ಕನ್ನಡದ ‘ಕುದಿ ಎಸರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಇಲ್ಲಿದೆ 23 ಪ್ರಶಸ್ತಿ ವಿಜೇತರ ಪಟ್ಟಿ

ತಮಿಳಿನ ಸೂಲ್ ಹಾಗೂ ತೆಲುಗಿನ ಸಪ್ತಭೂಮಿ ಕಾದಂಬರಿಗಳು, ಸಂಸ್ಕೃತ ಕಾವ್ಯ; ಸಂತಾಲಿ, ಸಿಂಧಿ, ಮೈಥಿಲಿ ಮೊದಲಾದ ಭಾಷೆಗಳ ಕೃತಿಗಳಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ.

ಡಾ. ವಿಜಯಾ

ಡಾ. ವಿಜಯಾ

  • News18
  • Last Updated :
  • Share this:
ನವದೆಹಲಿ(ಡಿ. 18): ಈ ಸಾಲಿನ ಕೇಂದ್ರ ಸಾಹಿತ್ಯ ಪ್ರಶಸ್ತಿಗಳು ಪ್ರಕಟಗೊಂಡಿವೆ. ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ವಿಜಯಾ ಅವರ ಆತ್ಮಕಥನ “ಕುದಿ ಎಸರು” ಕೃತಿಗೆ ಪ್ರಶಸ್ತಿ ಲಭಿಸಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಇಂಗ್ಲೀಷ್ ಕೃತಿ “ಆ್ಯನ್ ಎರಾ ಆಫ್ ಡಾರ್ಕ್​ನೆಸ್” (An Era of Darkness) ಕೂಡ ಪ್ರಶಸ್ತಿಗೆ ಬಾಜನವಾಗಿದೆ. ಇಂಗ್ಲೀಷ್ ಸೇರಿದಂತೆ 23 ಭಾಷೆಗಳ ಕೃತಿಗಳಿಗೆ ಪ್ರಶಸ್ತಿ ಸಿಕ್ಕಿದೆ. ನೇಪಾಳಿ ಭಾಷೆಯ ಕೃತಿಗೆ ಇನ್ನೊಂದು ದಿನ ಪ್ರಶಸ್ತಿ ಪ್ರಟಿಸುವ ಸಾಧ್ಯತೆ ಇದೆ.

ಕುದಿ ಎಸರು ಕೃತಿ ಬರೆದ 77 ವರ್ಷದ ಡಾ. ವಿಜಯಾ ಅವರು ದಾವಣಗೆರೆ ಸಂಜಾತರು. ಪತ್ರಕರ್ತೆ, ರಂಗ ಸಾಹಿತ್ಯ ಹೀಗೆ ಹಲವು ರೀತಿಯಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ಧಾರೆ. ಅನೇಕ ಕನ್ನಡ ಮಾಸ ಮತ್ತು ವಾರ ಪತ್ರಿಕೆಗಳಲ್ಲಿ ಸಂಪಾದಕ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾಟಕ, ವಿಮರ್ಶೆ, ಪ್ರಬಂಧ ಹೀಗೆ ಅವರ ಸಾಹಿತ್ಯ ವಿಸ್ತಾರ ಹೊಂದಿದೆ.

ಇನ್ನು ಶಶಿ ತರೂರು ಅವರು ತಮ್ಮ ಕೃತಿಯಲ್ಲಿ ಬ್ರಿಟಿಷರ ವಸಾಹತಿನಿಂದಾಗಿ ಭಾರತದ ಮೇಲೆ ಉಂಟಾದ ಪರಿಣಾಮಗಳನ್ನು ಚಿತ್ರಿಸಿದ್ಧಾರೆ.

ಇದನ್ನೂ ಓದಿ: ಭಾರತದಲ್ಲಿ ಗಲ್ಲು ಶಿಕ್ಷೆಯ ಇತಿಹಾಸ ಮತ್ತು ಜನಾಭಿಪ್ರಾಯವೇನು? ನೇಣಿಗೆ ಕೊರಳುಕೊಟ್ಟವರ ಸಂಖ್ಯೆ ಎಷ್ಟು? ಇಲ್ಲಿದೆ ಆಸಕ್ತಿಕರ ಮಾಹಿತಿ

2019ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ:

ಭಾಷೆ, ಕೃತಿ ಮತ್ತು ಲೇಖಕ

ಅಸ್ಸಾಮೀ: ಚಾಣಕ್ಯ(ಕಾದಂಬರಿ) – ಜಾಯ್​ಶ್ರೀ ಗೋಸ್ವಾಮಿ ಮಹಂತಾ

ಬಂಗಾಳಿ: ಘುಮೇರ್ ದರ್ಜಾ ಥೆಲೆ (ಪ್ರಬಂಧ) – ಚಿನ್ಮೋಯ್ ಗುಹಾ

ಬೋಡೋ: ಅಖಾಯ್ ಅಥುಮ್ನಿಫ್ರಾಯಿ (ಕವನ): ಫುಕನ್ ಚ ಬಸುಮತಾರಿ

ಡೋಗ್ರಿ: ಬಂದ್ರಾಲ್ಟ ದರ್ಪನ್ (ಪ್ರಬಂಧ): ಓಂ ಶರ್ಮಾ ಜಾಂದ್ರಿಯಾರಿ

ಆಂಗ್ಲ: ಆ್ಯನ್ ಎರಾ ಆಫ್ ಡಾರ್ಕ್​ನೆಸ್ – ಶಶಿ ತರೂರು

ಗುಜರಾತಿ: ಮೋಜ್ಮಾ ರೇವು ರೇ (ಪ್ರಬಂಧ) – ರತಿಲಾಲ್ ಬೋರಿಸಾಗರ್

ಹಿಂದಿ: ಛೀಲಟೆ ಹುವೇ ಅಪ್ನೇ ಕೋ (ಕವನ) – ನಂದ ಕಿಶೋರ್ ಆಚಾರ್ಯ

ಕನ್ನಡ: ಕುದಿ ಎಸರು (ಆತ್ಮಕಥೆ) – ಡಾ. ವಿಜಯಾ

ಕಾಶ್ಮೀರಿ: ಅಖ್ ಯಾದ್ ಅಖ್ ಖಯಾಮತ್ (ಕಿರುಕತೆ) – ಅಬ್ದುಲ್ ಅಹಾದ್ ಹಾಜಿನಿ

ಕೊಂಕಣಿ: ದಿ ವರ್ಡ್ಸ್ (ಕನವ) – ನೀಲಬಾ ಎ. ಖಂಡೇಕರ್

ಮೈಥಿಲಿ: ಜಿಂಗಿಕ್ ಓರಿಯಾವೋನ್ ಕರಾಯಿತ್ (ಕವನ) – ಕುಮಾರ್ ಮನೀಶ್ ಅರವಿಂದ್

ಮಲಯಾಳಂ: ಅಚನ್ ಪಿರನ್ನ ವೀಡು (ಕವನ) – ಇವ. ಮಧುಸೂದನನ್ ನಾಯರ್

ಮಣಿಪುರಿ: ಏ ಅಮದಿ ಅದುಂಗೇಗಿ ಈಥಾಟ್ (ಕಾದಂಬರಿ) – ಎಲ್. ಬೀರ್ಮಂಗೋಲ್ ಸಿಂಗ್

ಮರಾಠಿ: ಕದಾಚಿತ್ ಅಜೂನಹಿ (ಕವನ) – ಅನುರಾಧಾ ಪಾಟೀಲ್

ಒಡಿಯಾ: ಭಾಸ್ವತಿ (ಕಿರುಕತೆ) – ತರುಣ್ ಕಾಂತಿ ಮಿಶ್ರಾ

ಪಂಜಾಬಿ: ಆಂಥೀನ್ (ಕಿರುಕತೆ) – ಕಿರ್ಪಾಲ್ ಕಜಕ್

ರಾಜಸ್ಥಾನೀ: ಬರೀಕ್ ಬಾತ್ (ಕಿರುಕತೆ) – ರಾಮಸ್ವರೂಪ್ ಕಿಸಾನ್

ಸಂಸ್ಕೃತ: ಪ್ರಜ್ಞಾಚಕ್ಷುಶಮ್ (ಕವನ) – ಪೆನ್ನಾ ಮಧುಸೂದನ್

ಸಂತಾಲಿ: ಸಿಸಿರ್​ಜಾಲಿ (ಕಿರುಕತೆ) – ಕಾಲಿ ಚರಣ್ ಹೇಂಬ್ರಮ್

ಸಿಂಧಿ: ಜೀಜಲ್ (ಕಿರುಕತೆ) – ಈಶ್ವರ್ ಮೂರ್ಜಾನಿ

ತಮಿಳು: ಸೂಲ್ (ಕಾದಂಬರಿ) – ಚೋ. ಧರ್ಮನ್

ತೆಲುಗು: ಸಪ್ತಭೂಮಿ (ಕಾದಂಬರಿ) – ಬಂಡಿ ನಾರಾಯಣ ಸ್ವಾಮಿ

ಉರ್ದು: ಸವಾನೇ-ಎ-ಸಿರ್ ಸಯದ್ ಏಕ್ ಬಾಜ್​ದೀದ್ (ಜೀವನಕಥನ) – ಶಫೇ ಕಿಡ್ವಾಯಿ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by:Vijayasarthy SN
First published: