HOME » NEWS » State » KARWAR MUNDAGOD WOMEN HELPING POORS IN COVID CRISIS DKK SESR

ತಮ್ಮ ಕಷ್ಟದಲ್ಲೂ ಇತರರ ನೆರವಿಗೆ ಆಗಮಿಸುತ್ತಿರುವ ಮಹಿಳೆ; ಇವರ ಕಾರ್ಯಕ್ಕೊಂದು ಸಲಾಂ

ಕಷ್ಟದಲ್ಲಿಯೂ ಇತರೆ ಜನರ ಕಷ್ಟವನ್ನು ಅರ್ಥಮಾಡಿಕೊಂಡು ನೆರವಿಗೆ ಧಾವಿಸಿರುವ ಅವರ ಕಾರ್ಯ ಪ್ರಾಶಂಸೆ ವ್ಯಕ್ತವಾಗಿದೆ. 

news18-kannada
Updated:May 8, 2021, 7:00 PM IST
ತಮ್ಮ ಕಷ್ಟದಲ್ಲೂ ಇತರರ ನೆರವಿಗೆ ಆಗಮಿಸುತ್ತಿರುವ ಮಹಿಳೆ; ಇವರ ಕಾರ್ಯಕ್ಕೊಂದು ಸಲಾಂ
 ಗಾಯತ್ರಿ ಕಾನಡೆ
  • Share this:
ಕಾರವಾರ (ಮೇ. 8): ರಾಜ್ಯದಲ್ಲೆಡೆ  ಕೋವಿಡ್ ಮಹಾಮಾರಿ ತನ್ನ ಆರ್ಭಟ ಮುಂದುವರಿಸಿದೆ. ಕರೋನಾ  ಸರಪಳಿ ಮುರಿಯಲು ಸ ರಾಜ್ಯದಲ್ಲಿ  ಜನತಾ ಕರ್ಪ್ಯೂ  ಜಾರಿ ಮಾಡುವ ಮೂಲಕ ಸರ್ಕಾರ  ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ. ಹೀಗಾಗಿ ಹಲವರ ಬದುಕು ಮೂರಾಬಟ್ಟೆಯಾಗಿದೆ. ಉದ್ಯೋಗವಿಲ್ಲದೇ ಅನೇಕ ಮಂದಿ ದಿಕ್ಕು ಕಾಣದ ಪತಿಸ್ಥಿತಿಯಲ್ಲಿದ್ದಾರೆ . ಇಂತಹ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಗಾಯತ್ರಿ ಎಂಬ ಮಹಿಳೆಯೊಬ್ಬರು ಬಡಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.  ಕರೋನಾ ರಣಕೇಕೆಯಿಂದ ಇಡೀ ದೇಶವೇ ಸ್ಥಬ್ದವಾಗಿದೆ. ದಿನದ ಕೂಲಿಯನ್ನ ನಂಬಿಕೊಂಡ  ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಉದ್ಯಮಗಳು ಕೂಡ ಸ್ಥಗಿತಗೊಂಡಿದ್ದರಿಂದ ಬಹುತೇಕ ಮಂದಿ ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಸಣ್ಣಪುಟ್ಟ ವ್ಯಾಪಾರವನ್ನ ನಂಬಿಕೊಂಡವರ  ಗೋಳು ಹೇಳತೀರದಾಗಿದೆ.  ಈ ನಡುವೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಮಹಿಳೆಯೊಬ್ಬರು ಮಾನವೀಯ ಕಾರ್ಯ ಮಾಡುತ್ತಿದ್ದಾರೆ. 

ಗಾಯತ್ರಿ ನವೀನ್  ಕಾನಡೆ ಎಂಬ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಲಕ್ಷ್ಮೀ ಹೋಂ  ಪ್ರಾಡೆಕ್ಟ್ ಹೆಸರಿನಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಉದ್ಯಮ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿನಲ್ಲಿ ಅವರು  ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿದರು.  ಎಲ್ಲೆಡೆ ಬಂದ್ ವಾತಾವರಣ ಇದ್ದಿದರಿಂದ ಏನು ಮಾಡುವುದೆಂದು ತೋಚಲಿಲ್ಲ. ಹೀಗಾಗಿ ಬಡವರಿಗಾದರೂ ತಮ್ಮ ಉತ್ಪನ್ನಗಳ ಮೂಲಕ ಸಹಾಯ ಮಾಡಬಹುದಲ್ಲ ಎಂದು ಯೋಜಿಸಿ ಮಾದರಿಯಾಗಿದ್ದಾರೆ.  ಪತಿ ಅವರೊಂದಿಗೆ ಚರ್ಚಿಸಿ  ಪುಡ್ ಕಿಟ್ ಮಾಡಿ ಬಡಕುಟುಂಬಗಳಿಗೆ ವಿತರಿಸುತ್ತಿದ್ದಾರೆ. ಈ ಮೂಲಕ ಅವರು  ತೃಪ್ತಿ ಕಾಣುತ್ತಿದ್ದಾರೆ.

ಇದನ್ನು ಓದಿ: ಬೆಡ್​ಗಾಗಿ ಸಿಎಂ ಬಳಿಯೇ ಆಗಮಿಸುತ್ತಿರುವ ಸೋಂಕಿತರು; ಮುಖ್ಯಮಂತ್ರಿ ನಿವಾಸದ ರಸ್ತೆಯೇ ಬಂದ್​​

ಇದೀಗ  ಗಾಯತ್ರಿ ಮತ್ತು ಅವರ ಪತಿ ನವೀನ್ ಮತ್ತು ಮಕ್ಕಳು ಮನೆಯಲ್ಲಿ ವಿವಿಧ ಬೆಳೆಕಾಳು, ತರಕಾರಿಗಳ ಕಿಟ್ ಮಾಡುತ್ತಿದ್ದಾರೆ.  ಎಲ್ಲೆಡೆ ಬಂದ್  ಇರೋದರಿಂದ ತಮಗೆ ಗೊತ್ತಿರುವ ಬಡವರ ಮನೆಗೆ ತೆರಳಿ ಆಹಾರದ ಕಿಟ್ ನೀಡಿ ಬರುತ್ತಿದ್ದಾರೆ. ಈಗಾಗಲೇ ಮುಂಡಗೋಡು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ  ನೂರಾರು  ಮನೆಗಳಿಗೆ  ಕಿಟ್ ನೀಡಿದ್ದಾರೆ.  ಸಹಾಯ ಬೇಡಿ ಮನೆಗೆ  ಬಂದವರಿಗೂ ಇವರು ಸಹಾಯ ಹಸ್ತ ಚಾಚಿದ್ದಾರೆ.  ಕಡು ಬಡತನದಲ್ಲಿ ಬೆಳೆದ ಗಾಯತ್ರಿ ಕಾನಡೆ ಪಿಯುಸಿವರೆಗೆ ಓದಿದ್ದಾರೆ. ಕುಟುಂಬ ನಿರ್ವಹಣೆಗೋಸ್ಕರ   ಗೃಹ ಉತ್ಪನ್ನ ತಯಾರಿಸಿ ಜೀವನ ಕಂಡು ಕೊಂಡಿದ್ದರು.  ಮೊದ-ಮೊದಲು ಚಿಕ್ಕ ಪ್ರಮಾಣದಲ್ಲಿ ಆರಂಭಿಸಿ ನಂತರ  ಚಿಕನ್ ಮಸಾಲಾ, ಮಟನ್ ಮಸಾಲಾ, ಸಾಂಬಾರ ಮಸಾಲಾ, ದನಿಯಾ ಪೌಡರ್, ಬಿರಿಯಾನಿ ಮಸಾಲಾ, ಗರಂ ಮಸಾಲ ಸೇರಿದಂತೆ ಇತರೆ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ತಾವು ತಯಾರಿಸಿದ ಉತ್ಪನ್ನಗಳನ್ನ ಹುಬ್ಬಳ್ಳಿ ಮತ್ತು ಕಾರವಾರ ಕಡೆ ಮಾರುಕಟ್ಟೆ ಮಾಡುತ್ತಿದ್ದರು. ಮಧ್ಯ ಪ್ರದೇಶ  ಮತ್ತು ಮಹಾರಾಷ್ಟ್ರ ಭಾಗದ ಹಾಸ್ಟೆಲ್‍ಗಳಿಗೆ ಕಳಿಸುತ್ತಿದ್ದರು. ಅದರೀಗ ಕೋವಿಡ್ ಮಹಾಮಾರಿಯಿಂದ ಉದ್ಯಮ ನಷ್ಟದಲ್ಲಿದೆ. ಆದರೂ ಕೂಡ  ಬಡವರಿಗೆ ಸಹಾಯ ಮಾಡುವ ಮೂಲಕ ಉದಾರತೆ ಮೆರೆದಿದ್ದಾರೆ.

ಗಾಯತ್ರಿ ಕಾನಡೆ ಅವರ ಕುಟುಂಬಕ್ಕೆ  ಬೇರೆ ಆದಾಯವಿಲ್ಲ. ಗೃಹ ಉತ್ಪನ್ನ ಮಾರಾಟವನ್ನೇ ಅವರು ನಂಬಿದ್ದರು. ಈಗ ಅವರ ವ್ಯಾಪಾರಕ್ಕೆ ಕೊರೋನಾ ದೊಡ್ಡ ಹೊಡೆತ ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅವರು   ನಮ್ಮಂತೆ ಸಂಕಷ್ಟದಲ್ಲಿರುವ  ಜನರಿಗಾದರೂ ಕೊಂಚ ಸಹಾಯ ಮಾಡಿದರೇ ತೃಪ್ತಿ ಸಿಗುತ್ತದೆ ಎನ್ನುತ್ತಾರೆ. ಕಷ್ಟದಲ್ಲಿಯೂ ಇತರೆ ಜನರ ಕಷ್ಟವನ್ನು ಅರ್ಥಮಾಡಿಕೊಂಡು ನೆರವಿಗೆ ಧಾವಿಸಿರುವ ಅವರ ಕಾರ್ಯ ಪ್ರಾಶಂಸೆ ವ್ಯಕ್ತವಾಗಿದೆ.
Published by: Seema R
First published: May 8, 2021, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories