KCET Exam 2021 Registration: ಇಂದಿನಿಂದ ಸಿಇಟಿ​ ಪರೀಕ್ಷೆಗೆ ನೊಂದಣಿ ಪ್ರಾರಂಭ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಸಿಇಟಿ ಪರೀಕ್ಷೆಯನ್ನು 2 ಶಿಫ್ಟ್​​​ನಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ 10.30-11.50 ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ಪರೀಕ್ಷೆ ನಡೆಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತದಲ್ಲಿ ಪ್ರತೀ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್​​ ಕೋರ್ಸ್​​ಗೆ ಸೇರಲು ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾರೆ. ಅವುಗಳಲ್ಲಿ ಕೆಲವು ನ್ಯಾಷನಲ್ ಎಕ್ಸಾಂಗಳಾದರೆ, ಇನ್ನು ಕೆಲವು ರಾಜ್ಯ ಮಟ್ಟದ ಪರೀಕ್ಷೆಗಳಾಗಿರುತ್ತವೆ. ಕರ್ನಾಟಕ ಕೂಡ ಎಂಜಿನಿಯರಿಂಗ್​ ಕೋರ್ಸ್​ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದಿನಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ-Karnataka Common Entrance Test -KCET)ಗೆ ನೊಂದಣಿ ಪ್ರಾರಂಭಿಸಿದೆ. ರಾಜ್ಯದ ಸಂಸ್ಥೆಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್​​ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಅಧಿಕೃತ ಪೋರ್ಟಲ್​​ನಲ್ಲಿ ಸಿಇಟಿಗೆ ಜೂನ್​ 15ರಿಂದ ಅರ್ಜಿ ಸಲ್ಲಿಸಬಹುದಾಗಿದೆ.  2021ರ ಸಿಇಟಿ​ ಪರೀಕ್ಷೆ ಆಗಸ್ಟ್​ 28 ಮತ್ತು 29ರಂದು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇಂಜಿನಿಯರಿಂಗ್, ಯೋಗಾ, ನ್ಯಾಚುರೋಪರಿ, ಬಿಫಾರ್ಮ್, ಫಾರ್ಮಾ ಡಿ, ಫಾರ್ಮ್ ಸೈನ್ಸ್ & ವೆಟರ್ನರಿ ಈ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದು.  ಜೂ 15ರ ಮಧ್ಯಾಹ್ನ 12 ಗಂಟೆಯಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಇಂದಿನಿಂದ ಜು.10ರ ಸಂಜೆ 5:30ರವರೆಗೆ ಅರ್ಜಿ ಸಲ್ಲಿಸಬಹುದು.  kea.kar.nic.in ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.  ಜು.13ರಂದು ಶುಲ್ಕ ಪಾವತಿಗೆ ಕೊನೆ ದಿನವಾಗಿದೆ. ಸ್ಪೆಷಲ್ ಕ್ಯಾಟಗರಿ ಒರಿಜಿನಲ್ ಸರ್ಟಿಫಿಕೇಟ್ಸ್ ಸಲ್ಲಿಸಲು ಜು.14 ರಿಂದ ಜು.20ರವರೆಗೆ ಅವಕಾಶವಿದೆ.
  ಅಪ್ಲಿಕೇಷನ್ ತಿದ್ದುಪಡಿ ಮಾಡಲು ಜು.19 ರಿಂದ ಜು.22ರವರೆಗೆ ಅವಕಾಶ ನೀಡಲಾಗಿದೆ.

  ಶುಲ್ಕ ಕಟ್ಟಿದವರಿಗೆ ಮಾತ್ರ ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ ಇರುತ್ತದೆ. ಆ.13ರ ಬೆಳಗ್ಗೆ 11 ಗಂಟೆಯಿಂದ ಅಡ್ಮಿಷನ್ ಟಿಕೆಟ್‌ ಡೌನ್‌ ಲೋಡ್ ಮಾಡಿಕೊಳ್ಳಬಹುದು.  ಮೆಡಿಕಲ್, ಡೆಂಟಲ್, ಆಯುರ್ವೇದ, ಯುನಾನಿ, ಹೋಮಿಯೋಪತಿ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ಅವಕಾಶವಿದೆ. ಆರ್ಕಿಟೆಕ್ಚರ್ ಕೋರ್ಸ್ ಅಡ್ಮಿಷನ್ ಗೆ NATA ಅಥವಾ JWEE ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು,

  ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 750 ರೂ.ಗಳನ್ನು ನೊಂದಣಿ ಶುಲ್ಕವನ್ನಾಗಿ ಕಟ್ಟಬೇಕು. ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಜೂನ್​ 8ರಂದೇ KCET -2021ರ ಪರೀಕ್ಷಾ ದಿನಾಂಕವನ್ನು ಘೋಷಿಸಿದ್ದರು. ಅಧಿಕೃತ ಘೋಷಣೆ ಪ್ರಕಾರ, ಕರ್ನಾಟಕದ ಸಿಇಟಿ ಪರೀಕ್ಷೆ ಇದೇ ಆಗಸ್ಟ್​ 28, 29 ಮತ್ತು 30ರಂದು ನಡೆಯಲಿದೆ. ರಾಜ್ಯಾದ್ಯಂತ ಸುಮಾರು 500 ಪರೀಕ್ಷಾ ಕೇಂದ್ರಗಳಿವೆ.

  ಇದನ್ನೂ ಓದಿ:Karnataka Weather Today: ಮಲೆನಾಡು, ಕರಾವಳಿಯಲ್ಲಿ ಮಳೆಯ ಆರ್ಭಟ; ಇನ್ನು 3 ದಿನ ಆರೆಂಜ್ ಅಲರ್ಟ್​

  ಕೆಸೆಟ್​​ಗೆ ಅರ್ಜಿ ಸಲ್ಲಿಸುವುದು ಹೇಗೆ?

  ಹಂತ 1: ಮೊದಲು KCET 2021 ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

  ಹಂತ 2: KCET 2021ರ ಹೋಂ ಪೇಜ್​ಗೆ ಹೋದ ಬಳಿಕ, ನ್ಯೂ ಯೂಸರ್​ ಟ್ಯಾಬ್​ ಮೇಲೆ ಕ್ಲಿಕ್​ ಮಾಡಬೇಕು. ಅಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ಹೆಸರನ್ನು ನೊಂದಾಯಿಸಬೇಕು.

  ಹಂತ 3: KCET 2021 ಅಪ್ಲಿಕೇಶನ್ ನಂಬರ್ ಮತ್ತು ಯೂಸರ್ ಐಡಿಯನ್ನು ನಿಮ್ಮ ರಿಜಿಸ್ಟರ್ಡ್​ ಇ-ಮೇಲ್​ ಐಡಿ ಮತ್ತು ಮೊಬೈಲ್​ ನಂಬರ್​ಗೆ ಕಳುಹಿಸಲಾಗುತ್ತದೆ.

  ಹಂತ 4: ಈಗ KCET 2021 ಅಪ್ಲಿಕೇಶನ್ ಫಾರ್ಮ್​ನ್ನು ಪ್ರೊಸೀಡ್ ಮಾಡಿ, ಜೊತೆಗೆ ಅಲ್ಲಿ ಕೇಳಲಾಗಿರುವ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ ಮತ್ತು ವಿಳಾಸದಂತಹ ಎಲ್ಲಾ ಕಡ್ಡಾಯ ವಿವರಗಳನ್ನು ಭರ್ತಿ ಮಾಡಬೇಕು.

  ಹಂತ 5: ಮುಂದೆ ನಿಮ್ಮ ಇತ್ತೀಚಿನ ಪಾಸ್​ಪೋರ್ಟ್​ ಸೈಜಿನ ಫೋಟೋ, ಸಹಿ, ಐಡಿ ಪ್ರೂಫ್​ ಮತ್ತು ಎಜುಕೇಷನಲ್ ಸರ್ಟಿಫಿಕೇಟ್​​​​ಗಳನ್ನು ನಿರ್ದಿಷ್ಟ ಫಾರ್ಮ್ಯಾಟ್​ ಮತ್ತು ಸೈಜಿನಲ್ಲಿ ಅಪ್​​​​​​ಲೋಡ್ ಮಾಡಬೇಕು.

  ಹಂತ 6: ಅರ್ಜಿ ಶುಲ್ಕವನ್ನು ಆನ್​ಲೈನ್​ ಅಥವಾ ಆಫ್​​ಲೈನಲ್ಲಿ ಪಾವತಿಸಬೇಕು(ನೆಟ್​ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್​/ಡೆಬಿಟ್ ಕಾರ್ಡ್​). ಅಭ್ಯರ್ಥಿಗಳು ಆಫ್​​ಲೈನ್​ನಲ್ಲಿ ಕೂಡ ಶುಲ್ಕವ ಪಾವತಿಸಬಹುದಾಗಿದೆ. ಅವರು -ಚಲನ್​ನನ್ನು ಡೌನ್​ಲೋಡ್ ಮಾಡಿಕೊಂಡು, ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಅಥವಾ ಐಸಿಐಸಿಐ ಬ್ಯಾಂಕ್​​ನಲ್ಲಿ ಶುಲ್ಕ ಕಟ್ಟಬಹುದು.

  ಹಂತ 7: ಇದೆಲ್ಲಾ ಆದ ಬಳಿಕ ಅಪ್ಲಿಕೇಶನ್ ಕಾಪಿಯನ್ನು ಸೇವ್ ಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ನಿಮಗೆ ಉಪಯೋಗಕ್ಕೆ ಬರಬಹುದು.

  ಹೆಚ್ಚಿನ ಮಾಹಿತಿಗಾಗಿ CET 2021 ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದಾಗಿದೆ. ಸಿಇಟಿ ಪರೀಕ್ಷೆಯನ್ನು 2 ಶಿಫ್ಟ್​​​ನಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ 10.30-11.50 ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಆಗಸ್ಟ್​ 28ರಂದು ಬೆಳಗ್ಗೆ ಮೊದಲು ಬಯಾಲಜಿ ವಿಷಯಕ್ಕೆ ಪರೀಕ್ಷೆ ನಡೆಸಲಾಗುತ್ತದೆ. ಕೊನೆಯಲ್ಲಿ ಗಡಿನಾಡು ಮತ್ತು ಹೊರನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಪರೀಕ್ಷೆ ಇರುತ್ತದೆ.
  Published by:Latha CG
  First published: