ಡಿಜಿಟಲ್​​​​ ಕಾರ್ಗೋವಾಯು ಸರಕು ಸಾಗಣೆ ಸಮುದಾಯ ವ್ಯವಸ್ಥೆ ಜಾರಿಗೆ ಮುಂದಾದ ಕೆಂಪೇಗೌಡ ಏರ್​​ಪೋರ್ಟ್​

ಬಿಐಎಎಲ್ ಖಾಸಗಿ ಸಂಸ್ಥೆ ಜೊತೆಗೆ ಇ-ಒಪ್ಪಂದಕ್ಕೆ ಸಹಿ ಹಾಕಿದೆ. ಸರಕು ಸಾಗಣೆ ಮತ್ತು ವಿಮಾನ ನಿಲ್ದಾಣ ಉದ್ಯಮದ ಕಡೆಗೆ ಗಮನ ಕೇಂದ್ರೀಕರಿಸಿದ ಮಾಹಿತಿ ತಂತ್ರಜ್ಞಾನ ಪೂರೈಕೆದಾರ ಸಂಸ್ಥೆಯಾಗಿದ್ದು, ಈ ಒಪ್ಪಂದದಡಿ ತನ್ನ ಸರಕು ಸಾಗಣೆ ಪಾಲುದಾರರಿಗೆ ಬಿಐಎಎಲ್ ಪೂರೈಸಬಹುದಾದ ಪರಿಣಾಮಕಾರಿ ವ್ಯವಹಾರ ಮುಂದುವರಿಕೆಯ ಉಪಕರಣ –ಎಸಿಎಸ್ ಪ್ಲಾಟ್‍ಫಾರಂ ಅಭಿವೃದ್ಧಿಪಡಿಸಲಾಗುತ್ತಿದೆ.

ಏರ್ ಕಾರ್ಗೋ ಕಮ್ಯುನಿಟಿ ಸಿಸ್ಟಮ್ (ಎಸಿಎಸ್)

ಏರ್ ಕಾರ್ಗೋ ಕಮ್ಯುನಿಟಿ ಸಿಸ್ಟಮ್ (ಎಸಿಎಸ್)

  • Share this:
ದೇವನಹಳ್ಳಿ(ಜೂ.17): ಕೆಐಎಎಲ್ ಡಿಜಿಟಲೀಕೃತ ಮತ್ತು ಸೀಮಾತೀತವಾಗಿ ಸಂಪರ್ಕ ಹೊಂದಿರುವ, ಸ್ಮಾರ್ಟ್ ವಿಮಾನ ನಿಲ್ದಾಣವನ್ನಾಗಿಸುವ ತನ್ನ ದೀರ್ಘಕಾಲೀನ ಯೋಜನೆ’ಯ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ವಾಯು ಸರಕು ಸಾಗಣೆ ಕಾರ್ಯವನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿದೆ. ಹಾಗಾಗಿಯೇ ಏರ್ ಕಾರ್ಗೋ ಕಮ್ಯುನಿಟಿ ಸಿಸ್ಟಮ್ (ಎಸಿಎಸ್) ವಾಯು ಸರಕು ಸಾಗಣೆ ಸಮುದಾಯ ವ್ಯವಸ್ಥೆ ಪರಿಚಯಿಸಲಾಗುತ್ತಿದೆ.

ಎಸಿಎಸ್ ಡಿಜಿಟಲ್ ವೇದಿಕೆಯಾಗಿದ್ದು, ಕಸ್ಟಮ್ಸ್ ಬ್ರೋಕರ್​​ಗಳು, ಶಿಪ್ಪರ್​​ಗಳು, ಏರ್​​ಲೈನ್​​​ ಸಂಸ್ಥೆಗಳು, ಟ್ರಕ್ಕಿಂಗ್ ಕಂಪನಿಗಳು, ಗ್ರೌಂಡ್ ಅಂಡ್ ಕಾರ್ಗೋ ಹ್ಯಾಂಡಲ್‍ಗಳು ಮತ್ತು ಫ್ರೈಟ್ ಫಾರ್ವರ್ಡರ್ಸ್ ಪಾಲುದಾರರನ್ನು ಒಂದೇ ಸೂರಿನಡಿ ಒಂದುಗೂಡಿಸುತ್ತದೆ. ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಬಹುಪಾಲುದಾರರು ಇರುವುದರಿಂದ ಪ್ರತಿ ರವಾನೆಯಲ್ಲಿ 30 ವಿಧದ ದಾಖಲೆ ಪತ್ರಗಳು ಬಹು ನಕಲುಗಳಲ್ಲಿ ಇರುವ ಅಗತ್ಯವಿದೆ. ಇದರಿಂದ ದಾಖಲೆಗಳ ನಕಲು ಮಾಡಬೇಕಾಗಿರುವುದು ಗಮನಾರ್ಹ ಪ್ರಮಾಣದಲ್ಲಿರುತ್ತದೆ.

ಹೀಗಾಗಿ ಸಮಯ ವ್ಯರ್ಥವಾಗುವುದು ಹೆಚ್ಚಾಗುತ್ತದೆಯಲ್ಲದೆ ಪೂರೈಕಾ ಸರಣಿಯಲ್ಲಿ ಅಡೆತಡೆಗಳಿಗೆ ದಾರಿಯಾಗುತ್ತದೆ. ಎಸಿಎಸ್ ಅನ್ನು ಅನುಷ್ಠಾನಕ್ಕೆ ತರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಗದ ಪತ್ರಗಳ ಕಾರ್ಯ ಇಲ್ಲವಾಗಲಿದೆ. ಇದರಿಂದ ವ್ಯವಹಾರ ಪ್ರಕ್ರಿಯೆ ಹೆಚ್ಚು ವೇಗವಾಗಲಿದೆ. ಮಾಹಿತಿಗಳ ನಕಲುಕಾರ್ಯ ಕಡಿಮೆಯಾಗಲಿದೆ. ಪ್ರಕ್ರಿಯೆಗಳು ಹೆಚ್ಚು ಸರಳವಾಗಲಿವೆ. ಇದರಿಂದಾಗಿ ಸರಕು ವಿಮಾನ ನಿಲ್ದಾಣಕ್ಕೆ ತಲುಪುವ ಮುನ್ನವೇ ಮಾಹಿತಿ ಲಭ್ಯವಾಗಲಿದೆ.

ಬಿಐಎಎಲ್ ಖಾಸಗಿ ಸಂಸ್ಥೆ ಜೊತೆಗೆ ಇ-ಒಪ್ಪಂದಕ್ಕೆ ಸಹಿ ಹಾಕಿದೆ. ಸರಕು ಸಾಗಣೆ ಮತ್ತು ವಿಮಾನ ನಿಲ್ದಾಣ ಉದ್ಯಮದ ಕಡೆಗೆ ಗಮನ ಕೇಂದ್ರೀಕರಿಸಿದ ಮಾಹಿತಿ ತಂತ್ರಜ್ಞಾನ ಪೂರೈಕೆದಾರ ಸಂಸ್ಥೆಯಾಗಿದ್ದು, ಈ ಒಪ್ಪಂದದಡಿ ತನ್ನ ಸರಕು ಸಾಗಣೆ ಪಾಲುದಾರರಿಗೆ ಬಿಐಎಎಲ್ ಪೂರೈಸಬಹುದಾದ ಪರಿಣಾಮಕಾರಿ ವ್ಯವಹಾರ ಮುಂದುವರಿಕೆಯ ಉಪಕರಣ –ಎಸಿಎಸ್ ಪ್ಲಾಟ್‍ಫಾರಂ ಅಭಿವೃದ್ಧಿಪಡಿಸಲಾಗುತ್ತಿದೆ.

ಅತ್ಯುತ್ತಮ ಕಾರ್ಯಕ್ಷಮತೆಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅತ್ಯಾಧುನಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನಗಳೊಂದಿಗೆ ಸಜ್ಜಾಗಿರುವ ಸರಕು ಸಾಗಣೆ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣವನ್ನು ರೂಪಿಸುವುದು ಬಿಐಎಎಲ್‍ನಲ್ಲಿ ಉದ್ದೇಶ ಆಗಿದೆ. ನಮ್ಮ ಡಿಜಿಟಲ್ ಪರಿವರ್ತನೆಯ ಪ್ರಯತ್ನಗಳ ಭಾಗವಾಗಿ ನಮ್ಮ ಸರಕು ಸಾಗಣೆ ಸಮುದಾಯದ ಜೊತೆಗೆ ದತ್ತಾಂಶ ಹಂಚಿಕೊಳ್ಳುವ ವೇದಿಕೆ ಆಗಲಿದೆ’’ ಎಂದು ಬಿಐಎಎಲ್‍ನ ಮುಖ್ಯ ತಂತ್ರ ಯೋಜನೆ ಮತ್ತು ಅಭಿವೃದ್ದಿ ಅಧಿಕಾರಿ ಸಾತ್ಯಕಿ ರಘುನಾಥ್ ನ್ಯೂಸ್18 ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಸೇನಾ ಹತ್ಯಾಕಾಂಡ: ಹುತಾತ್ಮ ಯೋಧರ ಕುರಿತು ನನಗಾದ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ - ರಾಹುಲ್​​ ಗಾಂಧಿ

ವಿಮಾನ ನಿಲ್ದಾಣ ಸರಕು ಸಾಗಣೆ ಸಮುದಾಯವನ್ನು ಬೆಂಬಲಿಸುವಲ್ಲಿ ಬಿಐಎಎಲ್‍ನ ಬದ್ಧತೆ, ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣ ಒಂದು ಸರಕು ಸಾಗಣೆ ಕೇಂದ್ರವಾಗಿ ಬೆಳೆಯಲು ವೇಗ ನೀಡುತ್ತದೆ. ಈ ಡಿಜಿಟಲ್ ಯುಗದಲ್ಲಿ ಭದ್ರತೆ, ಹೆಚ್ಚುತ್ತಿರುವ ವೆಚ್ಚಗಳು, ಹಿಂದೆಂದೂ ಇಲ್ಲದಂತಹ ಲಾಕ್‍ಡೌನ್‍ಗಳು ಮತ್ತು ಕಪ್ರ್ಯೂಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸಲು ವಿಮಾನ ನಿಲ್ದಾಣಗಳು ಸದಾ ಎಚ್ಚರವಾಗಿರಬೇಕು. ಬಿಐಎಎಲ್‍ಗೆ ನೀಡುತ್ತಿರುವ ಎಸಿಎಸ್ ಮುಂದಿನ ಪೀಳಿಗೆಯ ಸಮುದಾಯ ವೇದಿಕೆಯಾಗಿದ್ದು, ಪೂರೈಕಾ ಸರಣಿಯ ಪಾಲುದಾರರ ನಡುವೆ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡಲಿದೆ.

ನೂತನ ಸೇವೆಗಳನ್ನು ಬಿಡುಗಡೆ ಮಾಡಲು ಹಾಗೂ ಗ್ರಾಹಕರಿಗೆ ಹೆಚ್ಚು ಉತ್ತಮಮಟ್ಟದ ಅನುಭವಗಳನ್ನು ವಿತರಿಸಲು ಸಾಧ್ಯವಾಗಲಿದೆ. ಬದಲಾಗುತ್ತಿರುವ ವ್ಯವಸ್ಥೆಗೆ ಹೊಂದಿಕೊಳ್ಳಲು ಮತ್ತು ಸಡಿಲತೆಯೊಂದಿಗೆ ಕೆಲಸ ಮಾಡುವುದಕ್ಕಾಗಿ ಬಿಐಎಎಲ್‍ಗೆ ಅವರ ಡಿಜಿಟಲ್ ಪರಿವರ್ತನಾ ಯುಗದಲ್ಲಿದ್ದೇವೆ.``ಪಾಲುದಾರಿಕೆ ವ್ಯವಸ್ಥೆಯ ನಡುವೆ ಸರಾಗವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ನೀತಿಯನ್ನು ಆಧರಿಸಿ  ಎಸಿಎಎಸ್  ಅಭಿವೃದ್ದಿಪಡಿಸಲಾಗಿದೆ. ಅಲ್ಲದೆ, ಅತ್ಯುನ್ನತಮಟ್ಟದ ದತ್ತಾಂಶ ನಿಖರತೆ, ಭದ್ರತೆ ಮತ್ತು ನಿಯಮಗಳನ್ನು ಅನುಸರಿಸುವುದರೊಂದಿಗೆ ವಿಮಾನ ಸರಕು ಸಾಗಣೆ ಕಾರ್ಯಾಚರಣೆಗಳಲ್ಲಿ ಕಾರ್ಯಕ್ಷಮತೆಗೆ ಚಾಲನೆ ನೀಡಲಾಗುತ್ತದೆ.

ವಾಯು ಸರಕು ಸಾಗಣೆ ಮೌಲ್ಯ ಸರಣಿಯಲ್ಲಿನ ಎಲ್ಲಾ ಪಾಲುದಾರರಿಗೆ ಎಸಿಎಸ್ ಏಕಗವಾಕ್ಷಿ ಎಲೆಕ್ಟ್ರಾನಿಕ್ ವೇದಿಕೆಯಾಗಿದೆ. ಈ ಮೂಲಕ ಅವರು ಪರಸ್ಪರ ಡಿಜಿಟಲ್ ಮಾಧ್ಯಮದಲ್ಲಿ ಸಂವಾದ ನಡೆಸಲು, ಅನಗತ್ಯ ದಾಖಲೆಗಳನ್ನು ಇಲ್ಲವಾಗಿಸಲು, ಜೊತೆಗೆ ವಿಳಂಬಗಳು ಹಾಗೂ ಪೂರೈಕಾ ಸರಣಿಯಲ್ಲಿ ಅಪಾರದರ್ಶಕತೆಯನ್ನು ಇಲ್ಲವಾಗಿಸಲು ಮತ್ತು ವಾಯು ಸರಕು ಸಾಗಣೆ ಕ್ಷೇತ್ರದಲ್ಲಿ ವಹಿವಾಟನ್ನು ಸುಲಭವಾಗಿಸುವ ಕ್ರಮವನ್ನು ಸುಧಾರಿಸುವುದು ಸಾಧ್ಯವಾಗಲಿದೆ. ಅಕ್ರಮ ಸಾಗಾಟ ಕ್ಕೆ ಸಂಪೂರ್ಣ ಬ್ರೇಕ್ ಹಾಕಬಹುದು.
First published: