Karnataka Weather: ಆಗಸ್ಟ್ 13ರವರಗೆ ಮುಂದುವರೆಯಲಿದೆ ಮಳೆ, ಇದೆಲ್ಲದಕ್ಕೂ ಪಶ್ಚಿಮದ ಗಾಳಿಯೇ ಕಾರಣ

Karnataka Weather Update: ಸದ್ಯ ರಾಜ್ಯದ ಉದ್ದಗಲಕ್ಕೂ 5.8 ಮೀಟರ್ ಎತ್ತರದಲ್ಲಿ ಪಶ್ಚಿಮದ ಗಾಳಿ ಬೀಸುತ್ತಿದೆ. ಇದರಿಂದಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ಮಳೆಯಾಗಲಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮಳೆ.

ರಾಜ್ಯದಲ್ಲಿ ಮಳೆ.

  • Share this:
Karnataka Weather Update: ಕರ್ನಾಟಕ ರಾಜ್ಯದಲ್ಲಿ ಸದ್ಯದ ಹವಾಮಾನ ಪರಿಸ್ಥಿತಿ ನೋಡಿದ್ರೆ ಮಳೆಗಾಲ ಮುಗಿದಿದೆಯಾ ಅಥವಾ ಇನ್ನೂ ಇದೆಯಾ, ಎಷ್ಟು ಮಳೆಯ ನಿರೀಕ್ಷೆ ಮಾಡಬಹುದು ಎನ್ನುವ ಅನುಮಾನ ಕಾಡುವುದು ಸಹಜ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಲ್ಲಿ ಪ್ರತಿದಿನ ರಭಸವಾಗಿ ಸುರಿಯುತ್ತಿದ್ದ ಮಳೆ ನಂತರ ನಿಂತೇ ಹೋದಂತಾಯ್ತು. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆ ಮುಂದುವರೆದಿದ್ದು ಉಳಿದ ಸ್ಥಳಗಳಲ್ಲಿ ಮುಂಗಾರಿನ ವೇಗ ಕಡಿಮೆಯಾಗಿದೆ. ಆದರೆ ರಾಜ್ಯ ಹವಾಮಾನ ಇಲಾಖೆ ಈ ಮಳೆ ಇನ್ನೂ ಮುಗಿದಿಲ್ಲ ಎಂದು ತಿಳಿಸಿದೆ. ಆಗಸ್ಟ್ 13ರವರಗೆ ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಡಾ ಸಿ ಎಸ್ ಪಾಟೀಲ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ನಿನ್ನೆ ರಾಜ್ಯದ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ವ್ಯಾಪಕ ಮಳೆಯಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 3 ಸೆಂಟಿಮೀಟರ್ ಮಳೆಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 2 ಸೆಂಟಿಮೀಟರ್ ಮಳೆಯಾಗಿದೆ. ಈಗ ಇರುವ ಹವಾಮಾನ ಪರಿಸ್ಥಿತಿ ನೋಡಿದ್ರೆ ಆಗಸ್ಟ್ 13ರವರಗೆ ನಿರಂತರವಾಗಿ ಮಳೆ ಮುಂದುವರೆಯುವ ಎಲ್ಲಾ ಸೂಚನೆಗಳಿವೆ ಎನ್ನಲಾಗಿದೆ. ಸದ್ಯ ರಾಜ್ಯದ ಉದ್ದಗಲಕ್ಕೂ 5.8 ಮೀಟರ್ ಎತ್ತರದಲ್ಲಿ ಪಶ್ಚಿಮದ ಗಾಳಿ ಬೀಸುತ್ತಿದೆ. ಇದರಿಂದಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ಮಳೆಯಾಗಲಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Breastfeeding: ಹಾಲುಣಿಸುವ ತಾಯಿ ಏನನ್ನು ತಿನ್ನಬೇಕು? ಏನು ತಿನ್ನಬಾರದು? ವೈದ್ಯರು ಹೇಳಿದ ಕಿವಿಮಾತು...

ಇನ್ನುಳಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಕನಿಷ್ಟ 2 ದಿನಗಳವರಗೆ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆ ಇದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಗರಿಷ್ಠ ಉಷ್ಣಾಂಷ 29 ಡಿಗ್ರಿ ಸೆಲ್ಶಿಯಸ್ ಇರಲಿದ್ದು ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮಳೆ ಹೆಚ್ಚಾದರೆ ಒಟ್ಟು 209 ಏರಿಯಾಗಳು ಅಪಾಯದಲ್ಲಿವೆ ಎಂದು ಬಿಬಿಎಂಪಿ ಅಂದಾಜಿಸಿದೆ. ಮಳೆ ಬಂದಾಗ ಈ 209 ಏರಿಯಾಗಳಿಗೆ ನೀರು ನುಗ್ಗಿ ಅವಾಂತರ ಆಗುತ್ತಿದೆ. ಈ ಸಂದರ್ಭದಲ್ಲಿ ಜನರನ್ನು ಸುರಕ್ಷಿತವಾಗಿಡಲು ತುರ್ತಾಗಿ ಒಟ್ಟು 63 ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದು ವೇಳೆ ರಾಜಧಾನಿಯಲ್ಲಿ ಜೋರಾಗಿ ಮಳೆ ಬಂದರೆ ಈ ತಂಡಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: