KCET Results 2020: ಸಿಇಟಿ ಫಲಿತಾಂಶ ಆಗಸ್ಟ್‌ 21ಕ್ಕೆ ಮುಂದೂಡಿಕೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ

Karnataka CET Results 2020 Date: ಮುಂದಿನ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಫಲಿತಾಂಶವನ್ನು ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಮಾಹಿತಿ ನೀಡಿದೆ. ಶುಕ್ರವಾರ ಬೆಳಿಗ್ಗೆ 11ಕ್ಕೆ ಪತ್ರಿಕಾಗೋಷ್ಠಿ ಇರುತ್ತದೆ. ತದನಂತರ ಫಲಿತಾಂಶವನ್ನು ಹೊರ ಬೀಳಲಿದೆ ಎಂದು ತಿಳಿದುಬಂದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • News18
  • Last Updated :
  • Share this:
ಬೆಂಗಳೂರು (ಆಗಸ್ಟ್‌ 19); ತಾಂತ್ರಿಕ ಕಾರಣಗಳಿಂದಾಗಿ ಗುರುವಾರ ಪ್ರಕಟವಾಗಬೇಕಾಗಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರಕ್ಕೆ ಅಂದರೆ ಆಗಸ್ಟ್ 21ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಮುಂದಿನ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಫಲಿತಾಂಶವನ್ನು ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಮಾಹಿತಿ ನೀಡಿದೆ. ಶುಕ್ರವಾರ ಬೆಳಿಗ್ಗೆ 11ಕ್ಕೆ ಪತ್ರಿಕಾಗೋಷ್ಠಿ ಇರುತ್ತದೆ. ತದನಂತರ ಫಲಿತಾಂಶವನ್ನು ಹೊರ ಬೀಳಲಿದೆ ಎಂದು ತಿಳಿದುಬಂದಿದೆ.

ಕೊರೋನಾ ಆತಂಕದ ನಡುವೆಯೇ ಎಸ್​ಎಸ್​ಎಲ್​ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ರಾಜ್ಯ ಸರ್ಕಾರ, ಇದೇ ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆಯನ್ನೂ ಯಶಸ್ವಿಯಾಗಿ ನಡೆಸಿತ್ತು. ಈ ಮೂಲಕ ಕೊರೋನಾ ಬಿಕ್ಕಟ್ಟಿನ ನಡುವೆಯೂ ದೇಶದಲ್ಲೇ ಮೊದಲ ಬಾರಿಗೆ ಸಿಇಟಿ ಆರಂಭಿಸಿದ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು

ರಾಜ್ಯದಲ್ಲಿ ಒಟ್ಟು 127 ಸ್ಥಳಗಳ 497 ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೀಗಾಗಿ ಈ ಎಲ್ಲಾ ವಿದ್ಯಾರ್ಥಿಗಳ ಅದೃಷ್ಟ ಮುಂದಿನ ಶುಕ್ರವಾರ ತಿಳಿಯಲಿದೆ. ಈಗಾಗಲೇ ಮೌಲ್ಯಪಾಪನದ ಕೆಲಸಗಳು ಮುಗಿದಿದ್ದು ಶುಕ್ರವಾರ ಫಲಿತಾಂಶ ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಈ ಕೆಳಗಿನ‌ ಲಿಂಕ್ ನಲ್ಲಿ ಸಿಇಟಿ ಫಲಿತಾಂಶ ಲಭ್ಯವಾಗಲಿದೆ.

http://karresults.nic.in
Published by:MAshok Kumar
First published: