ಕಾಫಿನಾಡಿನಲ್ಲಿ ಆತಂಕ ಮೂಡಿಸುತ್ತಿರುವ ಮಂಗನ ಕಾಯಿಲೆ; ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮ

ಸತ್ತ ಮಂಗಗಳಿಂದ ಉತ್ಪತ್ತಿಯಾಗುವ ಉಣ್ಣೆಗಳಿಂದ ಈ ರೋಗ ಮನುಷ್ಯರಿಗೆ ಹರಡುತ್ತಿದ್ದು,  ಈ ಬಗ್ಗೆ ಜಾಗುರುಕತೆವಹಿಸುವಂತೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಇನ್ನು ಈ ಕಾಯಿಲೆ ಕಂಡು ಬರುತ್ತಿರುವ ಸ್ಥಳಗಳಲ್ಲಿ ಹಾಟ್​ಸ್ಪಾಟ್​ಗಳೆಂದು ಗುರುತಿಸಲಾಗುತ್ತಿದೆ.

  • Share this:
ಚಿಕ್ಕಮಗಳೂರು (ಫೆ.11): ಇಡೀ ವಿಶ್ವ ಈಗ ಕರೋನಾ ವೈರಸ್​ ಭೀತಿಗೆ ತುತ್ತಾಗಿದ್ದರೆ, ಇತ್ತ ಮಲೆನಾಡಿಗರನ್ನು ಮಂಗನ ಕಾಯಿಲೆ ಭಯ ಆವರಿಸಿದೆ. ಜಿಲ್ಲೆಯಲ್ಲಿ ಈ ಕಾಯಿಲೆಗೆ ಮೂವರು ಕಾರ್ಮಿಕರು ತುತ್ತಾಗಿದ್ದು, ಇದರ ಸೋಂಕು ದಿನೇ ದಿನೇ ಹೆಚ್ಚಾಗುವ ಸಾಧ್ಯತೆ ಇದೆ.

For more sample papers from CBSE Class 12 Commerce, please Click here:

ಜಿಲ್ಲೆಯಲ್ಲಿ ಕೆಎಫ್​ಡಿ (ಕಯಾಸನೂರು ಫಾರೆಸ್ಟ್​ ಕಾಯಿಲೆ) ವೈರಸ್​ ಹರಡುತ್ತಿದ್ದು,  ಈ ವೈರಾಣು ಅಸ್ಸಾಂನ ಕೂಲಿ ಕಾರ್ಮಿಕರಲ್ಲಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢೀಕರಿಸಿದೆ.  ಎನ್. ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 60 ಕೂಲಿ ಕಾರ್ಮಿಕರ ಪೈಕಿ ಮೂವರಿಗೆ ಈ ಸೋಂಕು ತಗುಲಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಸೋಂಕು ಹರಡುವ ಹಿನ್ನೆಲೆ ಜಿಲ್ಲಾ ಸರ್ವೇಕ್ಷಣಾ ಘಟಕ ಮುನ್ನೆಚ್ಚರಿಕ ಕ್ರಮಗಳನ್ನ ಕೈಗೊಂಡಿದ್ದು, ಜನರಿಗೆ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುತ್ತಿದೆ.   ಅಷ್ಟೇ ಅಲ್ಲದೇ ಮಡಬೂರು ಸುತ್ತಮುತ್ತಲಿನ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸುವ ಮೂಲಕ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.  ಸೋಂಕು ಹೆಚ್ಚುತ್ತಿರುವ ಹಿನ್ನೆಲೆ  ಎನ್.ಆರ್ ಪುರ ತಾಲೂಕು ಮಾತ್ರವಲ್ಲದೇ ಕೊಪ್ಪ, ಶೃಂಗೇರಿ, ಮೂಡಿಗೆರೆ ಭಾಗದಲ್ಲೂ ವೈದ್ಯರ ತಂಡ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದು,  ಜನರು ಭಯ ಪಡದಂತೆ ರೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.ಸತ್ತ ಮಂಗಗಳಿಂದ ಉತ್ಪತ್ತಿಯಾಗುವ ಉಣ್ಣೆಗಳಿಂದ ಈ ರೋಗ ಮನುಷ್ಯರಿಗೆ ಹರಡುತ್ತಿದ್ದು,  ಈ ಬಗ್ಗೆ ಜಾಗುರುಕತೆವಹಿಸುವಂತೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಇನ್ನು ಈ ಕಾಯಿಲೆ ಕಂಡು ಬರುತ್ತಿರುವ ಸ್ಥಳಗಳಲ್ಲಿ ಹಾಟ್​ಸ್ಪಾಟ್​ಗಳೆಂದು ಗುರುತಿಸಲಾಗುತ್ತಿದೆ. ಈ ಸೋಂಕು ಹರಡದಂತೆ ಚಿಕ್ಕಮಕ್ಕಳಿಂದ ದೊಡ್ಡವರವರೆಗೆ ಕೆಎಫ್​ಡಿ ನಿರೋಧಕ ಲಸಿಕೆ ಹಾಕಲಾಗುತ್ತಿದೆ.

ಇದನ್ನು ಓದಿ: ವೇದದಿಂದ ವಿಜ್ಞಾನದವರೆಗೆ ಪಂಚಮುಖಿ ಶಿಕ್ಷಣ: ಚಿಕ್ಕಮಗಳೂರಿನ ಪ್ರಭೋದಿನಿ ಗುರುಕುಲಗೆ ಅಂತಾರಾಷ್ಟ್ರೀಯ ಖ್ಯಾತಿ

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ರೋಗ ಪತ್ತೆಗಾಗಿ ಹಲವು ದಿನಗಳ ಸಮಯ ಬೇಕಾಗುತ್ತಿರುವ ಹಿನ್ನೆಲೆ, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಈ ಸೋಂಕು ಹರಡದಂತೆ ಮುನ್ನೆಚ್ಚರಿಕೆವಹಿಸಲಾಗಿದೆ ಎಂದರು.

First published: