KSRTC: ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ರಾಜ್ಯದ 4 ಸಾರಿಗೆ ನಿಗಮಗಳ ವಿಲೀನಕ್ಕೆ ಒತ್ತಾಯ

KSRTC Loss: ಸಂಕಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳನ್ನ ವಿಲೀನಮಾಡಿ , ಒಂದೇ‌ ನಿಗಮ ರಚಿಸುವಂತೆ. ಸಾರಿಗೆ ನಿಗಮಗಳ‌ ಪುನರಚನಾ ಸಮಿತಿಗೆ ಸಾರಿಗೆ ನೌಕರರ ಸಂಘದಿಂದ ಸಲಹೆ ನೀಡಲಾಗಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ (Corona) ದೇಶದ ಜನರು ಆರ್ಥಿಕವಾಗಿ (Economically) ಮತ್ತು ಮಾನಸಿಕವಾಗಿ ಸಹ ಜರ್ಜರಿತಗೊಳಿಸಿದೆ. ಮೊದಲನೇ ಅಲೆಯಿಂದ ಹಿಡಿದು ಈಗ ಮೂರನೇ ಅಲೆಯೂ ಒಂದೆಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಹಾಗೆಯೇ ಇದು ಸರ್ಕಾರಿ (Government)  ಸಂಸ್ಥೆಗಳಿಗೂ ಹೊಡೆತ ನೀಡಿದ್ದು, ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು (Transportation Corporation)  ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೆಎಸ್ಆರ್​ಟಿಸಿ, (KSRTC)  ಬಿಎಂಟಿಸಿ (BMTC) , ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ  ಸಂಕಷ್ಟದಲ್ಲಿ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ ಈ ಹಿನ್ನೆಲೆಯಲ್ಲಿ ಈ ಎಲ್ಲಾ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಮಾಡುವಂತೆ ಟ್ರಾನ್ಪೋರ್ಟ್ ಫೆಡರೇಶನ್ ಗಳ (Transport Federation) ಸಲಹೆ ನೀಡಿದೆ.

ಸಂಕಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳನ್ನ ವಿಲೀನಮಾಡಿ , ಒಂದೇ‌ ನಿಗಮ ರಚಿಸುವಂತೆ. ಸಾರಿಗೆ ನಿಗಮಗಳ‌ ಪುನರಚನಾ ಸಮಿತಿಗೆ ಸಾರಿಗೆ ನೌಕರರ ಸಂಘದಿಂದ ಸಲಹೆ ನೀಡಲಾಗಿದೆ.  ಇನ್ನು ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ,  ಬಸ್ ಗಳ‌  ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ , ನೌಕರರ ಸಂಬಳಕ್ಕೂ ಹಣವಿಲ್ಲದೇ ನಿಗಮಗಳು ಪರದಾಡುತ್ತಿದ್ದು,  4500 ಕೋಟಿ ನಷ್ಟವಾಗಿದೆ‌‌ . 1997 ರಿಂದ ಇಲ್ಲಿಯವರೆಗೂ  ಪಿಎಫ್, ಎಲ್ ಐಸಿ, ನಿವೃತ್ತಿ ವೇತನ ಸೇರಿ  1.700 ಕೋಟಿ ನೌಕರರಿಗೆ ಬಾಕಿ ಇದೆ.

ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲಿನಗೊಳಿಸಿ, ಆಡಳಿತ ವಿಭಾಗದ ನಷ್ಟ ಸೇರಿದಂತೆ ಹಲವು ನಷ್ಟಗಳನ್ನು ತಪ್ಪಿಸುವಂತೆ ಕಮಿಟಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೆಎಸ್ಆರ್ಟಿಸಿ ಸ್ಟಾಫ್ ಅಂಡ್   ವರ್ಕರ್ಸ್ ಫೆಡರೇಶನ್ ನ ಅಧ್ಯಕ್ಷ ಅನಂತ್ ಸುಬ್ಬರಾವ್ ನಿಗಮ‌ ಮರ್ಜ್ ಮಾಡುವಂತೆ ಐಎಎಸ್‌ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದ ಒನ್ ಮ್ಯಾನ್ ಕಮಿಟಿಗೆ ಸಲಹೆ ನೀಡಿದ್ದು, ಈ ನಿಗಮಗಳ ಭವಿಷ್ಯ ಇನ್ನೂ ನಿರ್ಧಾರವಾಗಬೇಕಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಸದ್ದಿಲ್ಲದೆ ಹಬ್ತಿದೆ ಓಮೈಕ್ರಾನ್; ಶೇ.90ರಷ್ಟು ಮಂದಿಗೆ ರೂಪಾಂತರಿ ಸೋಂಕು

1961 ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ  1997 ರಲ್ಲಿ ನಾಲ್ಕು‌ ನಿಗಮಗಳಾಗಿ ವಿಂಗಡಣೆಯಾಗಿತ್ತು, ಆದರೆ 1997 ರಲ್ಲೂ ಪ್ರತ್ಯೇಕ ನಿಗಮ ಬೇಡ ಎಂದು ಫೆಡರೇಶನ್ ಸಲಹೆ ನೀಡಿತ್ತು, ಆದರೆ ವಿಂಗಡನೆ ಮಾಡಲಾಗಿತ್ತು. ಸದ್ಯ ಆರ್ಥಿಕ ಪರಿಸ್ಥಿತಿಯಿಂದ ದಿವಾಳಿಯಾಗಿರುವ ಸಾರಿಗೆ ನಿಗಮಗಳನ್ನ ವಿಲೀನಗೊಳಿಸಿ ನೌಕರರ ಹಾಗೂ ಸಾರಿಗೆ ನಿಗಮಗಳ ಅಭಿವೃದ್ಧಿ ಪಡಿಸಬೇಕೆಂಬುದು ನೌಕರರ ಒತ್ತಾಯವಾಗಿದೆ.

2020-21 ವೆಚ್ಚ, ನಷ್ಟದ  ಮಾಹಿತಿ ಇಲ್ಲಿದೆ
2020-21ರಲ್ಲಿ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹಾಳಾಗಿದ್ದು, ಹೆಚ್ಚು ನಷ್ಟವನ್ನು ಅನುಭವಿಸಿದೆ. ಈ ಬಾರಿ ಬರೋಬ್ಬರಿ  1221.58 ಕೋಟಿ ರೂ ನಷ್ಟವಾಗಿದ್ದು, ನಾಲ್ಕು ನಿಗಮಗಳಿಗೆ ಬಂದ ಆದಾಯ ಕೇವಲ ಒಟ್ಟು 6254.40 ಕೋಟಿ ಎಂದು ಇಲಾಖೆ ಮಾಹಿತಿ ನೀಡಿದೆ. 2020-21ರಲ್ಲಿ ಇಂಧನ ವೆಚ್ಚ 2001.51 ಕೋಟಿ ರೂ. ಹಾಗೂ ಸಿಬ್ಬಂದಿ ವೆಚ್ಚ ಸುಮಾರು 4042 ಕೋಟಿ ರೂ ಆಗಿದ್ದು, ಹೆಚ್ಚು ನಷ್ಟ ಅನುಭವಿಸುತ್ತಿರುವ ನಿಗಮಗಳನ್ನು ಒಟ್ಟುಗೂಡಿಸುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.

ಕೆಎಸ್ಆರ್ಟಿಸಿ:
ಒಟ್ಟು ವೆಚ್ಚ- 2667.59 ಕೋಟಿ ರೂ.
ಒಟ್ಟು ಆದಾಯ- 2239 ಕೋಟಿ ರೂ.
ನಷ್ಟ- 428.59 ಕೋಟಿ ರೂ.
ಇಂಧನ ವೆಚ್ಚ- 774.39 ಕೋಟಿ ರೂ.
ಸಿಬ್ಬಂದಿ ವೆಚ್ಚ- 1359.61ಕೋಟಿ ರೂ.
ಬಿಎಂಟಿಸಿ:
ಒಟ್ಟು ವೆಚ್ಚ- 1766.36 ಕೋಟಿ ರೂ.
ಒಟ್ಟು ಆದಾಯ- 1463.15 ಕೋಟಿ ರೂ.
ನಷ್ಟ- 303.21ಕೋಟಿ ರೂ.
ಇಂಧನ ವೆಚ್ಚ- 361.67 ಕೋಟಿ ರೂ.
ಸಿಬ್ಬಂದಿ ವೆಚ್ಚ- 1059.06 ಕೋಟಿ ರೂ.

ಇದನ್ನೂ ಓದಿ: ಸುರಂಗ ನೀರು ಹರಿಸಿ ಕೃಷಿ: ದ.ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಕೃಷಿಕನ ಸಾಧನೆಗಾಥೆ

ಎನ್ಡಬ್ಲ್ಯುಆರ್ಟಿಸಿ:
ಒಟ್ಟು ವೆಚ್ಚ- 1597.60ಕೋಟಿ ರೂ.
ಒಟ್ಟು ಆದಾಯ- 1293.08ಕೋಟಿ ರೂ.
ನಷ್ಟ- 304.52 ಕೋಟಿ ರೂ.
ಇಂಧನ ವೆಚ್ಚ- 453.26 ಕೋಟಿ ರೂ.
ಸಿಬ್ಬಂದಿ ವೆಚ್ಚ- 862.30 ಕೋಟಿ ರೂ.
ಎನ್ಈಆರ್ಟಿಸಿ:
ಒಟ್ಟು ವೆಚ್ಚ- 1444.43 ಕೋಟಿ ರೂ.
ಒಟ್ಟು ಆದಾಯ- 1259.17 ಕೋಟಿ ರೂ.
ನಷ್ಟ- 185.26 ಕೋಟಿ ರೂ.
ಇಂಧನ ವೆಚ್ಚ- 412.19 ಕೋಟಿ ರೂ.
ಸಿಬ್ಬಂದಿ ವೆಚ್ಚ- 761.84 ಕೋಟಿ ರೂ.
Published by:Sandhya M
First published: