ದೇವನಹಳ್ಳಿ: ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಫೆಬ್ರವರಿ 3ರಿಂದ 5 ರವರೆಗೆ ಏರೋ ಇಂಡಿಯಾ 2021 ನಡೆಯುವ ಹಿನ್ನಲೆಯಲ್ಲಿ ಏರ್ ಶೋ ಸನಿಹವೇ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾಗಶಃ ಬಂದ್ ಆಗಲಿದೆ. ಯಲಹಂಕದ ಏರ್ ಫೋರ್ಸ್ ಸ್ಟೇಷನ್ನಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ಏರ್ ಶೋ ನಡೆವೆಯುವ ಮತ್ತು ಪೂರ್ವಾಭ್ಯಾಸದ ಸಮಯದಲ್ಲಿ ಎರಡು ಕಡೆಯಿಂದ ನಡೆಯುವ ವಿಮಾನಗಳ ಹಾರಾಟ ಅಪಾಯಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಏರೋ ಇಂಡಿಯಾ 2021ರನ್ನು ಸುರಕ್ಷಿತ ಮತ್ತು ಯಶಸ್ವಿ ಮಾಡುವ ಕಾರಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾಗಶಃ ಬಂದ್ ಆಗಲಿದೆ.
ಜನವರಿ 30 ಮತ್ತು 31 ರಂದು ಏರ್ಫೋರ್ಸ್ನಲ್ಲಿ ಪೂರ್ವಾಭ್ಯಾಸ ನಡೆಯುವ ಹಿನ್ನೆಲೆ ಮಧ್ಯಾಹ್ನ 01.30 ರಿಂದ 04.30 ರವರೆಗೆ ಕೆಐಎಎಲ್ ರನ್ ವೇ ಬಂದ್ ಆಗಲಿದೆ. ಫೆಬ್ರವರಿ 1 ರಂದು ಏರ್ ಫೋರ್ಸ್ನಲ್ಲಿ ನಡೆಯುವ ಪೂರ್ವಾಭ್ಯಾಸದ ಹಿನ್ನೆಲೆಯಲ್ಲಿ ಬೆಳಗ್ಗೆ 10:00 ರಿಂದ 12:00 ಮತ್ತು ಮಧ್ಯಾಹ್ನ 02 :00 ರಿಂದ 05:00ರವರೆಗೂ ಕೆಐಎಎಲ್ ರನ್ ವೇ ಬಂದ್ ಆಗಲಿದೆ. ಫೆಬ್ರವರಿ 2 ಮತ್ತು 3 ರಂದು ಏರೋ ಇಂಡಿಯಾ 2021ರ ಉದ್ಘಾಟನಾ ಕಾರ್ಯಕ್ರಮ ಮತ್ತು ವೈಮಾನಿಕ ಪ್ರದರ್ಶನ ಇರುವುದರಿಂದ ಬೆಳಗ್ಗೆ 09:00 ರಿಂದ 12:00 ಮತ್ತು ಮಧ್ಯಾಹ್ನ 02:00 ರಿಂದ 05:00 ರವರೆಗೂ ಕೆಐಎಎಲ್ ರನ್ ವೇ ಬಂದ್ ಆಗಲಿದೆ. ಫೆಬ್ರವರಿ 4 ಮತ್ತು 5 ರಂದು ಏರೋ ಇಂಡಿಯಾ ಕಾರ್ಯಕ್ರಮ ಇರುವುದರಿಂದ ಬೆಳಗ್ಗೆ 10:00ರಿಂದ 12:00 ಮತ್ತು ಮಧ್ಯಾಹ್ನ 02:00 ರಿಂದ 05:00 ರವರೆಗೂ ಕೆಐಎಎಲ್ ರನ್ ವೇ ಬಂದ್ ಆಗಲಿದೆ.
ಇದನ್ನು ಓದಿ: ಕೆಂಪುಕೋಟೆ ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಭೇಟಿಯಾದ ಅಮಿತ್ ಶಾ; ರೈತ ನಾಯಕರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ
ಯಲಹಂಕದ ಏರ್ ಫೋರ್ಸ್ ಸ್ಟೇಷನ್ನಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ಏರ್ ಶೋ ನಡೆಯುವ ಮತ್ತು ಪೂರ್ವಾಭ್ಯಾಸದ ಸಮಯದಲ್ಲಿ ಎರಡು ಕಡೇಯಿಂದ ನಡೆಯುವ ವಿಮಾನಗಳ ಹಾರಾಟ ಅಪಾಯಕ್ಕೆ ಕಾರಣವಾಗುತ್ತೆ, ಈ ಹಿನ್ನೆಲೆ ಏರೋ ಇಂಡಿಯಾ 2021ರನ್ನು ಸುರಕ್ಷಿತ ಮತ್ತು ಯಶಸ್ವಿ ಮಾಡುವ ಕಾರಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾಗಶಃ ಬಂದ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ