HOME » NEWS » State » KARWAR MUNICIPAL STAFF ASSAULT ON KARWAR FISHER WOMENS DKK SESR

ಕಾರವಾರದ ಮೀನುಗಾರ ಮಹಿಳೆಯರ ‌ಮೇಲೆ ನಗರಸಭೆ ಸಿಬ್ಬಂದಿ ದರ್ಪ; ಅಧಿಕಾರಿ ವಿರುದ್ಧ ಆಕ್ರೋಶ

ಮೀನುಗಾರರು ಗಂಟು ಮೂಟೆ ಕಟ್ಟಿ ವ್ಯಾಪಾರ ಮುಗಿಸಿ ಹೋಗುತ್ತಿರುವ ಸಂದರ್ಭದಲ್ಲಿ ಬಂದ ನಗರಸಭೆ ಅಧಿಕಾರಿ ಏಕಾಏಕಿ ಲಾಠಿ ಬೀಸಿ ಮೀನನ್ನು ರಸ್ತೆಗೆ ಎಸೆದು ದರ್ಪ ಮೆರೆದಿದ್ದಾರೆ

news18-kannada
Updated:May 7, 2021, 10:23 PM IST
ಕಾರವಾರದ ಮೀನುಗಾರ ಮಹಿಳೆಯರ ‌ಮೇಲೆ ನಗರಸಭೆ ಸಿಬ್ಬಂದಿ ದರ್ಪ; ಅಧಿಕಾರಿ ವಿರುದ್ಧ ಆಕ್ರೋಶ
ಅಧಿಕಾರಿಯ ದರ್ಪ
  • Share this:
ಕಾರವಾರ (ಏ. 7): ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಅವಧಿಗಿಂತಲೂ ಹೆಚ್ಚು ಸಮಯ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದರ ಜತೆಗೆ ಪೋಲಿಸ್ ಗಿಂತ ಹೆಚ್ಚಿನ ದರ್ಪ ತೋರುವ ಕಾರವಾರ ನಗರಸಭೆ ಸಿಬ್ಬಂದಿ ಕರ್ಪ್ಯೂ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡುವ ಬದಲು ಅವರು ತಂದ ಸಾಮಾನು ರಸ್ತೆಗೆ ಎಸೆದು ದರ್ಪ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇವತ್ತು ಮೀನುಗಾರರ ಮಹಿಳೆಯರಿಗೆ ಲಾಠಿ ಏಟಿನ ಮೂಲಕ ಹಲ್ಲೆ ನಡೆಸಿದ್ದು, ಜೊತೆಗೆ ಮೀನುಗಳನ್ನ ರಸ್ತೆಗೆ ಎಸೆದಿರುವ ಅಮಾನುಷ ಘಟನೆ ನಡೆದಿದೆ. ನಗರಸಭೆ ಸಿಬ್ಬಂದಿ ಕಾರವಾರದಲ್ಲಿ ಕರ್ಪ್ಯೂ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿ ಅವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವ ಬದಲು ಈ ರೀತಿ ಅಮಾನವೀಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಅಷ್ಟೆ ಅಲ್ಲದೆ, ಮಾರಾಟಕ್ಕೆ ತಂದಿದ್ದ ಮೀನನ್ನು ರಸ್ತೆಗೆ ಎಸೆಯುವ ಮೂಲಕ ದೌರ್ಜನ್ಯ ನಡೆಸಿದ್ದಾರೆ. ಈ ರೀತಿ ಕಾನೂನು ಮೀರಿ ನಡೆದುಕೊಳ್ಳುತ್ತಿರುವ ನಗರಸಭೆ ಸಿಬ್ಬಂದಿ ನಿಲೇಶ್ ವಿರುದ್ದ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದು,  ಆತನನ್ನು ಉದ್ಯೋಗದಿಂದ ವಜಾಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಕೊರೋನಾ ಸಂಕಷ್ಟ ಕಾಲದಲ್ಲಿ  ಸಿಕ್ಕ ಅವಕಾಶದಲ್ಲಿಯೇ ದುಡಿಮೆ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಮೀನುಗಾರರು ಮುಂದಾಗಿದ್ದಾರೆ. ಅದರಂತೆ ಹತ್ತು ಗಂಟೆ ಬಳಿಕ ಮೀನುಗಾರರು ಗಂಟು ಮೂಟೆ ಕಟ್ಟಿ ವ್ಯಾಪಾರ ಮುಗಿಸಿ ಹೋಗುತ್ತಿರುವ ಸಂದರ್ಭದಲ್ಲಿ ಬಂದ ನಿಲೇಶ್ ಏಕಾಏಕಿ ಲಾಠಿ ಬೀಸಿ ಮೀನನ್ನು ರಸ್ತೆಗೆ ಎಸೆದು ದರ್ಪ ಮೆರೆದಿದ್ದಾರೆ

ಕಷ್ಟ ವಾಗುತ್ತಿದೆ ಮೀನುಗಾರರ ಬದುಕು

ಮೀನು ವ್ಯಾಪಾರ ಮಾರಾಟಕ್ಕೆ ಸರಕಾರ ಮನೆ ಮನೆ ಹೋಗಿ ವ್ಯಾಪಾರ ಮಾಡಲು ಹೇಳಿದೆ. ಆದರೆ  ಸರಕಾರದ ಈ ಆದೇಶ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಆಗುತ್ತಿದೆ. ಕಾರಣ  ಕೊರೋನಾ ಪಸರಿಸುವ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ  ಮಾಡಲು ನಿಷೇಧ ಹೇರಿದ್ದು, ಮತ್ತೊಂದು ಕಡೆ ಮನೆ ‌ಮನೆ ಹೋಗಿ‌ ಮಾರಾಟಕ್ಕೆ ಅವಕಾಶ ನೀಡಿದೆ.

ಇದನ್ನು ಓದಿ: ಪ್ರಕೃತಿ-ಜೀವನ ಕಲಿಸಿದ ಸುಂದರ ಪಾಠ; ಈ ಕ್ಷಣದಲ್ಲಿ ಖುಷಿಯಿಂದ ಜೀವಿಸಿ ಎಂದ ಕಿಚ್ಚ ಸುದೀಪ್

ಮನೆ ಮನೆ ಹೋಗಿ ಮಾರಾಟ ಮಾಡಿದರೆ ಕೊರೋನಾ ಬರಲ್ವಾ ಎಂಬ ಪ್ರಶ್ನೆ ಮೀನು ವ್ಯಾಪಾರಸ್ಥರದ್ದಾಗಿದೆ. ಹತ್ತು ಗಂಟೆ ವರೆಗಿನ ಅವಧಿಯಲ್ಲಿ ಮೀನು ವ್ಯಾಪಾರ ಮಾಡಲು ಮುಂದಾದ್ರೆ ನಗರಸಭೆ ಸಿಬ್ಬಂದಿ ಮನಸ್ಸೋ ಇಚ್ಚೆ ಕಾನೂನು ನಿಯಮ ಮೀರಿ ವರ್ತಿಸುತ್ತಿದ್ದಾರೆ, ಮಹಿಳೆಯರ ಮೇಲೆ ಲಾಠಿ ಏಟು ಹೊಡೆಯುವ ವರೆಗೂ ಮುಂದುವರೆದಿದ್ದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೋಲಿಸ್ ಸಿಬ್ಬಂದಿಗಳೇ ಜನರ ಮೇಲೆ ಸ ಲಾಠಿ ಏಟು ಹೊಡೆಯಲು ಮುಂದಾಗಲ್ಲ. ಈ ನಡುವೆ ನಗರಸಭೆ ಸಿಬ್ಬಂದಿ ಯಾವ ಅಧಿಕಾರಿಂದ ಲಾಠಿ ಏಟು ಹೊಡಿತ್ತಾರೆ. ಅವರ ವಿರುದ್ದ ಕ್ರಮ ಆಗಲೇ ಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ನಿಲೇಶ್ ಬಗ್ಗೆ  ಹಿಂದಿನಿಂದಲೂ ಇದೆ ಆರೋಪನಗರಸಭೆ ಸಿಬ್ಬಂದಿ ನಿಲೇಶ್ ಈ ಹಿಂದೆಯೂ ಕೂಡಾ ನಗರದಲ್ಲಿ ವ್ಯಾಪಾರ ಮಾಡುವವರ ವಿರುದ್ದ ಕೆಟ್ಟದಾಗಿ ವರ್ತಿಸುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.  ಈ ಹಿಂದೆ ನಿಲೇಶ್ ವಿರುದ್ದ ಕಿರುಕುಳದ ಸಾಕಷ್ಟು ಆರೋಪಗಳು ಕುರಿತು ದೂರು ದಾಖಲಾಗಿದ್ದು, ಈ ಸಂಬಂಧ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮತ್ತೆ ಈಗ ನಿಲೇಶ್ ಚಿಗುರುಕೊಂಡಿದ್ದಾನೆ ಎಂದು ಜನರು ಟೀಕಿಸುತ್ತಿದ್ದಾರೆ. ಭೂತಾಯಿ ಎಂಬಂತೆ ನಾವು ಮೀನನ್ನು ಪೂಜಿಸುತ್ತಿರುವಾಗ ಅಧಿಕಾರಿ ಈ ರೀತಿ ವರ್ತಿಸಿರುವುದು ಅಕ್ಷಮ್ಯ. ಈ ಹಿನ್ನಲೆ ಆತನ ವಿರುದ್ಧ ಕ್ರಮಕ್ಕೆ ಮುಂದಾಗಲೇ ಬೇಕು ಎಂದು ಮೀನುಗಾರರು ಪಟ್ಟು ಹಿಡಿದಿದ್ದಾರೆ.
Published by: Seema R
First published: May 7, 2021, 10:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories