ಕವಳೇಶ್ವರನ ದರ್ಶನಕ್ಕೂ ಅಡ್ಡಿಯಾದ ಮಹಾ‌ಮಳೆ... ಸಂಪರ್ಕ ಕೊಂಡಿಯೇ ಕೊಚ್ಚಿ ಹೋಗಿ ಭಕ್ತರು ಆತಂಕ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಂಬಿಕಾನಗರದ‌ ಕವಳೇಶ್ವರ ದೇವಾಲಯಕ್ಕೆ ತೆರಳುವ ಸೇತುವೆ ಕೊಚ್ಚಿ ಹೋಗಿ ಆತಂಕ...ಶಿವರಾತ್ರಿ ಒಳಗಡೆ ಭಕ್ತರಿಗೆ ಅನುಕೂಲವಾಗುವ ಹಾಗೆ ಸೇತುವೆ ನಿರ್ಮಾಣಕ್ಕೆ ಆಗ್ರಹ 

ಕವಳೇಶ್ವರ ದೇವಾಲಯಕ್ಕೆ ತೆರಳುವ ಸೇತುವೆ

ಕವಳೇಶ್ವರ ದೇವಾಲಯಕ್ಕೆ ತೆರಳುವ ಸೇತುವೆ

  • Share this:
ಕಾರವಾರ: ಉತ್ತರಕನ್ನಡ (Uttara Kannada) ಜಿಲ್ಲೆಯ ಐತಿಹಾಸಿಕ ಪ್ರದೇಶ ದಾಂಡೇಲಿಯ ಕವಳೇಶ್ವರ (Kavaleshwara, Dandeli)ಸಮೀಪ  ಭೂಮಿ ಕುಸಿದಿದ್ದು (Land Slide), ಸೇತುವೆ  ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಭಕ್ತರ ಆತಂಕಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಸುರಿದ ಮಹಾ ಮಳೆ (Rain) ತಂದ ಅವಾಂತರದಲ್ಲಿ ಕವಳೇಶ್ವರನ ದರ್ಶನಕ್ಕೆ ಇದ್ದ ಸಂಪರ್ಕ ಕೊಂಡಿಯೂ ಕಳಚಿದೆ. ಕೂಡಲೇ ಸೇತುವೆ (Bridge) ನಿರ್ಮಾಣ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂಬ ಆಗ್ರಹ ಸ್ಥಳೀಯರದ್ದಾಗಿದೆ. ಬರುವ ಮಾರ್ಚ್ ನಲ್ಲಿ ನಡೆಯುವ ಶಿವರಾತ್ರಿ (Shivaratri) ಮುಂಚಿತವಾಗಿ ಸೇತುವೆ ವ್ಯವಸ್ಥೆ ಮಾಡಿಕೊಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಹಾ‌ಮಳೆ ತಂದ ಆವಾಂತರ...  ಶಿವನ ದರ್ಶನಕ್ಕೂ ಸಂಪರ್ಕ ಕಡಿತಗೊಳಿಸಿದ ಮಳೆ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಪ್ರಸಿದ್ದವಾಗಿರುವ ಕವಳೇಶ್ವರ ಗುಹೆಯನ್ನ ಸಂಪರ್ಕಿಸುವ ಮಾರ್ಗ. ಈ ದೇವಾಲಯಲಕ್ಕೆ ಹಿಂದೆ ಪಾಂಡವರು ಬಂದು ಪೂಜೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ. ನಿಸರ್ಗ ನಿರ್ಮಿತವಾಗಿರುವ ಶಿವಲಿಂಗದ ದರ್ಶನ ಪಡೆಯಲು ದೂರದೂರಿನಿಂದ ಭಕ್ತರು ಆಗಮಿಸ್ತಾರೆ. ಕಳೆದ ಕೆಲ ದಿನಗಳಿಂದ ಇಲ್ಲಿ ಗುಡ್ಡ ಕುಸಿಯುತ್ತಿದೆ.  ಜುಲೈ ಕೊನೆಯ ವಾರದಲ್ಲಿ ಸುರಿದ ಬಾರೀ ಮಳೆಗೆ ಇಲ್ಲಿನ ಪ್ರದೇಶ ಅಕ್ಷರಶಃ ಕುಸಿಯುತ್ತಾ ಸಾಗಿದೆ. ಅಲ್ಲದೇ ಗುಡ್ಡದ ಪಕ್ಕದಲ್ಲಿ ಹರಿಯುತ್ತಿರುವ  ಹೊಳೆಗೆ ನಿರ್ಮಿಸಿದ ಸೇತುವೆ ಕುಸಿದು ಹೋಗಿದೆ.  ಜೊತೆಗೆ ಕವಳೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದ ಮೆಟ್ಟಿಲುಗಳು ಕೂಡ ಹಾಳಾಗಿವೆ. ಶ್ರಾವಣ ಸಂದರ್ಭದಲ್ಲಿ ಭಕ್ತರು ಸೇರಿ ಮರದ ಸೇತುವೆ ಮಾಡಿಕೊಂಡಿದ್ದರು. ಆದ್ರೆ ಮರದ ಸೇತುವೆ ಕೂಡ ನೆರೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಇದೀಗ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಭಕ್ತರ ಆತಂಕಕ್ಕೆ ಕಾರಣವಾಗಿದೆ. ಬರುವ ಮಾರ್ಚ್ ನಲ್ಲಿ ನಡೆಯುವ ಶಿವರಾತ್ರಿ ಮುಂಚಿತವಾಗಿ ಸೇತುವೆ ವ್ಯವಸ್ಥೆ ಮಾಡಿಕೊಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Uttarakhand Flood Photos: ರಣಭೀಕರ ಮಳೆಗೆ ತತ್ತರಿಸಿದ ಉತ್ತರಾಖಂಡ: ನೆರೆಯ ರೌದ್ರಾವತಾರ!

ಬರುವ ಶಿವರಾತ್ರಿ ಒಳಗಡೆ ಸೇತುವೆ ನಿರ್ಮಾಣಕ್ಕೆ ಆಗ್ರಹ

ಜೋಯಿಡಾ ತಾಲೂಕಿನ ದಂಡಕಾರಣ್ಯ ಪ್ರದೇಶದಲ್ಲಿರುವ ಈ ಕವಳೇಶ್ವರ ದೇವಾಳಯ ಪುರಾತನ ನಿಸರ್ಗ ನಿರ್ಮಿತ ದೇವಾಲಯ. ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು (Devotees) ಆಗಮಿಸ್ತಾರೆ. ಅಲ್ಲದೇ  ಅಂಬಿಕಾನಗರದ ಮಾರ್ಗದಿಂದ ಪ್ರತಿನಿತ್ಯ ಸಾಕಷ್ಟು ಸಂಖ್ಯೆ ಪ್ರವಾಸಿಗರು ಮತ್ತು ಅರಣ್ಯ ಇಲಾಖೆಯಿಂದ ಟ್ರಕ್ಕಿಂಗ್ ಅಂತಾ ಜನರ ಬರ್ತಾರೆ.  ಹೀಗಾಗಿ ಇಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ನಾಗರಿಕರು   ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೆಪಿಸಿ ಅವರ  ಸಿಎಸ್ಆರ್ ನಿಧಿ(CSR Fund)ಯಲ್ಲಿ ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಶಿವರಾತ್ರಿ ಬರೋದ್ರಿಂದ ಭಕ್ತರ ಅನುಕೂಲಕ್ಕಾಗಿ ಆದಷ್ಟು ಬೇಗ ಸೇತುವೆ ಮಾಡಿ ಎಂದು ಹೇಳಿದ್ದಾರೆ. ಈ ರಸ್ತೆ ಪಿಡಬ್ಲುಡಿಯವರಿಗೆ ಬರುತ್ತಾ, ಕೆಪಿಸಿ ಅಂಡರ್ ಬರುತ್ತೋ ಎಂದು ನೋಡಿ ರಸ್ತೆ ನಿರ್ಮಿಸುವ ಭರವಸೆಯನ್ನ  ಜಿಲ್ಲಾಧಿಕಾರಿಗಳು ನೀಡಿದ್ದಾರೆ.

ಇದನ್ನೂ ಓದಿ:  Rahul Gandhi ಅಫೀಮ್ ನಲ್ಲಿರ್ತಾರೆ, HDK ರಹಸ್ಯ ನನ್ನ ಬಳಿಯಲ್ಲಿದೆ: ಶಾಸಕ Yatnal

ಇದೀಗ ಕವಳೇಶ್ವರ ದೇವಾಲಯ ಸಂಪರ್ಕಿಸುವ ರಸ್ತೆ ಮಾರ್ಗ ಮತ್ತು ಸೇತುವೆ ಕುಸಿದು ಹೋಗಿದ್ರಿಂದ ಭಕ್ತರಿಗೆ ದೇವಾಲಯ ಸಂಪರ್ಕಿಸಲು ಆಗುತ್ತಿಲ್ಲ. ಅಲ್ಲದೇ ಪ್ರವಾಸಿಗರಿಗೆ ಟ್ರಕ್ಕಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಬಂಧಪಟ್ಟವರು ಐತಿಹಾಸಿಕವಾಗಿರುವ ದೇವಾಲಯಕ್ಕೆ ತೆರಳಲು ಸೇತುವೆ ಮತ್ತು ರಸ್ತೆ ಮಾರ್ಗ ಸರಿಪಡಿಸುವ ಕಾರ್ಯ ಮಾಡಬೇಕಾಗಿದೆ.

ಬೆಂಗಳೂರಿನಲ್ಲಿ ನಿರಂತರ ಮಳೆ:

ಕಳೆದ ಒಂದು ತಿಂಗಳಿನಿಂದ ಬೆಂಗಳೂರು (Bengaluru Rains) ನಗರ ವ್ಯಾಪ್ತಿಯಲ್ಲಿ  ನಿರಂತರವಾಗಿ ಮಳೆಯಾಗುತ್ತಿದೆ.  ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿದಿನದ ಮಳೆಯಿಂದಾಗಿ ಬೆಂಗಳೂರಿಗರು ಬೇಸತ್ತಿದ್ದಾರೆ. ಬೆಂಗಳೂರಿನ ರಸ್ತೆ  ಗುಂಡಿಗಳಿಂದ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು  ಪ್ರಯಾಣಿಸುತ್ತಿದ್ದಾರೆ.
Published by:Mahmadrafik K
First published: