ಕೋಲಾರ(ಮೇ.18): ಜಿಲ್ಲೆಯ ಪಾಲಿಗೆ ವರದಾನವಾಗಿರುವ, ಮಹಾತ್ವಾಕಾಂಕ್ಷಿ ನೀರಾವರಿ ಯೋಜನೆ, ಕೆ.ಸಿ ವ್ಯಾಲಿ ಯೋಜನೆ (KC Valley Project) ಮೂಲಕ ಕೋಲಾರ (Kolar) ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ಬೆಂಗಳೂರಿನ (Bengaluru) ಕೊಳಚೆ ನೀರನ್ನ (Polluted Water) ಎರಡು ಹಂತದಲ್ಲಿ ಸಂಸ್ಕರಿಸಿ ಬಳಿಕ, ಕೋಲಾರಕ್ಕೆ ಪೈಪ್ ಲೈನ್ ಮೂಲಕ ಲಕ್ಷ್ಮೀಸಾಗರ ಕೆರೆಗೆ ನೀರನ್ನ ಹರಿಸಲಾಗುತ್ತಿದೆ. ಆದರೆ ಇತ್ತೀಚೆಗೆ ನೀರಲ್ಲಿ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ (Chemical) ಮಿಶ್ರಿತ ನೊರೆ ಕಂಡು ಬಂದಿತ್ತು, ಇದೀಗ ಕೆರೆಯಲ್ಲಿನ ಮೀನುಗಳು ಸಾವನ್ನಪ್ಪಿದೆ. ಹೀಗಾಗಿ 1400 ಕೋಟಿ ವೆಚ್ಚದ ಕೆ.ಸಿ ವ್ಯಾಲಿ ಯೋಜನೆ ವಿರುದ್ದ ಮತ್ತೊಮ್ಮೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಮೀನುಗಳ ಸಾವು
ಲಕ್ಷ್ಮೀ ಸಾಗರ ಕೆರೆಯಲ್ಲಿ ಮೀನುಗಳ ಮಾರಣಹೋಮ ಆಗಿದ್ದು, ಮೀನುಗಳ ಸಾವಿಂದ ಲಕ್ಷ್ಮೀಸಾಗರ ಕೆರೆ ನೀರು ಗಬ್ಬು ನಾರುತ್ತಿದೆ. ಸಣ್ಣ ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿದ್ದು ಗ್ರಾಮಸ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾಳಜಿ ವಹಿಸಿದ ಸಣ್ಣ ನೀರಾವರಿ ಇಲಾಖೆಯ ಕೆ.ಸಿ ವ್ಯಾಲಿ ಯೋಜನೆಯ ವಿಭಾಗದ ಹಿರಿಯ ಅಧಿಕಾರಿ ಕೃಷ್ಣ ಅವರು , ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು, ಭಾರತೀಯ ವಿಜ್ಞಾನ ಸಂಸ್ತೆಯ ತಜ್ಞರು ತಂಡದಿಂದ ನೀರಿನ ಗುಣಮಟ್ಟವನ್ನ ಪರೀಕ್ಷೆ ನಡೆಸಿದ್ದಾರೆ.
ಅಧಿಕಾರಿಗಳಿಂದ ಪರಿಶೀಲನೆ
ಸ್ಥಳಕ್ಕೆ ಕೋಲಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಭೇಟಿ ನೀಡಿದ್ದು ಲಕ್ಷ್ಮೀಸಾಗರ ಕೆರೆಯ ಡಿ,ಸಿ ಪಾಯಿಂಟ್ ಬಳಿ ನೀರಿನ ಮಾದರಿಯನ್ನ ಸಂಗ್ರಹಿಸಿ, ಲ್ಯಾಬ್ ಗೆ ರವಾನಿಸಿದ್ದಾರೆ, ಇನ್ನು ಇಂಡಿಯನ್ ಭಾರತೀಯ ವಿಜ್ಞಾನ ಸಂಸ್ತೆಯ ತಜ್ಞರು, ನೀರಿನ ಮಾದರಿಯನ್ನ ಸಂಗ್ರಹಿಸಿ ವೈಜ್ಞಾನಿಕ ವರದಿ ನೀಡಿದ್ದಾರೆ.
ಸಂಸ್ಕರಿಸಿದ ನೀರು ಗುಣಮಟ್ಟದಿಂದ ಕೂಡಿದೆ - ತಜ್ಞರ ತಂಡದಿಂದ ಮಾಹಿತಿ
ಬೆಂಗಳೂರು ನಗರದ ಕೊಳಚೆ ನೀರನ್ನ ಎರಡು ಹಂತದಲ್ಲಿ ಸಂಸ್ಕರಿಸಿ ಕೋಲಾರಕ್ಕೆ ಹರಿಸುತ್ತಿದ್ದು, ತಜ್ಞರ ಮಾನದಂಡಗಳ ಪ್ರಕಾರ ನೀರಿನ ಟಿ,ಡಿ,ಎಸ್, ಡಿ,ಒ, ಹಾಗು ಪಿ,ಎಚ್ ವಿಭಾಗದಲ್ಲು ಸಂಸ್ಕರಿಸಿದ ನೀರಲ್ಲಿ ಉತ್ತಮ ಗುಣಮಟ್ಟವಿದೆ ಎಂದು ತಜ್ಞರು ವರದಿ ನೀಡಿದ್ದಾರೆ, ಈ ಬಗ್ಗೆ ಮಾತನಾಡಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕೆರೆಯಲ್ಲಿ ಮೀನುಗಳ ಸಾವನ್ನಪ್ಪಲು ಕೆ,ಸಿ ವ್ಯಾಲಿ ನೀರು ಕಾರಣವಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Heavy Rain: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ತತ್ತರಿಸಿದ ಬೆಂಗಳೂರು! ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಇನ್ನು ಇದೇ ವೇಳೆ ಮಾತನಾಡಿದ ಕೆ,ಸಿ ವ್ಯಾಲಿ ಯೋಜನೆಯ ಜೂನಿಯರ್ ಇಂಜಿನಿಯರ್ ಶಶಿ ಕುಮಾರ್, ಸಂಸ್ಕರಿಸಿದ ನೀರಿಂದ ಜೀವ ಸಂಕುಲಕ್ಕೆ ಯಾವುದೇ ಸಮಸ್ಯೆಯಿಲ್ಲ, ಪ್ರತಿದಿನ ಆನ್ ಲೈನ್ ಮಾನಿಟರಿಂಗ್ ನಡೆಸಿಯೇ ನೀರನ್ನ ಹರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂತರ್ಜಲ ಮಟ್ಟ ವೃದ್ದಿ
ಒಟ್ಟಿನಲ್ಲಿ ಕೆ.ಸಿ ವ್ಯಾಲಿ ಯೋಜನೆ ಮೂಲಕ ಕೆರೆಗಳಿಗೆ ನಿರಂತರವಾಗಿ ನೀರು ಹರಿಯುತ್ತಿರುವ ಕಾರಣ, ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ದಿಯಾಗುತ್ತಿದೆ, ಆದರೆ ನೀರನ್ನ ನೇರವಾಗಿ ಬಳಸದಂತೆ ಸಣ್ಣ ನೀರಾವರಿ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: Karinjeshwara Temple: ಮತ್ತೆ ಕುಸಿಯುವ ಭೀತಿಯಲ್ಲಿ 1,000 ವರ್ಷ ಹಳೆಯ ಕಾರಿಂಜೇಶ್ವರ ಕ್ಷೇತ್ರ
ಈ ಮಧ್ಯೆ ನೀರನ್ನ ಮೂರನೇ ಹಂತದಲ್ಲಿ ಶುದ್ದೀಕರಿಸಿ ಹರಿಸುವಂತೆ ಜಿಲ್ಲೆಯ ನೀರಾವರಿ ಹೋರಾಟಗಾರರು, ರೈತ ಮುಖಂಡರು ಆಗ್ರಹಿಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಣ್ಣ ನೀರಾವರಿ ಇಲಾಖೆ ಸಚಿವ ಮಾದುಸ್ವಾಮಿ ಮೂರನೇ ಹಂತದ ಶುದ್ದೀಕರಣ ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ