• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಾಶಿ, ಮಥುರಾದಲ್ಲೂ ದೇವಸ್ಥಾನ ನಿರ್ಮಿಸಬೇಕು; ಸಚಿವ ಕೆ.ಎಸ್. ಈಶ್ವರಪ್ಪ ಪುನರುಚ್ಛಾರ

ಕಾಶಿ, ಮಥುರಾದಲ್ಲೂ ದೇವಸ್ಥಾನ ನಿರ್ಮಿಸಬೇಕು; ಸಚಿವ ಕೆ.ಎಸ್. ಈಶ್ವರಪ್ಪ ಪುನರುಚ್ಛಾರ

ಸಚಿವ ಕೆ.ಎಸ್​. ಈಶ್ವರಪ್ಪ

ಸಚಿವ ಕೆ.ಎಸ್​. ಈಶ್ವರಪ್ಪ

ಮಥುರಾದಲ್ಲಿ ಕೃಷ್ಣ ದೇವಾಲಯವನ್ನು ಒಡೆದು ಮಸೀದಿ ಕಟ್ಟಿರುವುದನ್ನು ನಾನು ನೋಡಿದ್ದೇನೆ. ಕಾಶಿಯಲ್ಲಿಯೂ ವಿಶ್ವನಾಥನ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ. ಅಲ್ಲಿಯೂ ದೇವಸ್ಥಾನ ನಿರ್ಮಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಪುನರುಚ್ಛರಿಸಿದ್ದಾರೆ.

  • Share this:

ಶಿವಮೊಗ್ಗ (ಆ. 11): ಅಯೋಧ್ಯೆಯ ರೀತಿಯಲ್ಲೇ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆ.ಎಸ್. ಈಶ್ವರಪ್ಪ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ ಕಳೆಯಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.


ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಡಿಕೆಶಿ ಹೇಳಿದಂತೆ ನಾನು ಜೈಲಿಗೆ ಹೋಗಲು ರೆಡಿ. ನಾನು ನೂರು ಬಾರಿ ಬಂಧನಕ್ಕೊಳಗಾಗಲು ಸಿದ್ಧನಾಗಿದ್ದೇನೆ. ಬೇಕಾದರೆ ಇಡೀ ಜೀವನ ಜೈಲಲ್ಲೇ ಇರುತ್ತೇನೆ. ಅಯೋಧ್ಯೆಯ ರಾಮಮಂದಿರ ಶಿಲಾನ್ಯಾಸದ ದಿನ ನನ್ನ ಭಾವನೆಯನ್ನು ಹಂಚಿಕೊಂಡಿದ್ದೇನೆ ಎಂದಿದ್ದಾರೆ.


ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆಗಳ ಬಂಧನನಾನು ಕಾಶಿ ಮತ್ತು ಮಥುರಾಕ್ಕೆ ಭೇಟಿ ನೀಡಿದ್ದೇನೆ. ಕೃಷ್ಣ ದೇವಾಲಯವನ್ನು ಒಡೆದು ಮಸೀದಿ ಕಟ್ಟಿರುವುದನ್ನು ನಾನು ನೋಡಿದ್ದೇನೆ. ಕಾಶಿಯಲ್ಲಿಯೂ ವಿಶ್ವನಾಥನ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ. ಅದನ್ನು ನೋಡಿ ನನಗೆ ನೋವಾಗಿದೆ, ಸಿಟ್ಟು ಕೂಡ ಬಂದಿದೆ. ಸರ್ಕಾರಗಳಿರುವುದು ಕೇವಲ ರಸ್ತೆ, ಚರಂಡಿ ನಿರ್ಮಾಣ ಮಾಡಲಿಕ್ಕೆ ಅಷ್ಟೇ ಅಲ್ಲ. ಈ ದೇಶದ ಜನರ ಅಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸವಾಗಿದೆ. ಅದರಂತೆ, ಈ ಎರಡೂ ಜಾಗದಲ್ಲಿಯೂ ಮಂದಿರ ನಿರ್ಮಾಣವಾಗಬೇಕು. ಇದು ಕೇವಲ ನನ್ನ ಭಾವನೆಯಷ್ಟೇ ಅಲ್ಲ ದೇಶದ ಜನರ ಅಪೇಕ್ಷೆ. ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳನ್ನು ನಾನು ಹೇಳಿದ್ದೇನೆ. ಕಾಶಿ ಹಾಗೂ ಮಥುರಾದಲ್ಲಿರುವ ಮಸೀದಿಗಳು ಧ್ವಂಸವಾಗಬೇಕು ಎಂದು ಈಶ್ವರಪ್ಪ ಪುನರುಚ್ಛರಿಸಿದ್ದಾರೆ.

ಕಾಶಿ ವಿಶ್ವನಾಥನ ಜಾಗ, ಮಥುರಾ ಶ್ರೀಕೃಷ್ಣನ ಸ್ಥಳವಾಗಿದ್ದು, ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ ನಮಗೆ ಗುಲಾಮಗಿರಿಯ ಅನುಭವವಾಗುತ್ತದೆ. ಅಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಡಿ.ಕೆ. ಶಿವಕುಮಾರ್, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಸಲುವಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪನವರನ್ನು ವಜಾಗೊಳಿಸಲು ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪನವರಿಗೆ ಸೂಚಿಸಬೇಕು. ಕೆ.ಎಸ್. ಈಶ್ವರಪ್ಪನವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದರು.

First published: