Karwar to Bengaluru: ಪ್ರಯಾಣಿಕರಿಗೆ ಖುಷಿ ಸುದ್ದಿ, ಇನ್ಮೇಲೆ 45 ನಿಮಿಷ ಬೇಗನೇ ಬೆಂಗಳೂರು ತಲುಪಿ!

ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಈ ಹಿಂದೆ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 8 ಗಂಟೆಗೆ ಆಗಮಿಸುತ್ತಿತ್ತು. ಜೂನ್ 1 ರ ನಂತರ ಇದು 7:15 ಗಂಟೆಗೆ ನಿಲ್ದಾಣವನ್ನು ತಲುಪುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕರಾವಳಿಯಿಂದ ಬೆಂಗಳೂರಿನ ಕಡೆಗೆ, ಬೆಂಗಳೂರಿನಿಂದ ಕರಾವಳಿ ಕಡೆಗೆ ಪ್ರಯಾಣ ಮಾಡುವ ಪ್ರವಾಸಿಗರಿಗೆ, ಕರಾವಳಿಯ ನಿವಾಸಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.  ಮುಂದಿನ ತಿಂಗಳಿನಿಂದ ನೈರುತ್ಯ ರೈಲ್ವೆ (SWR) ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್‌ (Karwar to Bengaluru) ರೈಲಿನ ಪ್ರಯಾಣದ ಸಮಯವನ್ನು 45 ನಿಮಿಷಗಳಷ್ಟು ಕಡಿತಗೊಳಿಸಿರುವುದಾಗಿ ತಿಳಿಸಿದೆ. ಕಾರವಾರದಿಂದ ಬೆಂಗಳೂರಿಗೆ ಆಗಮಿಸುವ ಪಂಚಗಂಗಾ ಎಕ್​ಪ್ರೆಸ್​ನ (Panchaganga Express) ಪ್ರಯಾಣದ  ಸಮಯ ಕಡಿಮೆ ಆಗಲಿದೆ.  ಬೆಂಗಳೂರಿನಿಂದ ಕರಾವಳಿಗೆ ಆಗಮಿಸುವ ಪ್ರಯಾಣಿಕರು ಇನ್ನಷ್ಟು ಬೇಗನೆ ತಲುಪಬಹುದಾಗಿದೆ. ಜೊತೆಗೆ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌ನ ಪ್ರಯಾಣದ ಸಮಯವನ್ನು ಸಹ 20 ನಿಮಿಷ ಕಡಿತಗೊಳಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

    ಕರಾವಳಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನ ನಡುವೆ ಪ್ರಯಾಣಿಸುವವರು ಇನ್ನಷ್ಟು ಬೇಗನೇ ತಮ್ಮ ಪ್ರಯಾಣವನ್ನು ಮುಗಿಸಬಹುದಾಗಿದೆ.

    ರೈಲು ಹಳಿ ನವೀಕರಣದ ಪ್ರತಿಫಲ
    ಹಾಸನ-ಶ್ರವಣಬೆಳಗೊಳ ನಡುವೆ ಇತ್ತೀಚಿಗೆ ನಡೆಸಿದ ರೈಲು ಹಳಿ ನವೀಕರಣದಿಂದ ಪ್ರಯಾಣದ ಸಮಯ ಕಡಿತ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ಹಾಸನ-ಬೆಂಗಳೂರು ವಿಭಾಗದಲ್ಲಿ ರೈಲುಗಳ ವೇಗ ಹೆಚ್ಚಾಗಿದೆ.

    ಇದನ್ನೂ ಓದಿ:Tipu Politics: ಟಿಪ್ಪು ಹುತಾತ್ಮ ದಿನಾಚರಣೆ vs ದೊಡ್ಡ ನಂಜೇಗೌಡ, ಉರಿಗೌಡರ ದಿನಾಚರಣೆ! ಮಂಡ್ಯದಲ್ಲಿ ಏನಾಗಲಿದೆ?

    ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಈ ಹಿಂದೆ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 8 ಗಂಟೆಗೆ ಆಗಮಿಸುತ್ತಿತ್ತು. ಜೂನ್ 1 ರ ನಂತರ ಇದು 7:15 ಗಂಟೆಗೆ ನಿಲ್ದಾಣವನ್ನು ತಲುಪುತ್ತದೆ.

    ಕಣ್ಣೂರು-ಬೆಂಗಳೂರು ರಾತ್ರಿ ಪ್ರಯಾಣದ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ಮೂಲಕ ಹಾದುಹೋಗುತ್ತದೆ. ಬೆಳಗ್ಗೆ 6.50 ಕ್ಕೆ ಬೆಂಗಳೂರು ತಲುಪುತ್ತದೆ. ಇದು ಇನ್ನುಮುಂದೆ ಪ್ರತಿದಿನ ಬೆಳಗ್ಗೆ 6:30 ಗಂಟೆಗೆ ನಗರವನ್ನು ತಲುಪುತ್ತದೆ.

    ಎರಡೂ ರೈಲುಗಳ ಆಗಮನದ ಸಮಯದಲ್ಲಿ ಬದಲಾವಣೆ ಇದೆಯೇ?
    ಆದರೂ ಮಂಗಳೂರು ಮತ್ತು ಕಾರವಾರದಲ್ಲಿ ಎರಡೂ ರೈಲುಗಳ ಆಗಮನದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.10 ಕ್ಕೆ ಹೊರಟರೆ, ಪಂಚಗಂಗಾ ಎಕ್ಸ್‌ಪ್ರೆಸ್ ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡುತ್ತದೆ. ಜೂನ್ 1 ರಿಂದ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ 10:20 ಗಂಟೆಗಳು ಮತ್ತು ಕಾರವಾರದಿಂದ ಬೆಂಗಳೂರಿಗೆ 13:15 ಗಂಟೆಗಳು ತೆಗೆದುಕೊಳ್ಳುತ್ತದೆ.

    ವಿದ್ಯುತ್ ಅಭಾವದಿಂದ ರದ್ದುಗೊಂಡಿದ್ದ ರೈಲುಗಳು
    ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣಗಳಿಂದಾಗಿ ಸುಮಾರು 240 ರೈಲುಗಳನ್ನು ರದ್ದುಗೊಳಿಸಲಾಗಿದೆ (Rail Cancels) ಎಂದು ಭಾರತೀಯ ರೈಲ್ವೇ ಇತ್ತೀಚಿಗೆ ಪ್ರಕಟಿಸಿತ್ತು. ರೈಲ್ವೆಯ ಅಧಿಸೂಚನೆಯ ಪ್ರಕಾರ, ಹೊರಡಬೇಕಿದ್ದ 164 ಪ್ರಯಾಣಿಕ ರೈಲುಗಳನ್ನು (Passenger Trains) ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಇನ್ನುಳಿದ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿತ್ತು. ಅಲ್ಲದೇ ಇನ್ನೂ 650ಕ್ಕೂ ರೈಲುಗಳು ರದ್ದಾಗಲಿವೆ ಎಮದು ತಿಳಿದುಬಂದಿತ್ತು.

    ಬ್ಯಾಕಪ್ ಇಲ್ಲ
    ಸುದ್ದಿಗಾರರ ಜೊತೆ ಮಾತನಾಡಿರುವ ದೆಹಲಿ ಸರ್ಕಾರದ ವಿದ್ಯುತ್ ಖಾತೆ ಸಚಿವ ಸತ್ಯೇಂದರ್ ಜೈನ್, ವಿದ್ಯುತ್‌ಗೆ ಬ್ಯಾಕಪ್ ಇಲ್ಲ. ವಿದ್ಯುತ್ ಸಂಗ್ರಹಿಸಲು ಸಾಧ್ಯವಿಲ್ಲ. ಇದನ್ನು ಪ್ರತಿದಿನ ಉತ್ಪಾದಿಸಲಾಗುತ್ತದೆ. ಕಲ್ಲಿದ್ದಲು ಸಂಗ್ರಹಿಸಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ, ಕಲ್ಲಿದ್ದಲು ಸಂಗ್ರಹವು ಸುಮಾರು 21 ದಿನಗಳು ಇರಬೇಕು. ಅನೇಕ ವಿದ್ಯುತ್ ಸ್ಥಾವರಗಳು ಒಂದು ದಿನದ ಕಲ್ಲಿದ್ದಲು ಸಂಗ್ರಹದೊಂದಿಗೆ ಉಳಿದಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು.

    ಕಲ್ಲಿದ್ದಲು ಕೊರತೆ
    ದಾದ್ರಿ ಮತ್ತು ಉಂಚಹಾರ್ ಸ್ಥಾವರಗಳಲ್ಲಿ ಎಷ್ಟು ಕಲ್ಲಿದ್ದಲು ಉಳಿದಿದೆ ಎಂದು ವರದಿಗಾರರು ಕೇಳಿದಾಗ, ಅವರು ಸುಮಾರು ಒಂದು ದಿನ ಮಾತ್ರ ಸಾಕಾಗುವಷ್ಟು ಎಂದು ಮಾಹಿತಿ ನೀಡಿದ್ದರು.

    ಇದನ್ನೂ ಓದಿ: Kempegowda Statue: 85 ಕೋಟಿಯ ಕೆಂಪೇಗೌಡ ಪ್ರತಿಮೆ; ದೆಹಲಿಯಿಂದ ಬೆಂಗಳೂರಿಗೆ ಬಂತು 4,000 ಕೆ.ಜಿ ಖಡ್ಗ

    ವಿದ್ಯುತ್ ಸ್ಥಾವರಗಳು 21 ದಿನಗಳ ಕಲ್ಲಿದ್ದಲು ಸಂಗ್ರಹವನ್ನು ಹೊಂದಿರಬೇಕು. 21 ದಿನಗಳಲ್ಲದಿದ್ದರೂ ಕನಿಷ್ಠ 14 ದಿನಗಳು ಅಥವಾ 7 ದಿನಗಳು ಇರಬೇಕು ಎಂದು ಅವರು ಹೇಳಿದರು. ಒಂದು ದಿನದ ಮೌಲ್ಯದ ಕಲ್ಲಿದ್ದಲು ಸಂಗ್ರಹ ಏನಕ್ಕೂ ಸಾಲದು ಎಂದು ಸಹ ಸತ್ಯೇಂದರ್ ಜೈನ್ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.
    Published by:guruganesh bhat
    First published: