ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ: ಕೆ.ಸಿ. ವೇಣುಗೋಪಾಲ ಕಿಡಿ

ಸಂವಿಧಾನದ ತತ್ವಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ತಿಕ್ಕಲಾಗುತ್ತಿದೆ.  ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

Latha CG | news18
Updated:July 19, 2019, 2:19 PM IST
ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ: ಕೆ.ಸಿ. ವೇಣುಗೋಪಾಲ ಕಿಡಿ
ಕೆ.ಸಿ ವೇಣುಗೋಪಾಲ್​​
  • News18
  • Last Updated: July 19, 2019, 2:19 PM IST
  • Share this:
ನವದೆಹಲಿ,(ಜು.19): ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ.  ರಾಜಭವನ ಬಿಜೆಪಿಯ ಕಚೇರಿಯಾಗಿದೆ ಎಂದು  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲ ವಜುಬಾಯ್​ ವಾಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯಪಾಲರು ಬಿಜೆಪಿ ಏಜೆಂಟ್‌ರಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಏನು ಅಧಿಕಾರ ಇದೆ? ಎಂದು ಪ್ರಶ್ನಿಸಿದರು.

ಸಂವಿಧಾನದ ತತ್ವಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ತಿಕ್ಕಲಾಗುತ್ತಿದೆ.  ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಸದನದಲ್ಲಿ ಸೂಕ್ತ ಪ್ರಶ್ನೆ ಎತ್ತಿದ್ದಾರೆ. ವಿಪ್ ನೀಡುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕನಿಗೆ ಇದೆ. ಶಾಸಕರಿಗೆ ಬರುವಂತೆ ಒತ್ತಡ ಹೇರಬಾರದೆಂದು ಸುಪ್ರೀಂ ಹೇಳಿದೆ. ಈ ಬಗ್ಗೆ ಸಿದ್ದರಾಮಯ್ಯ ಸ್ಪೀಕರ್ ಬಳಿ ಸ್ಪಷ್ಟನೆ ಕೇಳಿದ್ದರು. ಶಾಸಕರಿಗೆ ವಿಪ್ ನೀಡುವ ಅಧಿಕಾರ ನನಗೆ ಇದೆಯಾ ಇಲ್ವಾ ಎಂದು ಕೇಳಿದ್ದರು ಎಂದರು.

ಮೈತ್ರಿಸರ್ಕಾರದಿಂದ ಸುಪ್ರೀಂ ಕೋರ್ಟ್​ಗೆ 4 ಅರ್ಜಿಗಳ ಸಲ್ಲಿಕೆ; ರಾಜ್ಯಪಾಲರ ನಿರ್ದೇಶನಕ್ಕೆ ತಡೆ ತರಲು ಪ್ರಯತ್ನ

10ನೇ ಶೆಡ್ಯೂಲ್ ಜಾರಿಯಾದರೆ ಶಾಸಕರೂ ಆಗಿರಲ್ಲ, ಸಚಿವರೂ ಆಗಿರಲ್ಲ. 10ನೇ ಶೆಡ್ಯೂಲ್ ಬಗ್ಗೆ ಅವರಿಗೆ ಅರಿವಿರಬೇಕಲ್ವಾ? ಎಂದು ಕಿಡಿಕಾರಿದರು. ಬಿಜೆಪಿಯ ಈ ಎಲ್ಲಾ ಆಟದಲ್ಲೂ ಕೇಂದ್ರದ ಕೈವಾಡವಿದೆ ಎಂದು ಕೆ.ಸಿ. ವೇಣುಗೋಪಾಲ್ ಆರೋಪಿಸಿದರು.

ಈ ಸಂಬಂಧ ಸುಪ್ರೀಂಕೋರ್ಟ್​ಗೆ ಹೋಗುತ್ತೇವೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ.  ಸಿಎಂ ವಿಶ್ವಾಸಮತ ಸಾಬೀತು ಮಾಡುತ್ತೇವೆ ಎಂದಿದ್ದಾರೆ. ಸದನದಲ್ಲಿ ಚರ್ಚೆ ಮಾಡಿ ವಿಶ್ವಾಸಮತ ಸಾಬೀತುಪಡಿಸುತ್ತಾರೆ ಎಂದರು.
First published: July 19, 2019, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading