HOME » NEWS » State » KARNATAKAS MANIPAL INSTITUTE OF TECHNOLOGY DECLARED CONTAINMENT ZONE AFTER 52 COVID 19 CASES IN 2 DAYS LG

Udupi Coronavirus: ಉಡುಪಿಯ ಮಣಿಪಾಲ್​ ಕಾಲೇಜಿನಲ್ಲಿ ಕೊರೋನಾ ಆತಂಕ; ಕಂಟೇನ್​ಮೆಂಟ್​ ಜೋನ್ ಎಂದು ಘೋಷಣೆ​

52 ಕೊರೋನಾ ಕೇಸ್​​ಗಳು ಕಳೆದ ಎರಡು ದಿನಗಳ ಅವಧಿಯಲ್ಲಿ ಕಾಣಿಸಿಕೊಂಡಿವೆ. ಮಂಗಳವಾರ 25 ಕೇಸ್​ಗಳು ಹಾಗೂ ಬುಧವಾರ 27 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಉಡುಪಿಯ ಡೆಪ್ಯುಟಿ ಕಮಿಷನರ್ ಜಿ. ಜಗದೀಶ ಈ ನಿರ್ಧಾರ ಕೈಗೊಂಡಿದ್ದು, ಪ್ರಕಟಿಸಿದ್ದಾರೆ.

news18-kannada
Updated:March 18, 2021, 2:38 PM IST
Udupi Coronavirus: ಉಡುಪಿಯ ಮಣಿಪಾಲ್​ ಕಾಲೇಜಿನಲ್ಲಿ ಕೊರೋನಾ ಆತಂಕ; ಕಂಟೇನ್​ಮೆಂಟ್​ ಜೋನ್ ಎಂದು ಘೋಷಣೆ​
ಸಾಂದರ್ಭಿಕ ಚಿತ್ರ
  • Share this:
ಉಡುಪಿ(ಮಾ.18): ಕೊರೋನಾ ಎರಡನೇ ಅಲೆ ಶುರುವಾಗಿದ್ದು, ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರ, ಗುಜರಾತ್ ಹಾಗೂ ಕರ್ನಾಟಕದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಲಾಕ್​ಡೌನ್ ಆಗುವ ಸಾಧ್ಯತೆ ದಟ್ಟವಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಆಗಾಗ್ಗೆ ಎಚ್ಚರಿಸುತ್ತಿದೆ.ಆದರೂ ಸಹ ಜನರು ಮಾಸ್ಕ್​​ ಧರಿಸದೆ, ಸಾಮಾಜಿಕ ಅಂತರ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಕರ್ನಾಟಕದಲ್ಲಿಯೂ ಸಹ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ದಿನೇ ದಿನೇ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಉಡುಪಿಯಲ್ಲೂ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಮಣಿಪಾಲ್​ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಎಂಐಟಿ) ಕಾಲೇಜಿನಲ್ಲಿ 52 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಕೊರೋನಾ ಪಾಸಿಟಿವ್ ದೃಢಪಟ್ಟ ಬಳಿಕ ಕಾಲೇಜು ಕ್ಯಾಂಪಸ್​​​ನ್ನು ಕಂಟೇನ್​​ಮೆಂಟ್​ ಜೋನ್ ಎಂದು ಘೋಷಿಸಲಾಗಿದೆ.

ಅಧಿಕಾರಿಗಳು ಬುಧವಾರ ಸಂಜೆ ಈ ನಿರ್ಧಾರ ಕೈಗೊಂಡಿದ್ದಾರೆ. 52 ಕೊರೋನಾ ಕೇಸ್​​ಗಳು ಕಳೆದ ಎರಡು ದಿನಗಳ ಅವಧಿಯಲ್ಲಿ ಕಾಣಿಸಿಕೊಂಡಿವೆ. ಮಂಗಳವಾರ 25 ಕೇಸ್​ಗಳು ಹಾಗೂ ಬುಧವಾರ 27 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಉಡುಪಿಯ ಡೆಪ್ಯುಟಿ ಕಮಿಷನರ್ ಜಿ. ಜಗದೀಶ ಈ ನಿರ್ಧಾರ ಕೈಗೊಂಡಿದ್ದು, ಪ್ರಕಟಿಸಿದ್ದಾರೆ.

Maski By Election: ಮಸ್ಕಿ ಉಪಚುನಾವಣೆ; ಗರಿಗೆದರಿದ ರಾಜಕೀಯ ಚಟುವಟಿಕೆಗಳು

ಲಭ್ಯವಿರುವ ಮಾಹಿತಿ ಪ್ರಕಾರ, ಎಂಐಟಿ ಕಾಲೇಜು ಕ್ಯಾಂಪಸ್​ನ್ನು ಕಂಟೈನ್​ಮೆಂಟ್​ ವಲಯ ಎಂದು ಘೋಷಿಸಲಾಗಿದೆ. ಈ ಕಾಲೇಜು ಮತ್ತು ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಚಲನೆಗೆ 14 ದಿನಗಳವರೆಗೆ ನಿರ್ಬಂಧ ಹೇರಲಾಗುತ್ತದೆ. ಕೊರೋನಾ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಕ್ಯಾಂಪಸ್​ನಲ್ಲಿರುವ ವಿದ್ಯಾರ್ಥಿಗಳ ಮೇಲೆ ಹೊಸ ಸುತ್ತಿನ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಮುಂದಿನ 14 ದಿನಗಳ ಕಾಲ ಆನ್​ಲೈನ್​ ತರಗತಿಗಳು ನಡೆಯಲಿದ್ದು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಕಾಲೇಜು ಬರುವಂತಿಲ್ಲ ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ.
Youtube Video
ಉಡುಪಿ ಜಿಲ್ಲೆಯಲ್ಲಿ ಬುಧವಾರ 33 ಕೋವಿಡ್​-19 ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ತಿಂಗಳಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 1000 ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
Published by: Latha CG
First published: March 18, 2021, 2:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories