ನೀವು ಯಡಿಯೂರಪ್ಪ ಪರ ಬ್ಯಾಟಿಂಗ್ ಮುಂದುವರೆಸಿ, ನನ್ನ ಬೆಂಬಲವೂ ಇದೆ; ಯತ್ನಾಳ್​ ಕಾಲೆಳೆದ ಸಿದ್ದರಾಮಯ್ಯ

ನಾನೇನೂ ನಿಮ್ಮನ್ನು ಬಿಜೆಪಿಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಿಲ್ಲ. ಬಿಜೆಪಿಯಿಂದ ನನ್ನನ್ನು ಹೊರಗೆ ಹಾಕಿದರೂ ಪರವಾಗಿಲ್ಲ ಎಂದು ನೀವೇ ಬಹಿರಂಗ ಹೇಳಿಕೆ ನೀಡಿದ್ದು ಮರೆತುಹೋಯಿತಾ? ನೀವು ಯಡಿಯೂರಪ್ಪನವರ ಪರವಾಗಿ ಬ್ಯಾಟಿಂಗ್ ಮುಂದುವರೆಸಿಕೊಂಡು ಹೋಗಿ ಎಂದು ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಿದ್ದರಾಮಯ್ಯ ತಮಾಷೆ ಮಾಡಿದ್ದಾರೆ.

Sushma Chakre | news18-kannada
Updated:October 12, 2019, 3:22 PM IST
ನೀವು ಯಡಿಯೂರಪ್ಪ ಪರ ಬ್ಯಾಟಿಂಗ್ ಮುಂದುವರೆಸಿ, ನನ್ನ ಬೆಂಬಲವೂ ಇದೆ; ಯತ್ನಾಳ್​ ಕಾಲೆಳೆದ ಸಿದ್ದರಾಮಯ್ಯ
ಸಿದ್ದರಾಮಯ್ಯ- ಬಸನಗೌಡ ಪಾಟೀಲ್ ಯತ್ನಾಳ್
  • Share this:
ಬೆಂಗಳೂರು (ಅ. 12): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ನೆರೆ ಪರಿಹಾರ ಬಿಡುಗಡೆಯಾಗದ ಬಗ್ಗೆ ಈ ಹಿಂದೆ ಬಹಿರಂಗ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದರು. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರ ಬಗ್ಗೆ ವಾಗ್ದಾಳಿ ನಡೆಸಿದ್ದ ಯತ್ನಾಳ್​, ಸಿಎಂ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಲು ಇಬ್ಬರು ಕೇಂದ್ರ ಸಚಿವರು ಹೊಂಚುಹಾಕಿದ್ದಾರೆ ಎಂದು ಹೇಳಿದ್ದರು. ಪಕ್ಷದ ವಿರುದ್ಧ ಮಾತನಾಡಿದ್ದ ಅವರಿಗೆ ಬಿಜೆಪಿಯಿಂದ ಶೋಕಾಸ್​ ನೋಟೀಸ್ ಕೂಡ ಜಾರಿಯಾಗಿತ್ತು. ಆ ಬಗ್ಗೆ ಇಂದು ಸದನದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ ಯತ್ನಾಳ್ ಅವರ ಕಾಲೆಳೆದ ಸ್ವಾರಸ್ಯಕರ ಘಟನೆ ನಡೆದಿದೆ.

ಯತ್ನಾಳ್​ ಈ ಸದನದ ಹಿರಿಯ ಸದಸ್ಯರು. ಅವರಿಗೆ ನಾನು ಬಹಳ ಗೌರವ ಕೊಡುತ್ತೇನೆ. ಅವರು ಮಾತು ಮುಂದುವರೆಸು ಎಂದರೆ ನಾನು ಮುಂದುವರೆಯುತ್ತೇನೆ ಎಂದು ತಮಾಷೆ ಮಾಡಿದ ಸಿದ್ದರಾಮಯ್ಯನವರಿಗೆ ಯತ್ನಾಳ್​ ಮಾತು ಮುಂದುವರೆಸುವಂತೆ ಕೋರಿದರು. 'ನಿಮ್ಮ ಆಲೋಚನೆಗಳೆಲ್ಲ ಎಡಪಂಥಿಯಾದುದು, ಆದರೆ, ನೀವು ಬಲಪಂಥೀಯ ಪಕ್ಷದಲ್ಲಿದ್ದೀರಿ. ರೈಟ್ ಮ್ಯಾನ್​ ಇನ್​ ರಾಂಗ್ ಪಾರ್ಟಿ. ನಿಮ್ಮ ನಿಲುವುಗಳಿಗೆ ನಾನು ಬಹಳ ಖುಷಿ ಪಡುತ್ತೇನೆ' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಿದ್ದರಾಮಯ್ಯ ಗೇಲಿ ಮಾಡಿದರು.

ಸ್ಪೀಕರ್ ಕಾಗೇರಿ ಟೀಚರ್ ಅಲ್ಲ ನಾವು ಪ್ರೈಮರಿ ಸ್ಕೂಲ್ ಮಕ್ಕಳೂ ಅಲ್ಲ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ಅದಕ್ಕೆ ತಮಾಷೆಯಾಗಿಯೇ ಉತ್ತರ ನೀಡಿದ ಯತ್ನಾಳ್​, ನೀವು ಈ ರೀತಿ ಹೇಳಿ ಹೇಳಿ ನನ್ನನ್ನು ಆದಷ್ಟು ಬೇಗ ಬಿಜೆಪಿಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತೀರಿ. ಹೀಗಾಗಿ, ನಿಮ್ಮ ಹೊಗಳಿಕೆಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದಾಗ ಸದನದಲ್ಲಿ ನಗುವಿನಲೆ ಮೂಡಿತು.

ಬಿಜೆಪಿಯಿಂದ ನನ್ನನ್ನು ಹೊರಗೆ ಹಾಕಿದರೂ ಪರವಾಗಿಲ್ಲ ಎಂದು ನೀವೇ ಬಹಿರಂಗ ಹೇಳಿಕೆ ನೀಡಿದ್ದು ಮರೆತುಹೋಯಿತಾ? ನಾನೇನೂ ನಿಮ್ಮನ್ನು ಹೊರಗೆ ಹಾಕಲು ಪ್ರಯತ್ನಿಸುತ್ತಿಲ್ಲ. ಅದಕ್ಕೆ ಪ್ರಚೋದನೆಯನ್ನೂ ಕೊಡೋದಿಲ್ಲ. ನೀವು ಯಡಿಯೂರಪ್ಪನವರ ಪರವಾಗಿ ಸಾಕಷ್ಟು ಬಾರಿ ಬ್ಯಾಟಿಂಗ್ ಮಾಡಿದ್ದೀರಿ. ಅದನ್ನೇ ಮುಂದುವರೆಸಿಕೊಂಡು ಹೋಗಿ. ನಾನು ಅದಕ್ಕೆ ಅಡ್ಡಬರುವುದಿಲ್ಲ. ನಿಮ್ಮ ಬ್ಯಾಟಿಂಗ್​ಗೆ ನನ್ನದೂ ಬೆಂಬಲವಿದೆ ಎಂದು ಸಿದ್ದರಾಮಯ್ಯ ಮತ್ತೆ ಯತ್ನಾಳ್ ಅವರನ್ನು ಕೆಣಕಿದರು.

 

First published: October 12, 2019, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading