Mandya: ವಾರಣಾಸಿಯಲ್ಲಿ ಸಿಲುಕಿದ್ದ ಮಂಡ್ಯ ಯಾತ್ರಿಕರು ಕೊನೆಗೂ ವಾಪಸ್

ಯಾತ್ರಿಕರು

ಯಾತ್ರಿಕರು

ಈ ಸಂದರ್ಭ ಗೋರಕ್ ಪುರದ ವಿಭಾಗೀಯ ಆಯುಕ್ತರಾಗಿರುವ ಮಂಡ್ಯ ಜಿಲ್ಲೆಯವರೇ ಆದ ರವಿಕುಮಾರ್ IAS ರವರು ಯಾತ್ರಾರ್ಥಿಗಳಿಗೆ ಸೂಕ್ತ ವಸತಿ, ಊಟ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸಿದ್ದರು.

  • Share this:

ಅಗ್ನಿಪಥ್ ಹೋರಾಟದ (Agnipath Protest) ಹಿನ್ನೆಲೆ ವಾರಣಾಸಿಯಲ್ಲೇ (Varanasi) ಸಿಲುಕಿದ್ದ 70 ಜನರು ಮಂಡ್ಯಕ್ಕೆ(Mandya) ವಾಪಸ್ ಆಗ್ತಿದ್ದಾರೆ. ನಿರಾಶ್ರಿತರ ಮನವಿಗೆ ಸ್ಪಂದಿಸಿದ ಮಂಡ್ಯ ಜಿಲ್ಲಾಡಳಿತ ಹಾಗೂ ಸಚಿವ ಕೆ ಗೋಪಾಲಯ್ಯ (Minister K Gopalaiah) ಅವರ ನೆರವಿನಿಂದ ಎರಡು ಬಸ್‌ಗಳ ಮೂಲಕ ಮಂಡ್ಯ ಕಡೆ ಪ್ರಯಾಣ ಬೆಳಸಿದ್ದಾರೆ. ಇದರಿಂದ ಆತಂಕದಲ್ಲಿದ್ದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯಿಂದ 31 ಮಹಿಳೆಯರನ್ನು ಒಳಗೊಂಡಂತೆ 46 ಮಂದಿ ಮತ್ತು ರಾಮನಗರ (Ramanagara) ಜಿಲ್ಲೆಯಿಂದ 23 ಮಂದಿ ಯಾತ್ರಾರ್ಥಿಗಳು ದಿನಾಂಕ 11.06.2022ರಂದು ಬೆಳಗ್ಗೆ ಮಂಡ್ಯದಿಂದ ಕಾಶಿ ಯಾತ್ರೆಗೆ (Kashi Yatra) ಎಂದು ವಾರಣಾಸಿಗೆ ತೆರಳಿದ್ದರು. ದಿನಾಂಕ 17.06.2022 ರಂದು ಪೂರ್ವ ನಿಗಧಿಯಾಗಿ ವಾಪಸ್ ತೆರಳಲು (Return Ticket) ಮಾಡಿಸಿದ್ದರು. ಆದರೆ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ದಿನಾಂಕ 17.06.2022 ರಂದು ತೆರಳಬೇಕಾಗಿದ್ದ ರೈಲು ರದ್ದಾಗಿತ್ತು.


ಇದರಿಂದ ಯಾತ್ರಾರ್ಥಿಗಳು ವಾರಣಾಸಿಯಲ್ಲಿಯೇ ಉಳಿಯುವಂತಾಗಿ, ಊಟ, ವಸತಿ, ಔಷಧಿ ಇತರೆ ಸೌಲಭ್ಯಗಳಿಲ್ಲದೆ ಸಮಸ್ಯೆಯುಂಟಾಗಿತ್ತು. ಬಳಿಕ ಯಾತ್ರಾರ್ಥಿಗಳು ಸಹಾಯ ಮಾಡುವಂತೆ ಸರ್ಕಾರ ಮತ್ತು ಮಂಡ್ಯ ಜಿಲ್ಲಾಡಳಿತವನ್ನು ಮನವಿ ಮಾಡಿದ್ದರು.


ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತ, ಸಚಿವ ಕೆ ಗೋಪಾಲಯ್ಯ


ಇನ್ನು ಸಮಸ್ಯೆ ತಿಳಿದ ತಕ್ಷಣವೇ ರಾಜ್ಯದ ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಮಂಡ್ಯ ಜಿಲ್ಲಾಡಳಿತ ಸಂಪರ್ಕಿಸಿತ್ತು. ನಂತರ ಉತ್ತರ ಪ್ರದೇಶದ ವಾರಣಾಸಿಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಲ್ಲಿರುವ 2 ಜಿಲ್ಲೆಗಳ ಯಾತಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಯಿತು.


ಇದನ್ನೂ ಓದಿ:  Congress Protest: ಅಗ್ನಿಪಥ್ & ರಾಹುಲ್ ಗಾಂಧಿ ED ವಿಚಾರಣೆ ವಿರೋಧಿಸಿ ಇಂದೂ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ


ಯಾತ್ರಿಕರ ಜೊತೆ ನಿರಂತರ ಸಂಪರ್ಕ


ಮಂಡ್ಯ ಜಿಲ್ಲಾಡಳಿತ ಯಾತ್ರಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಆದ್ರೆ ಯಾತ್ರಾರ್ಥಿಗಳಲ್ಲಿ ವಾಪಸ್ ತೆರಳಲು ಹಣದ ಕೊರತೆ ಉಂಟಾಗಿತ್ತು. ಈ ವೇಳೆ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಯಾತ್ರಿಕರ ಪರಿಸ್ಥಿತಿ ಅರಿತು ಅವರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅಲ್ಲದೆ ಸಚಿವರು ರವರ ನೇತೃತ್ವದಲ್ಲಿ ತಕ್ಷಣವೇ ಎಲ್ಲಾ ಪ್ರಾಯಾಣಿಕರಿಗೆ ಪ್ರಯಾಣಿಸಲು ಎರಡು ಬಸ್ ಗಳ ವ್ಯವಸ್ಥೆ ಕಲ್ಪಿಸಲಾಯಿತು.


ಈ ಸಂದರ್ಭ ಗೋರಕ್ ಪುರದ ವಿಭಾಗೀಯ ಆಯುಕ್ತರಾಗಿರುವ ಮಂಡ್ಯ ಜಿಲ್ಲೆಯವರೇ ಆದ ರವಿಕುಮಾರ್ IAS ರವರು ಯಾತ್ರಾರ್ಥಿಗಳಿಗೆ ಸೂಕ್ತ ವಸತಿ, ಊಟ ಹಾಗು ಇತರೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸಿದ್ದರು.


ಯಾತ್ರಿಕರು ವಾಪಸ್, ಕುಟುಂಬಸ್ಥರು ನಿರಾಳ


ಪ್ರಸ್ತುತ ಯಾತ್ರಾರ್ಥಿಗಳು ದಿನಾಂಕ 19.06.2022 ರಂಧು ಸಂಜೆ 6.00 ಗಂಟೆಗೆ ವಾರಣಾಸಿಯಿಂದ ಮಂಡ್ಯ ಮತ್ತು ರಾಮನಗರಕ್ಕೆ 2 ಬಸ್ ಗಳಲ್ಲಿ ತೆರಳಿರುತ್ತಾರೆ. ಉಳಿದ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಪ್ರಯಾಣಿಕರು ನಾಳೆ ಬೆಳಿಗ್ಗೆ ಪ್ರಯಾಣಿಸಲು ಬಸ್ ವವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿದೆ. ಸದ್ಯ ಆತಂಕದಲ್ಲಿದ್ದ ಯಾತ್ರಿಕರ ಕುಟುಂಬಸ್ಥರು, ಯಾತ್ರಿಕರ ವಾಪಸ್ ವಿಚಾರ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.


ಅಗ್ನಿಪಥ್ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ


ಯುವಕರ ಪಾಲಿಗೆ ಕರಾಳ ಶಾಸನವಾಗಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶಾದ್ಯಂತ ನಿರುದ್ಯೋಗಿ ಯುವಕರು, ಪೂರ್ಣಾವಧಿಗೆ ಸೇನೆ ಸೇರಬೇಕೆಂದು ಕನಸು ಕಂಡಿದ್ದ ಯುವಕರು ಮತ್ತವರ ಕುಟುಂಬದವರು ಕಳೆದ ನಾಲ್ಕೈದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಕೆಲವು ಕಡೆ ಹಿಂಸಾಚಾರ, ಸಾವು, ನೋವು, ಸಾರ್ವಜನಿಕ ಆಸ್ತಿಗಳ ನಷ್ಟವಾಗಿದೆ.


ಇದನ್ನೂ ಓದಿ:  PSI Suicide: ಬೆಂಗಳೂರಲ್ಲಿ PSI ಆತ್ಮಹತ್ಯೆ; ನೇಣಿಗೆ ಶರಣಾಗಲು ಕಾರಣವೇನು?


ಕಾಂಗ್ರೆಸ್ ಪಕ್ಷ ಕೂಡ ಯುವಕರ ಅಳಲಿಗೆ ದನಿಗೂಡಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಶಾಂತಿಯುತವಾದ ಸತ್ಯಾಗ್ರಹ ನಡೆಸಿತ್ತು. ಕಾಂಗ್ರೆಸ್ ಪಕ್ಷದ ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯರು ಮತ್ತು ಎಐಸಿಸಿ ಪದಾಧಿಕಾರಿಗಳು ಭಾಗವಹಿಸಿದ್ದರು.

Published by:Mahmadrafik K
First published: