Yaragola Dam: ಅರ್ಧ ಟಿಎಂಸಿ ಕುಡಿಯುವ ನೀರಿನ ಬಳಕೆಯ ಮೇಲೆ ಕಾರ್ಮೋಡ; ಯಾರಗೋಳ ಡ್ಯಾಂಗೆ  ಕೊಳಚೆ ನೀರು ಸೇರ್ಪಡೆ

ಕೆಸಿ ವ್ಯಾಲಿ ಯೋಜನೆಯಿಂದ ಯರಗೋಳ ಡ್ಯಾಂ ಗೆ ನೀರು ಹೇಗೆ ಹರಿದಿದೆ ಎಂಬುದರ ಬಗ್ಗೆ ಸ್ಥಳದಿಂದ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ.

ಯರಗೋಳ ಜಲಾಶಯ

ಯರಗೋಳ ಜಲಾಶಯ

  • Share this:
ಕೋಲಾರ ಜಿಲ್ಲೆಯ ಮೊದಲ ಜಲಾಶಯ ಯರಗೋಳ ಯೋಜನೆಗಾಗಿ (Yaragola Dam) 318 ಕೋಟಿ ವೆಚ್ಚವನ್ನ ಸರ್ಕಾರ ಖರ್ಚು ಮಾಡಿದೆ. ಕುಡಿಯುವ ನೀರನ್ನು (Drinking Water) ಪೂರೈಸುವ ಉದ್ದೇಶಕ್ಕಾಗಿ ಯೋಜನೆಯನ್ನ ಜಾರಿ ಮಾಡಲಾಗಿದೆ. ಆದರೆ  ಸರ್ಕಾರದಿಂದಲೇ (Government) ಯೋಜನೆಯನ್ನ  ಮೂಲೆಗುಂಪು ಮಾಡುತ್ತಿರುವ ಗಂಭೀರವಾದ ಆರೋಪವು ಕೇಳಿಬಂದಿದೆ. ಯರಗೋಳ ಜಲಾಶಯಕ್ಕೆ ಬೆಂಗಳೂರಿನ ಸಂಸ್ಕರಿಸಿದ ಕೆ.ಸಿ ವ್ಯಾಲಿ ಯೋಜನೆಯ (KC Valley Project) ನೀರು ಹರಿದು ಮಿಶ್ರಣಗೊಂಡಿದೆ. ಬೆಂಗಳೂರಿನ ಕೊಳಚೆ ನೀರನ್ನ ಶುದ್ಧೀಕರಿಸಿ ಕೋಲಾರಕ್ಕೆ (Kolar) ಹರಿಸುವ ಕೆ.ಸಿ ವ್ಯಾಲಿ ಯೋಜನೆಯಿಂದ ಈಗಾಗಲೇ ಹಲವು ಕೆರೆಗಳು ತುಂಬಿ ಕೋಡಿ ಹರಿದಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ (Rainfall) ಕೆರೆಗಳ ಒಳಹರಿವು ಹೆಚ್ಚಾಗಿ ಬಹುತೇಕ ಎಲ್ಲಾ ಕೆರೆಗಳು ತುಂಬಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಗಳು ತುಂಬಿ ಕೋಡಿ ಹರಿದಿದೆ. ಇದೀಗ ಕುಡಿಯುವ ನೀರಿ‌ನ ಜಲಾಶಯ್ಕೂ  ಕೆಸಿ ವ್ಯಾಲಿ ನೀರು (KC Valley Water) ಮಿಶ್ರಣವಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಅರ್ಧ ಟಿಎಂಸಿ ನೀರಿನ ಬಳಕೆ ಹೇಗೆ? 

ಕೋಲಾರ  ಜಿಲ್ಲೆಯ ಪಾಲಿಗೆ ಕೆ.ಸಿ. ವ್ಯಾಲಿ ಯೋಜನೆಯು ಮಹತ್ವಾಕಾಂಕ್ಷೆ ಉದ್ದೇಶವನ್ನ ಹೊಂದಿದೆ. ದೇಶದ ಮೊದಲ ಸಂಸ್ಕರಿಸಿದ ನೀರು ಮರುಬಳಕೆ ಯೋಜನೆ ಇದಾಗಿದ್ದು, ಕೆಸಿ ವ್ಯಾಲಿ ನೀರನ್ನ ಕೇವಲ ಅಂತರ್ಜಲ ಮಟ್ಟ ವೃದ್ಧಿಗೆ ನೀಡುವುದಾಗಿ ಸರ್ಕಾರವೂ ಸ್ಪಷ್ಟನೆ ನೀಡಿದೆ.

ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಕೆರೆಗಳು ಹಾಗೂ ಕಾಲುವೆಗಳ ಪಕ್ಕದ ಬೋರ್​ವೆಲ್​ಗಳು ಈಗಾಗಲೇ ಮರಳಿ ಕೆಲಸ ಮಾಡುತ್ತಿವೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕೆಸಿ ಯೋಜನೆಯ ನೀರು. ಆದರೆ ಇಷ್ಟೆಲ್ಲಾ ಮಹತ್ವಾಕಾಂಕ್ಷೆಯ ಯೋಜನೆಯ ನೀರು ಯರಗೋಳ ಡ್ಯಾಂ ಸೇರಿದೆ ಎಂದು ತಿಳಿದು ಬಂದಿದೆ.

KC Valley canal chemicla water mixed in yaragola dam rrk mrq
ಯರಗೋಳ ಜಲಾಶಯ


ಸಾರ್ವಜನಿಕರು ಹಾಗೂ ರಾಜಕಾರಣಿಗಳು ಈ ಬಗ್ಗೆ ಆರೋಪಿಸಿದ್ದರು. ಆದರೆ ಕೆಸಿ ವ್ಯಾಲಿ ನೀರನ್ನ ಕುಡಿಯುವ ಕೆರೆಗಳಿಗೆ ಹರಿಸಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ.  ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಳೆದ 15 ದಿನಗಳಿಂದ ಯರಗೋಳ ಡ್ಯಾಂ ತುಂಬಿ ಕೋಡಿ ಹರಿಯುತ್ತಿದೆ. ಯರಗೋಳ ಡ್ಯಾಂ ನಲ್ಲಿ ಈಗಿನ 550 ಎಂಸಿಎಫ್​ಟಿ ಸಾಮರ್ಥ್ಯದ ನೀರಿನ ಬಳೆಕೆ ಮುಂದೇನು ಎನ್ನುವ ಪ್ರಶ್ನೆ ಮುಂದಿದೆ.

ರಾಸಾಯನಿಕ ಮಿಶ್ರಿತ ಕೆಸಿ ವ್ಯಾಲಿ ನೀರು ಸೇರ್ಪಡೆ

318 ಕೋಟಿ ವೆಚ್ಚದಲ್ಲಿ ಕೋಲಾರ, ಮಾಲೂರು, ಬಂಗಾರಪೇಟೆ ನಗರ ಸೇರಿ 45 ಹಳ್ಳಿಗೆ ಕುಡಿಯುವ ನೀರು ಪೂರೈಸುವ ಯರಗೋಳ ಯೋಜನೆ ಇದಾಗಿದೆ. ಮಳೆಯಾಶ್ರಿತ ನೀರನ್ನ ಶೇಖರಿಸಿಸುವ ಡ್ಯಾಂಗೆ, ಇದೀಗ  ರಾಸಾಯನಿಕ ಮಿಶ್ರಿತ ಕೆಸಿ ವ್ಯಾಲಿ ನೀರು ಸೇರಿಕೊಂಡಿದೆ.

ಕೆಸಿ ವ್ಯಾಲಿ ನೀರಲ್ಲಿ ರಾಸಾಯನಿಕ ಮಿಶ್ರಿತ ಅಂಶಗಳಿರುವ ಹಿನ್ನೆಲೆ ಕೇವಲ ಅಂತರ್ಜಲ ಮಟ್ಟ ವೃದ್ಧಿಗೆ ನೀರು ಬಳಸೋದಾಗಿ ಸುಪ್ರೀಂಕೋರ್ಟ್ ಗೆ ಅಫಿಡವಿಟ್  ರಾಜ್ಯ ಸರ್ಕಾರಕ್ಕೆ ನೀಡಿದೆ.

ಇದೀಗ ಕುಡಿಯುವ ನೀರಿನ ಯೋಜನೆಯಲ್ಲಿ ಕೆಸಿ ವ್ಯಾಲಿ ನೀರು ಮಿಶ್ರಿತ ಹಿನ್ನೆಲೆ ಬಳಕೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಕೆಸಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ,

ನ್ಯೂಸ್ 18  ಕನ್ನಡ ರಿಯಾಲಿಟಿ ಚೆಕ್

ಕೆಸಿ ವ್ಯಾಲಿ ಯೋಜನೆಯಿಂದ ಯರಗೋಳ ಡ್ಯಾಂ ಗೆ ನೀರು ಹೇಗೆ ಹರಿದಿದೆ ಎಂಬುದರ ಬಗ್ಗೆ ಸ್ಥಳದಿಂದ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ.

KC Valley canal chemicla water mixed in yaragola dam rrk mrq
ಯರಗೋಳ ಜಲಾಶಯ


ಮೊದಲು ವಕ್ಕಲೇರಿ ಗ್ರಾಮದ ಬಸವನಕೆರೆಯಿಂದ 6 ಕೆರೆಗಳು ತುಂಬಿ ಭರ್ತಿಯಾಗಿ ಮಾರ್ಕಂಡೇಯ ಡ್ಯಾಂಗೆ ಕೆಸಿ ವ್ಯಾಲಿ ನೀರು ಹರಿದಿದೆ. ಮಾಲೂರಿನ ಶೆಟ್ಟಿಹಳ್ಳಿ ಗ್ರಾಮದ ಕೆರೆ ಹಾಗೂ ದೊಡ್ಡ ಕಾಲುವೆ ಸ್ಥಳದಿಂದಲೂ  ರಿಯಾಲಿಟಿ ಚೆಕ್ ನಡೆಸಲಾಗಿದೆ. ಮಾರ್ಕಂಡೇಯ ಡ್ಯಾಂನಿಂದ 20 ಕಿಲೋ ಮೀಟರ್ ಮಾರ್ಗದ ಕಾಲುವೆ ಮೂಲಕ ಕೆಸಿ ವ್ಯಾಲಿ ನೀರು ಸಂಚರಿಸಿ ಯರಗೋಳ ಡ್ಯಾಂ ಪ್ರವೇಶಿಸಿದೆ‌.

ನೀರಿನ ಬಳಕೆ ವಿಚಾರಕ್ಕೆ ತಜ್ಞರ ತಂಡ ನೇಮಕ

ಶುದ್ಧ ಕುಡಿಯುವ ನೀರಿನ ಡ್ಯಾಂನಲ್ಲಿ ಕೆಸಿ ವ್ಯಾಲಿ ನೀರು ಹರಿದು ಮಿಶ್ರಣಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ಮುನಿರತ್ನ, ಮಳೆ ಹೆಚ್ಚಾಗಿ ನೀರು ಹರಿದಾಗ ಕೆಸಿ ವ್ಯಾಲಿ ನೀರು ಹೋಗಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಡ್ಯಾಂನಲ್ಲಿನ ನೀರಿನ ಶುದ್ಧೀಕರಣ ಕುರಿತು ತಜ್ಞರ ತಂಡ ನೇಮಿಸುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೆ ಚರ್ಚೆ ಮಾಡುವುದಾಗಿ ತಿಳಿಸಿದರು.
Published by:Mahmadrafik K
First published: