Kalaripayattu: ಕಾಶ್ಮೀರದಲ್ಲಿ ರಾರಾಜಿಸಲು ಸಿದ್ದವಾದ ಕೇರಳದ ಜನಪ್ರಿಯ ಮಾರ್ಷಲ್ ಆರ್ಟ್ ಕಲರಿಪಯಟ್ಟು; ಎಲ್ಲಿ ಯಾವಾಗ ಇಲ್ಲಿದೆ ನೋಡಿ

ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಮಾರ್ಷಲ್ ಆರ್ಟ್ ಕಲರಿಪಯಟ್ಟು ಸದ್ಯ ಭಾರತದ ದಕ್ಷಿಣದ ತುದಿಯಿಂದ ಉತ್ತರದ ತುದಿಗೆ ಪ್ರಯಾಣ ಬೆಳೆಸಿದೆ. ಜೂನ್ 4ರಿಂದ ಹರಿಯಾಣದ ಪಂಚಕುಲದಲ್ಲಿ ಆರಂಭವಾಗಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಪ್ರದರ್ಶನ ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ಕೇರಳದ ಜನಪ್ರಿಯ ಸಮರ ಕಲೆಯಾದ ಕಲರಿಪಯಟ್ಟು ತರಬೇತಿ ಪಡೆದ ಪಟುಗಳು ಭಾಗವಹಿಸಿದ್ದಾರೆ.

ಕೇರಳದ ಜನಪ್ರಿಯ ಮಾರ್ಷಲ್ ಆರ್ಟ್ ಕಲರಿಪಯಟ್ಟು

ಕೇರಳದ ಜನಪ್ರಿಯ ಮಾರ್ಷಲ್ ಆರ್ಟ್ ಕಲರಿಪಯಟ್ಟು

 • Share this:
  ದಕ್ಷಿಣ ಭಾರತದಲ್ಲಿ (South India) ಅದರಲ್ಲೂ ಕೇರಳದಲ್ಲಿ (Kerala) ಸಾಕಷ್ಟು ಜನಪ್ರಿಯವಾಗಿರುವ ಮಾರ್ಷಲ್ ಆರ್ಟ್ (martial art) ಕಲರಿಪಯಟ್ಟು (Kalariyapattu) ಸದ್ಯ ಭಾರತದ ದಕ್ಷಿಣದ ತುದಿಯಿಂದ ಉತ್ತರದ ತುದಿಗೆ ಪ್ರಯಾಣ ಬೆಳೆಸಿದೆ. ಜೂನ್ 4ರಿಂದ ಹರಿಯಾಣದ ಪಂಚಕುಲದಲ್ಲಿ ಆರಂಭವಾಗಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ (Khelo India Youth Games) ಪ್ರದರ್ಶನ ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ಕೇರಳದ ಜನಪ್ರಿಯ ಸಮರ ಕಲೆಯಾದ ಕಲರಿಪಯಟ್ಟು ತರಬೇತಿ ಪಡೆದ ಪಟುಗಳು ಭಾಗವಹಿಸಿದ್ದಾರೆ. ಈಗಾಗಲೇ 13 ಜಿಲ್ಲೆಗಳ ಪೈಕಿ 1,000 ತರುಣ ಮತ್ತು ತರುಣಿಯರನ್ನು ಆಯ್ಕೆ ಮಾಡಿ ಕಲರಿಪಯಟ್ಟು ತರಬೇತಿ (Training) ನೀಡಲಾಗಿದ್ದು ಅವರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದವರು ಇಲ್ಲಿ ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ಗೆ ಆಗಮಿಸಿದ್ದಾರೆ.

  ಕೇರಳದವರ ರಕ್ತದಲ್ಲಿಯೇ ಅಡಗಿರುವ ಈ ಕಲೆ
  ಕೇರಳದವರ ರಕ್ತದಲ್ಲಿಯೇ ಈ ಕಲೆ ಅಡಗಿರುತ್ತದೆ. ಅಲ್ಲಿನ ಸ್ಥಳೀಯರ ಹೊರತಾಗಿಯೂ ದೇಶ-ವಿದೇಶ ಸೇರಿ ಹಲವಾರು ಮಂದಿ ಈ ಸಮರ ಕಲೆಯನ್ನು ಅಭ್ಯಸಿಸಲು ಒಲವು ತೋರುತ್ತಾರೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕ, ಯುವತಿಯರಿಗೆ ತರಬೇತಿ ನೀಡಲಾಗಿದ್ದು, ಖೇಲೋ ಇಂಡಿಯಾ ಯೂತ್ ಕ್ರೀಡೆಗಳಲ್ಲಿ ಕನಿಷ್ಠ ಒಂದೆರಡು ಪದಕಗಳನ್ನು ಗೆಲ್ಲುವ ನೀರಿಕ್ಷೆ ಇದೆ. ಸರಿಯಾದ ಗುರುಕುಲಗಳ ಅನುಪಸ್ಥಿತಿಯಲ್ಲಿಯೂ, ಉತ್ಸಾಹಿ ಮಕ್ಕಳು ಎದೆಗುಂದದೆ ಉದ್ಯಾನವನಗಳು, ಶಾಲೆಗಳು ಮತ್ತು ತೆರೆದ ಸ್ಥಳಗಳಲ್ಲಿ ಈ ಮಾರ್ಷಲ್ ಆರ್ಟ್ಸ್ ಅನ್ನು ಅಭ್ಯಾಸ ಮಾಡಿದ್ದಾರೆ.

  "ನಮ್ಮ ಕ್ರೀಡೆಯತ್ತ ಮಕ್ಕಳನ್ನು ಆಕರ್ಷಿಸುವುದು ತುಂಬಾ ಕಷ್ಟವಲ್ಲ" ಎಂದು ಇಲ್ಲಿನ ಜಮ್ಮು ಮತ್ತು ಕಾಶ್ಮೀರದ ಕಲರಿ ತಂಡವನ್ನು ನೋಡಿಕೊಳ್ಳುತ್ತಿರುವ ತಸ್ರೀನ್ ಶರ್ಮಾ ಹೇಳುತ್ತಾರೆ. “ನಾವು ಕಲೆಯ ಬಗೆಗಿನ ವಿಷಯವನ್ನು ಸರಳವಾಗಿ ಹೇಳುತ್ತೇವೆ, ಅವರು ಚಲನಚಿತ್ರಗಳಲ್ಲಿ ನೋಡುವ ಎಲ್ಲಾ ಮಾರ್ಷಲ್ ಆರ್ಟ್‌ಗಳಿಗೆ ಕಲರಿ ಜನ್ಮ ನೀಡಿದೆ. ಕರಾಟೆಯಿಂದ ಟೇಕ್ವಾಂಡೋ, ಕುಂಗ್ ಫೂ ವರೆಗೆ ಪ್ರೇರೇಪಿಸಲು ಇದು ಸಾಕು,”ಎಂದು ತಸ್ರೀನ್ ಶರ್ಮಾ ಹೇಳುತ್ತಾರೆ. ಅಲ್ಲದೆ, ಕೇಂದ್ರ ಸರಕಾರ ನೀಡಿರುವ ಮನ್ನಣೆಯೂ ಈ ಕ್ರೀಡೆಯ ಜನಪ್ರಿಯತೆ ಹೆಚ್ಚಲು ಇನ್ನೊಂದು ಕಾರಣ ಎನ್ನಬಹುದು.

  ಕಲರಿಪಯಟ್ಟು ಇತಿಹಾಸ
  ಶತಮಾನಗಳಿಂದ ಕೇರಳದಲ್ಲಿ ನೆಲೆಸಿದ ಒಂದು ಪ್ರತ್ಯೇಕ ಶಾರೀರಿಕ ಸಾಧನೆಯ ಕೊಡುಗೆಯೇ ಕಲರಿಪಯಟ್ಟು ಎಂಬ ಯುದ್ದ ಕಲೆ. ಈ ದೇಹಾಭ್ಯಾಸ ವಿಧಾನವು ಆರ್ಯ ದ್ರಾವಿಡ ಜನಾಂಗದಷ್ಟೆ ಪುರಾತನವಾಗಿದೆ. ಅತ್ಯಂತ ಹಳೆಯದಾದ ಈ ಕದನ ಕಲೆಯು ಕೇರಳದ ಸಾಮಾಜಿಕ ಮತ್ತು ಸಾಂಸ್ಕೃತಿಕತೆಯಿಂದ ಬೇರ್ಪಡದೆ ಇತಿಹಾಸದಲ್ಲಿ ಸುದೀರ್ಘ ಕಾಲದಿಂದ ಉಳಿದುಕೊಂಡು ಬಂದಿದೆ. ಗಾಯಗೊಂಡವರನ್ನು ಗುಣಪಡಿಸಲು ‘ಕಲರಿ ಮರ್ಮ’ ಎಂಬ ಸಂಪೂರ್ಣ ಔಷಧದ ವ್ಯವಸ್ಥೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ಸಮರ ಕಲೆಯಾಗಿದೆ.

  ಇದನ್ನೂ ಓದಿ:  Tour: ಭಾರತೀಯ ಪಾಸ್‌ಪೋರ್ಟ್ ಇದ್ರೆ ಸಾಕು, ವೀಸಾ ಇಲ್ಲದೆ ಈ ದೇಶಗಳಿಗೆ ಸುತ್ತಾಡಬಹುದು!

  ಕಲೆಯ ವಿವಿಧ ರೂಪಾಂತರಗಳು 12 ರಿಂದ 17ನೇ ಶತಮಾನದವರೆಗೆ ಕೇರಳದಾದ್ಯಂತ ವಿಕಸನಗೊಂಡಿವೆ. ಇದು ಕೇರಳದ ವಿಕಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಯಾವುದೇ ಧಾರ್ಮಿಕ, ಸಾಮಾಜಿಕ ಅಥವಾ ರಾಜಕೀಯ ಕಾರ್ಯಕ್ರಮವು ಕಲರಿ ಪ್ರದರ್ಶನವಿಲ್ಲದೆ ಇಲ್ಲಿ ಪೂರ್ಣಗೊಳ್ಳುವುದೇ ಇಲ್ಲ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಎಲ್ಲ ಚಿಕ್ಕ ಹುಡುಗರನ್ನು ಸಾಂಪ್ರದಾಯಿಕ ತರಬೇತಿಗೆ ಕಳುಹಿಸಲಾಗುತ್ತದೆ. ಕೇರಳದಲ್ಲಿ ರಾಜರು ಸೈನ್ಯವನ್ನು ಇಟ್ಟುಕೊಂಡಿರಲಿಲ್ಲ ಎಂದು ಹೇಳಲಾಗುತ್ತದೆ. ಅಗತ್ಯವಿದ್ದಾಗ ಕಲರಿ ಕೇಂದ್ರಗಳ ಯೋಧರನ್ನು ಯುದ್ಧಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಕಾಲ ಕ್ರಮೇಣ ವಸಾಹತುಶಾಹಿ ಆಳ್ವಿಕೆಯಲ್ಲಿ ಕಲರಿಯನ್ನು ನಿಷೇಧಿಸಲಾಯಿತು.

  ಕಲರಿಪಯಟ್ಟು ಒಂದು ಕ್ರೀಡಾಕೂಟ ಎಂದು ಘೋಷಣೆ
  ಇದ್ಯಾವದಕ್ಕೂ ಬಗ್ಗದ ಕಲೆಯ ನುರಿತ ಗುರುಗಳು ತಮ್ಮ ಕಲೆಯನ್ನು ಮುಂದುವರಿಸಲು ಬ್ರಿಟಿಷರ ಕಣ್ಣುಗಳಿಂದ ದೂರವಿದ್ದು, ತಮ್ಮ ಯುವ ಶಿಷ್ಯರಿಗೆ ಭೂಗತ ಹೊಂಡಗಳಲ್ಲಿ ತರಬೇತಿ ನೀಡುತ್ತಿದ್ದರು. ಈ ಕಲೆಯ ನಿಗ್ರಹವು ಅದನ್ನು ಹೆಚ್ಚು ಶಕ್ತಿಯುತಗೊಳಿಸಿತು. ಸ್ವಾತಂತ್ರ್ಯದ ನಂತರ, ಕಲರಿಯು ಕೇರಳದ ಸಾಂಸ್ಕೃತಿಕ ಜೀವನದ ಕೇಂದ್ರ ಹಂತಕ್ಕೆ ಮರಳಿತು. 1958ರಲ್ಲಿ, ಕೇರಳ ಸರ್ಕಾರ ಇದನ್ನು ಕ್ರೀಡಾಕೂಟವೆಂದು ಗುರುತಿಸಿತು.

  ಇದನ್ನೂ ಓದಿ:  Kyra: ಈಕೆಯ ಸೌಂದರ್ಯಕ್ಕೆ ಸೋತು, ಇನ್​ಸ್ಟಾದಲ್ಲಿ ಫಾಲೋ ಮಾಡೋ ಹುಡುಗರೇ ಕೇಳಿ! ರಿಯಲ್ ಕಥೆ ಬೇರೇನೆ ಇದೆ

  2015ರಲ್ಲಿ, ಭಾರತೀಯ ಕಲರಿಪಯಟ್ಟು ಫೆಡರೇಶನ್ ಅನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಎಂದು ಗುರುತಿಸಿದೆ. ಅಂದಿನಿಂದ, ಫೆಡರೇಶನ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ನಡೆಸುತ್ತಿದೆ.
  Published by:Ashwini Prabhu
  First published: