MLC ಚುನಾವಣೆಗೆ ಸ್ಪರ್ಧಿಸಿದ್ದೇ ದೊಡ್ಡ ಅಪರಾಧ: ED ದಾಳಿ ಬಳಿಕ ಕೆಜಿಎಫ್ ಬಾಬು ಹೇಳಿಕೆ

ಬಡವರ ಹತ್ತಿರ ದುಡ್ಡು (money) ಬಂದಿದೆ ಅಂದ್ರೆ ರೇಡ್ ಮಾಮೂಲಿ ಆಗಿದೆ. ನಾನು ಎಲ್ಲಾ ಟ್ಯಾಕ್ಸ್ (Tax) ಕಟ್ಟಿದ್ದೇನೆ.ಟ್ಯಾಕ್ಸ್ ಡ್ಯೂ ಇತ್ತು, ಇನ್ಸಾಟಲ್ಮೆಂಟ್ ನಲ್ಲಿ ಕಟ್ಟಿದ್ದೀನಿ. ನಿನ್ನೆ ವಾರೆಂಟ್ ತಗೊಂಡು ಬಂದು ರೇಡ್ ಮಾಡಿದ್ದಾರೆ. ನಾನು ರೇಡ್ ಗೆ ಸಹಕಾರ ಕೊಟ್ಟಿದ್ದೀನಿ ಎಂದು ಹೇಳಿದರು.

ಕೆಜಿಎಫ್ ಬಾಬು

ಕೆಜಿಎಫ್ ಬಾಬು

  • Share this:
ಉದ್ಯಮಿ ಕೆಜಿಎಫ್ ಬಾಬು (Businessman KGF Babu) ಮನೆ ಮೇಲೆ ಇಡಿ ದಾಳಿ (ED Ride) 18 ಗಂಟೆ ಬಳಿಕ ತಡರಾತ್ರಿಗೆ ಮುಕ್ತಾಯಗೊಂಡಿದೆ. ಶನಿವಾರ ಬೆಳಗ್ಗೆ 6 ಗಂಟೆಗೆ ಅಧಿಕಾರಿಗಳು ಕೆಜಿಎಫ್ ಬಾಬು ಅವರ ನಿವಾಸದ (KGF Babu Residence) ಮೇಲೆ ದಾಳಿ ನಡೆಸಿದ್ದರು. ಇಡಿ ದಾಳಿ ಬಳಿಕ ಇಂದು ಕೆಜಿಎಫ್ ಬಾಬು ಮಾಧ್ಯಮಗಳ ಜೊತೆ ಮಾತನಾಡಿದರು. ಬಡವರ ಹತ್ತಿರ ದುಡ್ಡು (money) ಬಂದಿದೆ ಅಂದ್ರೆ ರೇಡ್ ಮಾಮೂಲಿ ಆಗಿದೆ. ನಾನು ಎಲ್ಲಾ ಟ್ಯಾಕ್ಸ್ (Tax) ಕಟ್ಟಿದ್ದೇನೆ.ಟ್ಯಾಕ್ಸ್ ಡ್ಯೂ ಇತ್ತು, ಇನ್ಸಾಟಲ್ಮೆಂಟ್ ನಲ್ಲಿ ಕಟ್ಟಿದ್ದೀನಿ. ನಿನ್ನೆ ವಾರೆಂಟ್ ತಗೊಂಡು ಬಂದು ರೇಡ್ ಮಾಡಿದ್ದಾರೆ. ನಾನು ರೇಡ್ ಗೆ ಸಹಕಾರ ಕೊಟ್ಟಿದ್ದೀನಿ ಎಂದು ಹೇಳಿದರು.

ದಾಳಿಯ ವೇಳೆ ಮನೆಯಲ್ಲಿ 8.60 ಲಕ್ಷ ಕ್ಯಾಶ್ ಮತ್ತು ಚಿನ್ನ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅವರಿಗೆ ನೀಡಿದ್ದೇನೆ. ನೀವು ದಾಖಲೆ ತಗೊಂಡು ದೆಹಲಿಗೆ ಬನ್ನಿ ಅಂತ ಹೇಳಿದ್ದಾರೆ.

ಜಮೀರ್ ಅವರಿಗೆ ಸಾಲ ನೀಡಿದ್ದೆ

ಜಮೀರ್ ಮನೆ ತಗೊಳೋಕೆ ನಾನು ಮೂರೂವರೆ ಕೋಟಿ ಸಾಲ ಕೊಟ್ಟಿದ್ದೆ. ಅವರ ಮೇಲೆ ರೇಡ್ ಆಯ್ತು‌. ನಾನು ಸಾಲ ಕೊಟ್ಟಿದ್ದೆ ಅಂತ ಕನ್ಪರ್ಮಾಮೇಷನ್ ಕೊಟ್ಟಿದ್ದೆ. ಬಳಿಕ ಇಡಿಯಿಂದ ನನಗೆ ನೋಟಿಸ್ ಬಂತು. ನಮ್ಮ ಮನೆ ನಿವಾದ ಮೇಲಿನ ದಾಳಿಗೆ ಜಮೀರ್ ಅಹಮದ್ ರೇಡ್ ಲಿಂಕ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:  SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ, ತಾಕತ್ತಿದ್ರೆ ನಿಷೇಧಿಸಲಿ: ದಿನೇಶ್ ಗುಂಡೂರಾವ್ ಸವಾಲ್

ನಮ್ಮ ಸೋರ್ಸ್ ಆಫ್ ಪ್ರಾಪರ್ಟಿಸ್ ಎಲ್ಲಾ ಕ್ಲಿಯರ್ ಇದೆ. ಎಲ್ಲಾ ಟ್ಯಾಕ್ಸ್ ಕಟ್ಟಿದ್ದೀನಿ. ಮನೆಯಲ್ಲಿ ಸಿಕ್ಕ ಹಣ ಬ್ಯಾಂಕ್ ನಿಂದ ಡ್ರಾ ಆಗಿರೋ ಕ್ಯಾಶ್. ಚಿನ್ನ ಸೀಜ್ ಮಾಡಿದ್ದಾರೆ. ಸಮನ್ಸ್ ಕೊಡ್ತಿವಿ, ಆಗ ಚಿನ್ನಕ್ಕೆ ಡಾಕ್ಯುಮೆಂಟ್ ಕೊಟ್ಟು, ಕ್ಲಿಯರ್ ಮಾಡ್ಕೊಳ್ಳಿ ಅಂತ ಹೇಳಿದ್ದಾರೆ.

ಎರಡು ಮನೆ ಮಾತ್ರ ನನ್ನದು

ನನ್ನದು ಯಾವುದು ಪ್ರೈವೇಟ್ ಪ್ರಾಪರ್ಟಿಸ್ ಇಲ್ಲ. ಎರಡು ಮನೆ ಮಾತ್ರ ನನ್ನದು, ಉಳಿದ ಎಲ್ಲವೂ ಸರ್ಕಾರದಿಂದ ತಗೊಂಡಿರೋದು ಎಂದು ತಿಳಿಸಿದರು.

ಡಿಕೆ ಶಿವಕುಮಾರ್ ನಮ್ಮ ಗುರುಗಳು, ನಮ್ಮ ನಾಯಕರು. ಅವರ ಮೇಲೆ ಮೊನ್ನೆ ಚಾರ್ಜ್ ಶೀಟ್ ಆಗಿದೆ. ನಿನ್ನೆ ನನ್ನ ಮೇಲೆ ರೇಡ್ ಆಗಿದೆ. ಅದರ ಬಗ್ಗೆ ಹೇಗೆ ಹೇಳಬೇಕು ಅಂತ ಗೊತ್ತಿಲ್ಲ. ಒಬ್ಬರಿಗೆ ಒಬ್ಬರು ಸಹಾಯ ಮಾಡಬೇಕು. ಜಮೀರ್ ನಮಗೆ ಸಹಾಯ ಮಾಡಿದ್ದಾರೆ. ನಾನು ಅವರಿಗೆ ಸಹಾಯ ಮಾಡಿದೆ. ಅದ್ರೆ ಈ ಪೇಮೆಂಟ್ ಇನ್ನೂ ಬಂದಿಲ್ಲ.

MLC ಚುನಾವಣೆಗೆ ಸ್ಪರ್ಧಿಸಿದ್ದೇ ದೊಡ್ಡ ಅಪರಾಧ

ಈಗ ಇಡಿ ನೋಟಿಸ್ ಕೊಟ್ಟಿದ್ದಾರೆ. ಏಳು ದಿನಗಳಲ್ಲಿ ಬ್ಯಾಂಕ್ ಡಿಟೈಲ್ಸ್ ತಗೊಂಡು ಬರೋದಕ್ಕೆ ಹೇಳಿದ್ದಾರೆ ಎಂಎಲ್ ಸಿ ಚುನಾವಣೆಗೆ ಸ್ಪರ್ಧಿಸಿದ್ದೆ  ದೊಡ್ಡ ಅಪರಾಧ ಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ:  ಕೆಜಿಎಫ್ ಬಾಬುಗೆ ಐಟಿ ಸಂಕಷ್ಟ! 1,741 ಕೋಟಿ ಕುಬೇರನ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ?

ಜಮೀರ್ ಅಹ್ಮದ್ ಹಣ ವಾಪಸ್ ನೀಡಿಲ್ಲ

ನಾನು ಜಮೀರ್ ಗೆ ಡೈರೆಕ್ಟ್ ಆಗಿ ಹಣ ಕೊಟ್ಟಿಲ್ಲ. ಅವರು ಬ್ಯಾಂಕ್ ಅಲ್ಲಿ ಲೋನ್ ಮಾಡಿದ್ರು. ಆ ಬ್ಯಾಂಕ್ ಲೋನ್ ನನ್ನ ಅಕೌಂಟ್ ನಿಂದ ಕಟ್ಟಿದ್ದೆ. ನಾನು ಜಮೀರ್ ಬಳಿಯಲ್ಲಿ ಹಣವನ್ನು ಕೇಳಿದ್ದೀನಿ. ಜಮೀರ್ ಅವರು ಕಾಲಾವಕಾಶ ಕೇಳಿದ್ದಾರೆ. 2013 ರಲ್ಲಿ ಜಮೀರ್ ಗೆ ಹಣ ನೀಡಿದ್ದೀನಿ. ಆದ್ರೆ ಇದುವರೆಗೂ ಹಣ ವಾಪಸ್ ನೀಡಿಲ್ಲ ಎಂದು ತಿಳಿಸಿದರು. ಇದನ್ನ ನಾನು ಆದಾಯ ತೆರಿಗೆಯಲ್ಲಿ ಹೇಳಿಕೊಂಡಿದ್ದೇನೆ ಎಂದರು.
Published by:Mahmadrafik K
First published: