ಬೆಳಗಾವಿ: ಪ್ರತಿ ವರ್ಷ ಬೆಳಗಾವಿ ಅಧಿವೇಶನಕ್ಕೆ (Karnataka Winter Session) ವಿರುದ್ದವಾಗಿ ಮಹಾಮೇಳವ್ (Mahamelava) ಆಚರಣೆ ಮಾಡಿಕೊಂಡು ಬಂದಿರುವ ಎಂಇಎಸ್ (MES) ಪುಂಡರಿಗೆ ಈ ಭಾರೀ ತೀವ್ರ ಮುಖಭಂಗವಾಗಿದೆ. ಮಹಾಮೇಳವ್ ನಡೆಸಲು ಅನುಮತಿ ಕೋರಿದ್ದ ಎಂಇಎಸ್ ಪುಂಡರಿಗೆ ಬೆಳಗಾವಿ (Belagavi) ಪೋಲಿಸರು ಅನುಮತಿ ನಿರಾಕರಿಸಿದ್ರು. ಅಷ್ಟೇ ಅಲ್ಲದೇ ಬೆಳಗಾವಿಯ ವ್ಯಾಕ್ಸಿನ್ ಡಿಪೋ ಸುತ್ತಮುತ್ತಲು ಸೆಕ್ಷನ್ 144 ಜಾರಿಗೊಳಿಸಿ ನಿಷೇದಾಜ್ಞೆ ಹೇರಿದ್ರು. ಆದ್ರೂ ಕೂಡ ಮೊಂಡುತನ ಪ್ರದರ್ಶಿಸಿದ ಎಂಇಎಸ್ ಪುಂಡರು ಬೆಳಗಾವಿಯ ವ್ಯಾಕ್ಸಿನ್ ಡಿಪೋ ಬಳಿ ವೇದಿಕೆ ನಿರ್ಮಿಸಲು ಮುಂದಾಗಿದ್ರು. ಕೂಡಲೇ ಅಲರ್ಟ್ ಆದ ಖಾಕಿ ಪಡೆ ಎಂಇಎಸ್ ಪುಂಡರ ವೇದಿಕೆ ತೆರವುಗೊಳಿಸಿದ್ರು. ಅಷ್ಟೇ ಅಲ್ಲದೇ ವಾಕ್ಸಿನ್ ಡಿಪೋ ಸಂಪರ್ಕಿಸುವ ಎಲ್ಲ ರಸ್ತೆಗಳನ್ನ ಬಂದ್ ಮಾಡಿ ನಾಡದ್ರೋಹಿಗಳು ವಾಕ್ಸಿನ್ ಡಿಪೋದತ್ತ ಸುಳಿಯದಂತೆ ಬಂದೋಬಸ್ತ್ ಮಾಡಿದ್ದರಿಂದ ನಾಡದ್ರೋಹಿ ಎಂಇಎಸ್ ಪುಂಡರ ಪ್ಲಾನ್ ತಲೆಕೆಳಗಾಗಿ ಮಹಾಮೇಳಾವ ಠುಸ್ ಆಗಿದೆ.
ಇನ್ನೂ ಎಂಇಎಸ್ ನ ಮಾಜಿ ಮೇಯರ್ ಸರಿತಾ ಪಾಟೀಲ್ ನೇತೃತ್ವದ ಕೆಲ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿ ಮಹಾಮೇಳಾವ ಜಾಗದತ್ತ ಹೊರಡಲು ಮುಂದಾಗುತ್ತಿದ್ದಂತೆ ತಡೆದ ಪೋಲಿಸರು 20 ಕ್ಕೂ ಹೆಚ್ಚು ಎಂಇಎಸ್ ಪುಂಡರನ್ನ ವಶಕ್ಕೆ ಪಡೆದ್ರು.
ಇದನ್ನೂ ಓದಿ: Belagavi Politics: ಬೆಳಗಾವಿಯಲ್ಲಿ ಬಿಜೆಪಿಗೆ ಬಿಗ್ ಶಾಕ್? ಕುಂದಾನಗರಿಯಲ್ಲಿ ಕುಂದುತ್ತಿದೆಯಾ ಕಮಲ ಶಕ್ತಿ?
ಮತ್ತೊಂದೆಡೆ ಮಹಾಮೇಳಾವನಲ್ಲಿ ಭಾಗವಹಿಸೋದಾಗಿ ಘೋಷಿಸಿದ್ದ ಕೊಲ್ಲಾಪುರದ ಮಹಾರಾಷ್ಟ್ರ ವಿಕಾಸ ಅಘಾಡಿ ಪುಂಡರು ಬೆಳಗಾವಿ ಗಡಿ ಭಾಗದ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಭಾರೀ ಹೈಡ್ರಾಮಾ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ಮೂಲಕ ಬೆಳಗಾವಿಗೆ ಪ್ರವೇಶ ಮಾಡಲು ಯತ್ನಿಸಿದ ಮಹಾ ಪುಂಡರನ್ನ ಪೋಲಿಸರು ತಡೆ ಹಿಡಿದು, ಗಡಿ ಪ್ರವೇಶಿಸಿದ್ರೆ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಮಹಾಪುಂಡರು ವಾಪಸ್ ತೆರಳಿದ್ದಾರೆ.
ವ್ಯಾಕ್ಸಿನ್ ಡಿಪೋಗೆ ಭೇಟಿ ನೀಡಿದ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳ ಜೊತೆಗೆ ಮಾತುಕತೆ ನಡೆಸಿದರು. ವ್ಯಾಕ್ಸಿನ್ ಡಿಪೋ ಸುತ್ತಮುತ್ತ 144ಸೆಕ್ಷನ್ ಜಾರಿ ಮಾಡಿದ್ದೇವೆ. ಎಂಇಎಸ್ ಮಹಾಮೇಳಾವ್ಗೆ ಆಯೋಜನೆ ಮಾಡಿದ್ದರು. ಆದರೆ ಇದಕ್ಕೆ ನಿರ್ಬಂಧ ಹೇರಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆಗೆ ಮಹಾಮೇಳಾವ್ ನಡೆಸುವ ಬಗ್ಗೆ ಅರ್ಜಿ ಕೊಟ್ಟಿದ್ದರು. ಅರ್ಜಿಯನ್ನ ತಿರಸ್ಕಾರ ಮಾಡಲಾಗಿದೆ.
ಸದ್ಯಕ್ಕೆ ಯಾರ ಮೇಲೆಯೂ ಕೇಸ್ ಹಾಕಲ್ಲ
ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ಇಲ್ಲ. ಸಭೆ ಸಮಾರಂಭ ಮಾಡಿದರೆ ಅವರನ್ನ ವಶಕ್ಕೆ ಪಡೆದುಕೊಳ್ಳುತ್ತೇವೆ. ವೇದಿಕೆ ನಿರ್ಮಿಸಲು ಹೇಳಿದವರ ಬಗ್ಗೆ ವಿಚಾರಣೆ ಮಾಡುತ್ತೇವೆ. ಸಭೆ ಮಾಡದ ಕಾರಣ ಸದ್ಯಕ್ಕೆ ಯಾರ ಮೇಲೆಯೂ ಕೇಸ್ ಹಾಕಲ್ಲ. ಸಭೆ ಮಾಡಲು ಅಕ್ರಮ ಕೂಟ ರಚಿಸಿದರೆ ಕಾನೂನು ಕ್ರಮ. ವದಂತಿಗೆ ಯಾರು ಕಿವಿ ಕೊಡಬೇಡಿ, ಕಾನೂನು ಉಲ್ಲಂಘನೆ ಮಾಡಿದ್ರೇ ತಕ್ಕಂತೆ ಕ್ರಮ. ಗಡಿಯಲ್ಲೂ ಸಹ 144ಸೆಕ್ಷನ್ ಜಾರಿ ಮಾಡಿದ್ದೇವೆ ಎಂದರು.
ರಾಜ್ಯ ಹೆದ್ದಾರಿ ತಡೆದು ಗೂಂಡಾವರ್ತನೆ
ಬೆಳಗಾವಿಯಲ್ಲಿ ಎಂಇಎಸ್ ಮುಖಂಡರ ಬಂಧನ ಖಂಡಿಸಿ ಮಹಾರಾಷ್ಟ್ರ ಗಡಿಯಲ್ಲಿ ಎಂಇಎಸ್, ಶಿವಸೇನೆ ತೀವ್ರ ಪ್ರತಿಭಟನೆ ನಡೆಸಿತು. ಎರಡು ಗಂಟೆ ಕಾಲ ರಾಜ್ಯ ಹೆದ್ದಾರಿ ತಡೆದು ಗೂಂಡಾವರ್ತನೆ ಮಾಡಿದರು.
ಬೆಳಗಾವಿ-ಮಹಾರಾಷ್ಟ್ರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಬೆಳಗಾವಿ ಹೊರ ವಲಯದ ಮಹಾರಾಷ್ಟ್ರದ ಶಿನ್ನೊಳಿ ಗ್ರಾಮದ ಬಳಿ ಪ್ರತಿಭಟನೆ ನಡೆಯಿತು. ಎರಡು ಗಂಟೆಯಿಂದ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡು ಕಿಮೀ ಗೂ ಹೆಚ್ಚು ದೂರದ ವರೆಗೂ ಸಾಲು ಗಟ್ಟಿ ವಾಹನಗಳು ನಿಂತಿದ್ದವು. ನಡೆದುಕೊಂಡು ಗಡಿ ದಾಟಿ ಬೆಳಗಾವಿಗೆ ಪ್ರಯಾಣಿಕರು ಪ್ರವೇಶ ಮಾಡುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ