KCET 2022 ನೋಂದಣಿ ಶುರು; ವಿದ್ಯಾರ್ಥಿಗಳೇ ಹೀಗೆ ಅರ್ಜಿ ಸಲ್ಲಿಸಿ

KEA ಬಿಡುಗಡೆ ಮಾಡಿದ ಅಧಿಕೃತ ವೇಳಾಪಟ್ಟಿಯ ಪ್ರಕಾರ KCET 2022 ಜೂನ್ 16, 17 ಮತ್ತು 18 2022 ರಂದು ನಡೆಯಲಿದೆ.

ವಿದ್ಯಾರ್ಥಿಗಳು

ವಿದ್ಯಾರ್ಥಿಗಳು

  • Share this:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KCET 2022) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022 ರ ನೋಂದಣಿಯನ್ನು ಏಪ್ರಿಲ್ 12 ಮಂಗಳವಾರದಿಂದ ಪ್ರಾರಂಭಿಸಲು ಸಿದ್ಧವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು KCET ಯ ಅಧಿಕೃತ ವೆಬ್‌ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಇಂದಿನಿಂದಲೇ (ಏಪ್ರಿಲ್  12) ತಮ್ಮ KCET ಅರ್ಜಿ ನಮೂನೆಯನ್ನು ವೆಬ್​ಸೈಟ್​ನಲ್ಲಿ ಭರ್ತಿ ಮಾಡಬಹುದಾಗಿದೆ. ಪರೀಕ್ಷೆಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.   ಅಧಿಕೃತ ಸೂಚನೆಯ ಪ್ರಕಾರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಿಗದಿಪಡಿಸಿದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮವನ್ನು ಆಧರಿಸಿರುತ್ತದೆ.

KCET 2022: ಪರೀಕ್ಷೆ ಯಾವತ್ತು ನಡೆಯಲಿದೆ?
KEA ಬಿಡುಗಡೆ ಮಾಡಿದ ಅಧಿಕೃತ ವೇಳಾಪಟ್ಟಿಯ ಪ್ರಕಾರ KCET 2022 16, 17 ಮತ್ತು 18 ಜೂನ್ 2022 ರಂದು ನಡೆಯಲಿದೆ. ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳನ್ನು ಜೂನ್ 16 ರಂದು ಗುರುವಾರ ನಡೆಸಲಾಗುತ್ತದೆ. ಅದರ ನಂತರ ಜೂನ್ 17 ಶುಕ್ರವಾರದಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳು ನಡೆಯಲಿವೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಕನ್ನಡ ಭಾಷಾ ಪರೀಕ್ಷೆ ಜೂನ್ 18 ರಂದು ನಡೆಯಲಿದೆ. ವಿದ್ಯಾರ್ಥಿಗಳು cetonline.karnataka.gov.in ಅಥವಾ kea.kar.nic.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

KCET 2022: ಪರೀಕ್ಷೆಯ ದಿನಾಂಕ
KEA ಬಿಡುಗಡೆ ಮಾಡಿದ ಅಧಿಕೃತ ವೇಳಾಪಟ್ಟಿಯ ಪ್ರಕಾರ, KCET 2022 ಜೂನ್ 16, 17 ಮತ್ತು 18 2022 ರಂದು ನಡೆಯಲಿದೆ.

ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳನ್ನು ಜೂನ್ 16 ರಂದು ಗುರುವಾರ ನಡೆಯಲಿದೆ. ಅದರ ನಂತರ ಜೂನ್ 17 ಶುಕ್ರವಾರದಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳು ನಡೆಯಲಿವೆ. ಕನ್ನಡ ಭಾಷಾ ಪರೀಕ್ಷೆಯನ್ನು ಜೂನ್ 18 ರಂದು ನಡೆಸಲಾಗುವುದು.

KCET ಅಥವಾ ಕರ್ನಾಟಕ UGCET ಇಂಜಿನಿಯರಿಂಗ್, ಫಾರ್ಮಸಿ ಮತ್ತು ಇತರ ಕೆಲವು ಪದವಿಪೂರ್ವ ಮಟ್ಟದ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಕನ್ನಡ ಭಾಷಾ ಪರೀಕ್ಷೆ ಜೂನ್ 18 ರಂದು ನಡೆಯಲಿದೆ.

KCET 2022 ನೋಂದಣಿ: ಅರ್ಜಿ ಸಲ್ಲಿಸುವುದು ಹೇಗೆ

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ — ಇಲ್ಲಿ ಕ್ಲಿಕ್ ಮಾಡಿ

ಹಂತ 2: ಮುಖಪುಟದಲ್ಲಿ, "ಕರ್ನಾಟಕ CET ಅಪ್ಲಿಕೇಶನ್" ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.

ಇದನ್ನೂ ಓದಿ: ಜೂನ್ ತಿಂಗಳಲ್ಲಿ UGC NET ಪರೀಕ್ಷೆ; ಅಧಿಕೃತ ಘೋಷಣೆಯ ವಿವರ ಇಲ್ಲಿದೆ

ಹಂತ 4: ನೋಂದಣಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.

ಹಂತ 5: ಭವಿಷ್ಯಕ್ಕಾಗಿ ನೋಂದಣಿ ಫಾರ್ಮ್ ಅನ್ನು ಉಳಿಸಿ ಮತ್ತು ಡೌನ್‌ಲೋಡ್ ಮಾಡಬಹುದು.

ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು?
2021 ರಲ್ಲಿ ಕೆಸಿಇಟಿ ಆಗಸ್ಟ್ 28 ಮತ್ತು ಆಗಸ್ಟ್ 30, 2021 ರ ನಡುವೆ ನಡೆಯಿತು. ಒಟ್ಟು 2,01,816 ಅಭ್ಯರ್ಥಿಗಳು ಕರ್ನಾಟಕ ಸಿಇಟಿಗೆ ನೋಂದಾಯಿಸಿದ್ದಾರೆ. ಬೆಂಗಳೂರಿನ 86 ಕೇಂದ್ರಗಳಲ್ಲಿ ಮತ್ತು ರಾಜ್ಯ ರಾಜಧಾನಿಯ ಹೊರಗೆ 444 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: PM Modi: ಪ್ರಧಾನಿ ಮೋದಿಗೇ ನಿಮ್ಮ ಸಮಸ್ಯೆ ಹೇಳ್ಕೊಳ್ಳೋಕೆ ಹೀಗ್ ಮಾಡಿ

ಪರೀಕ್ಷೆಗೆ ಹಾಜರಾದ 1,93,447 ರಲ್ಲಿ 1,83,231 ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಮೈಸೂರಿನ ವಿದ್ಯಾರ್ಥಿನಿ ಹೆಚ್ ಕೆ ಮೇಘನ್ ಕಳೆದ ವರ್ಷ ಕೆಸಿಇಟಿಯಲ್ಲಿ ಇಂಜಿನಿಯರಿಂಗ್ ಸೇರಿದಂತೆ ಐದೂ ವಿಭಾಗಗಳಲ್ಲಿ ಅಗ್ರ ರ‍್ಯಾಂಕ್ ಪಡೆದು ದಾಖಲೆ ನಿರ್ಮಿಸಿದ್ದರು.

ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಅಂತಿಮ ಪುಟದ ಮುದ್ರಣವನ್ನು ತೆಗೆದುಕೊಳ್ಳಿ.

KCET 2022 ಅನ್ನು ಜೂನ್ 16, 17 ಮತ್ತು 18 ರಂದು ನಡೆಸಲಾಗುವುದು.
Published by:guruganesh bhat
First published: