HOME » NEWS » State » KASTURI KARNATAKA JANAPARA VEDIKE GIVEN FOOD FOR PEOPLE IN LOCK DOWN TIME AT CHANNAPATNA ATVR LG

ಕೊರೋನಾ ಎರಡನೇ ಅಲೆಯಲ್ಲಿ ಬೆಂದವರಿಗೆ ನೆರವು; ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕ್ಕೆ ಮೆಚ್ಚುಗೆ

ಎರಡನೇ ಅಲೆಯ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸಂಘಟನೆಯ ಕಾರ್ಯಕರ್ತರು ಚನ್ನಪಟ್ಟಣ ನಗರದಲ್ಲಿ ಎಷ್ಟು ಜನರು ಊಟಕ್ಕೆ ಪರದಾಡುತ್ತಿದ್ದಾರೆಂದು ಸರ್ವೆ ಮಾಡಿದ್ದಾರೆ. ಈಗ ದಿನನಿತ್ಯವೂ ಕಚೇರಿಯಲ್ಲಿ ಅಡುಗೆ ಮಾಡಿಸುತ್ತಿದ್ದು ವಾಂಗಿಬಾತ್, ಟೊಮ್ಯೊಟೋ ಬಾತ್, ಮೆಂತ್ಯಪಲಾವ್ ಸೇರಿದಂತೆ ದಿನವೂ ಸಹ ಬಗೆಬಗೆಯ ತಿಂಡಿ, ಊಟವನ್ನ ಕೊಡಲಾಗುತ್ತಿದೆ.

news18-kannada
Updated:May 13, 2021, 11:15 AM IST
ಕೊರೋನಾ ಎರಡನೇ ಅಲೆಯಲ್ಲಿ ಬೆಂದವರಿಗೆ ನೆರವು; ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕ್ಕೆ ಮೆಚ್ಚುಗೆ
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು
  • Share this:
ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದಾಗಿನಿಂದಲೂ ಸಹ ಅದೆಷ್ಟೋ ಜನರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಉತ್ತರಕರ್ನಾಟಕದಿಂದ ಬಂದಿರುವ ಕೂಲಿಕಾರ್ಮಿಕರಿಗೆ ಇತ್ತ ಕೆಲಸವೂ ಇಲ್ಲ, ಊಟವೂ ಇಲ್ಲವೆಂಬ ಪರಿಸ್ಥಿತಿ ಇದ್ದು ಕನ್ನಡಪರ ಸಂಘಟನೆಯೊಂದು ಮುಂದೆ ಬಂದು ದಿನನಿತ್ಯವೂ 50-60 ಜನರಿಗೆ ಎರಡೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ಹೌದು, ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಉತ್ತರಕರ್ನಾಟಕದ ಜನರು ಸಾವಿರಾರು ಸಂಖ್ಯೆಯಲ್ಲಿದ್ದಾರೆ.  ಲಾಕ್‌ಡೌನ್ ಆಗ್ತದ್ದಂತೆ ಬಹುಪಾಲು ಜನರು ತಮ್ಮ ಊರು ಸೇರಿದ್ದರು, ಆದರೆ ಕೆಲವರು ಇಲ್ಲೇ ಉಳಿದಿದ್ದು  ಒಂದೊತ್ತಿನ ಊಟದ ವ್ಯವಸ್ಥೆಯೂ ಇಲ್ಲದೇ ಕಂಗಾಲಾಗಿದ್ದರು. ಇದರ ಜೊತೆಗೆ ರಸ್ತೆಗಳಲ್ಲಿ ಪೇಪರ್ ಹಾಯುವವರು, ನಿರ್ಗತಿಕರು, ಭಿಕ್ಷುಕರಿಗೆ ಲಾಕ್‌ಡೌನ್‌ನಿಂದಾಗಿ ಊಟವೇ ಇಲ್ಲದಂತಾಗಿದೆ. ಆದರೆ ಇದನ್ನ ಗಮನಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು  ದಿನನಿತ್ಯವೂ 50-60 ಜನ ನಿರ್ಗತಿಕರಿಗೆ ಎರಡೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದೆ. ಚನ್ನಪಟ್ಟಣದ ನಗರದಲ್ಲಿ ಸಂಚಾರ ಮಾಡುತ್ತಾ, ಯಾರು ಊಟಕ್ಕೆ ಪರದಾಡುತ್ತಿದ್ದಾರೋ ಅಂತಹವರಿಗೆ ಊಟದ ಪ್ಯಾಕೇಟ್ ನೀಡಲಾಗ್ತಿದೆ.

ಕುಂಭಮೇಳದಿಂದ ಬೆಂಗಳೂರಿಗೆ ವಾಪಸ್ಸಾದ ಸೋಂಕಿತ ಮಹಿಳೆಯಿಂದ 33 ಜನರಿಗೆ ಕೊರೋನಾ ಪಾಸಿಟಿವ್​​

ಇನ್ನು ಎರಡನೇ ಅಲೆಯ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸಂಘಟನೆಯ ಕಾರ್ಯಕರ್ತರು ಚನ್ನಪಟ್ಟಣ ನಗರದಲ್ಲಿ ಎಷ್ಟು ಜನರು ಊಟಕ್ಕೆ ಪರದಾಡುತ್ತಿದ್ದಾರೆಂದು ಸರ್ವೆ ಮಾಡಿದ್ದಾರೆ. ಈಗ ದಿನನಿತ್ಯವೂ ಕಚೇರಿಯಲ್ಲಿ ಅಡುಗೆ ಮಾಡಿಸುತ್ತಿದ್ದು ವಾಂಗಿಬಾತ್, ಟೊಮ್ಯೊಟೋ ಬಾತ್, ಮೆಂತ್ಯಪಲಾವ್ ಸೇರಿದಂತೆ ದಿನವೂ ಸಹ ಬಗೆಬಗೆಯ ತಿಂಡಿ, ಊಟವನ್ನ ಕೊಡಲಾಗುತ್ತಿದೆ.

ವೇದಿಕೆಯ ಅಧ್ಯಕ್ಷರಾಗಿರುವ ರಮೇಶ್‌ಗೌಡ ಈ ಕಾರ್ಯವನ್ನ ಮಾಡುತ್ತಿದ್ದು, ಇದನ್ನ ನಾವು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಆದರೆ ಉಳ್ಳವರು ಕೊರೋನಾಗೆ ಹೆದರಿಕೊಂಡು ಮನೆಯಲ್ಲಿದ್ದಾರೆ. ಅಂತಹ ವ್ಯಕ್ತಿಗಳು ನಮ್ಮಿಂದ ಪ್ರೇರಣೆಯಾಗಿ ಹೊರಬಂದು ಇಂತಹ ಜನರಿಗೆ ಸಹಾಯ ಮಾಡಲಿ ಎಂಬ ಉದ್ದೇಶದಿಂದ ಈ ಕಾರ್ಯವನ್ನ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.ಜೊತೆಗೆ ನಾವು ಕಳೆದ 7 ದಿನಗಳಿಂದ ಈ ಕಾರ್ಯವನ್ನ ಮಾಡುತ್ತಿದ್ದೇವೆ. ನಿಜಕ್ಕೂ ಸಹ ಇದೊಂದು ಕೆಟ್ಟ ಪರಿಸ್ಥಿತಿ ನಮಗೆ ಬಂದಿದೆ. ಇಂತಹ ಕಷ್ಟದ ಸಮಯದಲ್ಲಿ ನಾವು ನೊಂದವರಿಗೆ, ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಬೇಕಿದೆ. ಹಾಗಾಗಿ ನಮ್ಮ ಸಂಘಟನೆ ವತಿಯಿಂದ ಈ ಕಾರ್ಯವನ್ನ ಮಾಡಲಾಗುತ್ತಿದೆ. ಕೆಲವರು ಕಾಯಿಲೆಯಿಂದ ಬಳಲುತ್ತಿದ್ದರೆ, ಇನ್ನು ಕೆಲವರು ಹಸಿವಿನಿಂದ ಕಂಗೆಟ್ಟಿದ್ದಾರೆ. ಅಂತಹವರಿಗೆ ಸಹಾಯ ಮಾಡಬೇಕಿದೆ ಎಂದರು.
Youtube Video

ಒಟ್ಟಾರೆ ಕೊರೋನಾ ಕಾಲದಲ್ಲಿ ಅದೆಷ್ಟೋ ಜನರಿಗೆ ಒಂದೊತ್ತಿನ ಊಟವೂ ಸಿಗುತ್ತಿಲ್ಲ. ಆದರೆ ಕನ್ನಡಪರ ಸಂಘಟನೆಯೊಂದು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಇಂತಹ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಲಿ ಎಂದು ಸ್ವಯಂಸೇವಕರು ಅಭಿಪ್ರಾಯಪಟ್ಟಿದ್ದಾರೆ.(ವರದಿ : ಎ.ಟಿ.ವೆಂಕಟೇಶ್)
Published by: Latha CG
First published: May 13, 2021, 11:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories