Kodagu: ಗನ್ ಹಿಡಿಯೋದನ್ನು ಕೇಳೋಕೆ ಇವನ್ಯಾರು? ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಕೆ.ಜಿ ಬೋಪಯ್ಯ ಗರಂ

ಪೊನ್ನಂಪೇಟೆಯಲ್ಲಿ ಭಜರಂಗದಳ ಮತ್ತು ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ ಮತ್ತು ಬಂದೂಕು ತರಬೇತಿ (Gun Training) ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಶಾಸಕ ಬೋಪಯ್ಯ ಏಕವಚನದಲ್ಲಿಯೇ ದಾಳಿ ನಡೆಸಿದರು.

ಕೆ.ಜಿ.ಬೋಪಯ್ಯ

ಕೆ.ಜಿ.ಬೋಪಯ್ಯ

  • Share this:
ಕೊಡಗು(ಮೇ.18): ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು. ಅದನ್ನು ಕೇಳುವುದಕ್ಕೆ ಇವನ್ಯಾರು ಸಿದ್ದರಾಮಯ್ಯ (Siddaramaiah) ಎಂದು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ (KG Bopaiah) ಆಕ್ರೋಶ ಹೊರ ಹಾಕಿದರು.  ಪೊನ್ನಂಪೇಟೆಯಲ್ಲಿ ಭಜರಂಗದಳ ಮತ್ತು ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ ಮತ್ತು ಬಂದೂಕು ತರಬೇತಿ (Gun Training) ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಶಾಸಕ ಬೋಪಯ್ಯ ಏಕವಚನದಲ್ಲಿಯೇ ದಾಳಿ ನಡೆಸಿದರು.

ಮಡಿಕೇರಿಯಲ್ಲಿ ಮಾತನಾಡಿದ ಅವರು ಒಂದು ವರ್ಗವನ್ನು ಓಲೈಕೆ ಮಾಡುವುದಕ್ಕಾಗಿ ಮಾತನಾಡುವ ಸಿದ್ದರಾಮಯ್ಯನವರಿಗೆ ಡಿ. ಜೆ ಹಳ್ಳಿ, ಕೆ ಜಿ ಹಳ್ಳಿ ಗಲಾಟೆಯಲ್ಲಿ ದಲಿತ ಶಾಸಕರಾಗಿರುವವರ ಮನೆಗೆ ಶಸ್ತ್ರಾಸ್ತ್ರ ಹಿಡಿದು ನುಗ್ಗಿ ಮನೆಗೆ ಬೆಂಕಿ ಹಾಕಿದ್ರಲ್ಲ, ಆಗ ನಿಮಗೆ ಸಂಮಿಧಾನ ನೆನಪಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.

ಸಂವಿಧಾನದ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ

ನಿಮ್ಮಿಂದ ನಾವು ಕಾನೂನು, ಸಂವಿಧಾನದ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ನಮ್ಮ ಸಂಘಟನೆಗಳಾದ ಆರ್‌ಎಸ್ಎಸ್ ಶಿಬಿರದಲ್ಲಿ ಶಾಸಕರು ಭಾಗವಹಿಸಬಾರದು ಅಂತ ಎಲ್ಲಾದರೂ ಕಾನೂನು ಇದೆಯೇ?  ಎಂದು ಪ್ರಶ್ನಿಸಿದರು.

ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಭೇಟಿ ಕೊಡೋದು ನನ್ನ ಕರ್ತವ್ಯ. ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರತೀ ವರ್ಷ ಅಭ್ಯಾಸ ವರ್ಗ ಮಾಡುತ್ತವೆ. ಆ ಸಂದರ್ಭ ತ್ರಿಶೂಲ ಕೊಡಲಾಗುತ್ತದೆ. ಆ ತರಬೇತಿ ಈ ವರ್ಷ ಕೊಡಗಿನಲ್ಲಿ ನಡೆದಿದೆ ಅಷ್ಟೇ. ಏನಾದ್ರೂ ತ್ರಿಶೂಲ ಬ್ಯಾನ್ ಆಗಿದೆಯೇ ಇಲ್ಲವಲ್ಲ ಎಂದರು.

ಇದನ್ನೂ ಓದಿ: Arms Training: ಕೊಡಗಿನ ಶಾಲೆಯ ಆವರಣದಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ

ಸಿದ್ದರಾಮಯ್ಯನವರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಅಲ್ಪಸಂಖ್ಯಾತರನ್ನು ಹೇಗೆ ಓಲೈಸಲಿ‌ ಎಂಬ ಆಲೋಚನೆ ಮೂಲಕವೇ ಅವರ ದಿನಚರಿ ಆರಂಭವಾಗುತ್ತದೆ. ಸಿದ್ದರಾಮಯ್ಯ ನಮಗೆ ಸಂವಿಧಾನದ ಬದ್ಧತೆ ಬಗ್ಗೆ ಹೇಳಿ ಕೊಡುವ ಅಗತ್ಯ ಇಲ್ಲ. ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ ಮೇಲೆ‌ ದಾಳಿ ಮಾಡಿದಾಗ ನಿಮಗೆ ಸಂವಿಧಾನದ ನೆನಪು ಬರಲಿಲ್ಲವೇ ಎಂದರು.

ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು

ಸಿದ್ದರಾಮಯ್ಯ ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು. ಏರ್ ಗನ್ ಬಳಸಲು ಲೈಸನ್ಸ್ ಬೇಕಿಲ್ಲ. ಜೊತೆಗೆ ಇಂದು ಪರಿಸ್ಥಿತಿ ಹೇಗಿದೆ, ನಮ್ಮ ಸ್ವರಕ್ಷಣೆಗಾಗಿ ಗನ್ ಗಳು ಬೇಕಾಗುತ್ತವೆ. ಶಾಲೆಯಲ್ಲಿ ಅಭ್ಯಾಸ ಮಾಡಿದಾರೆ ಹೌದು, ಅದು ಶಾಲೆಗೆ ರಜೆ ಇರುವಾಗ ಅಭ್ಯಾಸ ಮಾಡಿದ್ದಾರೆ. ಆದರೆ ಅದು ಖಾಸಗಿ ಶಾಲೆ. ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತಾಡಿದ್ರೆ ಚೆನ್ನಾಗಿರಲ್ಲ. ನಮಗೂ ಮಾತಾಡೋಕೆ ಬರುತ್ತೆ ಎಂದು ಟಾಂಗ್ ನೀಡಿದರು. ಹಿಂದೂ ಸಮಾಜದ ರಕ್ಷಣೆಗೆ ಅಭ್ಯಾಸ ಮಾಡಿದ್ದಾರೆ ಅದರಲ್ಲಿ ತಪ್ಪೇನಿದೆ? ಎಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ. ಆದರೂ ಪಿಎಫ್ಐ ಅವರು, ಹಾದಿ ಬೀದಿಯಲ್ಲಿ ಹೋಗೋರೆಲ್ಲ ಕಮೆಂಟ್ ಮಾಡಿದರೆ ಅವರಿಗೆಲ್ಲಾ ಕೌಂಟರ್ ಕೊಡಲ್ಲ ಎಂದರು.

ಎಸ್‌ಡಿಪಿಐ, ಪಿಎಫ್‌ಐ ದೇಶಕ್ಕೆ ಮಾರಕ ಸಂಘಟನೆಗಳು ಅವುಗಳನ್ನ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು. ಪಿಎಫ್ಐ ನಮ್ಮ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದೆ. ಇದಕ್ಕೆಲ್ಲಾ ಕೇರ್ ಮಾಡಲ್ಲ. ಅದನ್ನೆಲ್ಲಾ ಎದುರಿಸುವ ಶಕ್ತಿ ನನಗಿದೆ ಎಂದರು.

ಇದನ್ನೂ ಓದಿ: Kodagu: ಶಾಲಾ ಆವರಣದಲ್ಲಿ ತ್ರಿಶೂಲದೀಕ್ಷೆ, ಕೊಡಗಿನ ಇಬ್ಬರು ಶಾಸಕರ ವಿರುದ್ಧ ದೂರು

ಆದರೆ ಮತ್ತೊಂದೆಡೆ ಎಸ್ಡಿಪಿಐ ಕೊಡಗು ಜಿಲ್ಲಾ ಸಮಿತಿ ತರಬೇತಿ ಶಿಬಿರದ ನಡೆಯನ್ನು ಖಂಡಿಸಿದೆ. ಗನ್ ಬಳಕೆಯ ಉದ್ದೇಶ ಏನು?, ಯಾರ ವಿರುದ್ಧ ಟ್ರೈನಿಂಗ್ ಕೊಡುತ್ತಿದ್ದಿರಾ ಎಂದು ಪ್ರಶ್ನಿಸಿದೆ. ಇವತ್ತು ಏರ್‌ಗನ್‌ನಲ್ಲಿ ಟ್ರೈನಿಂಗ್ ಮಾಡಿ ಮುಂದೆ ಅವರ ಕೈಗೆ ಎಕೆ-47 ಬಂದೂಕು ಕೊಡುತ್ತೀರಾ ಎಂದು ಎಸ್ ಡಿಪಿಐ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಉಸ್ಮಾನ್ ಸುಂಟಿಕೊಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published by:Divya D
First published: