Kempegowda International Airport: ಕೆಂಪೇಗೌಡ ಏರ್ಪೋರ್ಟ್ ಇನ್ಮುಂದೆ ವರ್ಚುವಲ್​ ಇನ್ಫಾರ್ಮೇಷನ್​​​ ಡೆಸ್ಕ್​​

Kempegowda International Airport: ಕೇವಲ ಸ್ಪರ್ಶರಹಿತವಾಗಿ ವಿಡಿಯೋ ಮೂಲಕ ದೂರದಲ್ಲಿರುವ ವಿಮಾನ ನಿಲ್ದಾಣ ಸಿಬ್ಬಂದಿಯೊಂದಿಗೆ ತತ್‍ಕ್ಷಣ ಸಂಭಾಷಣೆ ನಡೆಸಲು ಪ್ರಯಾಣಿಕರಿಗೆ ವರ್ಚುವಲ್ ಇನ್‍ಫಾರ್ಮೇಷನ್ ಡೆಸ್ಕ್ ಅವಕಾಶ ಮಾಡಿಕೊಡಲಿದೆ. ಪ್ರಯಾಣಿಕರು ವರ್ಚುವಲ್ ಡೆಸ್ಕ್ ಮುಂದೆ ಹೋಗಿ ನಿಂತ ಕೂಡಲೇ ಅಲ್ಲಿನ ಸೆನ್ಸರ್‍ಗಳಿಗೆ ಚಾಲನೆ ಲಭಿಸುತ್ತದೆಯಲ್ಲದೆ, ಪರಸ್ಪರ ಸಂವಾದ ಆರಂಭವಾಗುತ್ತದೆ. ಪ್ರಯಾಣಿಕರು ಹಗಲೂ ಮತ್ತು ರಾತ್ರಿಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

  • Share this:
ಬೆಂಗಳೂರು(ಸೆ.04): ಬೆಂಗಳೂರು ವಿಮಾಣ ನಿಲ್ದಾಣ, ಅಲ್ಲಿನ ಸೌಲಭ್ಯಗಳು, ವಿಮಾನ ಹಾರಾಟಗಳು, ಆಹಾರ ಮತ್ತಿ ಪೇಯಗಳು ಮತ್ತು ಸಾರಿಗೆ ಕುರಿತ ಹಗಲು ಮತ್ತು ರಾತ್ರಿಯ ಸಂಪೂರ್ಣ ಮಾಹಿತಿಗಳನ್ನು ಪ್ರಯಾಣಿಕರು ಪಡೆಯಬಹುದಾಗಿದೆ. ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆ.ಐ.ಎ.ಬಿ./ಬೆಂಗಳೂರು ವಿಮಾನ ನಿಲ್ದಾಣ)ದ ಇನ್‍ಫಾರ್ಮೇಷನ್ ಡೆಸ್ಕ್ ಸೌಲಭ್ಯ ಈಗ ಸಂಪರ್ಕ ಅಥವಾ ಸ್ಪರ್ಶರಹಿತವಾಗಿ ಪರಿವರ್ತನೆ ಆಗಿದೆ. ಟರ್ಮಿನಲ್‍ನಲ್ಲಿನ ನಾಲ್ಕು ಸ್ಥಳಗಳಲ್ಲಿ ಲಭ್ಯವಾಗಲಿರುವ ಈ ವರ್ಚುವಲ್ ಡೆಸ್ಕ್​​​ಗಳು ಸಂಪರ್ಕರಹಿತ ಪ್ರಯಾಣಿಕರ ಸಂಸ್ಕರಣಾ ಪ್ರಕ್ರಿಯೆಗೆ ನೂತನ ಆಯಾಮವನ್ನು ನೀಡಲಿದೆ. ಕೇವಲ ಸ್ಪರ್ಶರಹಿತವಾಗಿ ವಿಡಿಯೋ ಮೂಲಕ ದೂರದಲ್ಲಿರುವ ವಿಮಾನ ನಿಲ್ದಾಣ ಸಿಬ್ಬಂದಿಯೊಂದಿಗೆ ತತ್‍ಕ್ಷಣ ಸಂಭಾಷಣೆ ನಡೆಸಲು ಪ್ರಯಾಣಿಕರಿಗೆ ವರ್ಚುವಲ್ ಇನ್‍ಫಾರ್ಮೇಷನ್ ಡೆಸ್ಕ್ ಅವಕಾಶ ಮಾಡಿಕೊಡಲಿದೆ. ಪ್ರಯಾಣಿಕರು ವರ್ಚುವಲ್ ಡೆಸ್ಕ್ ಮುಂದೆ ಹೋಗಿ ನಿಂತ ಕೂಡಲೇ ಅಲ್ಲಿನ ಸೆನ್ಸರ್‍ಗಳಿಗೆ ಚಾಲನೆ ಲಭಿಸುತ್ತದೆಯಲ್ಲದೆ, ಪರಸ್ಪರ ಸಂವಾದ ಆರಂಭವಾಗುತ್ತದೆ. ಪ್ರಯಾಣಿಕರು ಹಗಲೂ ಮತ್ತು ರಾತ್ರಿಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಬೆಂಗಳೂರು ವಿಮಾನ ನಿಲ್ದಾಣ, ಸೌಲಭ್ಯಗಳು, ವಿಮಾನ ಹಾರಾಟಗಳು, ಆಹಾರ ಮತ್ತು ಪೇಯಗಳು, ಸಾರಿಗೆ ಕುರಿತ ಮಾಹಿತಿಯನ್ನು ಈ ಮೂಲಕ ಪ್ರಯಾಣಿಕರು ಪಡೆದುಕೊಳ್ಳಬಹುದು. ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆಯು ಮುಖತಃ ಮಾನವ ಸಂಭಾಷಣೆ ಇಲ್ಲದಂತಹ ಹಾಗೂ ಸುರಕ್ಷಿತವಾಗಿ ಸಹಾಯ ಮತ್ತು ಮಾಹಿತಿಗಳನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾದಂತಹ ಹಾಗೂ ಸ್ಪರ್ಶರಹಿತವಾದ ಸೇವೆ ನೀಡುವ ವರ್ಚುವಲ್ ಇನ್‍ಫಾರ್ಮೇಷನ್ ಡೆಸ್ಕ್ ಅನ್ನು ಪರಿಚಯಿಸಿದೆ.

ಈ ಸೇವೆ ಪ್ರಸ್ತುತ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿರುವ ಸಿಬ್ಬಂದಿಗಳಿಗೆ ಈ ವರ್ಚುವಲ್ ವೇದಿಕೆ ಮೂಲಕ ಎಲ್ಲಾ ಮೂರು ಭಾಷೆಗಳಲ್ಲಿ ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ನಿಭಾಯಿಸುವುದಕ್ಕಾಗಿ ತರಬೇತಿಯನ್ನು ನೀಡಲಾಗಿರುತ್ತದೆ. ಬಿ.ಐ.ಎ.ಎಲ್. ಮತ್ತು ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಕೂಡ ಟರ್ಮಿನಲ್‍ನಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಅಗತ್ಯವಾದ ರೀತಿಯಲ್ಲಿ ಸಹಾಯ ಮತ್ತು ಮಾಹಿತಿಯನ್ನು ಪೂರೈಸುತ್ತಾರೆ.

ಇದನ್ನೂ ಓದಿ: NEET-JEE ಪರೀಕ್ಷೆ ಮುಂದೂಡಿಕೆ?; ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್‌, ಮಹತ್ವದ ತೀರ್ಪಿನ ನಿರೀಕ್ಷೆ

ಬಿ.ಐ.ಎ.ಎಲ್. ಸಂಸ್ಥೆಯು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೇ 2020ರಿಂದ ವಾಹನ ನಿಲುಗಡೆಯ ಪ್ರದೇಶದಿಂದ ವಿಮಾನ ಹತ್ತುವುದರವರೆಗಿನ ಸಂಪರ್ಕರಹಿತ ಪ್ರಯಾಣದ ಸೌಲಭ್ಯವನ್ನು ಆರಂಭಿಸಿದೆ. ಈ ಪ್ರಕ್ರಿಯೆಯ ಪ್ರಮುಖ ಕೆಲವು ಕ್ಷೇತ್ರಗಳಲ್ಲಿ ಡಿಜಿಯಾತ್ರಾ (ಬಯೋಮೆಟ್ರಿಕ್ ಆಧಾರಿತ ಹಾಗೂ ವಿಮಾನವೇರುವುದರವರೆಗೆ ಸ್ವಯಂ ನಿರ್ವಹಿಸಬಹುದಾದ ವ್ಯವಸ್ಥೆ), ಸೆಲ್ಪ್ ಬ್ಯಾಗ್-ಡ್ರಾಪ್, ಸಂಪರ್ಕರಹಿತ ಚೆಕ್-ಇನ್, ರಿಟೇಲ್ ಮತ್ತು ಆಹಾರ ನೀಡಿಕೆ ಅಲ್ಲದೆ, ಸ್ಪರ್ಶರಹಿತ ಹ್ಯಾಂಡ್ ಸ್ಯಾನಿಟೈಸರ್ ಪೂರೈಕೆ ವ್ಯವಸ್ಥೆಗಳು ಕಲ್ಪಿಸಲಾಗಿದೆ ಎಂದು ನ್ಯೂಸ್18 ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Published by:Ganesh Nachikethu
First published: