Bagalkot: ಪಂಚಾಯ್ತಿ ಮುಂದೆಯೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ; ಕೊನೆಗೆ ಚಿತೆ ಮೇಲೆ ಕೋಳಿ ಇಟ್ಟು ದಹನ

ಹಿರಿಯರ ಸಲಹೆಯಂತೆ ಕಟ್ಟಿಗೆಯಿಂದ ಶವ ಹೊರತೆಗೆದು. ಅದೇ ಚಿತೆಯ ಮೇಲೆ ಜೀವಂತ ಕೋಳಿಯನ್ನು ದಹಿಸಿ, ಬಳಿಕ ಶವವನ್ನು ಗ್ರಾಮದ ಹೊರವಲಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಶವ ತೆಗೆದುಕೊಂಡ ಹೋದರು. 

ಪಂಚಾಯ್ತಿ ಮುಂದೆ ಚಿತೆ

ಪಂಚಾಯ್ತಿ ಮುಂದೆ ಚಿತೆ

  • Share this:
ಬಾಗಲಕೋಟೆ: ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ (Burial Ground) ಇಲ್ಲದ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆಯೇ ಶವ ಸಂಸ್ಕಾರಕ್ಕೆ ಮುಂದಾದ ಘಟನೆ  ಬಾಗಲಕೋಟೆ ಜಿಲ್ಲೆಯ ಬಾದಾಮಿ (Badami, Bagalkot) ತಾಲೂಕಿನ ಬೀಳಗಿ (Bilagi Assembly Constituency) ವಿಧಾನಸಭಾ ಕ್ಷೇತ್ರದ ಕೆರಕಲಮಟ್ಟಿ (Kerakalamatti) ಗ್ರಾಮದಲ್ಲಿ ನಡೆದಿದೆ. ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಶಾಸಕ ಮುರುಗೇಶ್ ನಿರಾಣಿ (MLA Murugesh Nirani) ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶನಿವಾರ ಗ್ರಾಮದಲ್ಲಿ ಸಾವನ್ನಪ್ಪಿದ್ದ ಕಾಳಪ್ಪ ಕಂಬಾರ ಎಂಬ ವ್ಯಕ್ತಿಯ ಶವ ಸಂಸ್ಕಾರವನ್ನು ಗ್ರಾಮ ಪಂಚಾಯಿತಿ ಕಟ್ಟಡದ (Gram Panchayat Building) ಮುಂಭಾಗ ಗ್ರಾಮದ ಮಧ್ಯದಲ್ಲಿಯೇ ನೆರವೇರಿಸಲು ಮುಂದಾಗಿದ್ದರು. 

ಟ್ರಾಕ್ಟರ್​​ನಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆ ತಂದು ಹಾಕಿ, ಕಾಳಪ್ಪನ ಶವವನ್ನ ಊರಲ್ಲಿ ಮೆರವಣಿಗೆ ಮೂಲಕ ಹೊತ್ತು ತಂದಿದ್ದಿದ್ದರು. ಪಂಚಾಯಿತಿ ಚಾವಡಿ ಎದುರು ಕಟ್ಟಿಗೆ ಟೈರ್ ಇಟ್ಟು ಚಿತೆ ಸಿದ್ಧಪಡಿಸಿ ಪಂಚಾಯಿತಿ ಚಾವಡಿ ಎದುರು ಗ್ರಾಮಸ್ಥರು ಜಮಾಯಿಸಿದ್ದರು.

ಬೆಳಗ್ಗೆಯಿಂದ ಗ್ರಾಮ ಪಂಚಾಯಿತಿ ಪಿಡಿಓ, ತಹಶೀಲ್ದಾರ್ ರವರಿಗೆ ಫೊನ್ ಮಾಡಿದ್ರು ಯಾರು ಕೂಡ ಸ್ಥಳಕ್ಕೆ ಬಂದಿರಲಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು. ಶವ ಇಟ್ಟು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.

Kerakalamatti Villagers protest for burial ground mttv mrq
ಗ್ರಾಮಸ್ಥರ ಪ್ರತಿಭಟನೆ


ಸ್ವಂತ ಜಮೀನು ನೀಡಿದ್ರೂ ಪ್ರಕ್ರಿಯೆ ನಡೆಸುತ್ತಿಲ್ಲ

ಇದೇ ವೇಳೆ ಮಾತನಾಡಿದ ಗ್ರಾಮದ ಹಿರಿಯರಾದ ಗಿರೀಶ್ ನಾಡಗೌಡರ, ಕೆರಕಲಮಟ್ಟಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕ ಸ್ಮಶಾನದ ಸಮಸ್ಯೆ ಇದೆ. ಸಾಕಷ್ಟು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರು ಸ್ಪಂದನೆ ಸಿಕ್ಕಿಲ್ಲ. ಸಾರ್ವಜನಿಕ ಸ್ಮಶಾನಕ್ಕಾಗಿ ನಮ್ಮದೇ 4 ಎಕರೆ ಸ್ವಂತ ಜಮೀನು ದಾನ ನೀಡಲು ಮುಂದಾದರೂ ಅಧಿಕಾರಿಗಳು ಪ್ರಕ್ರಿಯೆ ನಡೆಸಿಲ್ಲ. ಹೀಗಾಗಿ ನಾವು ಇಂದು ಗ್ರಾಮ ಪಂಚಾಯಿತಿ ಕಟ್ಟಡ ಮುಂದೆಯೇ ಶವಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಕಿಡಿಕಾರಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ವಿರುದ್ಧ ಗ್ರಾಮಸ್ಥರ ಆಕ್ರೋಶ: ಮುಗಿಬಿದ್ದ ಮಹಿಳೆಯರು 

ಇನ್ನು ಕೆಲವು ಗಂಟೆಗಳ ಬಳಿಕ ಸ್ಥಳಕ್ಕೆ ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ ಭೇಟಿ ನೀಡಿದರು. ಸಾರ್ವಜನಿಕರ ಮನವೊಲಿಕೆಗೆ ಪ್ರಯತ್ನ ಮಾಡಿದರು. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶವಸಂಸ್ಕಾರಕ್ಕೆ ನೀವೇ ಜಾಗ ತೋರಿಸಬೇಕು ಅದೇ ಜಾಗದಲ್ಲಿ ಇನ್ನು ಮುಂದೆ ಶವಸಂಸ್ಕಾರ ಮಾಡುತ್ತೇವೆ ಎಂದು ಪಟ್ಟು ಹಿಡಿದ್ದಿದರು. ಈ ವೇಳೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ

ಬಳಿಕ ಗ್ರಾಮದಲ್ಲಿ ಇದ್ದ ಸರ್ಕಾರದ 28 ಗುಂಟೆ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಜಾಗ ಗುರುತಿಸಿದರು. ಈ ವೇಳೆ ಸರಕಾರಿ ಜಾಗದಲ್ಲೂ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಯಿತು. ಈ ಜಾಗದ ವಿವಾದ ನ್ಯಾಯಾಲಯದಲ್ಲಿದೆ. ಇಲ್ಲಿ ಅಂತ್ಯಕ್ರಿಯೆ ಮಾಡಬೇಡಿ ಎಂದು ಸಿದ್ದಣ್ಣ ಗೌಡರ ಎಂಬ ವ್ಯಕ್ತಿ ವಿರೋಧ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ತಹಶೀಲ್ದಾರ್ ಸೂಚಿಸಿದ ಸ್ಥಳದಲ್ಲೇ ಶವಸಂಸ್ಕಾರ ನೆರವೇರಿಸಿದರು.

Kerakalamatti Villagers protest for burial ground mttv mrq
ಚಿತೆಗೆ ಸಿದ್ಧತೆ


ಪಂಚಾಯಿತಿ ಚಾವಡಿ ಎದುರು ಶವದ ಬದಲಿಗೆ ಜೀವಂತ ಕೋಳಿ ದಹನ

ಸ್ಮಶಾನ ಸಮಸ್ಯೆಯಿಂದ ಪಂಚಾಯಿತಿ ಚಾವಡಿ ಎದುರು ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ, ದಹನ ಕ್ರಿಯೆ ನಡೆಸಲು ಅದಾಗಲೇ ಕಟ್ಟಿಗೆ ಮೇಲೆ ಇಟ್ಟು ಚಿತೆ ಸಿದ್ದಪಡಿಸಿದ್ದ ಹಿನ್ನೆಲೆ ಕಟ್ಟಿಗೆ ಮೇಲೆ ಮಲಗಿಸಿದ ಶವ ತೆಗೆಯಲು ಸಂಪ್ರದಾಯ ಅಡ್ಡಿ ಉಂಟಾಗಿತ್ತು.

ಇದನ್ನೂ ಓದಿ:  Ganesh Idol: ವಿಘ್ನೇಶ್ವರನ ಮೂರ್ತಿಯನ್ನೇ ಭಗ್ನ ಮಾಡಿದ ಕಿಡಿಗೇಡಿಗಳು! 9 ಕಡೆ ಗಣಪನ ವಿಗ್ರಹಕ್ಕೆ ಧಕ್ಕೆ

ಈ ವೇಳೆ ಹಿರಿಯರ ಸಲಹೆಯಂತೆ ಕಟ್ಟಿಗೆಯಿಂದ ಶವ ಹೊರತೆಗೆದು. ಅದೇ ಚಿತೆಯ ಮೇಲೆ ಜೀವಂತ ಕೋಳಿಯನ್ನು ದಹಿಸಿ, ಬಳಿಕ ಶವವನ್ನು ಗ್ರಾಮದ ಹೊರವಲಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಶವ ತೆಗೆದುಕೊಂಡ ಹೋದರು.

ವರದಿ: ಮಂಜುನಾಥ್ ತಳವಾರ್
Published by:Mahmadrafik K
First published: