Drugs Case: ಕೇರಳ ಮಾಜಿ ಗೃಹ ಸಚಿವರ ಮಗ ಬಿನೀಶ್ ಕೊಡಿಯೇರ್ ಬಂಧನ
ಡ್ರಗ್ಸ್ ಫೆಡ್ಲರ್ ಮೊಹಮ್ಮದ್ ಅನೂಪ್ಗೆ ಐವತ್ತು ಲಕ್ಷ ಹಣದ ವ್ಯವಹಾರ ನಡೆಸಿದ ಪ್ರಕರಣ ಕುರಿತು ಆತನನ್ನು ಬಂಧಿಸಲಾಗಿದೆ
news18-kannada Updated:October 29, 2020, 7:49 PM IST

ಬಿನೀಶ್ ಕೊಡಿಯೇರಿ
- News18 Kannada
- Last Updated: October 29, 2020, 7:49 PM IST
ಬೆಂಗಳೂರು (ಅ.29): ಕೇರಳದ ಮಾಜಿ ಗೃಹ ಸಚಿವ, ಸಿಪಿಐ (ಎಂ) ಕಾರ್ಯದರ್ಶಿ ಕೊಡಿಯೇರಿ ಅವರ ಮಗ ಬಿನೀಶ್ ಕೊಡಿಯೇರ್ ನನ್ನುಇಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಫೆಡ್ಲರ್ ಮೊಹಮ್ಮದ್ ಅನೂಪ್ಗೆ ಐವತ್ತು ಲಕ್ಷ ಹಣದ ವ್ಯವಹಾರ ನಡೆಸಿದ ಪ್ರಕರಣ ಕುರಿತು ನಾಲ್ಕುಗಂಟೆಗಳ ವಿಚಾರಣೆ ಬಳಿಕ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ಅ.6ರಂದು ವಿಚಾರಣೆಗೆ ಒಳಗಾಗಿದ್ದ ಬಿನೀಶ್ ಸ್ನೇಹಿತನ ಮೂಲಕ ಡ್ರಗ್ ಫೆಡ್ಲರ್ ಅನೂಫ್ಗೆ ಹಣ ನೀಡಿದ್ದನ್ನು ಇಡಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ. ಈ ಕುರಿತು ದಾಖಲೆಗಳ ಸಮೇತ ಇಂದು ಬೆಂಗಳೂರಿನ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು.
ಅದರಂತೆ ಬಿನೀಶ್ ಶಾಂತಿನಗರದ ಇಡಿ ಕಚೇರಿಗೆ ಇಂದು ಬೆಳಗ್ಗೆ ಹಾಜರಾಗಿದ್ದರು. ಈ ವೇಳೆ ಹಲವು ಗಂಟೆಗಳ ವಿಚಾರಣೆ ಬಳಿಕ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಸೆಷನ್ಸ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ನಾಲ್ಕು ದಿನ ಇಡಿ ವಶಕ್ಕೆ ನೀಡಲಾಗಿದೆ.
ಈ ಹಿಂದೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸ್ವಪ್ನಾ ಸುರೇಶ್ ಎಂಬಾಕೆಯನ್ನು ಬಂಧಿಸಲಾಗಿತ್ತು. ಈ ವೇಳೆ ಕೊಚ್ಚಿ ಇಡಿಯಿಂದಲೂ ಬಿನೇಶ್ ಗೆ ನೊಟೀಸ್ ನೀಡಿ ವಿಚಾರಣೆ ಮಾಡಲಾಗಿತ್ತು.ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗಳಿಗೆ ಮೊಹಮ್ಮದ್ ಅನೂಪ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬ ಆರೋಪದ ಮುಂದೆ ಈಗಾಗಲೇ ಬಂಧಿಸಿದ್ದಾರೆ. ಈತನ ನೀಡಿದ ಮಾಹಿತಿ ಆಧಾರದ ಮೇಲೆ ಬಿನೀಶ್ನನ್ನು ಎರಡು ಬಾರಿ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಅನೂಪ್ ಬಂಧನ ಆಗುವ ಮೊದಲು ಆಗಸ್ಟ್ ತಿಂಗಳಲ್ಲಿಯೂ 8 ಬಾರಿ ಕರೆ ಮಾಡಿದ್ದ ಬಿನೀಶ್, ಆಗಸ್ಟ್ 19 ರಂದು ಒಂದೇ ದಿನ 5 ಬಾರಿ ಪರಸ್ಪರ ದೂರವಾಣಿ ಸಂಪರ್ಕ ಮಾಡಿ ಮಾತನಾಡಿದ್ದಾರೆ. ಅಕ್ರಮ ಹಣದ ವಹಿವಾಟು ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ಅನೂಪ್ ವಿಚಾರಣೆ ನಡೆಸಿದಾಗ ಅನೂಪ್ಗೆ 50 ಲಕ್ಷ ಹಣವನ್ನು ಸಾಲವಾಗಿ ಬಿನೀಶ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಅದೇ ಹಣದಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಹಾಗೂ ಪಬ್ ತೆರೆಸಿದ್ದ ಎನ್ನಲಾಗಿದೆ.

#JUSTIN: The Enforcement Directorate today arrested Binish Kodiyeri, son of Kerala CPI(M) general secretary Kodiyeri Balakrishnan, in connection with alleged financial transactions he had with a suspect arrested by the NCB for peddling drugs in Bengaluru. @IndianExpress pic.twitter.com/foFumzV6H4
— Darshan Devaiah B P (@DarshanDevaiahB) October 29, 2020