HOME » NEWS » State » KARNATAKA WILDLIFE BOARD PROPOSAL TO SET UP FIRST INDIAN GREY WOLF SANCTUARY IN KOPPAL SESR

ಬಂಕಾಪುರದಲ್ಲಿ ತೋಳಗಳ ಅಭಯಾರಣ್ಯ ; ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ ರಾಜ್ಯ ವನ್ಯಜೀವಿ ಮಂಡಳಿ

ತೋಳಗಳು ಮಾತ್ರವಲ್ಲದೇ ಪಟ್ಟೆ ಹೈನಾ, ಭಾರತದ ನರಿ, ಚಿನ್ನದ ನರಿ ಮತ್ತು ಇತರೆ ಪ್ರಾಣಿಗಳ ಸಂರಕ್ಷಣೆಗೆ ಇದು ಉತ್ತಮವಾಗಿದೆ ಎಂದು ಮಂಡಳಿ ಪ್ರಸ್ತಾಪದಲ್ಲಿ ತಿಳಿಸಿದೆ

news18-kannada
Updated:January 19, 2021, 3:50 PM IST
ಬಂಕಾಪುರದಲ್ಲಿ ತೋಳಗಳ ಅಭಯಾರಣ್ಯ ; ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ ರಾಜ್ಯ ವನ್ಯಜೀವಿ ಮಂಡಳಿ
ತೋಳಗಳು ಮಾತ್ರವಲ್ಲದೇ ಪಟ್ಟೆ ಹೈನಾ, ಭಾರತದ ನರಿ, ಚಿನ್ನದ ನರಿ ಮತ್ತು ಇತರೆ ಪ್ರಾಣಿಗಳ ಸಂರಕ್ಷಣೆಗೆ ಇದು ಉತ್ತಮವಾಗಿದೆ ಎಂದು ಮಂಡಳಿ ಪ್ರಸ್ತಾಪದಲ್ಲಿ ತಿಳಿಸಿದೆ
  • Share this:
ಕೊಪ್ಪಳ (ಜ. 19): ಬೂದು ಬಣ್ಣದ ತೋಳಗಳ ಸಂರಕ್ಷಣೆಗಾಗಿ ರಾಜ್ಯ ವನ್ಯಜೀವಿ ಮಂಡಳಿ ಕಲ್ಯಾಣ ಕರ್ನಾಟಕದಲ್ಲಿ ತೋಳಗಳ ಅಭಯಾರಣ್ಯ ನಿರ್ಮಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಜಿಲ್ಲೆಯ ಬಂಕಾಪುರ ಪ್ರದೇಶ ಉತ್ತಮವಾಗಿದೆ. ಈ ಹಿನ್ನಲೆ ಇಲ್ಲಿನ ಬಂಕಾಪುರದ ಒಣ ಪ್ರದೇಶದ ಸುಮಾರು 822. 03 ಎಕರೆ ಪ್ರದೇಶದಲ್ಲಿ ಬಂಕಾಪುರ ತೋಳ ಅಭಯಾರಣ್ಯ ನಿರ್ಮಾಣ ಮಾಡಲು ಸೂಕ್ತವಾಗಿದ್ದು, ಇದಕ್ಕೆ ಅನುಮೋದಿಸುವಂತೆ ಸರ್ಕಾರದ ಮುಂದೆ ಮಂಡಳಿ ಪ್ರಸ್ತಾಪ ಸಲ್ಲಿಸಿದೆ. ಈ ಪ್ರದೇಶವೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗೆ ಜಿಲ್ಲೆಯಲ್ಲಿ ಉತ್ತಮ ಪರಿಸರವನ್ನು ಹೊಂದಿದೆ. ತೋಳಗಳು ಮಾತ್ರವಲ್ಲದೇ ಪಟ್ಟೆ ಹೈನಾ, ಭಾರತದ ನರಿ, ಚಿನ್ನದ ನರಿ ಮತ್ತು ಇತರೆ ಪ್ರಾಣಿಗಳ ಸಂರಕ್ಷಣೆಗೆ ಇದು ಉತ್ತಮವಾಗಿದೆ ಎಂದು ಮಂಡಳಿ ಪ್ರಸ್ತಾಪದಲ್ಲಿ ತಿಳಿಸಿದೆ.

ಈ ಮೊದಲು ಮಂಡ್ಯದ ಮೇಲುಕೋಟೆ ಪ್ರದೇಶವು ತೋಳಗಳಿಗೆ ಸಂರಕ್ಷಿತ ಪ್ರದೇಶವೆಂದು ಹೇಳಲಾಗುತ್ತಿತ್ತು. ಈ ಹಿನ್ನಲೆ ಮೈಸೂರು ಮಹಾರಾಜರು ಮೇಲುಕೋಟೆ ತೋಳ ಅಭಯಾರಣ್ಯವನ್ನು ಸ್ಥಾಪಿಸಿದ್ದರು. ಆದರೆ, ಈ ಪ್ರದೇಶಗಳಲ್ಲಿ ಕಳೆದೊಂದು ದಶಕಗಳಿಗೆ ತೋಳಗಳು ಇರುವಿಕೆ ಬಗ್ಗೆ ಯಾವುದೇ ಉತ್ತಮ ವಾತಾವರಣವಿಲ್ಲ. ಇಲ್ಲಿಗೆ ಬಲವಂತವಾಗಿ ವಲಸೆ ಬಂದ ತೋಳಗಳು ನೀರಿನ ಕೊರತೆಯನ್ನು ಎದುರಿಸಿದವು. ಇದರಿಂದಾಗಿ ಇಲ್ಲಿನ ತೋಳಗಳನ್ನು ಕೊಪ್ಪಳ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು ಎಂದು ವರದಿ ತಿಳಿಸಿದೆ.

ಇದನ್ನು ಓದಿ: ಸಾಮಾಜಿಕ ಜಾಲತಾಣದ ಮೂಲಕ ಹನಿಟ್ರ್ಯಾಪ್; ಪ್ರಕರಣ ಬೆನ್ನತ್ತಿ ಬೆಚ್ಚಿ ಬಿದ್ದ ಪೊಲೀಸರು

ಜಿಲ್ಲೆಯ ಬಂಕಾಪುರ, ಮಲ್ಲಾಪುರ ಮತ್ತು ಸುಲೇಕಲ್​ ಗ್ರಾಮದಲ್ಲಿ ಕಲ್ಲು ಗುಡ್ಡಗಳು ಹಾಗೂ ಮುಳ್ಳಿನ ಸಸ್ಯವರ್ಗಗಳಿವೆ. ಭಾರತೀಯ ಬೂದು ಬಣ್ಣದ ತೋಳಗಳು ವಾಸಿಸಲು ದಖನ್​ ಪ್ರಸ್ಥಭೂಮಿಯ ಹುಲ್ಲುಗಾವಲು ಪ್ರದೇಶಗಳು ಸೂಕ್ತ ಎಂದು ಮಂಡಳಿ ಸದಸ್ಯರು ತಿಳಿಸಿದ್ದಾರೆ.

ಇನ್ನು ಇಲ್ಲಿಗೆ ಸ್ಥಳಾಂತರಿಸಲಾದ ತೋಳಗಳು ಮರಿಗಳಿಗೆ ಆರು ಮರಿಗಳಿಗೆ ಜನ್ಮ ನೀಡಿವೆ.
ಇದೇ ವೇಳೆ ಅರಸಿಕೆರೆಯಲ್ಲಿ ಕರಡಿ ಅಭಯಾರಣ್ಯ ಸ್ಥಾಪಿಸುವ ಪ್ರಸ್ತಾಪವನ್ನು ಕೂಡ ವನ್ಯಜೀವಿ ಮಂಡಳು ಪ್ರಸ್ತಾಪಿಸುವ ಸಾಧ್ಯತೆ ಇದೆ, ಇಲ್ಲಿನ ಹಿರೆಕಲ್ಲು ಗುಡ್ಡ ಪ್ರದೇಶ ಕರಡಿ ವಾಸಸ್ಥಾನಕ್ಕೆ ಸೂಕ್ತವಾಗಿದೆ ಎಂದು ವರದಿ ತಿಳಿಸಿದೆ.
Published by: Seema R
First published: January 19, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories