HOME » NEWS » State » KARWAR FARMER CULTIVATED IN BARREN LAND SESR DKK

ಬಂಜರು ಭೂಮಿ ಗೇಣಿಗೆ ಪಡೆದು ಬಂಗಾರದ ಬೆಳೆ ಬೆಳೆದ ರೈತ; ಕಾರವಾರದಲ್ಲೊಬ್ಬ ಮಾದರಿ ಕೃಷಿಕ

ಮೊದ ಮೊದಲು ತನ್ನ ಭೂಮಿಯಲ್ಲಿ ಮಾತ್ರ ಭತ್ತ ಬೆಳೆಯುತ್ತಿದ್ದ ಈತನಿಗೆ ಆಸಕ್ತಿ ಹೆಚ್ಚಿದ್ದಂತೆ ಅಕ್ಕಪಕ್ಕದ ಸಣ್ಣ ಸಣ್ಣ ಹಿಡುವಳಿದಾರರು ಕೃಷಿ ಮಾಡದೆ ಹಾಗೆ ಖಾಲಿ ಬಿಟ್ಟಿದ್ದ ಜಮೀನನ್ನ ಗೇಣಿ ಪಡೆದುಕೊಳ್ಳಲು ಶುರುಮಾಡಿದ.

news18-kannada
Updated:November 7, 2020, 4:45 PM IST
ಬಂಜರು ಭೂಮಿ ಗೇಣಿಗೆ ಪಡೆದು ಬಂಗಾರದ ಬೆಳೆ ಬೆಳೆದ ರೈತ; ಕಾರವಾರದಲ್ಲೊಬ್ಬ ಮಾದರಿ ಕೃಷಿಕ
ಭತ್ತ ಬೆಳೆದಿರುವ ರೈತ
  • Share this:
ಕಾರವಾರ (ನ.7): ಕೃಷಿ ಮಾಡಲಾಗದೇ ಭೂಮಿ ಬಿಟ್ಟು ಕೂಲಿಗೆ ತೆರಳಿದ್ದ ಜನರು ಲಾಕ್​ಡೌನ್​ ಬಳಿಕ ಮತ್ತೆ ವ್ಯವಸಾಯದತ್ತ ಮುಖ ಮಾಡಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಇಲ್ಲೊಬ್ಬ ರೈತ ಕೂಡ ಬಂಜರು ಭೂಮಿಯನ್ನು ಗೇಣಿಗೆ ಪಡೆದು ಲಕ್ಷಾಂತರ ರೂಪಾಯಿ ಲಾಭಾ ಪಡೆಯುವ ಮೂಲಕ ಮಾದರಿಯಾಗಿದ್ದಾನೆ.  ಜಿಲ್ಲೆಯ ಕಾರವಾರ ಗ್ರಾಮೀಣ ಭಾಗದಲ್ಲಿ ಅನೇಕರು ಕೃಷಿ ಮಾಡಲು ಸಾಧ್ಯವಾಗದೇ ಎಕರೆಗಟ್ಟಲೆ ಜಮೀನು ಖಾಲಿ ಬಿಟ್ಟು ಗೋವಾ ಕಡೆ ಮುಖ ಮಾಡಿದ್ದಾರೆ. ಈ ಬೀಡುಬಿಟ್ಟ ಜಮೀನನ್ನು ಕಾರವಾರ ಹಳಗಾದ ಧೋಲ್ ಎಂಬ ಗ್ರಾಮದಲ್ಲಿ ನೆಲೆಸಿರುವ ವಸಂತ್ ಉಂಡೇಕರ್  ಗೇಣಿಗೆ ಪಡೆದು ವ್ಯವಸಾಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾನೆ. ತಮ್ಮ ಜಮೀನು ಸೇರಿ ಇನ್ನು ಹದಿನೈದಕ್ಕೂ ಹೆಚ್ಚು ರೈತರು ಬಂಜರು ಬಿಟ್ಟ ಕೃಷಿ ಭುಮಿಯನ್ನ ಗೇಣಿ ಪಡೆದು ಅಲ್ಲಿ ಭತ್ತದ ಬೆಳೆ ಬೆಳೆದಿದ್ದಾನೆ. ತನ್ನ ಹತ್ತು ಎಕರೆ ಸ್ವಂತ ಕೃಷಿ ಭೂಮಿ ಸೇರಿ ಅಕ್ಕಪಕ್ಕದ 22 ಎಕರೆ ಬಂಜರು ಭೂಮಿಯನ್ನು ಗೇಣಿಗೆ ಪಡೆದು 55 ಟನ್​ ಭತ್ತ ಬೆಳೆದಿದ್ದಾನೆ.

ಹೇಗಿದೆ ವಂಸಂತನ ಕೃಷಿ ಕಾರ್ಯ?

ವಸಂತ ಉಂಡೇಕರ್ ಒಬ್ಬ ಸಾಮಾನ್ಯ ರೈತ. ಕೃಷಿ ಕಾಯಕದಲ್ಲಿಯೇ ಕೈಲಾಸ ಕಾಣುತ್ತಿರುವ ಈತ ಮೊದ ಮೊದಲಿಗೆ ತನ್ನ ಜಮೀನಿನಲ್ಲಿ ಮಾತ್ರ ವ್ಯವಸಾಯ ಮಾಡುತ್ತಿದ್ದ. ವ್ಯವಸಾಯದಲ್ಲಿ ಹೆಚ್ಚು ಉತ್ಸಾಹದ ಜೊತೆ ಭೂಮಿತಾಯಿಯನ್ನು ಹೆಚ್ಚು ನಂಬಿದ್ದರಿಂದಲೇ ಈ ರೀತಿಯ ಯಶಸ್ಸು ಸಿದ್ಧವಾಗಿದೆ ಎನ್ನುತ್ತಾನೆ. ಮೊದ ಮೊದಲು ತನ್ನ ಭೂಮಿಯಲ್ಲಿ ಮಾತ್ರ ಭತ್ತ ಬೆಳೆಯುತ್ತಿದ್ದ ಈತನಿಗೆ ಆಸಕ್ತಿ ಹೆಚ್ಚಿದ್ದಂತೆ ಅಕ್ಕಪಕ್ಕದ ಸಣ್ಣ ಸಣ್ಣ ಹಿಡುವಳಿದಾರರು ಕೃಷಿ ಮಾಡದೆ ಹಾಗೆ ಖಾಲಿ ಬಿಟ್ಟಿದ್ದ ಜಮೀನನ್ನ ಗೇಣಿ ಪಡೆದುಕೊಳ್ಳಲು ಶುರುಮಾಡಿದ. ಖಾಲಿ ಜಾಗವನ್ನು ನೀಡಿದರೆ ಕೃಷಿಯಾದರೂ ಮಾಡುತ್ತಾನೆ ಎಂದು ಜನರು ಈತನಿಗೆ ಭೂಮಿ ನೀಡಲು ಮುಂದಾದರು.  ಸುಮಾರು 22 ಎಕರೆ ಖುಷ್ಕಿ ಭೂಮಿ ಫಲವತ್ತಾಗಿಸಿದ್ದಾನೆ. ಅಲ್ಲದೇ ತನಗೆ ಗೇಣಿ ಕೊಟ್ಟ ಭೂ ಮಾಲೀಕರಿಗೆ ಹಣ ಮತ್ತು ಭತ್ತದ ರೂಪದಲ್ಲಿ ಗೇಣಿ ಹಣ ನೀಡಿ ಋಣಮುಕ್ತನಾಗಿದ್ದಾನೆ

ಇದನ್ನು ಓದಿ: ಹಸಿರು ಪಟಾಕಿ ಎಂದರೇನು? ಹೇಗೆ ಪತ್ತೆ ಮಾಡುವುದು; ಇಲ್ಲಿದೆ ಮಾಹಿತಿ

ವರ್ಷಕ್ಕೆ ಎರಡು ಬೆಳೆ ತೆಗೆಯುವ ರೈತ

ವಸಂತ 33 ಎಕರೆ ಜಮೀನಿನಲ್ಲಿ ಹಿಂಗಾರು ಮತ್ತು ಮುಂಗಾರಿನಲ್ಲಿ ಎರಡು ಬೆಳೆಯನ್ನು ಬೆಳೆಯುತ್ತಾನೆ. ಈಗಾಗಲೇ ಮುಂಗಾರಿನಲ್ಲಿ ಬೆಳೆದ ಭತ್ತದ ಬೆಳೆ ಉತ್ತಮ ಫಸಲು ಬಂದಿದ್ದು ಉತ್ತಮ ಇಳುವರಿ ಪಡೆದುಕೊಂಡಿದ್ದಾನೆ, ಹೀಗೆ ಈಗ ಮುಂದಿನ ತಿಂಗಳಿಂದ ಹಿಂಗಾರು ಬೆಳೆ ಕೂಡಾ ಬೆಳೆಯುತ್ತಾನೆ. ಬಂಜರು ಬಿದ್ದ ಭುಮಿಯನ್ನ ಗೇಣಿಗೆ ಪಡೆದು ಸಮೃದ್ಧವಾದ ಬೆಳೆ ಬೆಳೆಯುತ್ತಿರುವ ರೈತ ವಸಂತನ ಈಗ ಮನೆ ಮಾತಾಗಿದ್ದಾನೆ. ವಸಂತನ ಬಗ್ಗೆ ಊರಿನ ಜನ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಿದ್ದಾರೆ .ಕೃಷಿ ಮಾಡುವ ಹೊಸ ಪೀಳಿಗೆಗೆ ವಸಂತ ಈಗ ಮಾದರಿಯಾಗಿದ್ದಾನೆ.
Published by: Seema R
First published: November 7, 2020, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading