• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚನ್ನಪಟ್ಟಣದಲ್ಲೇ ಬೊಂಬೆ ಉತ್ಪಾದನಾ ಘಟಕ ಸ್ಥಾಪನೆಗೆ ಆಗ್ರಹಿಸಿ ಕ.ಕ.ಜ.ವೇ ಪಾದಯಾತ್ರೆ

ಚನ್ನಪಟ್ಟಣದಲ್ಲೇ ಬೊಂಬೆ ಉತ್ಪಾದನಾ ಘಟಕ ಸ್ಥಾಪನೆಗೆ ಆಗ್ರಹಿಸಿ ಕ.ಕ.ಜ.ವೇ ಪಾದಯಾತ್ರೆ

ಚನ್ನಪಟ್ಟಣದ ಬೊಂಬೆಗಳು

ಚನ್ನಪಟ್ಟಣದ ಬೊಂಬೆಗಳು

ಚನ್ನಪಟ್ಟಣದಲ್ಲಿ 8-9 ಸಾವಿರ ಜನ ಗೊಂಬೆ ತಯಾರಿಕೆ ಮಾಡುವವರಿದ್ದಾರೆ. ಆದರೆ ಈಗ ರಾಜ್ಯಸರ್ಕಾರದ ನಿರ್ಧಾರದಿಂದ ಬೊಂಬೆನಾಡು ಎಂಬ ಖ್ಯಾತಿಗೆ ಧಕ್ಕೆಯಾಗಲಿದೆ.

  • Share this:

ರಾಮನಗರ(ಸೆ.13): ಬೊಂಬೆ ಉತ್ಪನ್ನಗಳಿಗೆ ಪ್ರೋತ್ಸಾಹದ ಜೊತೆಗೆ ಬೊಂಬೆ ತಯಾರಿಸುವ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಬೊಂಬೆ ಉದ್ಯಮಕ್ಕೆ ಅನುಕೂಲವಾಗುವಂತೆ ಚನ್ನಪಟ್ಟಣದಲ್ಲೇ ಉತ್ಪಾದನಾ ಘಟಕ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಸೆ. 24 ಹಾಗೂ 25 ರಂದು ಪಾದಯಾತ್ರೆ ನಡೆಸಲಾಗುವುದು ಎಂದು ರಮೇಶ್ ಗೌಡ ಎಚ್ಚರಿಸಿದ್ದಾರೆ. ರಾಮನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ, ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಭಾರತದ ಅತಿದೊಡ್ಡ ಬೊಂಬೆ ಉದ್ಯಮದ ಬಗ್ಗೆ ಮಾತನಾಡಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ಬೊಂಬೆ ಉತ್ಪಾದನಾ ಘಟಕ ಸ್ಥಾಪನೆ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.


ಮುಂದುವರೆದ ಅವರು, ಕೊಪ್ಪಳದಲ್ಲೂ ಬೊಂಬೆ ಉದ್ಯಮ ಪ್ರಾರಂಭ ಮಾಡಲಿ, ಅದಕ್ಕೆ ನಮ್ಮ ಸ್ವಾಗತ ಇದೆ. ಆದರೆ ವಿಶ್ವದ ಅತ್ಯಂತ ಹಿರಿಯಣ್ಣ ಎಂದು ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ಚನ್ನಪಟ್ಟಣದ ಬೊಂಬೆಗಳು ರಾರಾಜಿಸಿರುವಾಗ  ಬೊಂಬೆ ಉತ್ಪಾದನಾ ಘಟಕವನ್ನು ಚನ್ನಪಟ್ಟಣದಲ್ಲಿ ಸ್ಥಾಪನೆ ಮಾಡಬೇಕು. ನಮ್ಮ ಕ್ಷೇತ್ರದಲ್ಲೇ ಅಂತರಾಷ್ಟ್ರೀಯ ಘಟಕ ಸ್ಥಾಪನೆಯಾಗಬೇಕು. ಆಗ ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


Kodagu Rain: ಕೊಡಗಿನಲ್ಲಿ ಮುಂದುವರೆದ ಮಳೆ; ನದಿ ತೀರದ ಜನರಿಗೆ ಪ್ರವಾಹದ ಭೀತಿ


ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಿಂದ ರಾಮನಗರದವರೆಗೆ ಎರಡು ದಿನಗಳ ಪಾದಯಾತ್ರೆ ನಡೆಸಲಾಗುವುದು. ಕೋವಿಡ್ ಇರುವ ಹಿನ್ನಲೆ ಸರಳವಾಗಿ ಕಡಿಮೆ ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ವೇಳೆ ರಮೇಶ್ ಗೌಡ ತಿಳಿಸಿದ್ದಾರೆ.


ಚನ್ನಪಟ್ಟಣದಲ್ಲಿ 8-9 ಸಾವಿರ ಜನ ಗೊಂಬೆ ತಯಾರಿಕೆ ಮಾಡುವವರಿದ್ದಾರೆ. ಆದರೆ ಈಗ ರಾಜ್ಯಸರ್ಕಾರದ ನಿರ್ಧಾರದಿಂದ ಬೊಂಬೆನಾಡು ಎಂಬ ಖ್ಯಾತಿಗೆ ಧಕ್ಕೆಯಾಗಲಿದೆ. ಹಾಗಾಗಿ ಚನ್ನಪಟ್ಟಣದಲ್ಲೇ ಬೃಹತ್ ಉತ್ಪಾದನಾ ಘಟಕ ನಿರ್ಮಾಣ ಮಾಡಿ ಎಂಬ ಕೂಗು ಎದ್ದಿದೆ.

First published: