ಪರಮೇಶ್ವರ್​ ಪತ್ರಕ್ಕೆ ವೇಣುಗೋಪಾಲ್​ ಸಿಡಿಮಿಡಿ; ಕೆಪಿಸಿಸಿ ಅಧ್ಯಕ್ಷ ಗಾದಿಯ ಟೆನ್ಷನ್ ಹೆಚ್ಚಳ

ಧ್ಯಕ್ಷ, ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿದೆ. ಯಾರಿಗೆ ಹುದ್ದೆ ಕೊಡಬೇಕೆಂಬುದು ಪಕ್ಷದ ಆಂತರಿಕ ವಿಷಯ. ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಪಕ್ಷದ ಆಂತರಿಕ ವಿಷಯ ಬಹಿರಂಗವಾಗಿ ಚರ್ಚಿಸಬಾರದು

news18-kannada
Updated:January 20, 2020, 4:59 PM IST
ಪರಮೇಶ್ವರ್​ ಪತ್ರಕ್ಕೆ ವೇಣುಗೋಪಾಲ್​ ಸಿಡಿಮಿಡಿ; ಕೆಪಿಸಿಸಿ ಅಧ್ಯಕ್ಷ ಗಾದಿಯ ಟೆನ್ಷನ್ ಹೆಚ್ಚಳ
ಪರಮೇಶ್ವರ್​- ಕೆಸಿ ವೇಣುಗೋಪಾಲ್​
  • Share this:
ನವದೆಹಲಿ(ಜ. 20): ರಾಜ್ಯದ ಸ್ಥಿತಿಗತಿ ಅರಿತಿರುವ ಕಾಂಗ್ರೆಸ್​ ಹೈ ಕಮಾಂಡ್​​ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಇದೇ ಉದ್ದೇಶದಿಂದ ಈ ಕಾರ್ಯ ವಿಳಂಬವಾಗುತ್ತಿದ್ದು, ಅಧ್ಯಕ್ಷರ ನೇಮಕಕ್ಕೆ ಇನ್ನೂ ಅಳೆದು ತೂಗುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. 

ಈ ಮಧ್ಯೆ ಈ ಕಾರ್ಯ ವಿಳಂಬದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್​, ಡಿಕೆ ಶಿವಕುಮಾರ್​ ಪರ ವಕಾಲತ್ತು ವಹಿಸಿ, ಹೈ ಕಮಾಂಡ್​ಗೆ ಪತ್ರ ಬರೆದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಕ್ಕಿಂತ ಅಧ್ಯಕ್ಷರ ನೇಮಕದ ಜಾರೂರತ್ತು ಇದ್ದು, ಸಾಮಾಜಿಕ ನ್ಯಾಯದ ಮೇಲೆ ಈ ಆಯ್ಕೆ ನಡೆಯಬೇಕು ಎಂದು ಆಗ್ರಹಿಸಿ ಹೈ ಕಮಾಂಡ್​ಗೆ ಇಮೇಲ್​ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿರುವ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್, ಅಧ್ಯಕ್ಷ, ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿದೆ. ಯಾರಿಗೆ ಹುದ್ದೆ ಕೊಡಬೇಕೆಂಬುದು ಪಕ್ಷದ ಆಂತರಿಕ ವಿಷಯ. ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಪಕ್ಷದ ಆಂತರಿಕ ವಿಷಯ ಬಹಿರಂಗವಾಗಿ ಚರ್ಚಿಸಬಾರದು ಎಂದು ಕಿಡಿಕಾರಿದ್ದಾರೆ.

ಅಧ್ಯಕ್ಷಗಿರಿ ಆಯ್ಕೆಯಲ್ಲಿ ಇನ್ನು ಹೈ ಕಮಾಂಡ್​ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಲೇ ಇದೆ ಎನ್ನುವ ಮೂಲಕ ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎಂದು ಕೂಡ ಇದೇ ವೇಳೆ ತಿಳಿಸಿದ್ದಾರೆ.

ಕುತೂಹಲ ಮೂಡಿಸುತ್ತಿರುವ  ನಡೆ

ಡಿಕೆ ಶಿವಕುಮಾರ್​ ಇನ್ನೇನು ಕೆಪಿಸಿಸಿ ಸಾರಥ್ಯ ವಹಿಸುವುದು ಪಕ್ಕಾ ಎನ್ನುವ ಸಮಯದಲ್ಲಿ ಮತ್ತೆ ಈ ವಿಚಾರದಲ್ಲಿ ಹೈ ಕಮಾಂಡ್​ ಗೊಂದಲಕ್ಕೆ ಒಳಗಾಗಿದೆ. ಇದರಿಂದ ಈ ಹುದ್ದೆ ಆಕಾಂಕ್ಷಿಯಾಗಿದ್ದ ಡಿಕೆ ಶಿವಕುಮಾರ್​ಗೂ ಬೇಸರ ಮೂಡಿದೆ. ಕಾಂಗ್ರೆಸ್​ ಸ್ಥಾನಮಾನದ ಬಗ್ಗೆ ನನಗೆ ಏನು ಕೇಳಬೇಡಿ. ಈ ಕುರಿತು ಯಾರು ಯಾರೋ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲವನ್ನು ನಾನು ಗಮನಿಸಿದ್ದೇನೆ. ನಾನು ಯಾವ ಗುಂಪಿಗೂ ಸೇರುವುದಿಲ್ಲ. ಯಾರು ಯಾವ ಬಣ ಮಾಡಿಕೊಂಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇದನ್ನು ಓದಿ: ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಯಲ್ಲಿ ನಂಬಿಕೆಯಿಟ್ಟವನು ನಾನು; ಡಿಕೆ ಶಿವಕುಮಾರ್ಇನ್ನು ಸಿದ್ದರಾಮಯ್ಯ ಬಣ ಕಾಂಗ್ರೆಸ್​ ಹಿರಿಯ ನಾಯಕರ ಮೂಲಕ ಎಂಬಿ ಪಾಟೀಲ್​ ಪರ ಬ್ಯಾಟಿಂಗ್​ ನಡೆಸಿದೆ. ಈ ಕುರಿತು ಮಾತನಾಡಿದ ಎಂಬಿ ಪಾಟೀಲ್​, ನಾನು ಯಾವುದೇ ಲಾಬಿ ಮಾಡಿಲ್ಲ. ಹುದ್ದೆ ನೀಡಿದರೆ ನಿಭಾಯಿಸುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ