• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Politics: ಕಾಂಗ್ರೆಸ್​ ಗೆಲುವಿನ ಹಿಂದಿದೆ ಈ ರಹಸ್ಯ, ಬಿಜೆಪಿಗೂ ಈ ವಿಚಾರ ಹೊಳೆದಿರಲಿಲ್ಲ!

Karnataka Politics: ಕಾಂಗ್ರೆಸ್​ ಗೆಲುವಿನ ಹಿಂದಿದೆ ಈ ರಹಸ್ಯ, ಬಿಜೆಪಿಗೂ ಈ ವಿಚಾರ ಹೊಳೆದಿರಲಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಚುನಾವಣಾ ಫಲಿತಾಂಶದಲ್ಲಿ 224 ಸ್ಥಾನಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದ್ದರೆ, ಬಿಜೆಪಿ 66 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜೆಡಿಎಸ್ ಖಾತೆಗೆ 19 ಸ್ಥಾನಗಳು ಸೇರಿವೆ. ಮತ್ತೊಂದೆಡೆ, ಇತರರು ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ (Karnataka Assembly Election Results 2023) ಚಿತ್ರಣ ಸ್ಪಷ್ಟವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಇಲ್ಲಿ 38 ವರ್ಷಗಳ ಸಂಸ್ಕೃತಿ ಮುಂದುವರೆದಿದ್ದು, ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಇನ್ನು ಬಿಜೆಪಿಗೆ (BJP) ಈ ಸೋಲಿನ ಮೂಲಕ ದಕ್ಷಿಣದ ದ್ವಾರ ಮುಚ್ಚಿದೆ. ಇಲ್ಲಿನ ಯಾವುದೇ ರಾಜ್ಯಗಳಲ್ಲೂ ಪಕ್ಷ ಅಧಿಕಾರದಲ್ಲಿಲ್ಲ. ಇನ್ನು ಕರ್ನಾಟಕದಲ್ಲಿ 1985 ರಿಂದ ಯಾವುದೇ ಆಡಳಿತ ಪಕ್ಷ ಸತತ ಐದು ವರ್ಷಗಳಿಗಿಂತ ಹೆಚ್ಚು ಕಾಲ ಆಡಳಿತ ನಡೆಸಿಲ್ಲ ಎಂಬುವುದು ಮತ್ತೊಂದು ಅಚ್ಚರಿಯ ವಿಚಾರ.


ಇನ್ನು ಚುನಾವಣಾ ಫಲಿತಾಂಶದಲ್ಲಿ 224 ಸ್ಥಾನಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದ್ದರೆ, ಬಿಜೆಪಿ 66 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜೆಡಿಎಸ್ ಖಾತೆಗೆ 19 ಸ್ಥಾನಗಳು ಸೇರಿವೆ. ಮತ್ತೊಂದೆಡೆ, ಇತರರು ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.


2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದು ಶೇ.36.22 ಮತಗಳನ್ನು ಪಡೆದಿತ್ತು. ಅದೇ ಸಮಯದಲ್ಲಿ ಕಾಂಗ್ರೆಸ್ 78 ಸ್ಥಾನಗಳನ್ನು ಗೆದ್ದಿತ್ತು ಮತ್ತು ಪಕ್ಷವು 38.04 ರಷ್ಟು ಮತಗಳನ್ನು ಗಳಿಸಿತು. ಜೆಡಿಎಸ್ 37 ಸ್ಥಾನ ಗೆದ್ದು ಶೇ.18.36 ಮತ ಗಳಿಸಿತ್ತು.


ಕಾಂಗ್ರೆಸ್​ ಗೆಲುವಿಗೆ ಕಾರಣಗಳು ಹೀಗಿವೆ


* '40 ಪರ್ಸೆಂಟ್ ಕಮಿಷನ್ ಸರ್ಕಾರ':


ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ವಿಷಯವನ್ನು ಜೋರಾಗಿ ಪ್ರಸ್ತಾಪಿಸಿತು. ಬೊಮ್ಮಾಯಿ ಸರ್ಕಾರವನ್ನು ಕಾಂಗ್ರೆಸ್​ ನಾಯಕರು 40 ಪರ್ಸೆಂಟ್ ಸರ್ಕಾರ ಎಂದೇ ಕರೆಯಲಾರಂಭಿಸಿದರು. ಇದನ್ನೇ ಮುಂದುವರೆಸಿ ಪೇ ಸಿಎಂ ಎಂಬ ಅಭಿಯಾನವನ್ನೇ ಆರಂಭಿಸಿದರು. ಕಾಂಗ್ರೆಸ್‌ನ ಪ್ರಮುಖರಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಈ ವಿಚಾರವಾಗಿ ಅತ್ಯಂತ ಪರಿಣಾಮಕಾರಿಯಾಗಿ ಪ್ರಚಾರ ನಡೆಸಿದರು.


ಪಕ್ಷವು ಕೊನೆಯ ಕ್ಷಣದಲ್ಲಿ ಕರ್ನಾಟಕದ ಸುದ್ದಿ ಪತ್ರಿಕೆಯ ಸ್ಥಳೀಯ ಆವೃತ್ತಿಯಲ್ಲಿ ಭ್ರಷ್ಟಾಚಾರದ ದರ ಪಟ್ಟಿಯನ್ನು ಬಿಡುಗಡೆ ಮಾಡಿತು ಈ ಮೂಲಕ ಭ್ರಷ್ಟಾಚಾರದ ವಿಷಯವನ್ನು ಸ್ಥಾಪಿಸಲು ಪ್ರಯತ್ನಿಸಿತು. ಎಬಿಪಿ-ಸಿ ಮತದಾರರ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಭ್ರಷ್ಟಾಚಾರದ ಸಮಸ್ಯೆ ಇದೆ ಎಂದು ಜನರೇ ಅಭಿಪ್ರಾಯ ನೀಡಿದ್ದರು. ಆದರೆ, ಬಿಜೆಪಿ ಭ್ರಷ್ಟಾಚಾರದ ಎಲ್ಲಾ ಆರೋಪಗಳನ್ನು ತಳ್ಳಿಹಾಕುತ್ತಲೇ ಬಂದಿತ್ತು.


congress call clp meeting today mrq


* ಐದು ಗ್ಯಾರಂಟಿ:


ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತು ಮತ್ತು ಚುನಾವಣೆಯ ಉದ್ದಕ್ಕೂ ತನ್ನ ಪ್ರಚಾರದಲ್ಲಿ ಈ ಭರವಸೆಗಳನ್ನು ಸಾಮಾನ್ಯ ನೀಡುತ್ತಲೇ ಬಂದಿದೆ. ಗೃಹ ಜ್ಯೋತಿ ಯೋಜನೆಯಡಿ ಸರಕಾರ ರಚನೆಯಾದರೆ ಪ್ರತಿ ಕುಟುಂಬಕ್ಕೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಪಕ್ಷ ಹೇಳಿಕೊಂಡಿದೆ. ಗೃಹ ಲಕ್ಷ್ಮಿ ಯೋಜನೆಯಡಿ, ಕುಟುಂಬವನ್ನು ನಡೆಸುತ್ತಿರುವ ಮಹಿಳೆಗೆ ತಿಂಗಳಿಗೆ 2000 ರೂಪಾಯಿಗಳನ್ನು ನೀಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಎಲ್ಲ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿಕೊಂಡಿದೆ. ಯುವಕರತ್ತ ಗಮನ ಹರಿಸಿ, ಪದವೀಧರ ಯುವಕರಿಗೆ ತಿಂಗಳಿಗೆ 3 ಸಾವಿರ ರೂ.ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಡಿಪ್ಲೊಮಾ ಆದವರಿಗೆ ತಿಂಗಳಿಗೆ 1500 ರೂ. ಕೊಡಲಾಗುವುದಾಗಿ ಹೇಳಿಕೊಂಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ನೀಡಲಿದೆ.


ಈ ಭರವಸೆಗಳ ಘೋಷಣೆ ಮೂಲಕ ಪಕ್ಷಕ್ಕೆ ಮತಗಳಾಗಿ ಪರಿವರ್ತಿಸಿದೆ. ಇದರ ಪರಿಣಾಮ ಫಲಿತಾಂಶದ ಮೇಲೆ ಸ್ಪಷ್ಟವಾಗಿ ಗೋಚರಿಸಿದೆ. ಕಾಂಗ್ರೆಸ್‌ನ ಈ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು 'ರೇವ್ಡಿ ಸಂಸ್ಕೃತಿ' ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಕ್ಷವು ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿರುವ ವಿಚಾರವನ್ನೇ ಪ್ರಸ್ತಾಪಿಸಿ ಅದರ ಲಾಭ ಸಾಮಾನ್ಯ ಜನರಿಗೆ ಏಕೆ ಸಿಗಬಾರದು ಎಂದು ಪ್ರಶ್ನಿಸಿತ್ತು.


ಇದನ್ನೂ ಓದಿ:  Jayanagar: 6 ಬಾರಿ ಮತ ಎಣಿಕೆ; ಕಣ್ಣೀರು ಹಾಕ್ತಾ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ


* ಒಗ್ಗಟ್ಟು ಪ್ರದರ್ಶನ:


ಪಕ್ಷದ ನಾಯಕರನ್ನು ಒಗ್ಗಟ್ಟಾಗಿ ಇಡುವುದೇ ಕಾಂಗ್ರೆಸ್​ಗೆ ದೊಡ್ಡ ಸವಾಲಾಗಿತ್ತು. ಚುನಾವಣೆಗೆ ಒಂದು ವರ್ಷ ಮುಂಚೆಯೇ ಕಾಂಗ್ರೆಸ್ ಈ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಆರಂಭಿಸಿತ್ತು. ರಾಜ್ಯದಲ್ಲಿ ಪಕ್ಷದೊಳಗೆ ಮುಖ್ಯವಾಗಿ ಎರಡು ಬಣಗಳಿದ್ದು, ಒಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇನ್ನೊಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ರದ್ದಾಗಿತ್ತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಪಕ್ಷವು ಮೊದಲ ಬಾರಿಗೆ ಇಬ್ಬರೂ ನಾಯಕರನ್ನು ಒಗ್ಗೂಡಿಸಿತು. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಚುನಾವಣಾ ಪ್ರಚಾರದ ವೇಳೆಯೂ ಭಿತ್ತಿಪತ್ರಗಳಿಂದ ಹಿಡಿದು ವೇದಿಕೆಯವರೆಗೂ ಉಭಯ ನಾಯಕರ ಉಪಸ್ಥಿತಿಯೇ ಕಂಡು ಬಂದಿತ್ತು. ಇಷ್ಟೇ ಅಲ್ಲ, ಮೇ 10ರಂದು ಮತದಾನಕ್ಕೂ ಮುನ್ನ ಪಕ್ಷವು ಇಬ್ಬರೂ ನಾಯಕರ ಸಂದರ್ಶನದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಒಬ್ಬರನ್ನೊಬ್ಬರು ಪ್ರಶ್ನಿಸಿ ಉತ್ತರ ನೀಡುವ ದೃಶ್ಯಗಳಿದ್ದವು. ಚುನಾವಣೋತ್ತರ ಹೋರಾಟ ಮತ್ತು ಸರ್ಕಾರದ ಅಸ್ಥಿರತೆಯ ಸಂದೇಶ ಮತದಾರರಿಗೆ ಹೋಗಬಾರದು ಎಂದು ಪಕ್ಷ ಪ್ರಯತ್ನಿಸಿದೆ.


* ಅಬ್ಬರದ ಪ್ರಚಾರ:


ಒಗ್ಗಟ್ಟಿನ ಪ್ರಚಾರದ ಜತೆಗೆ ಏಕಾ.ಗಿಯಾಗಿ ನಡೆಸಿದ್ದ ಪ್ರಚಾರಗಳಲ್ಲಿಯೂ ಕಾಂಗ್ರೆಸ್‌ ಅಗ್ರೆಸ್ಸಿವ್‌ ಆಗಿ ಕಾಣಿಸಿಕೊಂಡಿತ್ತು. ಸಾಮಾಜಿಕ ಜಾಲತಾಣವನ್ನೂ ಪಕ್ಷ ಈ ಬಾರಿ ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿತ್ತು. ಪಕ್ಷ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಿತ್ತು. ಹಲವು ವರ್ಷಗಳ ನಂತರ ಸ್ವತಃ ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿದಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡಾ ರಾಜ್ಯದಲ್ಲಿ ತಮ್ಮದೇ ದಾಟಿಯಲ್ಲಿ ಪ್ರಚಾರ ನಡೆಸಿದ್ದರು. ರಾಹುಲ್ ಗಾಂಧಿ ಅವರು 11 ದಿನಗಳಲ್ಲಿ 23 ರ್ಯಾಲಿಗಳು ಮತ್ತು 2 ರೋಡ್‌ಶೋಗಳನ್ನು ಮಾಡಿದ್ದಾರೆ. ಅತ್ತ ಪ್ರಿಯಾಂಕಾ ಗಾಂಧಿ 9 ದಿನಗಳಲ್ಲಿ 15 ರ್ಯಾಲಿಗಳು ಮತ್ತು 11 ರೋಡ್‌ಶೋಗಳನ್ನು ಮಾಡಿದ್ದಾರೆ. ತವರು ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 15 ದಿನಗಳಲ್ಲಿ 32 ರ್ಯಾಲಿಗಳು ಮತ್ತು ರೋಡ್‌ಶೋ ನಡೆಸಿದ್ದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಆಪ್ತರನ್ನೂ ರಾಜ್ಯದಲ್ಲಿ ಪ್ರಚಾರ ನಡೆಸಲು ಕಳುಹಿಸಿದ್ದರು.


* ಸ್ಥಳೀಯ ಸಮಸ್ಯೆಗಳು:


ಚುನಾವಣೆಯ ಕೊನೆಯಲ್ಲಿ ಕಾಂಗ್ರೆಸ್​ನ ಸಂಪೂರ್ಣ ಗಮನ ಸ್ಥಳೀಯ ಸಮಸ್ಯೆಗಳ ಮೇಲಿತ್ತು. ನಿರುದ್ಯೋಗ ಮತ್ತು ಬೆಲೆ ಏರಿಕೆ, ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಮೀಸಲಾತಿಯಂತಹ ವಿಷಯಗಳಿಗಿಂತ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ, ರಾಹುಲ್ ಗಾಂಧಿಯ ಅನರ್ಹತೆ, ಇಡಿ-ಸಿಬಿಐ ಕ್ರಮ, ಕೋಮುವಾದ ಸಮಸ್ಯೆಗಳನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ.


* ಭಜರಂಗದಳ ಬೇಡ ಆದರೆ ಭಜರಂಗಿ ಬೇಕು


ಇನ್ನು ಕೊನೆಯ ಕ್ಷಣದಲ್ಲಿ ಪಿಎಫ್‌ಐ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ವಿಚಾರದಲ್ಲಿ ಬಿಜೆಪಿ ಆಕ್ರಮಣಕಾರಿ ರೂಪ ತಾಳಿತ್ತು. ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ ಅವರಂತಹ ಉನ್ನತ ನಾಯಕರಿಂದ ಹಿಡಿದು ಸ್ಥಳೀಯ ನಾಯಕರವರೆಗೂ ಹನುಮಾನ್​ ಚಾಲೀಸಾ ಪಠಣ ಮಾಡಿದ್ದರು ಈ ಮೂಲಕ ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸಿದರು. ಇದು ಕಾಂಗ್ರೆಸ್​ಗೆ ಕೊಂಚ ಹಿನ್ನಡೆಯುಂಟು ಮಾಡಬಹುದೆಂದು ಊಹಿಸಲಾಗಿತ್ತು. ಆದರೆ ಈ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್​ ಇದಕ್ಕೆ ಪ್ರತಿಯಾಗಿ ರಾಜ್ಯದ ವಿವಿಧೆಡೆ ಹನುಮಾನ್ ಮಂದಿರ ನಿರ್ಮಿಸುವುದಾಗಿ ಭರವಸೆ ನೀಡಿತ್ತು. ಈ ಮೂಲಕ ಭಜರಂಗದಳ ಬೇಡ ಆದರೆ ಭಜರಂಗಿ ಬೇಕು ಎಂಬ ಸ್ಪಷ್ಟ ಸಂದೇಶ ರವಾನಿಸಿತು.
* ಪ್ರಮುಖ ಬಿಜೆಪಿ ನಾಯಕರ ಸೇರ್ಪಡೆ:


ಬಿಜೆಪಿ ವಿರುದ್ಧ ಸಿಟ್ಟಿಗೆದ್ದ ಹಲವು ಟಿಕೆಟ್​ ವಂಚಿತ ನಾಯಕರು ಅಸಮಾಧಾನಗೊಂಡಿದ್ದರು. ಈ ಅವಕಾಶ ಬಳಸಿಕೊಂಡ ಕಾಂಗ್ರೆಸ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ್ದು ಮಾತ್ರವಲ್ಲ ಅವರಿಗೆ ಈ ಬಾರಿ ಟಿಕೆಟ್​ ಕೂಡಾ ನೀಡಿತ್ತು ಪಕ್ಷ. ಅದರೆ ಈ ಕದನದಲ್ಲಿ ಶೆಟ್ಟರ್ ಸೋಲಾಗಿದೆ ಎಂಬುವುದು ಸತ್ಯ. ಅತ್ತ ಈ ಹಿಂದೆ ಬಿಜೆಪಿಗೆ ನಿಕಟವಾಗಿದ್ದ ಎಚ್‌ಡಿ ತಮ್ಮಯ್ಯಗೂ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಈ ಚುನಾವಣೆಯಲ್ಲಿ ಸಿ.ಟಿ.ರವಿಯಂತಹ ಘಟಾನುಘಟಿ ಬಿಜೆಪಿ ನಾಯಕನನ್ನೇ ತಮ್ಮಯ್ಯ ಸೋಲಿಸಿದ್ದಾರೆ.

top videos


  ಇವುಗಳನ್ನು ಹೊರತುಪಡಿಸಿ ಕಾಂಗ್ರೆಸ್​ ಭಾರತದ ಉದ್ದಗಲಕ್ಕೂ ಕೈಗೊಂಡಿದ್ದ ಭಾರತ್​ ಜೋಡೋ ಯಾತ್ರೆ, ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ, ಅಹಿಂದ ಮತಗಳ ಒಗ್ಗೂಡುವಿಕೆ, ಹಾಗೂ ಬಿಜೆಪಿಯ ಒಳಜಗಳಗಳನ್ನು ಕಾಂಗ್ರೆಸ್​ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಇವೆಲ್ಲವೂ ಕಾಂಗ್ರೆಸ್​ ಪಾಲಿಗೆ ವರವಾಗಿದೆ.

  First published: