ಜೂನ್ 16 ರಿಂದ 18 ವರೆಗೆ ನಡೆದಿದ್ದ CET ಪರೀಕ್ಷೆಯ ಫಲಿತಾಂಶ (CET Results 2022) ಇಂದು ಪ್ರಕಟವಾಗಿದೆ. ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 2,16,559 ವಿದ್ಯಾರ್ಥಿಗಳು (Students) ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 2,10,829 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. CBSC ಫಲಿತಾಂಶ (CBSC Results) ಬಾರದ ಹಿನ್ನೆಲೆ ಸಿಇಟಿ ಫಲಿತಾಂಶ ತಡ ಮಾಡಲಾಗಿತ್ತು. ಇಂದು ಬೆಳಗ್ಗೆ 10 ಗಂಟೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ (Minister CN Ashwarth Narayan) ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದರು. ಇಂಜಿನಿಯರಿಂಗ್ ಮೊದಲ 10 ಟಾಪ್ ವಿದ್ಯಾರ್ಥಿಗಳ ಪೈಕಿ 9 ಜನ ಬೆಂಗಳೂರಿನವರಾಗಿದ್ದಾರೆ ಎಂಬುವುದು ವಿಶೇಷ.
ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಹುಡುಗರೇ ಟಾಪರ್ ಆಗಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲಿಗೆ ಹುಡುಗಿಯರನ್ನ ಹಿಂದಿಕ್ಕಿ ಫಲಿತಾಂಶದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.ಒಟ್ಟು 2,10,829 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರು ಆಗಿದ್ದರು. ಈ ಪೈಕಿ 1,01,990 ವಿದ್ಯಾರ್ಥಿ, 1,08,839 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದ ಹುಡುಗಿಯರ ಸಂಖ್ಯೆ ಜಾಸ್ತಿಯಿದ್ದರೂ ಟಾಪರ್ ತೆಗೆದುಕೊಂಡವರು ಮಾತ್ರ ಹುಡುಗರು.
ಈ ಬಾರಿಯ ಸಿಇಟಿ ಫಲಿತಾಂಶದಲ್ಲಿ CBSC ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಬಹುತೇಕ ಎಲ್ಲಾ ವಿಭಾಗದ ಟಾಪ್ 3 ವಿದ್ಯಾರ್ಥಿಗಳಿಗೆ CBSC ವಿಭಾಗದವರಾಗಿದ್ದಾರೆ. 174568 ಅಭ್ಯರ್ಥಿಗಳು ಬಿ.ಫಾಮ್೯ ಕೋರ್ಸ್‌ಗೆ ಮತ್ತು ಫಾರ್ಮ-ಡಿ ಕೋರ್ಸಿಗೆ ಅರ್ಹತೆ ಪಡೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮ್ಯಾಥ್ಸ್ ಗೆ 5, ಫಿಸಿಕ್ಸ್ಗೆ 1, ಕೆಮಿಸ್ಟ್ರಿ ಗೆ 1 ಗ್ರೇಸ್ ಮಾರ್ಕ್ ನೀಡಲಾಗಿದೆ.
ಟಾಪ್ 5 ವಿದ್ಯಾರ್ಥಿಗಳ ಪಟ್ಟಿ ಹೀಗಿದೆ
ಇಂಜಿನಿಯರಿಂಗ್ ವಿಭಾಗ:
1.ಅಪೂರ್ವ ಥಂಡನ್; ಶೇ.98.611, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ, ಬೆಂಗಳೂರು
2.ಸಿದ್ಧಾರ್ಥ್ ಸಿಂಗ್: ಶೇ.98.334, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು .
3.ಎ ವೆಂಕಟ್ ಮಾಧವ್: ಶೇ.97.22, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
4.ಶಿಶಿರ್ ಆರ್.ಕೆ.: ಶೇ.97.945, ನಾರಾಯಣ್ ಇ ಟೆಕ್ನೋ ಸ್ಕೂಲ್ ವಿದ್ಯಾರಣ್ಯಪುರ ಬೆಂಗಳೂರು
5.ವಿಶಾಲ್ ಬೈಸಾನಿ: ಶೇ.97.5, ಮಹೇಶ್ ಪಿಯು ಕಾಲೇಜ್ ಚಾಮರಾಜಪೇಟೆ ಬೆಂಗಳೂರು
ಇದನ್ನೂ ಓದಿ: Siddaramaiah: ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎಂದವರನ್ನು ಯಾವ ದೇವರೂ ಕ್ಷಮಿಸಲಾರ -ಬಹಿರಂಗ ಪತ್ರದಲ್ಲಿ ಸಿದ್ದರಾಮಯ್ಯ ಆಕ್ರೋಶ
BNYS ವಿಭಾಗ
1.ಹೃಷಿಕೇಶ್ ನಾಗಭೂಷನ್: ಶೇ 99.167, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಬೆಂಗಳೂರು
2.ವರ್ಜೇಶ್ ವಿ ಶೆಟ್ಟಿ: ಶೇ. 98.334 ಮಾಧವ್ ಕೃಪಾ ಇಂಗ್ಲಿಷ್ ಸ್ಕೂಲ್ ಬೆಂಗಳೂರು
3.ಕೃಷ್ಣ ಎಸ್ಆರ್: ಶೇ.98, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
4.ವೃಶಾನ್ ವಿ ಶೆಟ್ಟಿ: ಶೇ.98, ಮಾಧವ್ ಕೃಪಾ ಇಂಗ್ಲಿಷ್ ಸ್ಕೂಲ್ ಬೆಂಗಳೂರು
5.ವಿಶಾಲ್ ಬಿ: ಶೇ.97.556, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
ಬಿಎಸ್ಸಿ ಅಗ್ರಿಕಲ್ಚರ್ ವಿಭಾಗ
1.ಅರ್ಜುನ್ ರವಿಶಂಕರ್: ಶೇ.96.292, ಹೆಚ್ಎಎಲ್ ಪಬ್ಲಿಕ್ ಸ್ಕೂಲ್ ಬೆಂಗಳೂರು
2.ಸುಮೀತ್ ಎಸ್ ಪಾಟೀಲ್: ಶೇ.96.209, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
3.ಸುದೀಪ್ ವೈ ಎಂ: ಶೇ.96.125, ವಿದ್ಯಾನಿಕೇತನ ಪಿಯು ಕಾಲೇಜ್ ತುಮಕೂರು
4.ಹಿತೇಶ್ ಲಕ್ಷ್ಮಿಕಾಂತ್: ಶೇ.96.042, ದೆಹಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು
5.ಮನೋಜ್ ಎನ್: ಶೇ.95.375, ಆಳ್ವಾಸ ಪಿಯು ಕಾಲೇಜ್ ಮೂಡಬಿದರೆ, ಮಂಗಳೂರು
ಪಶು ವೈದ್ಯಕೀಯ ವಿಜ್ಞಾನ (veterinary Science)
1.ಹೃಷಿಕೇಶ್ ನಾಗಭೂಷಣ್; ಶೇ.98.333, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಬೆಂಗಳೂರು
2.ಮನೀಶ್ ಎಸ್ಎ: ಶೇ.97.22, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
3.ಶುಭಾ ಕೌಶಿಕ್: ಶೇ.96.667, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
4.ಕೃಷ್ಣ ಎಸ್ ಆರ್: ಶೇ.96.667, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
5.ವೃಶಾಲ್ ವಿ ಶೆಟ್ಟಿ: 96.667, ಮಾಧವ್ ಕೃಪಾ ಇಂಗ್ಲಿಷ್ ಸ್ಕೂಲ್ ಬೆಂಗಳೂರು
ಇದನ್ನೂ ಓದಿ: Mangaluru Rains: ಮತ್ತೆ ಮಂಗಳೂರಿನಲ್ಲಿ ಮಳೆ ಆರಂಭ; ಹೊಳೆಯಂತಾದ ರಾಷ್ಟ್ರೀಯ ಹೆದ್ದಾರಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ
ಬಿ ಫಾರ್ಮಾ ವಿಭಾಗ
1.ಶಿಶಿರ್ ಆರ್.ಕೆ; ಶೇ.98.889, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
2.ಹೃಷಿಕೇಶ್ ನಾಗಭೂಷಣ್; ಶೇ.98.333, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಬೆಂಗಳೂರು
3.ಅಪೂರ್ವ ಥಂಡನ್: ಶೇ.97.222, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ, ಬೆಂಗಳೂರು
4.ಎ.ವೆಂಕಟ್ ಮಾಧವ್; ಶೇ.97.222, ನಾರಾಯಣ್ ಇ ಟೆಕ್ನೋ ಸ್ಕೂಲ್ ವಿದ್ಯಾರಣ್ಯಪುರ ಬೆಂಗಳೂರು
5.ಮನೀಶ್ ಎಸ್ ಎ : ಶೇ.97.222, , ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ, ಬೆಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ