• Home
  • »
  • News
  • »
  • state
  • »
  • D K Shivakumar: ಪ್ರತಿಮೆ ಪಾಲಿಟಿಕ್ಸ್, ನನ್ನನ್ನು ಸಹ ಕರೆದಿಲ್ಲ ಕಣ್ರೀ! ದೇವೇಗೌಡರ ಕಡೆಗಣನೆಗೆ ಬಿಜೆಪಿ ವಿರುದ್ಧ ಡಿಕೆಶಿ ಗರಂ

D K Shivakumar: ಪ್ರತಿಮೆ ಪಾಲಿಟಿಕ್ಸ್, ನನ್ನನ್ನು ಸಹ ಕರೆದಿಲ್ಲ ಕಣ್ರೀ! ದೇವೇಗೌಡರ ಕಡೆಗಣನೆಗೆ ಬಿಜೆಪಿ ವಿರುದ್ಧ ಡಿಕೆಶಿ ಗರಂ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ನನಗೂ ಯಾವುದೇ ಆಹ್ವಾನ ಕೊಟ್ಟಿಲ್ಲ, ಕಾಲ್ ಸಹ ಮಾಡಿಲ್ಲ. ಬಿಜೆಪಿ ಅವ್ರಿಗೆ ನಾನು ಬೇಡ, ದೇವೇಗೌಡರು ಬೇಡ, ಅವ್ರಿಗೆ ಬೇಕಾಗಿರೋದು ಬರೀ ವೋಟು ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ರು.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.12): ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರನ್ನು (H. D Devegowda) ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar)​, ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಅವರು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ 12 ಗಂಟೆ ರಾತ್ರಿಗೆ ಆಹ್ವಾನ ಕೊಟ್ಟಿದ್ದಾರಂತೆ, ಅವರಿಗೆ ಡಿಕೆ ಶಿವಕುಮಾರ್ ಆಗಲಿ ದೇವೇಗೌಡ್ರು ಆಗಲಿ ಯಾರು ಬೇಡ, ಅವರಿಗೆ ಬೇಕಿರೋದು ಎಲೆಕ್ಷನ್ (Election), ಅವರಿಗೆ ಬೇಕಿರೋದು ವೋಟ್ ನಾವು ಅವರಿಂದ ಏನನ್ನೂ ಸಹ ಎಕ್ಸ್​ಪೆಕ್ಟ್​ ಮಾಡ್ಬಾರದು ಎಂದು ಹೇಳಿದ್ರು.


ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿ


ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕ ರಾಜ್ಯದ ಇತಿಹಾಸ ಅಂದ್ರೆ ಅದು ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ದೇವೇಗೌಡರು ಎಂದ್ರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಂತ ಹೆಸರು ಇಟ್ಟಿದು ನಾವೇ, 2000 ಎಕರೆಯನ್ನ ರೈತರಿಂದ ಖರೀದಿ ಮಾಡಿ KIAL ನವರಿಗೆ ಕೊಟ್ಟಿದ್ವಿ ಎಂದು ಡಿಕೆ ಶಿವಕುಮಾರ್ ಹೇಳಿದ್ರು.


dk shivakumar ed summons, dk brother ed summons, natioanl herald case, kannada news, karnataka news, ಡಿಕೆ ಶಿವಕುಮಾರ್​ಗೆ ಇಡಿ ಸಮನ್ಸ್​, ನ್ಯಾಷನಲ್ ಹೆರಾಲ್ಡ್​ ಕೇಸ್, ಅಕ್ರಮ ಹಣ ವರ್ಗಾವಣೆ ಕೇಸ್


ಬರೀ ಸನ್ಮಾನ ಮಾಡಿದ್ರೆ ಹೊಟ್ಟೆ ತುಂಬಲ್ಲ


ನಾವು ಪ್ರಧಾನಿಯವರಿಗೆ ಕೆಲವು ಪ್ರಶ್ನೆಗಳನ್ನು ಸಹ ಕೇಳಿದ್ವಿ, ನಿಮ್ಮ ಡಬ್ಬಲ್ ಎಂಜಿನ್ ಸರ್ಕಾರ ಆದಾಯ ಡಬ್ಬಲ್ ಮಾಡ್ತಿವಿ ಅಂತ ಹೇಳಿತ್ತು. ಆದ್ರೆ ಕೇವಲ ಮಾಲಾರ್ಪಣೆ ಮಾಡೋದ್ರಿಂದ ಅವರ ಹೊಟ್ಟೆ ತುಂಬಲ್ಲ. ಆಕ್ಸಿಜನ್ ಇಲ್ಲದೆ ಸತ್ತವರಿಗೆ ಇನ್ನೂ ಕೂಡ ಹಣ ಕೊಟ್ಟಿಲ್ಲ. ಅವರ ಆಚಾರ ವಿಚಾರ ಎಲ್ಲಾ ಅವರಿಗೆ ಬಿಟ್ಟಿದ್ದು ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದ್ರು.


ನನಗೂ ಯಾವುದೇ ಆಹ್ವಾನ ಕೊಟ್ಟಿಲ್ಲ


ಈ ಸರ್ಕಾರಕ್ಕೆ ಯಾವ ಶಿಷ್ಟಾಚಾರನು ಗೊತ್ತಿಲ್ಲ, ಕೆಂಪೇಗೌಡ ಅವರ ಪ್ರತಿಮೆ ಮಾಡಿರುವುದು ಸಂತೋಷವೇ, ಆದ್ರೇ ಅದಕ್ಕೆ ಸರ್ಕಾರದ ದುಡ್ಡು ಯಾಕ್ ಬೇಕಿತ್ತು. ನಮ್ದು 26 ಪರ್ಸೆಂಟ್ ಇದೇ ಪ್ರಾಧಿಕಾರದವರಿಗೆ ಹೇಳಿದ್ರೆ ಅವರೇ ಮಾಡೋರು. ಕಾರ್ಯಕ್ರಮಕ್ಕೆ ಸರ್ಕಾರಿ ಹಣ ಯಾಕೆ ಬೇಕಿತ್ತು. ಕಮಿಷನ್ ಹೊಡೆಯೋದಕ್ಕೆ ಮಾಡಿದ್ದಾರೆ. ಕೆಂಪೇಗೌಡರ ಪ್ರಾಧಿಕಾರ ಮಾಡಿದ್ದು ನಾವು, ಬರೀ ಶೋ ಕ್ರಿಯೇಟ್ ಮಾಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.


ಇನ್ನು ನನಗೂ ಯಾವುದೇ ಆಹ್ವಾನ ಕೊಟ್ಟಿಲ್ಲ, ಕಾಲ್ ಸಹ ಮಾಡಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಫೌಂಡೇಶನ್ ಹಾಕಬೇಕಿದಾಗ ನನ್ನನ್ನ ಕರೆದಿದ್ರು. ನಾನು ಅವಾಗ ಹೋಗಿದ್ದೆ ಸ್ವಾಮೀಜಿಗಳು  ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.


ವೋಟಿಗಾಗಿ ಏನ್​ ಬೇಕೋ ಅದನ್ನ ಮಾಡ್ತಿದ್ದಾರೆ

ಅವ್ರು ಪಾರ್ಟಿ ಅಜೆಂಡಾ ಇಟ್ಟುಕೊಂಡಿದ್ದಾರೆ. ವೋಟ್ ಗಾಗಿ ಏನ್ ಬೇಕೋ ಅದನ್ನ ಮಾಡ್ತಿದ್ದಾರೆ. ಬೆಂಗಳೂರು ಗ್ಲೋಬಲ್ ಬೆಂಗಳೂರು, ಗ್ಲೋಬಲ್ ಕರ್ನಾಟಕ, ಪ್ರಧಾನಿಗಳು ಜನರಿಗೆ ಏನಾದ್ರೂ ಒಂದು ಮೆಸೇಜ್ ಕೊಟ್ರಾ?, ನಿರುದ್ಯೋಗ, 40% ಕಮಿಷನ್, ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ವಿ. ಒಕ್ಕಲುತನ ಮಾಡೋರು ಎಲ್ಲಾ ಸಮುದಾಯದವ್ರೂ ಇದ್ದಾರೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ರು.


ಇದನ್ನೂ ಓದಿ: Karnataka Politics: ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ: ಕೈ ನಾಯಕನ ಆರೋಪ!


ಆರ್​ ಅಶೋಕ್​ ಬಗ್ಗೆ ಡಿಕೆಶಿ ವ್ಯಂಗ್ಯ

ಸ್ವಾಮೀಜಿ ಹೆಗಲ ಮೇಲೆ ಕಂದಾಯ ಸಚಿವ ಆರ್ ಅಶೋಕ್ ಕೈ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ವ್ಯಂಗ್ಯವಾಡಿದ್ದಾರೆ. ಸ್ವಾಮೀಜಿಗಳ ಬಗ್ಗೆ ನಾನು ಮಾತಾಡಲ್ಲ. ಅಶೋಕ್​  ಅವ್ರಿಗೂ ಸ್ವಾಮೀಜಿಗೂ ಏನ್ ಸಂಬಂಧ ಇದೆಯೋ  ನನಗೆ ಗೊತ್ತಿಲ್ಲ. ನನಗೂ ಸ್ವಾಮೀಜಿಗೂ ಭಕ್ತನಿಗೂ, ಭಗವಂತನಿಗೂ ಇರೋ ಸಂಬಂಧ. ಆ ಪೀಠಕ್ಕೆ ತನ್ನದೇ ಗೌರವ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: