಮನೆ ನಿರ್ಮಾಣ; ಪ್ರಣಾಳಿಕೆ ಬಿಡುಗಡೆಗೊಳಿಸಿದ ಕೆಜಿಎಫ್ ಬಾಬು

ಕೆಜಿಎಫ್ ಬಾಬು

ಕೆಜಿಎಫ್ ಬಾಬು

KGF Babu: ನಾನೇನೂ ಕಾಂಜಿ ಪಿಂಜಿ ವ್ಯಕ್ತಿ ಅಲ್ಲ. 1600 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದು, ಒಬ್ಬ  ಶಾಸಕ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ (Chikpet Assembly Constituency) ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಜಿಎಫ್ ಬಾಬು (KGF Babu) ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಪ್ರಣಾಳಿಕೆಯನ್ನು (Manifesto) ಬಿಡುಗಡೆ ಮಾಡಿದರು. ಕಾಂಗ್ರೆಸ್ (Congress)​ ಹಿರಿತನದ ಅನುಭವ ಇಲ್ಲ‌ ಅಂತಾ ನನಗೆ ಟಿಕೆಟ್ ಕೊಡಲಿಲ್ಲ. ಜನರ ಸೇವೆಗಾಗಿ ನಾನು ಕೆಲಸ‌ ಮಾಡುವೆ. ಜನರಲ್ಲಿ ನನ್ನ ಬಗ್ಗೆ ಕೆಟ್ಟ ಹೆಸರು ಬರಬೇಕು ಅಂತಾ ಅವಮಾನ ಮಾಡಲಾಯ್ತು. ಮೂರರಿಂದ ಮೂರುವರೆ ಸಾವಿರ ಮನೆಗಳನ್ನ ಮಾಡಿದ್ದೇನೆ. ಆರ್ ವಿ ದೇವರಾಜ್ (RV Devaraj) ಮತ್ತು ಗರುಡಾಚಾರ್ (Garudachar) ಅವಮಾನ ಮಾಡಿದ್ರು. ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.


ನಾನೇನೂ ಕಾಂಜಿ ಪಿಂಜಿ ವ್ಯಕ್ತಿ ಅಲ್ಲ. 1600 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದು, ಒಬ್ಬ  ಶಾಸಕ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು. ನಂತರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ತಮ್ಮದೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.


ಕೆಜಿಎಫ್​ ಬಾಬು ಪ್ರಣಾಳಿಕೆ


1.APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ


2.APL- BPL ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ


3.SSLC, PUC, ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ


4.ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ


5.ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು


6.ಪ್ರತೀ ಮನೆಗೆ ಉಚಿತ ಡಿಟಿಎಚ್ ಸಂಪರ್ಕ


kgf babu released a grand manifesto for chikkapet constituency
ಕೆಜಿಎಫ್​ ಬಾಬು


7.ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಮಹಿಳೆಯರಿಗೆ ಗುಡಿಕೈಗಾರಿಕೆ ತರಬೇತಿ, ಸ್ವಂತ ಉದ್ದಿಮೆ ಸ್ಥಾಪನೆಗೆ ಸಹಾಯಧನ.


8.ರಿಯಾಯಿತಿ ದರದಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆ ಸ್ಥಾಪನೆ


9.ಸರ್ಕಾರದ ಅನುದಾನ ಹಾಗೂ ಯೋಜನೆಗಳನ್ನು ಕ್ಷೇತ್ರದ ಜನತೆಯ ಮುಂದೆ ಬಹಿರಂಗ ಚರ್ಚೆ, ಕಳಪೆ ಕಾಮಗಾರಿ ನಡೆಯದಂತೆ ಕ್ರಮ


10.ಮಾದರಿ ಕ್ಷೇತ್ರವಾಗಿ ಮಾಡಿ ಇತಿಹಾಸ ನಿರ್ಮಾಣ


11.ನಾಗರೀಕರಿಗೆ ಸೌಲಭ್ಯ ಒದಗಿಸಲು ವಿಶೇಷ ಕಚೇರಿ, ವೆಬ್ ಸೈಟ್ ಮತ್ತು ಆ್ಯಪ್ ನಿರ್ಮಾಣ


12.ಚಿಕ್ಕಪೇಟೆ ಕ್ಷೇತ್ರದ ಟ್ಯಾಂಕ್ ಗಾರ್ಡನ್, ಸಿದ್ದಾಪುರ, ಬಿಟಿಬಿ ಏರಿಯಾ, LIC ಕಾಲೋನಿ, ರಾಜಣ್ಣ ಲೇಔಟ್, BHEL ಲೇಔಟ್, ಚಿನ್ನಯ್ಯನ ಪಾಳ್ಯ, ನಿವಾಸಿಗಳಿಗೆ ಒಂದು ಮುಕ್ಕಾಲು ಎಕರೆ ಸ್ಮಶಾನ ಜಾಗ ನೀಡಲಾಗುವುದು. ಮೇ 15, 2023 ರಂದು ಜಮೀನು ಹಸ್ತಾಂತರ




13.ಕೃಷ್ಣಪ್ಪ ಗಾರ್ಡನ್ ನ ಹುಸ್ಮಾ ಮಸೀದಿಗೆ ಜಮೀನು ಖರೀದಿಗೆ ಧನ ಸಹಾಯ, ನೀತಿ ಸಂಹಿತೆ ಮುಗಿದ ನಂತರ ಧನ ಸಹಾಯ


14.ಕ್ಷೇತ್ರದ ವಿವಿಧ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಗೆ ಸಹಾಯ, ಧಾರ್ಮಿಕ ಕೇಂದ್ರಗಳಿಗೆ  86.40 ಕೋಟಿ ಅನುದಾನ


ಇದನ್ನೂ ಓದಿ:  BJP Manifesto: ಕರುನಾಡಿನ ಮುಂದೆ ತನ್ನ ಭರವಸೆ, ಕನಸು ಬಿಚ್ಚಿಟ್ಟ ಬಿಜೆಪಿ; ಪ್ರಣಾಳಿಕೆಯಲ್ಲಿವೆ ಮಹತ್ವದ ಘೋಷಣೆಗಳು


15.ಹಿಂದೂ ಸಮಾಜದ ರುದ್ರಭೂಮಿಗೆ 2 ಎಕರೆ ಭೂಮಿ ನೀಡಲಾಗುವುದು. ಇದನ್ನು ನೀತಿ ಸಂಹಿತೆ ಮುಗಿದ ನಂತರ ಹಸ್ತಾಂತರ

top videos
    First published: