ಬೆಂಗಳೂರು: ಬಾಂಬ್ ಇರಿಸಿ ವಿಮಾನ ಸ್ಫೋಟಿಸುತ್ತೇನೆ ಎಂದು ಬೆದರಿಕೆ (Threat) ಹಾಕಿದ್ದ ಕೇರಳ ಮೂಲದ ಮಹಿಳೆಯನ್ನು (Woman) ಬಂಧಿಸಿ ಜೈಲಿಗಟ್ಟಲಾಗಿದೆ. ಫೆಬ್ರವರಿ 4ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempe Gowda International Airport, Bengaluru) ಈ ಘಟನೆ ನಡೆದಿದೆ. ಏರ್ಪೋರ್ಟ್ ಗೆ ಬಂದ ಮಹಿಳೆ ವಿಮಾನ ಹತ್ತಲು ವಿಳಂಬವಾಗುತ್ತಿದೆ ಎಂದು ಭದ್ರತಾ ಸಿಬ್ಬಂದಿಯೊಂದಿಗೆ (Security Staff) ಕಿರಿಕ್ ಮಾಡಿ ಹಲ್ಲೆ ಸಹ ನಡೆಸಿದ್ದಾಳೆ. ನಂತರ ಅಲ್ಲಿದ್ದ ಪ್ರಯಾಣಿಕರಿಗೆ (Passengers) ವಿಮಾನ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಕೇರಳ ಮೂಲದ ಮಹಿಳೆ ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣದಕ್ಕೆ ಬಂದಿದ್ದಳು. ಕೋಲ್ಕತ್ತಾಗೆ ತೆರಳುವ ನಿಟ್ಟಿನಲ್ಲಿ ಮಹಿಳೆ ಇಂಡಿಗೋ ವಿಮಾನ 6E-445ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಅಂತೆಯೇ ಬೋರ್ಡಿಂಗ್ ಗೇಟ್ ನಂಬರ್ 6ರಲ್ಲಿ ಕುಳಿತಿದ್ದಳು.
ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ
ಆದರೆ ವಿಮಾನ ಹತ್ತಲು ನನಗೆ ವಿಳಂಬವಾಗುತ್ತಿದೆ. ನನಗೆ ಹೋಗಲು ಬಿಡಿ ಎಂದು ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಸಹ ಮಾಡಿದ್ದಾಳೆ. ಆದರೂ ಸಿಬ್ಬಂದಿಗೆ ಮಹಿಳೆಯನ್ನು ಒಳಗೆ ಬಿಟ್ಟಿಲ್ಲ.
ಜೈಲುಪಾಲಾದ ಮಹಿಳೆ
ಕೊನೆಗೆ ಬೋರ್ಡಿಂಗ್ ಗೇಟ್-6ರಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ವಿಮಾನದಲ್ಲಿ ಬಾಂಬ್ ಇರಿಸಿ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದಾಳೆ. ಕೂಡಲೇ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ.
ಚಿನ್ನ ಸಾಗಾಟ, ಪ್ರಯಾಣಿಕ ವಶಕ್ಕೆ
ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಹ್ರೇನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕ ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಸೆಮಿ ಲೇಯರ್ ರೀತಿ ಚಿನ್ನದ ಲೇಪನ ಮಾಡಿದ್ದ ಬಟ್ಟೆ ಧರಿಸಿದ್ದನು.
ಪ್ರಯಾಣಿಕನ ತಪಾಸಣೆ ವೇಳೆ ಪ್ಯಾಂಟ್ ಹಾಗೂ ಒಳ ಉಡುಪಿನಲ್ಲಿ ಚಿನ್ನ ಲೇಪನ ಪತ್ತೆಯಾಗಿತ್ತು. ತಪಾಸಣೆ ವೇಳೆ 13.46 ಲಕ್ಷ ರೂ ಮೌಲ್ಯದ 238 ಗ್ರಾಂ ಚಿನ್ನ ಪತ್ತೆಯಾಗಿದೆ. ಸದ್ಯ ಪ್ರಯಾಣಿಕನನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್!
ಯುವಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ
ಸೆಲ್ಫಿ ವಿಡಿಯೋ (Selfie Video) ಮಾಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ದಕ್ಷಿಣದ ಬನ್ನೇರುಘಟ್ಟ ರಸ್ತೆಯಲ್ಲಿ (Bannerghatta) ನಡೆದಿದೆ.
ಶಿವರಾಜ್ (33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಓರ್ವ ಪೊಲೀಸರ ವಶಕ್ಕೆ
ಘಟನೆ ನಡೆದ ಮೂರು ದಿನಗಳ ಬಳಿಕ ಮೃತ ವ್ಯಕ್ತಿಯ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಮೃತ ಶಿವರಾಜ್ ತನ್ನ ಸ್ನೇಹಿತರಿಗೆ ವ್ಯಕ್ತಿಯೊಬ್ಬರಿಂದ ಬಡ್ಡಿಗೆ ಸಾಲ ಕೊಡಿಸಿ, ಜಾಮೀನಿಗೆ ಸಹಿ ಹಾಕಿದ್ದರಂತೆ. ಆದರೆ ಸಾಲ ಕೊಟ್ಟ ವ್ಯಕ್ತಿಗಳು ಹಣ ವಾಪಸ್ ಕೇಳಿ ಧಮ್ಕಿ ಹಾಕಿದ್ದು, ಇದರಿಂದ ಮನನೊಂದು ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಸಾಲದ ಹಣ ವಾಪಸ್ ನೀಡದಿದ್ದಕ್ಕೆ ಶಿವರಾಜ್ಗೆ ಧಮ್ಕಿ ಹಾಕಿ ಕಿರುಕುಳ ನೀಡಿದ್ದರಂತೆ. ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ