Bagalkot: ನಮ್ಗ ಹಣ ಬ್ಯಾಡ್ರಿ, ನ್ಯಾಯ ಬೇಕ್ರಿ; ಪರಿಹಾರದ ಹಣ ಸಿದ್ದರಾಮಯ್ಯ ಕಾರ್ ಮೇಲೆ ಎಸೆದ ಮಹಿಳೆ

ಕುಳಗೇರಿ ಕ್ರಾಸ್ ದಾಬಾ ಮಾಲೀಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಮಹಿಳೆಗೆ ಎರಡು ಲಕ್ಷ ರೂ. ಪರಿಹಾರ ನೀಡಿದ್ದರು. ಆದ್ರೆ ಮಹಿಳೆ ಆರಂಭದಿಂದಲೂ ಹಣ ಸ್ವೀಕರಿಸಲು ನಿರಾಕರಿಸಿದರು.

ಸಿದ್ದರಾಮಯ್ಯ ಮತ್ತು ಹಣ ಎಸೆದ ಮಹಿಳೆ

ಸಿದ್ದರಾಮಯ್ಯ ಮತ್ತು ಹಣ ಎಸೆದ ಮಹಿಳೆ

  • Share this:
ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ನಿನ್ನೆಯಿಂದ ತಮ್ಮ ವಿಧಾನಸಭಾ ಕ್ಷೇತ್ರ ಬಾದಾಮಿಯ (Badami) ಪ್ರವಾಸದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಕೆರೂರು (Keruru) ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿ ಗಲಾಟೆ ನಡೆದಿತ್ತು. ಇಂದು ಸಿದ್ದರಾಮಯ್ಯನವರು ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಪರಿಹಾರವಾಗಿ ನೀಡಿದ್ದ ಹಣವನ್ನು ಮುಸ್ಲಿಂ ಮಹಿಳೆಯೊಬ್ಬರು (Muslim Woman) ಸಿದ್ದರಾಮಯ್ಯ ಅವರ ಬೆಂಗಾವಲು ವಾಹನದ ಮೇಲೆ ಎಸೆದು ಆಕ್ರೋಶ ಹೊರ ಹಾಕಿದರು. ನಮಗ್ ಈ ದುಡ್ಡು, ಹಣ ಎಲ್ಲಾ ಬ್ಯಾಡ್ರಿ, ನಮಗೆ ಶಾಂತಿ ಮತ್ತು ನ್ಯಾಯ ಬೇಕ್ರಿ ಸರ್, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಮಹಿಳೆ ಜೋರು ಜೋರಾಗಿ ಕೂಗಿ ಹೇಳಿದರು. ಸದ್ಯ ಮಹಿಳೆ ಹಣ ಎಸೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ರಜ್ಮಾ ಹಣ ಎಸೆದ ಮಹಿಳೆ. ಕುಳಗೇರಿ ಕ್ರಾಸ್ ದಾಬಾ ಮಾಲೀಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಮಹಿಳೆಗೆ ಎರಡು ಲಕ್ಷ ರೂ. ಪರಿಹಾರ ನೀಡಿದ್ದರು. ಆದ್ರೆ ಮಹಿಳೆ ಆರಂಭದಿಂದಲೂ ಹಣ ಸ್ವೀಕರಿಸಲು ನಿರಾಕರಿಸಿದರು. ಕೊನೆಗೆ ಸಿದ್ದರಾಮಯ್ಯ ಅವರ  ಕಾರ್ ಹಿಂಬಾಲಿಸಿಕೊಂಡು ಬಂದು ಹಣ ಎಸೆದಿದ್ದಾರೆ.

ಇದನ್ನೂ ಓದಿ:  Karnataka Government: ಸರ್ಕಾರಿ ಆಫೀಸ್​ಗಳಲ್ಲಿ ಫೋಟೋ-ವಿಡಿಯೋ ತೆಗೆಯೋದು ಬ್ಯಾನ್!

ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಘರ್ಷಣೆಯಲ್ಲಿ ಗಾಯಗೊಂಡಿದ್ದ  ಹನಿಫ್, ದಾವಲ್ ಮಲಿಕ್, ರಾಜೆಸಾಬ್, ರಫೀಕ್ ಎಂಬವರ ಆರೋಗ್ಯವನ್ನು ಸಿದ್ದರಾಮಯ್ಯ ವಿಚಾರಿಸಿದರು. ನಂತರ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.ಸಿದ್ದರಾಮಯ್ಯ ಟ್ವಿಟ್

ಬಾದಾಮಿ ವಿಧಾನಸಭೆ ಕ್ಷೇತ್ರದ ಕೆರೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ಗಾಯಗೊಂಡು ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಇಂದು ಭೇಟಿಮಾಡಿ, ಯೋಗಕ್ಷೇಮ ವಿಚಾರಿಸಿದೆ. ಶಾಸಕರಾದ ಆನಂದ ನ್ಯಾಮಗೌಡ, ಮಾಜಿ ಸಚಿವ H.Y ಮೇಟಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ ಮತ್ತಿತರರು ಹಾಜರಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ

ಕೆರೂರು (Keruru, Bagalakote) ಪಟ್ಟಣದಲ್ಲಿ ಎರಡು ಅನ್ಯಕೋಮಗಳ ಗುಂಪಿನ ನಡುವೆ (Clash between Two Groups) ಗಲಾಟೆ ಜುಲೈ 7ರಂದು ನಡೆದಿದೆ. ಗಲಾಟೆಯಲ್ಲಿ ಇಬ್ಬರಿಗೆ ಚೂರಿ ಇರಿತವಾಗಿದ್ದು, ಒಬ್ಬರು ಗಾಯಗೊಂಡಿದ್ದರು. ಮುನ್ನೇಚ್ಚರಿಕೆ ಕ್ರಮವಾಗಿ ಕೆರೂರು ಪಟ್ಟಣದಲ್ಲಿಯ ಎಲ್ಲಾ ಶಾಲಾ ಕಾಲೇಜುಳಿಗೆ ರಜೆ (School And College Holiday) ಘೋಷಣೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿವರೆಗೂ ಕೆರೂರ ಪಟ್ಟಣದಲ್ಲಿ 144 ಕಲಂ (Section 144) ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

Keruru Clash Muslim Woman Throws 2 Lakh Rupees Given By former CM Siddaramaiah mrq
ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ


ಗಲಾಟೆ ಖಂಡಿಸಿ ಬಾಗಲಕೋಟೆ ಬಂದ್

ಇನ್ನೂ ಘರ್ಷಣೆ ಖಂಡಿಸಿ ಹಿಂದೂ ಸಂಘಟನೆಗಳು ಜುಲೈ 12ರಂದು ಬಾಗಲಕೋಟೆ ಬಂದ್ ಕರೆ ನೀಡಲಾಗಿತ್ತು. ನಗರದ ಬಸವೇಶ್ವರ ವೃತ್ತದಲ್ಲಿದ್ದ ಸೇರಿದ್ದ ಪ್ರತಿಭಟನಾಕಾರರು ಘಟನೆ ಖಂಡಿಸಿ ಆಕ್ರೋಶ ಹೊರ ಹಾಕಿದ್ದರು . ಜುಲೈ 12 ರಂದು ಭಾಗಶಃ ಬಾಗಲಕೋಟೆ ನಗರ ಬಂದ್ ಆಗಿತ್ತು. ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಇನ್ನುಳಿದಂತೆ ಕೆಲವು ಕಡೆ ಬಲವಂತವಾಗಿ ಅಂಗಡಿ ಮುಚ್ಚಿಸಿದ ದೃಶ್ಯಗಳು ಸಹ ಕಂಡು ಬಂದವು. ಮುನ್ನೆಚ್ಚರಿಕೆ ಕ್ರಮವಾಗಿ ಬಾಗಲಕೋಟೆ ನಗರಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಂದಿನಂತೆ ವಾಹನ ಸಂಚಾರ ಇತ್ತು.

ಇದನ್ನೂ ಓದಿ:  Actor Death: ಖ್ಯಾತ ನಟ ನಿಧನ, ಚೆನ್ನೈನ ಫ್ಲಾಟ್​ನಲ್ಲಿ ಶವ ಪತ್ತೆ!

ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಗುಂಪು ಘರ್ಷಣೆಯಲ್ಲಿ ಗಾಯಗೊಂಡವರನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಣ್‌ ಮತ್ತು ಆತನ ಸಹೋದರ ಹಾಗೂ ಯಮನೂರು ಎಂದು ಗುರುತಿಸಲಾಗಿದೆ.

ಕೆರೂರು ಪಟ್ಟಣದ ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಚುಡಾಯಿಸಿದ್ದ ವಿಚಾರಕ್ಕೆ ಕೆಲ ಯುವಕರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯೇ ತೀವ್ರ ಸ್ವರೂಪ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಬೆನ್ನಲ್ಲೇ ಕೆಲವರು ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.
Published by:Mahmadrafik K
First published: