• Home
  • »
  • News
  • »
  • state
  • »
  • Karwar: ಕಾರವಾರ ರೈಲ್ವೇ ನಿಲ್ದಾಣದಲ್ಲಿ ದಾಖಲೆಯಿಲ್ಲದ 2 ಕೋಟಿ ರೂ ನಗದು ವಶಕ್ಕೆ ಪಡೆದ ಪೊಲೀಸರು

Karwar: ಕಾರವಾರ ರೈಲ್ವೇ ನಿಲ್ದಾಣದಲ್ಲಿ ದಾಖಲೆಯಿಲ್ಲದ 2 ಕೋಟಿ ರೂ ನಗದು ವಶಕ್ಕೆ ಪಡೆದ ಪೊಲೀಸರು

ವಶಕ್ಕೆ ಪಡೆದ ಹಣ ಮತ್ತು ಪೊಲೀಸರ ತಂಡ

ವಶಕ್ಕೆ ಪಡೆದ ಹಣ ಮತ್ತು ಪೊಲೀಸರ ತಂಡ

ಜಪ್ತಿಪಡಿಸಿಕೊಂಡ ರೂ.2 ಕೋಟಿ ನಗದು  ಬ್ಯಾಗ್ ಸಹಿತ ಮುಂದಿನ ಕಾನೂನು ಮತ್ತು ಅಗತ್ಯ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಕಾರವಾರ ಗ್ರಾಮೀಣ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ.

  • Share this:

ಕಾರವಾರ: ರೈಲಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ನಗದನ್ನು (Cash) ಜಪ್ತಿಪಡಿಸಿಕೊಂಡಿರುವ ರೈಲ್ವೆ ರಕ್ಷಣಾ‌ ದಳ (Railway Protection Force), ಓರ್ವ ಯುವಕನನ್ನು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಠಾಣೆಗೆ (Karwar Rural Police)ಪ್ರಕರಣ ಹಸ್ತಾಂತರಿಸಿದೆ. ರೈಲು ಸಂಖ್ಯೆ: 12133 ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್- ಮಂಗಳೂರು ಜಂಕ್ಷನ್ ಎಕ್ಸ್‌ ಪ್ರೆಸ್ ನಲ್ಲಿ (Mumbai To Managluru Train) ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ಯುವಕನೊಬ್ಬ ಬ್ಯಾಗ್‌ ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು (Suspected Things) ಹೊಂದಿದ್ದ. ಈ ಬಗ್ಗೆ ರೈಲ್ವೆ ಟಿಕೆಟ್ ಪರೀಕ್ಷಕರು (Railway Ticket Examiners) ವಿಚಾರಿಸಿದರೂ ಸರಿಯಾಗಿ ಉತ್ತರಿಸದಿದ್ದಾಗ ಆರ್.ಪಿ.ಎಫ್ (RPF) ಗೆ ಮಾಹಿತಿ ನೀಡಿದ್ದರು. ಆರ್.ಪಿಎಫ್ ಸಿಬ್ಬಂದಿ ರೈಲು ಕಾರವಾರ ನಿಲ್ದಾಣಕ್ಕೆ (Karwar Railway Station) ಬಂದಾಗ ಅನುಮಾನಿತನ ಬ್ಯಾಗ್ ತಪಾಸಣೆ ನಡೆಸಿದ್ದು, ಈ ವೇಳೆ ಬ್ಯಾಗ್ ನಲ್ಲಿ ರೂ.2 ಕೋಟಿ ಭಾರತೀಯ ಕರೆನ್ಸಿ ನೋಟುಗಳು (Indian Currency) ಪತ್ತೆಯಾಗಿವೆ.  


ಬಂಧಿತ ವ್ಯಕ್ತಿಯನ್ನು ರಾಜಸ್ಥಾನದ ಜಲೋರ್ ನ 22 ವರ್ಷದ ಚೇನ್ ಸಿಂಗ್ ಎಂದು ಗುರುತಿಸಲಾಗಿದೆ. ಈತನನ್ನು ವಿಚಾರಣೆ ನಡೆಸಿದಾಗ ಮುಂಬೈನ ಭರತ್ ಭಾಯ್ ಅಲಿಯಾಸ್ ಪಿಂಟು ಎಂಬಾತನ ಬಳಿ ರೂ.15000 ಮಾಸಿಕ ವೇತನದಲ್ಲಿ ಕೆಲಸ ಮಾಡುತ್ತಿದ್ದು, ಹಣವನ್ನು ಮಂಗಳೂರಿನಲ್ಲಿರುವ ರಾಜು ಎನ್ನುವವರಿಗೆ ತಲುಪಿಸಲು ಒಯ್ಯುತ್ತಿರುವುದಾಗಿ ತಿಳಿಸಿದ್ದಾನೆ.


ಜಪ್ತಿಪಡಿಸಿಕೊಂಡ ರೂ.2 ಕೋಟಿ ನಗದು  ಬ್ಯಾಗ್ ಸಹಿತ ಮುಂದಿನ ಕಾನೂನು ಮತ್ತು ಅಗತ್ಯ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಕಾರವಾರ ಗ್ರಾಮೀಣ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ.


ಇದನ್ನೂ ಓದಿ: Byramangala Lake: ಬಿಡದಿಯ ಭೈರಮಂಗಲ ಕೆರೆಯೇ ಇಲ್ಲಿಗೆ ವರ, ಶಾಪ; ಜನರಲ್ಲಿ ಆತಂಕ


ಪಕ್ಕಾ ಮಾಹಿತಿ ಕಾರವಾರದಲ್ಲಿ ಏಕಾಏಕಿ ದಾಳಿ ನಡೆಸಿದ ರೈಲ್ವೆ ಪೋಲಿಸರು


ಮುಂಬೈನಿಂದ‌ ಹೊರಟ ರೈಲ್ವೆಯಲ್ಲಿ ಬೋಗಿಯಿಂದ ಬೋಗಿಗೆ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಆಸಾಮಿ ಚೇನ್ ಸಿಂಗ್ ಹಾವಬಾವ ಟಿಕೆಟ್ ಕಲೆಕ್ಟರ್ ಗೆ ಅನುಮಾನ ಹುಟ್ಟಿದಾಗ ಈ ಆಸಾಮಿಯನ್ನ ನಿಲ್ಲಿಸಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ತಡವರಿಸಿ ಮಾತನಾಡಿದ ಚೇನ್ ಸಿಂಗ್ ಬ್ಯಾಗ್ ನಲ್ಲಿ ಹಣ‌ ಇರುವುದು ಬೆಳಕಿಗೆ ಬಂದಿದೆ.


ಕೂಡಲೇ ಟಿಕೆಟ್ ಕಲೆಕ್ಟರ್ ರೈಲ್ವೇ ಪೋಲಿಸ್ ರಿಗೆ ತಿಳಿಸಿದ್ದಾರೆ. ರೈಲ್ವೆ ಕಾರವಾರ ತಲುಪುತ್ತಿದ್ದಂತೆ ಕಾರ್ಯಪ್ರವೃತ್ತರಾದ ರೈಲ್ವೇ ಪೋಲಿಸರು ದಾಳಿ ನಡೆಸಿದಾಗ ಹವಾಲ‌ಹಣ ಸಮೇತ ಸಿಕ್ಕಿಬಿದ್ದಿದ್ದು ಇರುವ ಸತ್ಯವನೆಲ್ಲ ಬಾಯ್ಬಿಟ್ಟಿದ್ದಾನೆ.


ಹವಾಲ ಹಣ ಅಲ್ಲ ಅತಿಯಾಗಿ ಸಾಗಟವಾಗ್ತಿದೆ ಗೋವಾ ಮದ್ಯ


ರೈಲ್ವೆ ಈಗ ಅಕ್ರಮ ವಸ್ತುಗಳ ಸಾಗಾಟದ ವೇದಿಕೆಯಾಗುತ್ತಿದೆ ಎನ್ನುವ ಅನುಮಾನ ಹುಟ್ಟುತ್ತಿದೆ. ಯಾಕೆಂದ್ರೆ ಕಳೆದ ಒಂದು ವರ್ಷದಲ್ಲಿ ರೈಲ್ವೆಯಲ್ಲಿ ಅಕ್ರಮ ಮದ್ಯ ಸಾಗಾಟದ ಹತ್ತಾರು ಪ್ರಕರಣ ಬೆಳಕಿಗೆ ಬಂದಿದೆ. ಈ ನಡುವೆ ಈಗ ಹವಾಲ ಹಣ ಸಾಗಾಟ ಕೂಡ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಪೋಲಿಸ್ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕಾಗಿದೆ.


ಗೋವಾದಲ್ಲಿ ಅತೀ ಅಗ್ಗದ ದರದಲ್ಲಿ ಸಿಗುವ ಮದ್ಯವನ್ನ ಕಳ್ಳ ದಾರಿ‌ ಮೂಲಕ ಕಾರವಾರ ಸಾಗಾಟದಾರರು ತಂದು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾರೆ. ಗೋವಾ ರಾಜ್ಯದಲ್ಲಿ ರಾಜಾರೋಷವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಇಲ್ಲದಿರುವುದು ಗೋವಾ ಅಧಿಕಾರಿಗಳ ನಿರ್ಲಕ್ಷ್ಯ ಕೂಡಾ ಕಾಣುತ್ತಿದೆ.


ಇದನ್ನೂ ಓದಿ:  Cabs In Bengaluru: ಬೆಂಗಳೂರಿನಲ್ಲಿ ಉಬರ್, ಓಲಾ ಸಿಗುತ್ತಿಲ್ಲವೇ? ಇದಕ್ಕೆ ಕಾರಣ ಇಲ್ಲಿದೆ ನೋಡಿ


ಲಾಕ್​​ಡೌನ್ ಸಂದರ್ಭದಲ್ಲಿ ಅರಣ್ಯ ಪ್ರದೇಶದ ಕಳ್ಳ ದಾರಿ ಮೂಲಕ ಅಕ್ರಮವಾಗಿ ಗೋವಾದಿಂದ ರಾಜ್ಯಕ್ಕೆ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ಮದ್ಯ ವಶಕ್ಕೆ ಪಡೆದರೂ ಸಾಗಾಟ ಮಾತ್ರ ಇನ್ನೂ ನಿಂತಿರಲಿಲ್ಲ. ಹೀಗಾಗಿ ಅಬಕಾರಿ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಅರಣ್ಯ ಪ್ರದೇಶದಲ್ಲಿ ಗೋವಾದಿಂದ ಮಾಡಲಾಗುತ್ತಿರುವ ಅಕ್ರಮ ಮದ್ಯ ಸಾಗಾಟ ತಡೆಯುವುದು ತಲೆನೋವಾಗಿ ಪರಿಣಮಿಸಿತ್ತು.

Published by:Mahmadrafik K
First published: