ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಕೆ.ಸಿ. ರಾಮಮೂರ್ತಿ ರಾಜ್ಯಸಭೆಗೆ ಅವಿರೋಧ ಆಯ್ಕೆ ಖಚಿತ?

ಒಂದು ನಾಮಪತ್ರಕ್ಕೆ ಕನಿಷ್ಠ 10 ಶಾಸಕರು ಸೂಚಕರಾಗುವ ಅಗತ್ಯವಿದೆ. ಆದರೆ, ಪದ್ಮರಾಜನ್ ಮತ್ತು ವೆಂಕಟೇಶ್ವರ ಸ್ವಾಮೀಜಿ ಅವರಿಗೆ ಯಾವ ಶಾಸಕರೂ ಸೂಚಕರಾಗಿ ಸಹಿ ಹಾಕಿಲ್ಲ. ನಾಳೆ ನಾಮಪತ್ರಗಳ ಪರಿಶೀಲನೆಯಾಗಲಿದ್ದು, ಈ ಇಬ್ಬರೂ ಪಕ್ಷೇತರರ ನಾಮಪತ್ರ ತಿರಸ್ಕೃತವಾಗುವ ನಿರೀಕ್ಷೆ ಇದೆ.

news18
Updated:December 2, 2019, 3:51 PM IST
ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಕೆ.ಸಿ. ರಾಮಮೂರ್ತಿ ರಾಜ್ಯಸಭೆಗೆ ಅವಿರೋಧ ಆಯ್ಕೆ ಖಚಿತ?
ಸಾಂದರ್ಭಿಕ ಚಿತ್ರ
  • News18
  • Last Updated: December 2, 2019, 3:51 PM IST
  • Share this:
ಬೆಂಗಳೂರು(ಡಿ. 02): ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದಿರುವ ಕೆ.ಸಿ. ರಾಮಮೂರ್ತಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಡಿ. 12ರಂದು ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇವತ್ತು ಮಧ್ಯಾಹ್ನ 3 ಗಂಟೆಯವರೆಗೆ ಸಮಯಾವಕಾಶವಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಯಾವ ಅಭ್ಯರ್ಥಿಯನ್ನೂ ಕಣಕ್ಕಿಳಿಸಲಾಗಿಲ್ಲ. ಇಬ್ಬರು ಪಕ್ಷೇತರರ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆನ್ನಲಾಗಿದೆ.

ಬಿಜೆಪಿಯಿಂದ ಕೆ.ಸಿ. ರಾಮಮೂರ್ತಿ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ತಮಿಳುನಾಡು ಮೂಲದ ಡಾ| ಕೆ. ಪದ್ಮರಾಜನ್ ಮತ್ತು ವಿಜಯಪುರದ ವೆಂಕಟೇಶ್ವರ ಸ್ವಾಮೀಜಿ (ದೀಪಕ್) ಅವರು ಮಾತ್ರ ಈವರೆಗೆ ನಾಮಪತ್ರ ಸಲ್ಲಿಸಿರುವುದು. ಒಂದು ನಾಮಪತ್ರಕ್ಕೆ ಕನಿಷ್ಠ 10 ಶಾಸಕರು ಸೂಚಕರಾಗುವ ಅಗತ್ಯವಿದೆ. ಆದರೆ, ಪದ್ಮರಾಜನ್ ಮತ್ತು ವೆಂಕಟೇಶ್ವರ ಸ್ವಾಮೀಜಿ ಅವರಿಗೆ ಯಾವ ಶಾಸಕರೂ ಸೂಚಕರಾಗಿ ಸಹಿ ಹಾಕಿಲ್ಲ. ನಾಳೆ ನಾಮಪತ್ರಗಳ ಪರಿಶೀಲನೆಯಾಗಲಿದ್ದು, ಈ ಇಬ್ಬರೂ ಪಕ್ಷೇತರರ ನಾಮಪತ್ರ ತಿರಸ್ಕೃತವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಇದನ್ನೂ ಓದಿ: ಉಪ ಚುನಾವಣೆ; ಅನರ್ಹರ ಕುರಿತು ಜನರ ಮನಸ್ಥಿತಿ ಏನು? ಯಾರಿಗೆ ಸಿಹಿ, ಯಾರಿಗೆ ಕಹಿ? ಏನಾಗಲಿದೆ ಫಲಿತಾಂಶ? ಇಲ್ಲಿದೆ ಡೀಟೈಲ್ಸ್​

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂಬ ಸುದ್ದಿ ಕೆಲ ದಿನಗಳ ಹಿಂದೆ ಇತ್ತು. ಆದರೆ, ಗೆಲ್ಲಲು ಅಗತ್ಯವಿರುವಷ್ಟು ಸಂಖ್ಯಾಬಲ ಇಲ್ಲದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ನಿರ್ಧಾರ ಕೈಬಿಟ್ಟಿತು ಎಂದು ಮೂಲಗಳು ಹೇಳಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 2, 2019, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading