Bidar Farmer: ಕಲ್ಯಾಣ ಕರ್ನಾಟಕದಲ್ಲಿ ಕಾಶ್ಮೀರಿ ಆ್ಯಪಲ್! ಸೇಬು ಬೆಳೆದು ಸೈ ಎನಿಸಿಕೊಂಡ ರೈತ

ಭಾರತ ತುತ್ತ ತುದಿ ಜಮ್ಮು ಕಾಶ್ಮೀರದಲ್ಲಿ ಬೆಳೆಯುತ್ತಿದ್ದ ಸೇಬನ್ನು ಇದೀಗ ರಾಜ್ಯದ ತುತ್ತ ತುದಿಯಲ್ಲಿ ಬೆಳೆಯುತ್ತಿದ್ದಾರೆ. ರೈತ ಒಮ್ಮೆ ಮನಸ್ಸು ಮಾಡಿದರೆ ಸಾಕು ಏನು ಬೇಕಾದ್ರೂ ಮಾಡ್ತಾನೆ ಅನ್ನೋದಕ್ಕೆ ಇದೆ ಸಾಕ್ಷಿಯಾಗಿದೆ.

ಬೀದರ್​ನಲ್ಲಿ ಆ್ಯಪಲ್​ ಬೆಳೆ

ಬೀದರ್​ನಲ್ಲಿ ಆ್ಯಪಲ್​ ಬೆಳೆ

 • Share this:
  ಅದು ಮೈನಸ್ ಡಿಗ್ರಿಯಲ್ಲಿ (Minus Degrees) ಬೆಳೆಯುವ ಹಣ್ಣು ಆ ಹಣ್ಣು ಎಲ್ಲರಿಗೂ ಪ್ರಿಯ ಆದ್ರೆ ಆ ಹಣ್ಣು ಈಗ ನಮ್ಮ ನಾಡಿನಲ್ಲಿ ಬೆಳೆಯುತ್ತಿದೆ. ಬಿಸಿಲಿನ ಈ ಪ್ರದೇಶದಲ್ಲಿ ಸೇಬು (Apple) ಬೆಳೆಯಲು ಸಾಧ್ಯವೇ ಎಂಬ ರೈತರ (Farmer) ಪ್ರಶ್ನೆಗಳಿಗೆ ಉತ್ತರಿಸಲು‌ ಭಾರತದ ಜಮ್ಮು ಕಾಶ್ಮೀರದಿಂದ (Jammu And Kashmir) ಗಿಡಗಳನ್ನು ತಂದು ನಾಟಿ ಮಾಡಿ ಈಗ ಪ್ರಯೋಗ ಯಶಸ್ವಿಯಾಗಿದೆ. ಕೆಂಪು ಭೂಮಿಯಲ್ಲಿ ಸೇಬು ಬೆಳೆಯಲಾಗುತ್ತಿದೆ. ಹಾಗಾದ್ರೆ ಸೇಬು ಎಲ್ಲಿ ಬೆಳೆಯಲಾಗುತ್ತಿದೆಂದು ನೋಡಿಕೊಂಡು ಬರೋಣ ಬನ್ನಿ.

  ಬೀದರ್​ನಲ್ಲಿ ಆ್ಯಪಲ್​ ಬೆಳೆದ ರೈತ

  ದೇಶದ ತುತ್ತ ತುದಿಯಲ್ಲಿ ಬೆಳೆಯುವ ಹಣ್ಣು ಇಂದು, ಇದೀಗ ರಾಜ್ಯದ ತುತ್ತ ತುದಿಯಲ್ಲಿ ಬೆಳೆಯುತ್ತಿದ್ದಾರೆ.  ರೈತ ಒಮ್ಮೆ ಮನಸ್ಸು ಮಾಡಿದರೆ ಸಾಕು ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಜಾಗ ಯಾವುದಾದರೆನು ಬೆಳೆ ಬೆಳೆಯಲೇ ಬೇಕು ಏನು ಬೇಕಾದರೂ ಬೆಳೆಯ ಬಹುದೆಂದು ಸವಾಲಾಗಿ ಸ್ವೀಕರಿಸಿ ಬೆಳೆದೇ ತೀರಬೇಕೆಂಬ ಛಲದಲ್ಲಿ ಕೃಷಿ ಮಾಡುತ್ತಿದ್ದಾರೆ ಇಲ್ಲೊಬ್ಬ ರೈತರು.  ಹೀಗೇ ಯಾರೂ ಬೆಳೆಯದೆ ಇರುವ ಬೆಳೆಯನ್ನೇ ತಾನು ಬೆಳೆದು ತೋರಿಸಬೇಕೆಂಬ ವಿಭಿನ್ನ ಆಲೋಚನೆಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಬೀದರ್ ಜಿಲ್ಲೆ ಹುಮನಾಬಾದ ತಾಲೂಕಿನ ಘಾಟಭೊರಾಳ ಗ್ರಾಮದ ರೈತ ಅಪ್ಪಾರಾವ್ ಭೊಸ್ಲೆ.

  ಸೇಬು ಬೆಳೆದು ಸೈ ಎನಿಸಿಕೊಂಡ ರೈತ

  ಭಾರತ ತುತ್ತ ತುದಿಯ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಉತ್ತರಾಖಂಡ ಅರುಣಾಚಲ ಪ್ರದೇಶ ಪಂಜಾಬ್ ನಲ್ಲಿ, ಬೆಳೆಯುತ್ತಿದ್ದ ಸೇಬು ಇಂದು  ಕಾಮನ್ ಆಗಿ ನಮ್ಮ ಕೆಂಪು ಭಾಗಗಳಲ್ಲಿ ಬೆಳೆಯುತ್ತಿದೆ. ಬೀದರ್ ಜಿಲ್ಲೆ ಈ ಹಿಂದೆ ಸೋಯಾಬಿನ್, ಹೆಸರು, ಉದ್ದು ತೊಗರಿ ಬೆಳೆಯಲು ಫೇಮಸ್ ಆಗಿತ್ತು.  ಆದ್ರೆ ಇದೀಗ  ಸೇಬು ಬೆಳೆದು ಸೈ ಎನಿಸಿಕೊಂಡ ರೈತ. ಒಂದು ಎಕರೆ ಜಮೀನಿನಲ್ಲಿ ಈಗಾಗಲೇ 222 ಆ್ಯಪಲ್ ಸಸಿಗಳು ಅದಕ್ಕೆ ಹವಾಮಾನ ಅನುಗುಣವಾಗುವಂತೆ 450 ತೆಂಗು ಸಸಿಗಳನ್ನು ನೆಟ್ಟಿರುವ ರೈತ ಹರಿ ಮನ್ 99 ಶಿಮ್ಲಾ ವೆರೈಟಿ ತಳಿಯ ಸೇಬು ಬೆಳೆದು ತೋರಿಸಿದ್ದಾರೆ. ಸುಮಾರು 15 ತಿಂಗಳುಗಳ ಆ್ಯಪಲ್ ಗಿಡಗಳಾಗಿವೆ ಒಂದು ಸಸಿಗೆ ಸುಮಾರು 210 ರೂಪಾಯಿ ಯಂತೆ  ಹಣ ಖರ್ಚು ಮಾಡಿ ತಂದ ಸೇಬು ಸಸಿಗಳಿವು.

  ಇದನ್ನೂ ಓದಿ: Rain Updates: ಮೇ ಅಂತ್ಯಕ್ಕೆ ಮುಂಗಾರು ಪ್ರವೇಶ; ರಾಜ್ಯದಲ್ಲಿ ಇನ್ನೂ 5 ದಿನ ಅಬ್ಬರಿಸಲಿದ್ದಾನೆ ವರುಣ

  ಇನ್ನು ಗಿಡಗಳನ್ನು ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತೆ ಈಗಾಗಲೇ ಸುಮಾರು ಐದು ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಸೇಬು ತೆಂಗು ಬೆಳೆಯನ್ನು ಬೆಳೆಯಲಾಗುತ್ತಿದೆ. ಒಂದು ಎಕರೆ ಸೇಬು ಬೆಳೆದರೆ 5 ರಿಂದ 6 ಲಕ್ಷ ರೂಪಾಯಿ ಆದಾಯ ಗಳಿಸುವ ನೀರೀಕ್ಷೆ ಹೊಂದಿದ್ದಾರೆ. ಜಮ್ಮು ಕಾಶ್ಮೀರ ದಿಂದ ತೆಗೆದುಕೊಂಡು ಬಂದು ನಾಟಿ ಮಾಡಿರುವ ರೈತ ಒಂದು ಸೇಬು ಗಿಡವನ್ನು 14x14 ಅಡಿಗಳಷ್ಟು ದೂರ ಆ್ಯಪಲ್ ಗಿಡಗಳನ್ನು ನೆಟ್ಟು ಬೆಳೆಯುತ್ತಿರುವ ರೈತ ಅವುಗಳಿಗೆ ಬಾವಿಯಿಂದ ನೀರು ಎತ್ತಿ ಡ್ರಿಪ್ ಮೂಲಕ ಗಿಡಗಳಿಗೆ ಅಂದ್ರೆ  ಸೇಬು ಕಾಣುವ ವರೆಗೂ ಕಾಳಜಿ ಯಿಂದ ಬೆಳೆಯಲಾಗುತ್ತಿದೆ.

  ಬೆಳೆ ನೋಡಲು ಹೊರ ರಾಜ್ಯದಿಂದ ಬರ್ತಿದ್ದಾರೆ

  ಆ್ಯಪಲ್ ಗಿಡಗಳನ್ನು ಇನ್ನು  ಗಿಡಗಳಿಗೆ ಸರಿಯಾಗಿ ಗೊಬ್ಬರ ಔಷಧ ಸಿಂಪಡಣೆ ಮಾಡಿ  ಬೆಳೆದಿರುವ ರೈತ ಅಪ್ಪಾರಾವ್ ಬೊಸ್ಲೆ.
  ಇನ್ನು ಜಮೀನಿಗೆ ವರ್ಷಕ್ಕೆ ಒಂದು ಬಾರಿಯಂತೆ ಎರೆಹುಳು ಗೊಬ್ಬರ ಹಾಕಲಾಗುತ್ತದೆ ಮತ್ತು ಈಗಾಗಲೇ ಆ್ಯಪಲ್ ಗಿಡಗಳಲ್ಲಿ ಸೇಬು ಕಾಣಿಸುತ್ತಿದ್ದು ಆದಾಯ ನಿರೀಕ್ಷೆಯಲ್ಲಿದ್ದ ರೈತ ಅಪ್ಪಾರಾವ್ ಜಮೀನಲ್ಲಿ ಪ್ರತಿನಿತ್ಯವೂ ನಾಲ್ಕು ಜನರು ಜಮೀನಿನಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ.

  ಕಲ್ಯಾಣ ಕರ್ನಾಟಕ ಬಾಗದಲ್ಲಿ  ಮೊದಲ ಬಾರಿಗೆ ಅಪ್ಪಾರಾವ್ ಬೊಸ್ಲೆ ಅವರು  ಒಂದು ಎಕರೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ಒಂದು ಎಕರೆಯಲ್ಲಿ  ಸೇಬು ಗಿಡಗಳನ್ನು ಬೆಳೆದು ಸ್ಥಳೀಯ ರೈತರಲ್ಲಿ ಹೊಸ ಆಶಾಭಾವ ಮೂಡಿಸಿದ್ದಾರೆ. ಪ್ರತಿ ಗಿಡದಲ್ಲಿ 10 ರಿಂದ 30 ಕಾಯಿಗಳನ್ನು ಹಿಡಿದ ಸೇಬು ಬೆಳೆಗೆ ಅಲ್ಪ ನೀರು ಬೇಕಾಗುತ್ತೆ ಇದಕ್ಕೆ ರೋಗಬಾಧೆಯೂ ಕಡಿಮೆ ಇವ್ರ ಸೇಬು ಬೆಳೆ ನೋಡಲು ರೈತರು ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಬರುತ್ತಾರೆ ಸೇಬು ಬೆಳೆಯ ಬಗ್ಗೆ ಜನರಿಗೆ ಮಾಹಿತಿ ನೀಡಿ ಬೆಳೆಯಲು ಪ್ರೋತ್ಸಾಹ ನೀಡುತ್ತಾರೆ

  Bhagavad Gita: ಹುಬ್ಬಳ್ಳಿಯಲ್ಲಿ ಭಗವದ್ಗೀತಾ ಜ್ಞಾನಲೋಕ ಅನಾವರಣ; ಕಲುಷಿತ ಮನಸ್ಸುಗಳಿಗೆ ಅಮೃತ ಸಿಂಚನ

  ಅಪ್ಪಾರಾವ್ ಬೋಸ್ಲೆ ಸಾಧನೆ

  ಬಿಸಿಲಿನ ಈ ಪ್ರದೇಶದಲ್ಲಿ ಸೇಬು ಬೆಳೆಯಲು ಸಾಧ್ಯವೆಂಬ ಹಲವಾರು ರೈತರ ಪ್ರಶ್ನೆಗಳಿಗೆ ಉತ್ತರಿಸಲು‌ ಭಾರತದ ಜಮ್ಮ ಕಾಶ್ಮೀರದಿಂದ ಗಿಡಗಳನ್ನು ತಂದು ನಾಟಿ ಮಾಡಿ ಬೆಳೆ ತೆಗೆದು ಈಗ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ರೈತನು ಈ ಹೊಸ ಸಾಹಸ ಮಾಡಿ ಯಶಸ್ವಿಯಾಗಿದ್ದು.  ಅವರ ಈ ವಿಭಿನ್ನ ಪ್ರಯತ್ನ ಮುಚ್ಚುವಂತೆ ಮಾಡಿದ್ದು ಮಾತ್ರ ಸುಳಲ್ಲ

  ವರದಿ: ಚಮನ್ ಹೊಸಮನಿ‌
  Published by:Pavana HS
  First published: