ಜಾರ್ಜ್ ಹೆಸರಲ್ಲಿ ಕಾವೇರಿ ಬಂಗಲೆ, ಸಿದ್ದರಾಮಯ್ಯ ವಾಸ ಮುಂದುವರಿಕೆ: ‘ಪರಂ’ಗೆ ಪಂಗನಾಮ

news18
Updated:July 12, 2018, 9:42 PM IST
ಜಾರ್ಜ್ ಹೆಸರಲ್ಲಿ ಕಾವೇರಿ ಬಂಗಲೆ, ಸಿದ್ದರಾಮಯ್ಯ ವಾಸ ಮುಂದುವರಿಕೆ: ‘ಪರಂ’ಗೆ ಪಂಗನಾಮ
news18
Updated: July 12, 2018, 9:42 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 12): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾವೇರಿಯಲ್ಲಿ ತಮ್ಮ ವಾಸವನ್ನು ಮುಂದುವರಿಸಿದ್ಧಾರೆ. ಕಾವೇರಿ ಬಂಗಲೆಯನ್ನು ತಮಗೆ ನೀಡಬೇಕೆಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಮುಖ್ಯಮಂತ್ರಿ ಹೆಚ್ಡಿಕೆ ಬಳಿ ಬೇಡಿಕೆಯಿಟ್ಟಿದ್ದರು. ಆದರೀಗ ಸಚಿವ ಜಾರ್ಜ್​​ಗೆ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ವಾಸ ಮುಂದುವರಿಸಿದ್ಧಾರೆ ಎನ್ನಲಾಗಿದೆ.

ಕಾವೇರಿ ಬಂಗಲೆಯನ್ನು ಹೆಚ್​ಡಿಕೆ ಬಳಿ ಬೇಡಿಕೆಯಿಟ್ಟ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿದು ಬಂದಿದೆ. ಹೀಗಾಗಿ ಆಪ್ತ ಸಚಿವ ಜಾರ್ಜ್ ಅವರಿಗೆ ಕಾವೇರಿ ಬಂಗಲೆಯನ್ನು ಮಂಜೂರು ಮಾಡಿಸಿಕೊಳ್ಳುವ ಮೂಲಕ ತಾವು ವಾಸ್ತವ್ಯ ಮುಂದುವರಿಸಿದ್ಧಾರೆ. ಈ ಮೂಲಕ  ಪರಮೇಶ್ವರ್​ ಅವರಿಗೆ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಸಚಿವ ಕೆ.ಜೆ. ಜಾರ್ಜ್​ಗೆ ಶಿವಾನಂದ ಸರ್ಕಲ್​ ಬಳಿ ಹಳೆಯ ಬಂಗಲೆಯಲ್ಲಿಯೇ ಮುಂದುವರಿಯಲಿದೆ. ಹೆಸರಿಗೆ ಮಾತ್ರ ಕಾವೇರಿ ನಿವಾಸವನ್ನು ಜಾರ್ಜ್​ ಮಂಜೂರು ಮಾಡಿಸಿಕೊಂಡಿದ್ದು, ಸಿದ್ದರಾಮಯ್ಯನವರ ವಾಸ್ತವ್ಯಕ್ಕೆ ಬಿಟ್ಟುಕೊಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮೂಲಕ ಅಧಿಕಾರದ ಅವಧಿ ಮುಗಿದರೂ ಕಾವೇರಿಯಲ್ಲಿಯೇ ಸಿದ್ದರಾಮಯ್ಯ ವಾಸ ಮುಂದುವರಿಸಲಿದ್ದಾರೆ.

ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ  ಪಟ್ಟದಿಂದ ಕೆಳಗಿಳಿದರು. ಬಳಿಕ ರೇಸ್​ಕೋರ್ಸ್​ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಗಿದ್ದ ರೇಸ್​ಕೋರ್ಸ್​ ಬಳಿಯ ನಿವಾಸದಲ್ಲಿ ಯಡಿಯೂರಪ್ಪನವರೇ ವಾಸ್ತವ್ಯ ಮುಂದುವರಿಸಿದ್ದರು ಎನ್ನಲಾಗಿದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...