DK Shivakumr: ನಿಮ್ಮ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಡಿ, ಸಿಎಂ ಬೊಮ್ಮಾಯಿಗೆ ಡಿಕೆಶಿ ವಾರ್ನಿಂಗ್!

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಬೊಮ್ಮಾಯಿಯವರ ವಿರುದ್ಧ ಕಿಡಿಕಾರಿದ್ದಾರೆ. ಇದರ ನಡುವೆ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದಾರೆ.

ಸಿಎಂ ಬೊಮ್ಮಾಯಿಗೆ ಡಿಕೆಶಿ ವಾರ್ನಿಂಗ್

ಸಿಎಂ ಬೊಮ್ಮಾಯಿಗೆ ಡಿಕೆಶಿ ವಾರ್ನಿಂಗ್

  • Share this:
ಸಿದ್ದರಾಮಯ್ಯ (Siddaramiah) ಕಾರಿನ (Car) ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಆಕ್ರೋಶ ಹೊರಹಾಕ್ತಿದೆ. ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ (Kumaraswamy) ಕೂಡ ಕಿಡಿಕಾರಿದ್ದಾರೆ. ಇದರ ನಡುವೆ ರಾಜ್ಯದ ಹಲವೆಡೆ ಪ್ರತಿಭಟನೆಗಳು (Protest) ಕೂಡ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ರಾಜ್ಯದ ಹಲವೆಡೆ ಪ್ರೊಟೆಸ್ಟ್ ನಡೆಸ್ತಿದ್ದಾರೆ. ಇದರ ನಡುವೆ ಮೊಟ್ಟೆ ಎಸೆದ ಪ್ರಕರಣದ ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಆದೇಶಿಸಿದ್ದಾರೆ. ಸಿದ್ದರಾಮಯ್ಯ, ಪುತ್ರ ಯತೀಂದ್ರ ವಿರುದ್ಧ ಮೈಸೂರಲ್ಲಿ ದೂರು ಕೂಡ ದಾಖಲಾಗಿದೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಬೊಮ್ಮಾಯಿಯವರ ವಿರುದ್ಧ ಕಿಡಿಕಾರಿದ್ದಾರೆ. ಇದರ ನಡುವೆ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದಾರೆ.

ನಿಮ್ಮ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಡಿ- ಡಿಕೆಶಿ

ಸಿಎಂ ಬಸವರಾಜ ಬೊಮ್ಮಾಯಿಯವರೇ ನಿಮ್ಮ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿ ಇಟ್ಕೊಂಡ್ರೆ ಸರಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ. ನೀವು ಬೇಕಿದ್ದರೆ ಟೀಕೆ ಮಾಡಿ, ಟೀಕೆಯನ್ನ ಸಂತೋಷವಾಗಿ ಸ್ವೀಕಾರ ಮಾಡ್ತಿವಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಯತೀಂದ್ರ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು!

ನಾವೆಲ್ಲಾ ರೆಡಿಯಾಗೇ ಬಂದಿರ್ತೀವಿ

ನಾವು ರಾಜಕಾರಣದಲ್ಲಿ ಇರುವವರು. ಕಪ್ಪು ಬಟ್ಟೆಗೆ ಹೆದರುತ್ತೇವೆ. ಮೊಟ್ಟೆ ಎಸೆದ್ರೆ ಹೆದರುತ್ತೇವೆ. ಚಪ್ಪಲಿ ಎಸೆದರೆ ಹೆದರುತ್ತೇವೆ. ಇದೆಲ್ಲಾ ರಾಜಕೀಯದಲ್ಲಿ ನಡೆಯುತ್ತೆ. ಇದಕ್ಕೆಲ್ಲಾ ತಯಾರಾಗಿಯೇ ರಾಜಕಾರಣಕ್ಕೆ ಬಂದಿರ್ತೇವೆ. ನಾನು ಮುಖ್ಯಮಂತ್ರಿಗಳಿಗೆ ಹೇಳ್ತಿದ್ದೀನಿ. ನಿಮ್ಮ ಪಾರ್ಟಿ ಕಾರ್ಯಕರ್ತರನ್ನ ಹದ್ದುಬಸ್ತಿನಲ್ಲಿ ಇಟ್ಕೊಂಡ್ರೆ ನಿಮಗೂ ಕ್ಷೇಮ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

ನಮಗೇನು ಶಕ್ತಿ ಇಲ್ವಾ?- ಡಿಕೆಶಿ ಪ್ರಶ್ನೆ

ಮಂಡ್ಯದಲ್ಲಿ ಡಿಕೆ ಶಿವಕುಮಾರ್ ಬಿಜೆಪಿಗರ ವಿರುದ್ದ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ಮನಸ್ಸು ಮಾಡಿದ್ರೆ ಯಾವ ಮಂತ್ರಿನೂ, ಯಾವ ಕಾರ್ಯಕ್ರಮನೂ ಮಾಡೋಕೆ ಆಗಲ್ಲ. ನಮಗೇನು ಶಕ್ತಿ ಇಲ್ವಾ? ನಾನು ಹೇಳ್ತಿದ್ದೀನಿ ಅಷ್ಟೇ, ನಾನು ಥ್ರೆಟ್ ಮಾಡ್ತಿಲ್ಲ. ನಮಗೆ ಅದೇ ಕಪ್ಪು ಬಾವುಟ ಹಿಡಿಯೋದು ಗೊತ್ತು, ಹೂವಿನ ಹಾರ ಹಾಕೋದು ಗೊತ್ತು. ಬೇರೆ ಏನನ್ನಾದರೂ ಎಸೆಯಬೇಕು ಅನ್ನೋದು ಗೊತ್ತು ಅಂತಾ ಎಚ್ಚರಿಸಿದ್ದಾರೆ.

ನಾವೇನು ಹೆದರಿಕೊಂಡಿದ್ವಾ?- ಡಿಕೆಶಿ

ನಾನು ಹೇಳ್ತಿರೋದನ್ನು ಎಚ್ಚರಿಕೆ ಎಂದಾದರೂ ಸ್ವೀಕರಿಸಿ ಅಂತಾ ಹೇಳಿದ್ದಾರೆ. ನಮ್ಮ ಪಾರ್ಟಿಯ ಅನೇಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ಪಾದಯಾತ್ರೆ ಸಂದರ್ಭ ಅನೇಕರ ಮೇಲೆ ಕೇಸ್ ಹಾಕಿದ್ರು ನಾವೇನು ಹೆದರಿಕೊಂಡ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇದು ಇಲ್ಲಿಗೆ ನಿಲ್ಲಲಿದೆ ಎಂದುಕೊಂಡಿದ್ದೇನೆ ಅಂತಾ ಹೇಳಿದ್ರು.

ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಘಟನೆ ಬಗ್ಗೆ ಸೂಕ್ತ ತನಿಖೆ, ಸಿಎಂ ಬಸವರಾಜ ಬೊಮ್ಮಾಯಿ ಆದೇಶ

ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಆಕ್ರೋಶ

ಇದೇ ವೇಳೆ ಡಿಕೆಶಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ. ಅವನ್ಯಾರೋ ಎಂಪಿ ಮಹಾನುಭಾವ ತೇಜಸ್ವಿ ಸೂರ್ಯ ಕಾಂಗ್ರೆಸ್ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಅಂತಾನೆ. ಅವನಿಗೆ ನಮ್ಮ ಹುಡುಗರು ಕಲ್ಲು ಗಿಫ್ಟ್ ಕೊಟ್ರು. ಕಲ್ಲಿನ ಜೊತೆ ಹೂವನ್ನು ಕೂಡ ಹಾಕಿ ಗಿಫ್ಟ್ ಕೊಟ್ಟಿದ್ದಾರೆ. ಅವರ ಮೇಲೆ ಕೇಸ್ ರಿಜಿಸ್ಟರ್ ಮಾಡಿಸಿಬಿಟ್ಟಿದ್ದಾರೆ. ಇದು ನಿಮ್ಮ ಸಂಸ್ಕೃತಿ ಅಂತಾ ಹೇಳಿದ್ರು.

ಸಿದ್ದರಾಮಯ್ಯ ಜೀವಭಯ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿ, ಇದು ಸತ್ಯಾ ಅಲ್ವಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿಯವರನ್ನೆ ಗುಂಡಿಕ್ಕಿ ಕೊಂದಿಲ್ವಾ? ಇತಿಹಾಸ ತಿರುಚಲಿಕ್ಕೆ ಸಾಧ್ಯನಾ? ನಾನು ನೇರವಾಗಿ ಹೇಳ್ತಿದ್ದೀನಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬದುಕಿದ್ದಾರೆ ಅಂತಾ ಹೇಳಿದ್ರು.
Published by:Thara Kemmara
First published: