ಸದನ ವಿಸ್ತರಣೆಗೆ ಒಪ್ಪದ ಸ್ಪೀಕರ್​; ನೆರೆ ಚರ್ಚೆಗೂ ಇಲ್ಲ ಅವಕಾಶ; ಈ ಬಾರಿಯ ಚಳಿಗಾಲದ ಅಧಿವೇಶನ ಕೇವಲ 3 ದಿನ ಮಾತ್ರ!

ಈ ಬಾರಿಯ ಚಳಿಗಾಲದ ಅಧಿವೇಶನ ಕೇವಲ ಮೂರು ದಿನಗಳು ಮಾತ್ರ ನಡೆಯಲಿದ್ದು, ಈ ಕಾಲವಕಾಶದಲ್ಲಿ ನೆರೆ ಪರಿಪರಿಹಾರದ ಕುರಿತ ಚರ್ಚೆಗೆ ಅವಕಾಶ ಇರುವುದಿಲ್ಲ. ಕೇವಲ ಸರ್ಕಾರದ ಕಡತಗಳ ಮೇಲಿನ ಪರಿಶೀಲನೆ ಮಾತ್ರ ನಡೆಯಲಿದೆ ಎಂದು ಹೇಳಲಾಗುತ್ತಿದೆ.

MAshok Kumar | news18-kannada
Updated:October 10, 2019, 3:04 PM IST
ಸದನ ವಿಸ್ತರಣೆಗೆ ಒಪ್ಪದ ಸ್ಪೀಕರ್​; ನೆರೆ ಚರ್ಚೆಗೂ ಇಲ್ಲ ಅವಕಾಶ; ಈ ಬಾರಿಯ ಚಳಿಗಾಲದ ಅಧಿವೇಶನ ಕೇವಲ 3 ದಿನ ಮಾತ್ರ!
ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ.
  • Share this:
ಬೆಂಗಳೂರು (ಅಕ್ಟೋಬರ್​ 10); ಬಹುನಿರೀಕ್ಷಿತ ನೂತನ ಬಿಜೆಪಿ ಸರ್ಕಾರದ ಚಳಿಗಾಲದ ಅಧಿವೇಶನ ಕೇವಲ ಮೂರು ದಿನ ಮಾತ್ರ ನಡೆಯಲಿದೆ, ಸದನ ವಿಸ್ತರಣೆಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ನಿರಾಕರಿಸಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ

ಇಂದಿನ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭವಾಗುತ್ತಿದ್ದಂತೆ ನಿಲುವಳಿ ಸೂಚನೆ ಮಂಡಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ನೆರೆ ಪರಿಹಾರದ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇಂದಿನ ಕಲಾಪ ಅಜೆಂಡಾದಲ್ಲಿ ನಿಲುವಳಿ ಸೂಚನೆ ಇರಲಿ, ಪ್ರಶ್ನಾವಳಿ ಹಾಗೂ ಶೂನ್ಯ ವೇಳೆಯ ಚರ್ಚೆಗೂ ಅವಕಾಶ ಕಲ್ಪಿಸಲಾಗಿರಲಿಲ್ಲ.

ಹೀಗಾಗಿ ವಿರೋಧ ಪಕ್ಷಗಳು ಸಭಾಧ್ಯಕ್ಷರ ತೀರ್ಮಾನವನ್ನು ವಿರೋಧಿಸಿ ಗದ್ದಲ ಶುರು ಮಾಡಿದ್ದರು. ಪರಿಣಾಮ ಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು. ಈ ನಡುವೆ ಸ್ಪೀಕರ್​ ಕೊಠಡಿಯಲ್ಲಿ ಸದನ ಕಲಾಪ ಸಮಿತಿ ಸಭೆಯನ್ನು ಏರ್ಪಡಿಸಲಾಗಿತ್ತು.

ಈ ಸಭೆಯಲ್ಲಿ ವಿರೋಧ ಪಕ್ಷಗಳು "ನೆರೆ ಪರಿಹಾರದ ಕುರಿತ ವಿಸ್ಕೃತ ಚರ್ಚೆಗೆ ಅನುಮತಿ ನೀಡಬೇಕು ಹಾಗೂ ಸದನ ಕಲಾಪವನ್ನು ಕನಿಷ್ಟ 10 ದಿನಗಳಿಗೆ ವಿಸ್ತರಿಸಬೇಕು" ಎಂದು ಸ್ಪೀಕರ್​ ಎದುರು ಮನವಿ ಮಾಡಿದ್ದರು. ಆದರೆ, ವಿರೋಧ ಪಕ್ಷದ ನಾಯಕರ ಮನವಿಯನ್ನು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದ್ದಾರೆ. ಹೀಗಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶಗೊಂಡು ಅವರ ಕೊಠಡಿಯಿಂದ ಹೊರ ನಡೆದಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ಈ ಬಾರಿಯ ಚಳಿಗಾಲದ ಅಧಿವೇಶನ ಕೇವಲ ಮೂರು ದಿನಗಳು ಮಾತ್ರ ನಡೆಯಲಿದ್ದು, ಈ ಕಾಲವಕಾಶದಲ್ಲಿ ನೆರೆ ಪರಿಪರಿಹಾರದ ಕುರಿತ ಚರ್ಚೆಗೆ ಅವಕಾಶ ಇರುವುದಿಲ್ಲ. ಕೇವಲ ಸರ್ಕಾರದ ಕಡತಗಳ ಮೇಲಿನ ಪರಿಶೀಲನೆ ಮಾತ್ರ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಬಿಎಸಿ ಕಮಿಟಿ ಸಭೆಯಲ್ಲಿ ನೆರೆ ವಿಚಾರದ ಬಗ್ಗೆ ಸಮಗ್ರ ಚರ್ಚೆ ಆಗಬೇಕು ಅಂತಾ ಕೇಳಿದ್ದೆವು. ಈ ಚರ್ಚೆಗೆ 3 ದಿನ ಸಾಕಾಗುವುದಿಲ್ಲ, ಕನಿಷ್ಟ 10 ದಿನವಾದರೂ ಕಲಾಪ ನಡೆಯಲಿ ಅಂತಾನೂ ಮನವಿ ಮಾಡಲಾಗಿತ್ತು. ನೆರೆ ಭಾಗದ ಎಲ್ಲ ಶಾಸಕರು ಚರ್ಚೆಲೀ ಪಾಲ್ಗೊಳ್ಳಬೇಕು, ಪ್ರಮುಖಂಡ ತಂಡವೂ ಪ್ರವಾಹ ಪೀಡಿತ ಭಾಗಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಹೀಗಾಗಿ ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು ಆದ್ರಿಂದ 10 ದಿನ ಕಲಾಪ ನಡೆಯಲಿ ಅನ್ನೋದು ನಮ್ಮ ಮನವಿ.

ಆದರೆ, 3 ದಿನಕ್ಕಿಂತ ಹೆಚ್ಚು ದಿನ ಅಧಿವೇಶನ ನಡೆಸುವ ಮನಸ್ಸು ಆಡಳಿತ ಪಕ್ಷಕ್ಕೆ ಇಲ್ಲ. ಅವರಿಗೆ ಯಾವುದೇ ಚರ್ಚೆ ಬೇಡ ಅಂತಾ ಅನ್ಕೊಂಡಿದ್ದಾರೆ. ಆದ್ರಿಂದ ನಮ್ಮ ಮನವಿಗೆ ಸ್ಪಂದಿಸದ ಹಿನ್ನಲೆ ನಾವು ಬಿಎಸಿ ಸಭೆ ಬಹಿಷ್ಕರಿಸಿ ಬಂದಿದ್ದೇವೆ" ಎಂದು ತಿಳಿಸಿದ್ದಾರೆ.ಇದನ್ನೂ ಓದಿ : ನೆರೆ ಪರಿಹಾರ ಕುರಿತ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟರೂ ಅವಕಾಶ ನೀಡಿಲ್ಲ; ಸಭಾಧ್ಯಕ್ಷ್ಯರ ನಡೆಗೆ ಸಿದ್ದರಾಮಯ್ಯ ಕಿಡಿ

First published: October 10, 2019, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading