Farmer: ಸೇತುವೆ ಸಮಸ್ಯೆಗೆ ಪರಿಹಾರ ಕಂಡುಕೊಂಡ‌ ಕಾಸರಗೋಡಿನ ಕೃಷಿಕ, ಅನ್ನದಾತನ ಸಾಧನೆ ನೀವೇ ನೋಡಿ

"ಬೇಸಾಯ ಅಂದ್ರೆ ನಾ ಸಾಯ, ನೀ ಸಾಯ, ಮನೆಮಂದಿಯೆಲ್ಲ ಸಾಯ" ಅಂತಾರೆ. ಇಂದಿನ ಕಾಲದಲ್ಲಿ ಕೂಲಿಯಾಳುಗಳ ಕೊರತೆ ಇದ್ದು, ವೆಚ್ಚವನ್ನು ಸರಿದೂಗಿಸಲು ಕೃಷಿಕರು ಕಷ್ಟಪಡುತ್ತಿದ್ದಾರೆ. ಇಂಥದ್ದೇ ಸಮಸ್ಯೆಯ ಸುಳಿಯಲ್ಲಿದ್ದ ಪೆರಡಾಲದ ಮಿಂಚಿನಡ್ಕದಲ್ಲಿ ಪರಂಪರಾಗತವಾಗಿ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದಿಂದ ಬಂದ ಈ ಅನ್ನದಾತ ಸೇತುವೆ ಸಮಸ್ಯೆಯನ್ನೇ ಬಗೆಹರಿಸಿದ್ದಾರೆ. ಹಾಗಿದ್ರೆ ನೇಗಿಲಯೋಗಿ ಮಾಡಿದ್ದೇನು? ಇದನ್ನು ಓದಿ, ನಿಮಗೂ ಸ್ಫೂರ್ತಿ ಬರಬಹುದು...

ಸೇತುವೆ ಸಮಸ್ಯೆಗೆ ರೈತನಿಂದ ಮುಕ್ತಿ

ಸೇತುವೆ ಸಮಸ್ಯೆಗೆ ರೈತನಿಂದ ಮುಕ್ತಿ

  • Share this:
ಅವಶ್ಯಕತೆ (Necessity) ಬಂದಾಗ ತಮ್ಮ ತಮ್ಮಲ್ಲೇ ಸಂಶೋಧನೆಗಳನ್ನು (Research) ಮಾಡಿ ಸಮಸ್ಯೆ (Problems) ಬಗೆಹರಿಸುವವರು ಕೃಷಿಕ (Farmer). ಇಂಥಹುದೇ ಹಲವು‌ ಸಮಸ್ಯೆಗಳನ್ನು ಹೊಂದಿದ್ದ ಕಾಸರಗೋಡು (Kasaragodu) ಜಿಲ್ಲೆಯ  ಪೆರಡಾಲದ ಕೃಷಿಕರೊಬ್ಬರು ತಮ್ಮ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಸಂಶೋಧನೆಯಿಂದಾಗಿ ಇದೀಗ ಕೃಷಿ ತೋಟಗಳಿಗೆ ಗೊಬ್ಬರ ಸಾಗಿಸೋದು, ಕೃಷಿ ಉತ್ಪನ್ನಗಳನ್ನು ಸಾಗಿಸುವ ದೊಡ್ಡ ಜವಾಬ್ದಾರಿಯನ್ನು ಈ ಕೃಷಿಕ ಹಗುರ ಮಾಡಿದ್ದಾರೆ. ಕಾಸರಗೋಡು ಜಿಲ್ಲೆಯ ಪೆರಡಾಲ ಎನ್ನುವ ಪೆರಡಾಲ ಗ್ರಾಮ  ಗುಡ್ಡತಟ್ಟು ಪ್ರದೇಶಗಳಿಂದ ಕೂಡಿದ ಸ್ಥಳವಾಗಿದ್ದು, ಹೆಚ್ಚಿನ ಕೃಷಿ ಭೂಮಿಯು ಇಲ್ಲಿ ಇಳಿಜಾರು ಪ್ರದೇಶದಲ್ಲಿದೆ. ಪೆರಡಾಲ ವರದಾ ನದಿಯ ಸುತ್ತಮುತ್ತ ಸಂಪೂರ್ಣ ಅಡಕೆ, ತೆಂಗು ಕೃಷಿ ಇದೆ. ಅಲ್ಲಿಂದ ಕೃಷಿಕರು ತಮ್ಮ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಇಂದಿಗೂ ಹರಸಾಹಸವನ್ನು ಪಡುತ್ತಿದ್ದಾರೆ. ಇಳಿಜಾರು ಪ್ರದೇಶಗಳಿಂದ ಅಡಕೆ, ತೆಂಗಿನಕಾಯಿ ಸಾಗಾಟ ದೊಡ್ಡ ಸಮಸ್ಯೆಯಾಗಿದೆ.

ಸೇತುವೆ ಸಮಸ್ಯೆಗೆ ಮುಕ್ತಿ ಕೊಟ್ಟ ಕೃಷಿಕ

ಇಂದಿನ ಕಾಲದಲ್ಲಿ ಕೂಲಿಯಾಳುಗಳ ಕೊರತೆ, ವೆಚ್ಚವನ್ನು ಸರಿದೂಗಿಸಲೂ ಕೃಷಿಕರು ಕಷ್ಟಪಡುತ್ತಿದ್ದಾರೆ. ಇಂಥಹುದೇ ಸಮಸ್ಯೆಯ ಸುಳಿಯಲ್ಲಿದ್ದ ಪೆರಡಾಲದ ಮಿಂಚಿನಡ್ಕದಲ್ಲಿ ಪರಂಪರಾಗತವಾಗಿ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬದಿಂದ ಬಂದ ಭೀಮೇಶ್‌ ತಮ್ಮ ಪ್ರಯತ್ನದ ಮೂಲಕ ಹೊಳೆಯ ಎರಡೂ ಬದಿಗೆ ಸಾಗಲು ರೋಪ್‌ವೇ ಟ್ರಾಲಿ  ನಿರ್ಮಿಸಿದ್ದಾರೆ.

ಭೀಮೇಶ್ ತಂದೆ ಹಿರಿಯ ಕೃಷಿಕ ಮಿಂಚಿನಡ್ಕ ಕೃಷ್ಣ ಭಟ್ಟರಿಗೆ ಹೊಳೆಯ ಎರಡೂ ಬದಿಯಲ್ಲಿ ಕೃಷಿ ಭೂಮಿ ಇದೆ. ಪ್ರತಿ ವರ್ಷ ಹೊಳೆಗೆ ಅಡ್ಡವಾಗಿ ಅಡಕೆ ಮರದ ಕಾಲು ಸೇತುವೆ ನಿರ್ಮಿಸುತ್ತಿದ್ದರು. ಹೊಳೆಯ ಎರಡೂ ಬದಿಯ ಜನರು ಇದೇ  ಸೇತುವೆ ಸಹಾಯದಿಂದ ಸಾಗುತ್ತಿದ್ದರು. ಒಂದೆಡೆ ಉದಯಗಿರಿ ಶಾಲೆ, ಇನ್ನೊಂದು ಬದಿಯಲ್ಲಿ ನೀರ್ಚಾಲು, ಕುಂಟಿಕಾನ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು, ತಮ್ಮ ಅವಶ್ಯಕತೆಗಳಿಗೆ ಸಾಗಲು ಸಾರ್ವಜನಿಕರೂ ಇದೇ ದಾರಿಯನ್ನು ಬಳಸಬೇಕಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲೇ ಇದೇ ಸಮಸ್ಯೆ

ಮಳೆಗಾಲದಲ್ಲಿ ಸಂಕವಿಲ್ಲದಿದ್ದರೆ ಅತ್ತಿಂದಿತ್ತ ಸಾಗುವುದೇ ಊರಿನ ಜನರಿಗೆ ಸಮಸ್ಯೆಯಾಗಿತ್ತು. ಈ ಅಡಕೆ ಮರದ ಸೇತುವೆ ಎರಡೂ ಪ್ರದೇಶದ ಜನರಿಗೆ ನೆರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಊರಿನ ಜನರು ಅಲ್ಲೊಂದು ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಕೇರಳ ಸರಕಾರಕ್ಕೆ ಅದೆಷ್ಟೋ ಬಾರಿ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: Farmer: 15 ಗುಂಟೆ ಜಮೀನಿನಲ್ಲಿ ದಪ್ಪ ಮೆಣಸಿನಕಾಯಿ ಬೆಳೆದು 11 ಲಕ್ಷ ಲಾಭ ಕಂಡ ರೈತ

ಕೃಷಿ ಮೇಳಕ್ಕೆ ಹೋಗಿದ್ದಾಗ ಬಂತು ಐಡಿಯಾ


ಹೊಳೆಯ ಎರಡೂ ಬದಿಯ ತೋಟಕ್ಕೆ ಹೋಗಿ ಬರಲು ಏನು ಮಾಡಬಹುದು ಎಂಬ ಚಿಂತೆ ಕೃಷ್ಣ ಭಟ್ ಅವರ ಮಗ ಭೀಮೇಶ್ ಗೆ  ಕಾಡುತ್ತಿತ್ತು. ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ತೆರಳಿದ ಭೀಮೇಶ್ ಗೆ ರೋಪ್‌ ವೇ ನಿರ್ಮಾಣ ಮಾಡಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು.

ಕೊನೆಗೆ ಅವರು ಇದಕ್ಕಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದಲ್ಲಿ 8 ವರ್ಷ ಉಪನ್ಯಾಸಕರಾಗಿ ಅನುಭವವಿರುವ ಶಿವಮೊಗ್ಗ ಮೂಲದ ಸುನಿಲ್‌ ಬಿ. ಲಕ್ಕುಂಡಿ ಜತೆ ಮಾತನಾಡಿ, ಅವರ ಸಲಹೆಯೊಂದಿಗೆ ರೋಪ್‌ ವೇ ನಿರ್ಮಾಣಕ್ಕೆ ತೊಡಗಿದರು. ಮಂಗಳೂರು ಬಂದರಿನಲ್ಲಿ ಹಡಗಿನ ಉಪಯೋಗಕ್ಕಿರುವ ತುಕ್ಕು ಹಿಡಿಯದಂತಹ ಕಬ್ಬಿಣದ ಕಂಬಗಳು, ರೋಪ್‌ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ತರಿಸಿಕೊಂಡರು.

ಕೊನೆಗೂ ಸೇತುವೆ ನಿರ್ಮಿಸಿದ ಸಾಹಸಿ

ರೋಪ್‌ ವೇ ಯಲ್ಲಿ ಸಂಚರಿಸಲು ಅನುವಾಗುವ ಮರದ ತೊಟ್ಟಿನ ರೂಪದ ಟ್ರಾಲಿಯನ್ನೂ ಸಿದ್ಧಪಡಿಸಿದರು. ಈ ಮೂಲಕ ಆರಾಮವಾಗಿ  ಸುಮಾರು 250 ಕೆಜಿಯಷ್ಟು ವಸ್ತುಗಳನ್ನು ಸಾಗಾಟ ಮಾಡಲಾಗುವ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಇಬ್ಬರು ವ್ಯಕ್ತಿಗಳೂ ಏಕ ಕಾಲದಲ್ಲಿ ಈ ಟ್ರಾಲಿಯಲ್ಲಿ ಕುಳಿತು ಸಾಗಬಹುದು.

ಸುಮಾರು 60 ಸಾವಿರ ವೆಚ್ಚದಲ್ಲಿ ನಿರ್ಮಾಣ

ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಈ ರೋಪ್‌ ವೇ ನಿರ್ಮಾಣವಾಗಿದ್ದು, ತೊಟ್ಟಿಲಿಗೆ ನೈಲಾನ್‌ ಬಳ್ಳಿಯನ್ನು ಕಟ್ಟಿ ರಾಟೆಯ ಮೂಲಕ ಕುಳಿತಲ್ಲಿಂದಲೇ ಎರಡೂ ಬದಿಗೆ ಸಾಗಬಹುದಾದಂತಹ ವ್ಯವಸ್ಥೆಯನ್ನೂ ಅಳವಡಿಸಿದ್ದಾರೆ. ಅಡಕೆ ಕೊಯ್ಲು ನಡೆಸಿ ತೋಟದಲ್ಲೇ ಅಡಕೆಯನ್ನು ಗೊನೆಯಿಂದ ಬೇರ್ಪಡಿಸಿ ಗೋಣಿ ಚೀಲಗಳಲ್ಲಿ ತುಂಬಿಸಿ ರೋಪ್‌ ವೇ ಮೂಲಕ ಭೀಮೇಶರು ಸಾಗಿಸುತ್ತಿದ್ದಾರೆ.

ತೋಟಕ್ಕೆ ಗೊಬ್ಬರ ಸಾಗಾಟಕ್ಕೂ ಇದನ್ನು ಬಳಸುತ್ತಿದ್ದಾರೆ. ಯಾವುದೇ ಕೃಷಿ ಉತ್ಪನ್ನವನ್ನು ತೊಟ್ಟಿಲಿನಲ್ಲಿ ಇಟ್ಟು ಹಗ್ಗವನ್ನು ಎಳೆಯುವುದು ಅಥವಾ ಅಳವಡಿಸಲಾದ ಚಕ್ರವನ್ನು ತಿರುಗಿಸಿದರೆ ಅಲ್ಲಿಂದ ಮುಂದಕ್ಕೆ ಸರಾಗವಾಗಿ ಟ್ರಾಲಿ ಓಡಾಡುತ್ತೆ.

ಇದನ್ನೂ ಓದಿ: Farming: ಒಂದು ಎಕರೆಯಲ್ಲಿ100 ಬಗೆಯ ಔಷಧೀಯ ಸಸ್ಯ ಬೆಳೆದ ರೈತ, ಇಷ್ಟು ಮಾಡೋಕೆ ಆತ ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ನೋಡಿ

ಈ ಸೇತುವೆಯಿಂದ ಹಣ ಪೋಲಾಗುವುದು ತಪ್ಪಿತು

ಪ್ರತೀ ಮಳೆಗಾಲಕ್ಕೂ ಸುಮಾರು‌ ಹತ್ತು ಸಾವಿರಕ್ಕೂ ಮಿಕ್ಕಿ ಹಣ ವ್ಯಯಿಸಿ‌ ಅಡಿಕೆ ಸೇತುವೆ ಮಾಡಲಾಗುತ್ತದೆ‌. ಆದರೆ ಹೊಳೆಯಲ್ಲಿ ನೀರು ಜಾಸ್ತಿ ಬಂದಲ್ಲಿ ಒಂದೇ ಮಳೆಗೆ‌ ಸೇತುವೆ‌ ಕೊಚ್ಚಿ ಹೋಗುತ್ತದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಈ ಹೊಳೆಗೆ ಅಲ್ಲಲ್ಲಿ ಕಟ್ಟಗಳನ್ನು ಕಟ್ಟುವ ಕಾರಣ ಬೇಸಿಗೆಯಲ್ಲೂ ಆಳೆತ್ತರದಲ್ಲಿ ನೀರು ಸಂಗ್ರಹವಾಗುವುದರಿಂದ ತೋಟದ ಒಂದು ಕಡೆಯಿಂದ ಇನ್ನೊಂದು ಕಡೆಗೆ‌ ಹೋಗುವುದು

ಇದೀಗ ಈ ರೋಪ್ ವೇ ನಿಂದಾಗಿ ಕೆಲಸವೆಲ್ಲಾ ಸುಲಭವಾಗಿದೆ. ಅಲ್ಲದೆ ಗ್ರಾಮಸ್ಥರೂ ಹೊಳೆಯ ಇನ್ನೊಂದು ಕಡೆಗೆ ತೆರಳಲು ವ್ಯಯಿಸಬೇಕಾದ ಸಮಯ ಹಾಗೂ ಖರ್ಚನ್ನೂ ಈ ರೋಪ್ ವೆ ಉಳಿಸಿದೆ.
Published by:Annappa Achari
First published: