ಬಸ್ ನಿಲ್ದಾಣವೇ ಶಾಲೆಯಾದಾಗ: ನೆಟ್ವರ್ಕ್ಗಾಗಿ ಕಾರವಾರ ಗ್ರಾಮೀಣ ಪ್ರದೇಶದ ಮಕ್ಕಳ ಅಲೆದಾಟ
ಬಸ್ ನಿಲ್ದಾಣವನ್ನು ಏನೋ ಶಾಲೆ ಮಾಡಿಕೊಂಡಿದ್ದಾಗಿದೆ. ಆದರೆ, ಇಲ್ಲಿ ಬರುವ ಬಸ್ಗಳು ಹಾಗೂ ಜನರ ಓಡಾಟದಿಂದ ಪಾಠದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
news18-kannada Updated:October 7, 2020, 5:55 PM IST

ಬಸ್ ನಿಲ್ದಾಣದಲ್ಲಿ ಕಲಿಕೆಯಲ್ಲಿ ತೊಡಗಿರುವ ಮಕ್ಕಳು
- News18 Kannada
- Last Updated: October 7, 2020, 5:55 PM IST
ಕಾರವಾರ (ಅ.5): ಕೊರೋನಾ ಪರಿಣಾಮದಿಂದ ಶಾಲೆಗಳು ಆನ್ಲೈನ್ ಶಿಕ್ಷಣದ ಮೊರೆ ಹೋಗಿದ್ದಾರೆ. ಆದರೆ, ಈ ಆನ್ಲೈಲ್ ಶಿಕ್ಷಣ ಕೂಡ ಮಕ್ಕಳಿಗೆ ಹಲವು ಸಂದಿಗ್ಧತೆಯನ್ನು ತಂದು ಒದಗಿಸಿದೆ. ಅನೇಕ ಬಡ ಮಕ್ಕಳು ಸ್ಮಾರ್ಟ್ಫೋನ್ ಇಲ್ಲದೇ ತರಗತಿಗೆ ಹಾಜರಾಗದೇ ತೊಂದರೆ ಅನುಭವಿಸಿದರೆ, ಗುಡ್ಡ-ಗಾಡು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆಟ್ವರ್ಕ್ನದ್ದೆ ಸಮಸ್ಯೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಮಕ್ಕಳಿಗೆ ಈ ನೆಟ್ವರ್ಕ್ ಎಂಬುದು ಗಗನ ಕುಸುಮ ಎಂಬಂತೆ ಆಗಿದೆ. ಈ ಪ್ರದೇಶಗಳಲ್ಲಿ ನೆಟ್ವರ್ಕ್ ಎಲ್ಲಿದೆ ಎಂದು ಹುಡುಕಿಕೊಂಡು ಹೋಗುವ ಕಸರತ್ತು ಇಲ್ಲಿಯ ಜನರದು. ಅಲ್ಲದೇ ಎಲ್ಲಿ ಸಿಗ್ನಲ್ ಸಿಗುತ್ತತೋ ಅಲ್ಲಿಯೇ ಬಿಡಾರ ಹೂಡಿರುವ ಘಟನೆಗಳು ನಡೆಯುತ್ತಿವೆ. ಇದೇ ರೀತಿ ಇಲ್ಲಿನ ದೇವಳಮೆಕ್ಕಿ, ಶೀರ್ವೆ, ನಗೆಕೊವೆ ಗ್ರಾಮದ ವಿದ್ಯಾರ್ಥಿಗಳು ಹತ್ತಿರದ ಬಸ್ ನಿಲ್ದಾಣ ಮತ್ತು ದೇವಸ್ಥಾನಗಳನ್ನೇ ಶಾಲೆಗಳನ್ನಾಗಿ ಮಾಡಿಕೊಂಡಿದ್ದಾರೆ.
ಆನ್ಲೈನ್ ತರಗತಿಗಾಗಿ ಪ್ರತಿದಿನ ಬೆಳಗ್ಗೆ ಎರಡು ಮೂರು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಬಂದು ಬಸ್ ನಿಲ್ದಾಣ ಸೇರುತ್ತಿದ್ದಾರೆ. ಇಲ್ಲಿ ಬಿಟ್ಟರೆ ಮತ್ತೆಲ್ಲೂ ಉತ್ತಮ ಸಿಗ್ನಲ್ ಸಿಗುತ್ತಿಲ್ಲ ಎಂಬುದು ಇಲ್ಲಿನ ಮಕ್ಕಳ ದೂರು. ಬಸ್ ನಿಲ್ದಾಣವನ್ನು ಏನೋ ಶಾಲೆ ಮಾಡಿಕೊಂಡಿದ್ದಾಗಿದೆ. ಆದರೆ, ಇಲ್ಲಿ ಬರುವ ಬಸ್ಗಳು ಹಾಗೂ ಜನರ ಓಡಾಟದಿಂದ ಪಾಠದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
ಇದನ್ನು ಓದಿ: ದುಬಾರಿ ಮಾಸ್ಕ್ ದಂಡ: ವಿರೋಧ ಹಿನ್ನಲೆ 1000ರೂ ನಿಂದ 250ಕ್ಕೆ ಬೆಲೆ ಇಳಿಸಿದ ಕರ್ನಾಟಕ ಸರ್ಕಾರ
ಆನ್ ಲೈನ್ ಶಿಕ್ಷಣ ಹಳ್ಳಿ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೇ ಇಲ್ಲಿನ ನೆಟ್ವರ್ಕ್ ಸಮಸ್ಯೆ ಇಲ್ಲಿನ ಮಕ್ಕಳು ಕಲಿಕೆಯೂ ಅಷ್ಟಕಷ್ಟೇ ಯಾಗಿದೆ. ಇದರ ಬದಲು ಶಾಲೆಗಳನ್ನು ತೆರೆಯುವುದು ಒಳಿತು ಎಂಬುದು ಇಲ್ಲಿನ ಪೋಷಕರ ಅಂಬೋಣ.
ಕೊರೋನಾ ಭೀತಿಯಿಂದಾಗಿ ಸರ್ಕಾರ ಶಾಲೆ ತೆರೆಯುತ್ತಿಲ್ಲ. ಇತ್ತ ನೆಟ್ವರ್ಕ್ ಸಮಸ್ಯೆಯಿಂದ ಪಾಠ ಕೇಳಲು ಕೂಡ ಆಗುತ್ತಿಲ್ಲ. ಹಾಗೆಂದು ಶಾಲೆಗಳು ಈ ಆನ್ಲೈನ್ ಶಿಕ್ಷಣ ನಿಲ್ಲಿಸಲು ಮುಂದಾಗಿಲ್ಲ. ಈ ಎಲ್ಲಾ ಸಮಸ್ಯೆ ನಡುವೆ ವಿದ್ಯಾರ್ಥಿಗಳಂತೂ ಹೈರಾಣಾಗಿದ್ದಾರೆ.